#LieLikeModi: ಟ್ರೋಲ್‌ಗಳಿಗೆ ಆಹಾರವಾದ ಮೋದಿಯ ʼಬಾಂಗ್ಲಾ ವಿಮೋಚನೆ ಹೋರಾಟʼ

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಭೇಟಿಯ ವೇಳೆ ಹೇಳಿರುವುದು ಇದೀಗ ಟ್ರೋಲ್‌ಗಳಿಗೆ ಕಾರಣವಾಗಿದೆ.
#LieLikeModi: ಟ್ರೋಲ್‌ಗಳಿಗೆ ಆಹಾರವಾದ ಮೋದಿಯ ʼಬಾಂಗ್ಲಾ ವಿಮೋಚನೆ ಹೋರಾಟʼ

ಸುಳ್ಳಿನ ಕಾರ್ಖಾನೆಯೆಂದು ರಾಜಕೀಯ ಎದುರಾಳಿಗಳಿಂದ ಕರೆಯಲ್ಪಡುವ ಪ್ರಧಾನಿ ಮೋದಿಯಷ್ಟು ಟ್ರೋಲ್‌ಗಳಿಗೆ ಒಳಗಾದ ಭಾರತದ ಪ್ರಧಾನಿ ಇನ್ನೊಬ್ಬರು ಇರಲಿಕ್ಕಿಲ್ಲ. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಭೇಟಿಯ ವೇಳೆ ಹೇಳಿರುವುದು ಇದೀಗ ಟ್ರೋಲ್‌ಗಳಿಗೆ ಕಾರಣವಾಗಿದೆ.

#LieLikeModi: ಟ್ರೋಲ್‌ಗಳಿಗೆ ಆಹಾರವಾದ ಮೋದಿಯ ʼಬಾಂಗ್ಲಾ ವಿಮೋಚನೆ ಹೋರಾಟʼ
ಎಲ್ಲಾ ಮಾರಿ ಕೊನೆಗೆ ಉಳಿಯುವುದು ಮೋದಿಯ ʼಸುಳ್ಳಿನ ಕಾರ್ಖಾನೆʼ ಮಾತ್ರ: ಮಮತಾ ಬ್ಯಾನರ್ಜಿ

ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ #NoVoteTo_LiarModi ಹಾಗೂ #LieLikeModi ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗುತ್ತಿವೆ. ಲಕ್ಷಾಂತರ ಜನರು ನರೇಂದ್ರ ಮೋದಿಯ ಹಿಂದಿನ ಭಾಷಣಗಳ, ಮಾತುಗಳ ತುಣುಕು ಇಟ್ಟುಕೊಂಡು ಪ್ರಧಾನಿಯನ್ನು ವ್ಯಂಗ್ಯಕ್ಕೆ ಗುರಿಪಡಿಸುತ್ತಿದ್ದಾರೆ.

#LieLikeModi: ಟ್ರೋಲ್‌ಗಳಿಗೆ ಆಹಾರವಾದ ಮೋದಿಯ ʼಬಾಂಗ್ಲಾ ವಿಮೋಚನೆ ಹೋರಾಟʼ
ಜಾಗತಿಕ ವೇದಿಕೆಯಲ್ಲಿ ಮತ್ತೊಂದು ಸುಳ್ಳು ಹೇಳಿದ ಪ್ರಧಾನಿ ಮೋದಿ!

ಮೊಸಳೆಯೊಂದಿಗೆ ಕಾದಾಟ, ರೈಲ್ವೇ ಸ್ಟೇಷನ್‌ನಲ್ಲಿ ಚಾ ಮಾರಾಟ, ಕಾಡಿನಲ್ಲೆ ವಾಸ, ಹಿಮಾಲಯದಲ್ಲಿ ಯೋಗ, 1988 ರಲ್ಲಿ ಡಿಜಿಟಲ್‌ ಕೆಮರಾ ಬಳಕೆ(ಆ ವೇಳೆ ಡಿಜಿಟಲ್‌ ಕೆಮರಾ ಬಳಕೆ ಚಾಲ್ತಿಎ ಬಂದಿರಲಿಲ್ಲ) 1980 ರಲ್ಲಿ ಇಮೇಲ್‌ ಬಳಕೆ, ಎಂಟೈರ್‌ ಪೊಲಿಟಿಕಲ್‌ ಸೈನ್ಸ್‌ ಡಿಗ್ರಿ, ಗಟ್ಟರ್‌ ಗ್ಯಾಸ್‌ನಲ್ಲಿ ಚಾ ತಯಾರಿ ಮೊದಲಾದ ಮೋದಿ ಸುತ್ತ ಹೆಣೆಯಲ್ಪಟ್ಟ ಹಾಗೂ ಮೋದಿಯೇ ಸ್ವತಃ ಈ ಹಿಂದೆ ಹೇಳಿರುವಂತಹ ಅವಾಸ್ತವಿಕ ಅಂಶಗಳನ್ನು ಮುಂದಿಟ್ಟು ನೆಟ್ಟಿಗರು ಮೋದಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶುಕ್ರವಾರ ಬಾಂಗ್ಲಾ ವಿಮೋಚನೆಯ ಹೋರಾಟದಲ್ಲಿ ಭಾಗಿಯಾದುದರ ಕುರಿತು ಮೋದಿ ಹೇಳುತ್ತಿದ್ದಂತೆಯೇ ಟ್ವಿಟರಿನಲ್ಲಿ #LieLikeModi ಟ್ರೆಂಡಿಂಗ್‌ ಶುರುವಾಗಿದ್ದು, ಲಕ್ಷಾಂತರ ಮಂದಿ ಈ ಟ್ರೆಂಡಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಅಂತಹ ಕೆಲವು ಟ್ವೀಟ್‌ಗಳು ಇಲ್ಲಿವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com