ಬಂಗಾಳ ಮತ್ತು ತಮಿಳುನಾಡಿನಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಹಿಳಾ ಮತದಾರರು

ಭಾರತೀಯ ಚುನಾವಣೆಗಳು ಕಳೆದ ಒಂದು ದಶಕದಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣುತ್ತಿದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ.
ಬಂಗಾಳ ಮತ್ತು ತಮಿಳುನಾಡಿನಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಹಿಳಾ ಮತದಾರರು

ಪಶ್ಚಿಮ ಬಂಗಾಳ ಚುನಾವಣೆಯ ಭವಿಷ್ಯವನ್ನು ನಿರ್ಧರಿಸುವ ಹಲವು ವಿಚಾರಗಳಲ್ಲಿ, ಮಮತಾ ಬ್ಯಾನರ್ಜಿ ಅವರು ಮೂರನೇ ಬಾರಿ ಗದ್ದುಗೆ ಏರುತ್ತಾರೆಯೇ ಅಥವಾ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ಬೀಸಬಹುದೇ ಎಂದು ನಿರ್ಧರಿಸುವಲ್ಲಿ ನಿರ್ಣಾಯಕವಾಗಿರುವ ಒಂದು ಪ್ರಮುಖ ಅಂಶವೆಂದರೆ ಆ ರಾಜ್ಯದ ಮಹಿಳಾ ಮತದಾರರು ಹೇಗೆ ಮತ ಚಲಾಯಿಸುತ್ತಾರೆ ಎಂಬುವುದು. ಗಮನಿಸಬೇಕಾದ ಅಂಶವೆಂದರೆ, 2019 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 42 ಅಭ್ಯರ್ಥಿಗಳಲ್ಲಿ ಮಮತಾ ಬ್ಯಾನರ್ಜಿ 17 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು ಮತ್ತು ತೃಣಮೂಲ ಕಾಂಗ್ರೆಸ್‌ನ ಒಟ್ಟು 22 ವಿಜಯಗಳಲ್ಲಿ, ಒಂಬತ್ತು ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದರು. ಮಹಿಳೆಯರು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ, ಟಿಎಂಸಿ ತನ್ನ ರಾಜ್ಯದ ಸರಾಸರಿ ಮತ ಶೇಕಡಾ 43 ಕ್ಕೆ ಹೋಲಿಸಿದರೆ, ಶೇಕಡಾ 48 ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿಯೂ ಮಹಿಳಾ ಮತದಾರರ ಮೇಲೆ ಕಣ್ಣಿಟ್ಟಿರುವ ಟಿಎಂಸಿ 50 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಹಿಂದಿನ‌ ಚುನಾವಣೆಗಳಂತೆ ಈ ಬಾರಿಯೂ ಮಹಿಳೆಯರು ಟಿಎಂಸಿಯ ಕೈ ಹಿಡಿದರೆ ಅದು ಪಕ್ಷಕ್ಕೆ ಅನುಕೂಲಕರವಾಗಬಹದು ಇಲ್ಲದಿದ್ದರೆ ಪಕ್ಷ ಖಚಿತವಾಗಿಯೂ ಹಿನ್ನಡೆ ಅನುಭವಿಸಬಹುದು ಎನ್ನುತ್ತಾರೆ ಲೇಖಕ ಮತ್ತು 'ಅಭಿವೃದ್ಧಿ ಹೊಂದುತ್ತಿರುವ ಸಮುದಾಯಗಳ ಅಧ್ಯಯನ ಕೇಂದ್ರ'ದ ಅಧ್ಯಕ್ಷರಾಗಿರುವ ಸಂಜಯ್ ಕುಮಾರ್.

ಜಯಲಲಿತಾ ಅವರು AIADMKಯ ಅಧ್ಯಕ್ಷೆಯಾಗಿದ್ದ ತಮಿಳುನಾಡಿನ ಮಹಿಳಾ ಮತದಾರರೂ ಆ ಪಕ್ಷದ ಪರ ಇದ್ದರು. ಆದರೆ ಪಕ್ಷದ ಅಧ್ಯಕ್ಷರು ಮಹಿಳೆಯರು ಆಗಿರುವುದರಿಂದ ಮಹಿಳಾ ಮತದಾರರು ಬೆಂಬಲಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಉತ್ತರ ಪ್ರದೇಶದಲ್ಲಿ ಮಾಯಾವತಿಯವರಿಗೆ ಮಹಿಳೆಯರಿಂದ ಈ‌‌ ಮಟ್ಟಿಗಿನ ಬೆಂಬಲ ವ್ಯಕ್ತವಾಗುವುದಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತೀಯ ಚುನಾವಣೆಗಳು ಕಳೆದ ಒಂದು ದಶಕದಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣುತ್ತಿದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ವಿಶೇಷವಾಗಿ ಪಂಚಾಯಿತಿ‌ ಚುನಾವಣೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬೆಳವಣಿಗೆಯ ಹಿನ್ನಲೆಯಲ್ಲಿ, ಭಾರತದಲ್ಲಿ ಪಕ್ಷಗಳಿಗೆ ಮಹಿಳೆಯರು ಹೊಸ ಮತದಾರರ ಗುಂಪಾಗಿ ಹೊರಹೊಮ್ಮಿದ್ದಾರೆಯೇ ಎಂಬ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಮಹಿಳೆಯರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಈಗ ಹೆಚ್ಚಿನ ಮಹಿಳೆಯರು ಮತದಾನದ ನಿರ್ಧಾರಗಳನ್ನು ತಾವಾಗಿಯೇ ತೆಗೆದುಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.

ಹಿಂದೆಂದಿಗಿಂತಲೂ ಹೆಚ್ಚಿನ ಮಹಿಳೆಯರು ಮತದಾನ ಕೇಂದ್ರಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ. ಚುನಾವಣಾ ಆಯೋಗ ಬಿಡುಗಡೆ ಮಾಡಿದ ಲಿಂಗಾಧಾರಿತ ಮತದಾನದ ಮಾಹಿತಿಯು ಅದಕ್ಕೆ ಸ್ಪಷ್ಟ ಪುರಾವೆಗಳನ್ನು ಒದಗಿಸುತ್ತದೆ. 1980 ಮತ್ತು 1990 ರ ದಶಕಗಳಲ್ಲಿ ಪುರುಷ ಮತ್ತು ಮಹಿಳೆಯರ ಮತದಾದನದ ಅಂತರ ಸುಮಾರು 9-10ರಷ್ಟಿತ್ತು ಮತ್ತು 1950-60ರ ದಶಕಗಳಲ್ಲಿ ಅದಕ್ಕಿಂತಲೂ ಹೆಚ್ಚಿತ್ತು, 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಅನೇಕ ರಾಜ್ಯಗಳಲ್ಲಿ, ಮಹಿಳಾ ಮತದಾರರ ಸಂಖ್ಯೆ ಪುರುಷರನ್ನು ಮೀರಿದೆ, ಇದು ಭಾರತೀಯ ಚುನಾವಣೆಗಳಲ್ಲಿನ ಅತಿ ದೊಡ್ಡ ತಿರುವು. 2014 ರ ಲೋಕಸಭಾ ಚುನಾವಣೆಯಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮತದಾ‌ನ ಪ್ರಮಾಣ ಆರು ರಾಜ್ಯಗಳಲ್ಲಿ ಹೆಚ್ಚಿದ್ದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಈ ಸಂಖ್ಯೆ 16 ಕ್ಕೆ ಏರಿದೆ.

ಆದರೆ ಮಹಿಳಾ ಮತದಾರರಲ್ಲಿ ಹೆಚ್ಚಿದ ಮತದಾನವು ಭಾರತೀಯ ಚುನಾವಣೆಗಳು ಮಹಿಳೆಯರನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸಿಲ್ಲ ಕಾರಣ, ಅವರ ಮತಗಳು ಇನ್ನೂ ವಿವಿಧ ರಾಜಕೀಯ ಪಕ್ಷಗಳ ನಡುವೆ ಹಂಚಿಹೋಗಿವೆ. ಕೆಲವು ರಾಜಕೀಯ ಪಕ್ಷಗಳು ಮಹಿಳೆಯರಿಂದ ಹೆಚ್ಚಿನ ಮತಗಳನ್ನು ಪಡೆಯುತ್ತಿದ್ದರೂ, ಮಹಿಳಾ ಮತದಾರರು ಇತರ ಸಾಮಾಜಿಕ ಗುಂಪುಗಳಿಗೆ ಸೇರಿದ ಮತದಾರರಂತೆ ಮತ ಚಲಾಯಿಸುವುದಿಲ್ಲ. ಲೋಕ್ನಿಟಿ-ಸಿಎಸ್‌ಡಿಎಸ್ ವಿವಿಧ ರಾಜ್ಯಗಳಲ್ಲಿ ನಡೆದ ವಿವಿಧ ಅಸೆಂಬ್ಲಿ ಚುನಾವಣೆಗಳಲ್ಲಿ ಸಂಗ್ರಹಿಸಿದ ಸಮೀಕ್ಷೆಯ ಮಾಹಿತಿಯ ಪ್ರಕಾರ, ಮಹಿಳೆಯರ ಮತದಾನವು ಕೆಲವು ರಾಜ್ಯಗಳನ್ನು ಹೊರತುಪಡಿಸಿ ಬೇರೆ ಬೇರೆ ರಾಜ್ಯಗಳ ವಿವಿಧ ಪಕ್ಷಗಳ ನಡುವೆ ಹೆಚ್ಚು ಕಡಿಮೆ ಸಮಾನವಾಗಿ ಹಂಚಲ್ಪಟ್ಟಿದೆ ಎಂದು ಹೇಳುತ್ತದೆ.

ಈ ಸಮೀಕ್ಷೆಗಳ ಅಂಕಿಅಂಶಗಳು ಮಹಿಳೆಯರು ಉತ್ತರಾಖಂಡ ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜಮ್ಮು ಪ್ರದೇಶಗಳಲ್ಲಿ ಬಿಜೆಪಿಯ ಪರವಾಗಿ ಹೆಚ್ಚು ಮತ ಚಲಾಯಿಸಿರುವುದನ್ನು, ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪರವಾಗಿ, ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ‌ಮತ ಚಲಾಯಿಸಿರುವುದಾಗಿ ತಿಳಿಸುತ್ತದೆ. ಅನೇಕ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಹಿಳೆಯರ ಮತದಾನ ಹೆಚ್ಚಾಗಿದ್ದರೂ ಅವರು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಯಾವುದೇ ಆದ್ಯತೆ ನೀಡುವುದಿಲ್ಲ ಎಂದೂ‌ ಅಧ್ಯಯನ ವರದಿ ಮಾಡುತ್ತದೆ.

ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಮಹಿಳಾ ಮತದಾರರು ಈ ಹಿಂದೆ ಮತ ಚಲಾಯಿಸಿದ ರೀತಿಯಲ್ಲಿ ಮತ ಚಲಾಯಿಸಿದರೆ, ಅದು ಆಯಾ ರಾಜ್ಯಗಳಲ್ಲಿನ ಈ ಎರಡು ಪಕ್ಷಗಳಿಗೆ ಒಂದು ಮುನ್ನಡೆಯನ್ನು ನೀಡಬಲ್ಲದು. ಆದರೆ ತಮಿಳುನಾಡಿನಲ್ಲಿ ಈಗ ಜಯಲಲಿತಾ ಇಲ್ಲ ಎಂಬುದನ್ನು ಮರೆಯುವಂತಿಲ್ಲ ಮತ್ತು ಮತ್ತು ಮಮತಾ ಬ್ಯಾನರ್ಜಿ ಎದುರಿಸಲಿರುವುದು ಸದ್ಯಕ್ಕೆ ಬಲಿಷ್ಠವಾಗಿ ತೋರುತ್ತಿರುವ ಬಿಜೆಪಿಯ ವಿರುದ್ಧ ಮತ್ತು ಒಂದು ದಶಕದ ಆಡಳಿತ ವಿರೋಧಿ ಅಲೆಯೂ ಅವರ ವಿರುದ್ಧ ಕೆಲಸ ಮಾಡಲಿದೆ ಎಂಬುವುದನ್ನು ಮರೆಯುವಂತಿಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com