ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರಿದ್ದೇಕೆ? ಮನದಾಳ ಹಂಚಿಕೊಂಡ ಯಶವಂತ ಸಿನ್ಹಾ

ವಾಜಪೇಯಿ - ಅಡ್ವಾಣಿ ನೇತೃತ್ವದ ಬಿಜೆಪಿಗೂ ಮೋದಿ - ಅಮಿತ್ ಷಾಗೂ ಬಹಳ ವ್ಯತ್ಯಾಸವಿದೆ. ಮೋದಿ - ಅಮಿತ್ ಷಾ ಕಾರ್ಯಶೈಲಿಯ ಬಗ್ಗೆ ನನಗೆ ಮೊದಲಿಂದಲೂ ಅನುಮಾನ‌ ಇತ್ತು.
ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರಿದ್ದೇಕೆ? ಮನದಾಳ ಹಂಚಿಕೊಂಡ ಯಶವಂತ ಸಿನ್ಹಾ

ಬಿಜೆಪಿಯ‌ ಅಗ್ರ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲಕೃಷ್ಣ ಅಡ್ವಾಣಿ ಅವರ ನಿಕಟವರ್ತಿಯಾಗಿದ್ದ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ ನರೇಂದ್ರ ಮೋದಿ ಆಡಳಿತ ವೈಖರಿಯ ಕಡು ವಿರೋಧಿಯೂ ಆಗಿದ್ದ 83 ವರ್ಷದ ಯಶವಂತ್ ಸಿನ್ಹಾ ದೇಶಾದ್ಯಂತ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ಚುನಾವಣೆ ಹೊಸ್ತಲಲ್ಲಿ ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಅವರೀಗ ಬಿಜೆಪಿ ಬಿಟ್ಟಿದ್ದೇಕೆ? ತೃಣಮೂಲ ಕಾಂಗ್ರೆಸ್ ಸೇರಿದ್ದೇಕೆ? ಎಂದು 'ಎನ್ ಡಿ ಟಿವಿ‌ ಡಿಜಿಟಲ್ ಆವೃತ್ತಿ'ಯಲ್ಲಿ ಖುದ್ದಾಗಿ ಬರೆದಿದ್ದಾರೆ. ಅದರ ವಿವರ ಇಲ್ಲಿದೆ.

ನಾನು ಮಾರ್ಚ್ 13ರಂದು ತೃಣಮೂಲ ಕಾಂಗ್ರೆಸ್ ಸೇರಿದೆ. ಇದು ಇದ್ದಕ್ಕಿದ್ದಂತೆ ಸಂಭವಿಸಿತು. ಇದರಿಂದ ಆಪ್ತರು ಸೇರಿದಂತೆ ಅನೇಕರಿಗೆ ಆಶ್ಚರ್ಯವಾಗಿದೆ. ನನ್ನ ನಿರ್ಧಾರ ಎಂದಿನಂತೆ ಹಠಾತ್ತಾಗಿತ್ತು. ಜೀವನದುದ್ದಕ್ಕೂ ಹೀಗೆ ಮಾಡಿದ್ದೇನೆ. ನಾನು ಮನಸ್ಸನ್ನು ರೂಪಿಸಲು ಸಮಯ ತೆಗೆದುಕೊಳ್ಳಬಹುದು, ಆದರೆ ಒಮ್ಮೆ ನನ್ನ ಮನಸ್ಸು ಮಾಡಿದ ಮೇಲೆ ವೇಗವಾಗಿ ಕಾರ್ಯರೂಪಗೊಳಿಸುತ್ತೇನೆ. ಬೇರೆಯವರಂತೆ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು 'ಪಂಚಾಯಿತಿ' ನಡೆಸುವುದಿಲ್ಲ. ಆದ್ದರಿಂದ ಇದು ನನ್ನ ನಿರ್ಧಾರ, ನಾನು ಮಾತ್ರ ತೆಗೆದುಕೊಂಡಿದ್ದೇನೆ - ಇದು ತಪ್ಪಾದರೆ ನನ್ನನ್ನು ಹೊರತುಪಡಿಸಿ ಮತ್ಯಾರನ್ನೂ ದೂಷಿಸುವಂತಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗಿನ ಬಿಜೆಪಿ ಬಗ್ಗೆ ನನಗಾಗಿರುವ ಭ್ರಮನಿರಸನದ ಬಗ್ಗೆ ಎಲ್ಲರಿಗೂ ಗೊತ್ತು. ನಾನು ಅದನ್ನು ಯಾವತ್ತೂ ಮುಚ್ಚಿಡಲು ಪ್ರಯತ್ನಿಸಲಿಲ್ಲ. ಹಲವರು ‌ನಿಮಗೇಕೆ ಭ್ರಮನಿರಸನ ಎಂದು ಕೇಳುತ್ತಾರೆ. ಉತ್ತರ ಸರಳ ಮತ್ತು ಸರಳವಾಗಿದೆ. ಏಕೆಂದರೆ ವಾಜಪೇಯಿ - ಅಡ್ವಾಣಿ ನೇತೃತ್ವದ ಬಿಜೆಪಿಗೂ ಮೋದಿ - ಅಮಿತ್ ಷಾಗೂ ಬಹಳ ವ್ಯತ್ಯಾಸವಿದೆ. ಮೋದಿ - ಅಮಿತ್ ಷಾ ಕಾರ್ಯಶೈಲಿಯ ಬಗ್ಗೆ ನನಗೆ ಮೊದಲಿಂದಲೂ ಅನುಮಾನ‌ ಇತ್ತು. 2014ರ ನಂತರ ದುರದೃಷ್ಟವಶಾತ್ ನನ್ನ ಕೆಟ್ಟ ಭಯಗಳು ನನಸಾಗತೊಡಗಿದವು.‌ ನಾನು ವಿರೋಧಿಸಬೇಕಾಯಿತು. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಆದ್ದರಿಂದ 2018ರಲ್ಲಿ ಬಿಜೆಪಿ ತೊರೆದೆ. ಆದರೆ ಸಾರ್ವಜನಿಕ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸೂಕ್ತ ವೇದಿಕೆ ಸಿಕ್ಕಿರಲಿಲ್ಲ.

ಮಮತಾ ಬ್ಯಾನರ್ಜಿ ಮತ್ತು ನಾನು ವಾಜಪೇಯಿ ಸಂಪುಟದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮಮತಾ ಹೋರಾಟದ ಮೂಲಕ ಬಂದವರು. ದೈಹಿಕ ಹಲ್ಲೆಯಾದಾಗಲೂ ಧೃತಿಗೆಡದ ದೀಮಂತೆ. ಹಾಗಾಗಿ ಅವರ ಬಗ್ಗೆ ಅಪಾರ ಗೌರವ ಮತ್ತು ಮೆಚ್ಚುಗೆ ಹೊಂದಿದ್ದೆ. ಬಿಜೆಪಿಯಲ್ಲಿರುವವರು ಏನಾದರೂ ಹೇಳಲಿ, ಮಮತಾ ಬ್ಯಾನರ್ಜಿ ಕಳೆದ 10 ವರ್ಷಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸದ್ಯ ಅವರನ್ನು ಅಣಿಯಲು ಮೋದಿ-ಅಮಿತ್ ವ್ಯೂಹ ರಚಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನ ಗೆಲ್ಲಲು ಸಾಧ್ಯವಾಗಿತ್ತು. ಆದರೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ದುರ್ಬಲಗೊಂಡ ಪರಿಣಾಮವಾಗಿ, ಅದೀಗ ಪ್ರಮುಖ ಪ್ರತಿಪಕ್ಷದ ಜಾಗ ಆಕ್ರಮಿಸಿಕೊಂಡಿದೆ. 18 ಲೋಕಸಭಾ ಸ್ಥಾನ ಗೆದ್ದಿರುವುದರಿಂದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ಸದ್ಯ ಚುನಾವಣೆ ನಡೆಯುತ್ತಿರುವ ರಾಜ್ಯಗಳ ಪೈಕಿ ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶವಿಲ್ಲ. ಅಸ್ಸಾಂನಲ್ಲೂ ಆಡಳಿತವಿರೋಧಿ ಅಲೆ ಕಂಡುಬರುತ್ತಿದೆ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಾದರೂ ಗೆಲ್ಲಬೇಕೆಂದು 'ರೊಮೆಲಿಯನ್ ಶೈಲಿ'ಯ ಪ್ರಯತ್ನ ನಡೆಸುತ್ತಿದೆ. ನಾನು ಉದ್ದೇಶಪೂರ್ವಕವಾಗಿಯೇ ಬ್ರಿಟಿಷ್ ಮತ್ತು ಅಮೇರಿಕನ್ ಪಡೆಗಳ ವಿರುದ್ಧ ನಡೆದ ಎರಡನೇ ಮಹಾಯುದ್ಧದ ವೇಳೆ ಉತ್ತರ ಆಫ್ರಿಕಾದಲ್ಲಿ ಜನರಲ್ ರೊಮೆಲ್ ಅವರ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸುತ್ತಿದ್ದೇನೆ.

ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರಿದ್ದೇಕೆ? ಮನದಾಳ ಹಂಚಿಕೊಂಡ ಯಶವಂತ ಸಿನ್ಹಾ
ಟಿಎಂಸಿ ಸೇರಿ ಮಮತಾ ಬ್ಯಾನರ್ಜಿಯನ್ನು ಹಾಡಿಹೊಗಳಿದ ಬಿಜೆಪಿ ಮಾಜಿ ನಾಯಕ ಯಶ್ವಂತ್ ಸಿನ್ಹಾ

ಟ್ಯಾಂಕ್‌ಗಳು ಪ್ರಮುಖ ಪಾತ್ರವಹಿಸಿದ ಆ ಯುದ್ಧದಲ್ಲಿ ಜನರಲ್ ರೊಮೆಲ್ ಆಗಾಗ್ಗೆ ಟ್ಯಾಂಕ್‌ಗಳ ಕೊರತೆ ಎದುರಿಸುತ್ತಾನೆ. ಆಗ ಕಡಿಮೆ ಟ್ಯಾಂಕ್‌ಗಳನ್ನೇ ಮರುಭೂಮಿಯಲ್ಲಿ ಓಡಾಡಿಸಿ ಧೂಳೆಬ್ಬಿಸುವ ಮೂಲಕ ತಮ್ಮ ಬಳಿ ಹೆಚ್ಚು ಟ್ಯಾಂಕ್‌ಗಳಿವೆ ಎಂದು ಶತ್ರುಗಳಿಗೆ ಸಂದೇಶ ರವಾ‌ನಿಸುತ್ತಾನೆ. ಬಳಿಕ ಈ ಗುಟ್ಟು ಬಯಲಾಗುತ್ತದೆ. ಪಶ್ವಿಮ ಬಂಗಾಳದಲ್ಲಿ ಬಿಜೆಪಿ ಇದೇ ರೀತಿಯ ಕಾರ್ಯತಂತ್ರ ಮಾಡುತ್ತಿದೆ. ಬೇರೆ ಪಕ್ಷಗಳ ನಾಯಕರನ್ನು ಸೇರಿಸಿಕೊಂಡು ತಾನು ಪ್ರಬಲ ಸ್ಪರ್ಧಿ ಎಂದು ಬಿಂಬಿಸಿಕೊಳ್ಳುತ್ತಿದೆ. ಇದು ಜನರಿಗೆ ಚೆನ್ನಾಗಿ ತಿಳಿದಿರುವ ಕಾರಣ ಬಿಜೆಪಿ ಕಾರ್ಯತಂತ್ರಗಳು ಫಲ ನೀಡುವುದಿಲ್ಲ.

ಬಿಜೆಪಿ 'ಕೇಂದ್ರದಲ್ಲಿ ನಮಗೆ ಮೋದಿ ಮತ್ತು ಷಾ ಇದ್ದಾರೆ. ನಿಮಗೆ ಯಾರು?' ಎಂದು ಪ್ರಶ್ನಿಸುವಂತೆ 'ಪಶ್ಚಿಮ ಬಂಗಾಳದಲ್ಲಿ ನಮಗೆ ಮಮತಾ ಇದ್ದಾರೆ. ಬಿಜೆಪಿಗೆ ಯಾವ ಮುಖವೂ ಇಲ್ಲ. ಆದ್ದರಿಂದ ಅವರು ಬಂಗಾಳದ ಜನರಿಗೆ, "ನಮ್ಮನ್ನು ನೋಡಿ (ಮೋದಿ ಮತ್ತು ಷಾ) ಮತ್ತು ಬಿಜೆಪಿಗೆ ಮತ ನೀಡಿ" ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಮೋದಿ ಅಥವಾ ಷಾ ಇಬ್ಬರೂ ಬಂಗಾಳದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಬಂಗಾಳದ ಜನರಿಗೆ ತಿಳಿದಿದೆ.‌‌ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ಮುಖ ತೋರಿಸದೆ ಕತ್ತಲೆಯಲ್ಲಿ ಶಿಳ್ಳೆ ಹೊಡೆದು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ‌.

ಬಿಜೆಪಿ ಕೇರಳದಲ್ಲಿ 88 ವರ್ಷದ ಶ್ರೀಧರನ್ ಅವರನ್ನು ಬಂಗಾಳದಲ್ಲಿ 88 ವರ್ಷದ ರವೀಂದ್ರನಾಥ್ ಭಟ್ಟಾಚಾರ್ಯ ಮತ್ತು 85 ವರ್ಷದ ಜತು ಲಾಹಿರಿ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ 75 ವರ್ಷಕ್ಕಿಂತ ಮೇಲ್ಪಟ್ಟವರನ್ನು 'ಮೆದುಳು-ಸತ್ತ' ಎಂದು ಪರಿಗಣಿಸುವ ನೀತಿಯನ್ನು ಅದು ಉಲ್ಲಂಘಿಸಿದೆ. ಹಾಗಾದರೆ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಮನೆಯಲ್ಲಿ ಏಕೆ ಕುಳಿತುಕೊಳ್ಳಬೇಕು? ಇದು ಬಿಜೆಪಿಯ ನಿಯಮಗಳನ್ನು ಮುರಿದಂತೆ ಆಗುವುದಿಲ್ಲವೆ?

ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರಿದ್ದೇಕೆ? ಮನದಾಳ ಹಂಚಿಕೊಂಡ ಯಶವಂತ ಸಿನ್ಹಾ
ಚುನಾವಣೆ ಗೆಲ್ಲಲು ಪಂಚ ರಾಜ್ಯಗಳಲ್ಲಿ ʼಸ್ಟಾರ್‌ ಪವರ್‌ʼ ಮೊರೆ ಹೋದ ಬಿಜೆಪಿ

ಮೋದಿ ಮತ್ತು ವಿಶೇಷವಾಗಿ ಅಮಿತ್ ಷಾ ಬಂಗಾಳದಲ್ಲಿ ಹೆಚ್ಚು ಜನಪ್ರಿಯರಲ್ಲ. ಅವರ ಸಭೆಗಳಿಗೆ ಹೇಗೆ ಜನ ಸೇರಿಸಲಾಗುತ್ತಿದೆ ಎಂಬುದು ತಿಳಿದಿರುವ ವಿಷಯವೇ ಆಗಿದೆ. ಇಂದಿರಾ ಗಾಂಧಿ 1977ರ ಲೋಕಸಭಾ ಚುನಾವಣೆಗೆ ಮುನ್ನ ಬೃಹತ್ ಸಭೆಗಳನ್ನುದ್ದೇಶಿಸಿ ಮಾತನಾಡಿದರು. ಫಲಿತಾಂಶ ಏನಾಯಿತು ಎಂದು ಗೊತ್ತಿದೆ. ಅವರು ಇಂದು ಬಿಜೆಪಿಯನ್ನು ಮುನ್ನಡೆಸುತ್ತಿರುವ ಪಿಗ್ಮಿಗಳಿಗಿಂತ ಹೆಚ್ಚು ಎತ್ತರದ ನಾಯಕರಾಗಿದ್ದರು. ಈ ಚುನಾವಣೆಯಲ್ಲಿ ಬಂಗಾಳದ ಮುಖ್ಯ ವಿಷಯವೆಂದರೆ "ನಮ್ಮ ಸ್ವಂತ ಮಗಳು ಮತ್ತು ಹೊರಗಿನವರು' ಎಂಬುದಾಗಿದೆ.

ಗೋಪಾಲ್ ಕೃಷ್ಣ ಗೋಖಲೆ ಒಮ್ಮೆ "ಬಂಗಾಳ ಇಂದು ಏನು ಯೋಚಿಸುತ್ತಿದೆ, ಅದನ್ನು ಭಾರತ ನಾಳೆ ಯೋಚಿಸುತ್ತದೆ" ಎಂದು ಹೇಳಿದ್ದರು. ಈ ಚುನಾವಣೆಗೂ ಆ ಮಾತು ಅನ್ವಯ. ಬಂಗಾಳ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಚರ್ಚೆ ಮಾಡಲೊರಟಿದೆ. ಇದರಿಂದ ನಾನು ಟಿಎಂಸಿಯ ವಿಜಯವನ್ನು ಖಚಿತಪಡಿಸಿಕೊಳ್ಳಲು ಹೋರಾಟಕ್ಕೆ ಸೇರಿಕೊಂಡಿದ್ದೇನೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com