ಮೋದಿ ಆಗಮನ ವಿರೋಧಿಸಿ ಬಾಂಗ್ಲಾದಲ್ಲಿ ಪ್ರತಿಭಟನೆ: 40ಕ್ಕೂ ಹೆಚ್ಚು ಮಂದಿಗೆ ಗಾಯ

"ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದೇವೆ. ಸುಮಾರು 200 ಜನ ಪ್ರತಿಭಟನಾಕಾರರು ಇದ್ದರು. ಹಿಂಸಾಚಾರ ಆರೋಪ ಸಂಬಂಧ ನಾವು 33 ಜನರನ್ನು ಬಂಧಿಸಿದ್ದೇವೆ" ಎಂದು ಪೊಲೀಸ್ ಅಧಿಕಾರಿ ಸೈಯದ್ ನೂರುಲ್ ಇಸ್ಲಾಂ ತಿಳಿಸಿದ್ದಾರೆ.
ಮೋದಿ ಆಗಮನ ವಿರೋಧಿಸಿ ಬಾಂಗ್ಲಾದಲ್ಲಿ ಪ್ರತಿಭಟನೆ:  40ಕ್ಕೂ ಹೆಚ್ಚು ಮಂದಿಗೆ ಗಾಯ

ಬಾಂಗ್ಲಾದೇಶದ 50 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ, ಪ್ರಧಾನಿ ಮೋದಿ ಭೇಟಿನೀಡಿದ್ದರು. ಮೋದಿ ಆಗಮನ ವಿರೋಧಿಸಿ ಅಲ್ಲಿನ ವಿಧ್ಯಾರ್ಥಿ ಸಂಘಗಳು ಪ್ರತಿಭಟನೆ ನಡೆಸಿದ್ದು, ಅದು ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟು ಪ್ರತಿಭಟನೆಯಲ್ಲಿ 40 ಮಂದಿಗಾಯಗೊಂಡಿದ್ದರೆ, 33 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತದ ಪ್ರಧಾನಿ ಎರಡು ದಿನಗಳ ಕಾಲ ಬಾಂಗ್ಲಾ ದೇಶಕ್ಕೆ ಪ್ರವಾಸ ಕೈಗೊಂಡಿದ್ದು, ಅವರಿಗೆ ಅಲ್ಲಿನ ಪ್ರಧಾನಿ ಶೇಕ್ ಹಸೀನಾ ಅವರಿಂದ ಭವ್ಯ ಸ್ವಾಗತ ಕೋರಲಾಗಿತ್ತು. ಬಾಂಗ್ಲಾ ವಿಮೋಚನಾ ದಿನದ ಅಂಗವಾಗಿ 1971 ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಟಮಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ಮರಣಾರ್ಥ, ಮಿಲಿಟರಿ ಸಿಬ್ಬಂದಿಯೊಂದಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವೇಳೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮವನ್ನು ವಿರೋಧಿಸಿ ಡಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಎಡಪಂಥೀಯ ವಿದ್ಯಾರ್ಥಿ ಪರಿಷತ್‌ನಿಂದ ನಡೆದ ಪ್ರತಿಭಟನೆ ತೀವ್ರ ಸ್ವರೂಪವು ತಾಳಿತ್ತು. ಈ ನಡುವೆ ಪೊಲೀಸರು ಹಾಗು ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆದಿದ್ದು, ಅದು ಹಿಂಸಾಚಾರಕ್ಕೂ ಎಡೆಮಾಡಿಕೊಟ್ಟು ಸುಮಾರು 40 ಜನಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರು ಪತ್ರಕರ್ತರು ಮತ್ತು ಸರ್ಕಾರಿ ಪರ ಬಾಂಗ್ಲಾ ದೇಶ್‌ ಛಾತ್ರ ಲೀಗ್‌ (ಬಿಸಿಎಲ್‌) ಕಾರ್ಯಕರ್ತರಾಗಿದ್ದಾರೆ.

ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ಸ್ವರೂಪ ತಾಳಿದ್ದು ಕ್ಲಲುತೂರಾಟಗಳು ನಡೆದಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ "ನಾವು ಅವರನ್ನು ಚದುರಿಸಲು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದೇವೆ. ಸುಮಾರು 200 ಪ್ರತಿಭಟನಾಕಾರರು ಇದ್ದರು. ಹಿಂಸಾಚಾರ ಆರೋಪ ಸಂಬಂಧ ನಾವು 33 ಜನರನ್ನು ಬಂಧಿಸಿದ್ದೇವೆ" ಎಂದು ಪೊಲೀಸ್ ಅಧಿಕಾರಿ ಸೈಯದ್ ನೂರುಲ್ ಇಸ್ಲಾಂ ತಿಳಿಸಿದ್ದಾರೆ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಬಾಂಗ್ಲಾ ದೇಶ್‌ ಛಾತ್ರ ಲೀಗ್‌ (ಬಿಸಿಎಲ್‌) ವಿದ್ಯಾರ್ಥಿ ಸಂಘಟನೆಯಿಂದ ಎಡಪಂಥೀಯ ವಿದ್ಯಾರ್ಥಿ ಕಾರ್ಯಕರ್ತರು ದಾಳಿಗೆ ಒಳಗಾಗಿದ್ದಾರೆಂಬ ಆರೋಪ ಕೂಡ ಕೇಳಿಬಂದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com