ಬಾಂಗ್ಲಾ: ಮೋದಿ ಭೇಟಿ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಮೃತರ ಸಂಖ್ಯೆ 5 ಕ್ಕೇರಿಕೆ

ತಮ್ಮ ಸಂಘಟನೆಯ ಕಾರ್ಯಕರ್ತರು ಮೃತಪಟ್ಟಿರುವುದನ್ನು ವಿರೋಧಿಸಿ ಶನಿವಾರ ಚಿತ್ತಗಾಂಗ್‌ ಹಾಗೂ ಢಾಕಾದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೆಫಝತ್‌ ಎ ಇಸ್ಲಾಂ ಬೆಂಬಲಿಗರು, ಪೊಲೀಸ್‌ ವಿರುದ್ಧ ಮೆರವಣಿಗೆ ನಡೆಸಿದ್ದಾರೆ.
ಬಾಂಗ್ಲಾ: ಮೋದಿ ಭೇಟಿ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಮೃತರ ಸಂಖ್ಯೆ 5 ಕ್ಕೇರಿಕೆ

ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಾಳಿದ್ದು, ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸ್‌ ಕೈಗೊಂಡ ಕ್ರಮಗಳಿಗೆ ಇದುವರೆಗೂ ಐವರು ಮೃತಪಟ್ಟಿರುವುದಾಗಿ ಅಲ್‌ಜಝೀರ ವರದಿ ಮಾಡಿದೆ.

ತಲೆಗೆ ಗುಂಡೇಟು ಬಿದ್ದ ಮೂರು ದೇಹಗಳು ನಮಗೆ ದೊರೆತಿವೆ. ಉಳಿದ ಇಬ್ಬರು ಅವರ ಬೇರೆ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಬ್ರಹ್ಮನ್‌ಬರಿಯ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಅಬ್ದುಲ್ಲಾ ಅಲ್‌ ಮಾಮುನ್‌ ಹೇಳಿದ್ದಾರೆ.

ಕನಿಷ್ಟ ಐವರು ಪ್ರತಿಭಟನಾಕಾರರು ಮೃತಪಟ್ಟಿರುವುದನ್ನು ಸ್ಥಳೀಯ ಪೊಲೀಸ್‌ ಒಬ್ಬರು ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ಧೃಡಪಡಿಸಿದ್ದಾರೆ. ಅದಾಗ್ಯೂ, ಬಾಂಗ್ಲಾದೇಶಿ ಪೊಲೀಸ್‌ ಮರಣದ ಕುರಿತು ಯಾವುದೇ ಅಧಿಕೃತ ವರದಿಯನ್ನು ನೀಡಿಲ್ಲ.

ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಶುಕ್ರವಾರದಂದು ಹಿಂಸಾಚಾರ ಭುಗಿಲೆದ್ದಿದ್ದು, ಮೋದಿ ಆಡಳಿತದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯಗಳು ಹೆಚ್ಚಿವೆ ಎಂದು ಆರೋಪಿಸಿ ಪ್ರತಿಭಟನಾಕಾರರು ಮೋದಿ ವಿರುದ್ಧ ಘೋಷಣೆ ಕೂಗಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಭಟನೆಯ ಅಂಗವಾಗಿದ್ದ ಹೆಫಝತ್‌ ಎ ಇಸ್ಲಾಂ ಸಂಘಟನೆಗೆ ಸೇರಿದ ನಾಲ್ವರು ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು.

ತಮ್ಮ ಸಂಘಟನೆಯ ಕಾರ್ಯಕರ್ತರು ಮೃತಪಟ್ಟಿರುವುದನ್ನು ವಿರೋಧಿಸಿ ಶನಿವಾರ ಚಿತ್ತಗಾಂಗ್‌ ಹಾಗೂ ಢಾಕಾದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೆಫಝತ್‌ ಎ ಇಸ್ಲಾಂ ಬೆಂಬಲಿಗರು, ಪೊಲೀಸ್‌ ವಿರುದ್ಧ ಮೆರವಣಿಗೆ ನಡೆಸಿದ್ದಾರೆ.

ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆಂದು ಪ್ರತಿಭಟನಾಕಾರರ ಸಂಘಟನಾ ಅಝೀಝುಲ್ ಹಕ್ ಚಿತ್ತಗಾಂಗ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ. "ನಾವು ನಮ್ಮ ಸಹೋದರರು ಹರಿಸಿದ ರಕ್ತವನ್ನು ವ್ಯರ್ಥವಾಗಿ ಬಿಡುವುದಿಲ್ಲ." ಎಂದು ಅವರು ಆಕ್ರೋಶಭರಿತರಾಗಿ ಹೇಳಿದ್ದಾರೆ.

ಪ್ರತಿಭಟನಾಕಾರರ ಹತ್ಯೆಗಳನ್ನು ಪ್ರತಿಭಟಿಸಲು ಹೆಫಜತ್-ಇ-ಇಸ್ಲಾಂ ಭಾನುವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕೂಡ ಚಿತ್ತಗಾಂಗ್‌ನಲ್ಲಿ ಪೊಲೀಸ್ ಕ್ರಮವನ್ನು ಟೀಕಿಸಿದೆ.

"ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಸಂಘಟಿತ ದಾಳಿಗೆ ಒಳಪಡಿಸಲಾಗಿದೆ, ವಿಶೇಷವಾಗಿ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಈ ರೀತಿಯ ರಕ್ತಸಿಕ್ತ ದಮನ ಪರಾಕಾಷ್ಠೆಯಾಗಿದೆ" ಎಂದು ಅಮ್ನೆಸ್ಟಿಯ ದಕ್ಷಿಣ ಏಷ್ಯಾ ಸಂಶೋಧಕ ಸುಲ್ತಾನ್ ಮೊಹಮ್ಮದ್ ಜಕಾರಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಾಂಗ್ಲಾ: ಮೋದಿ ಭೇಟಿ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಮೃತರ ಸಂಖ್ಯೆ 5 ಕ್ಕೇರಿಕೆ
ಮೋದಿ ಆಗಮನ ವಿರೋಧಿಸಿ ಬಾಂಗ್ಲಾದಲ್ಲಿ ಪ್ರತಿಭಟನೆ: 40ಕ್ಕೂ ಹೆಚ್ಚು ಮಂದಿಗೆ ಗಾಯ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com