ಯಾವ ಭಾರತೀಯನೂ ಬಂಗಾಳದಲ್ಲಿ ಹೊರಗಿನವನಲ್ಲ: ಮಮತಾಗೆ ಪ್ರಧಾನಿ ಮೋದಿ ಪ್ರತ್ಯುತ್ತರ

ವಂದೇ ಮಾತರಂ ಅಡಿಯಲ್ಲಿ ಬಂಗಾಳವು ಭಾರತದೊಂದಿಗೆ ಸೇರಿಕೊಂಡಿದೆ. ಅದಾಗ್ಯೂ, ಮಮತಾ ದೀದಿ ʼಹೊರಗಿನ ಜನರುʼ ಎಂದು ಭಾರತೀಯರನ್ನೇ ಪ್ರತ್ಯೇಕಿಸುತ್ತಿದ್ದಾರೆ -ಪ್ರಧಾನಿ ಮೋದಿ
ಯಾವ ಭಾರತೀಯನೂ ಬಂಗಾಳದಲ್ಲಿ ಹೊರಗಿನವನಲ್ಲ: ಮಮತಾಗೆ ಪ್ರಧಾನಿ ಮೋದಿ ಪ್ರತ್ಯುತ್ತರ

ಭಾರತದ ಯಾರೊಬ್ಬರೂ ಪಶ್ಚಿಮ ಬಂಗಾಳದಲ್ಲಿ ಹೊರಗಿನವರಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್‌ದಾರೆ.

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್‌ ಜಿಲ್ಲೆಯಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡಿದ ಮೋದಿ, ʼವಂದೇ ಮಾತರಂ ಘೋಷಣೆಯಡಿ ಬಂಗಾಳವು ಭಾರತದೊಂದಿಗೆ ಸೇರಿಕೊಂಡಿದೆ. ಈ ಮಣ್ಣಿನಲ್ಲಿ ಮಮತಾ ಬ್ಯಾನರ್ಜಿ ʼಹೊರಗಿನವರುʼ ಎಂದು ಜನರನ್ನು ಪ್ರತ್ಯೇಕಿಸುತ್ತಿದ್ದಾರೆ. ಬಂಗಾಳದಲ್ಲಿ ಬಿಜೆಪಿಗೆ ಮತ ಚಲಾಯಿಸಿದರೆ ನಿಜವಾದ ಮಣ್ಣಿನ ಮಗನನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಬುಧವಾರ ಘೋಷಿಸಿದ್ದಾರೆ.

ಬಂಕಿಂ ಚಂದ್ರ ಛಟ್ಟೋಪಾಧ್ಯಾಯ, ರಬೀಂದ್ರ ನಾಥ್‌ ಟಾಗೋರ್‌ ಮತ್ತು ಸುಭಾಷ್‌ ಚಂದ್ರ ಭೋಸ್‌ ಮೊದಲಾದವರು ಈ ಮಣ್ಣಿನ ಆದರ್ಶ. ಇಲ್ಲಿ ಯಾವುದೇ ಭಾರತೀಯ ಹೊರಗಿನವರಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಂದೇ ಮಾತರಂ ಅಡಿಯಲ್ಲಿ ಬಂಗಾಳವು ಭಾರತದೊಂದಿಗೆ ಸೇರಿಕೊಂಡಿದೆ. ಅದಾಗ್ಯೂ, ಮಮತಾ ದೀದಿ ʼಹೊರಗಿನ ಜನರುʼ ಎಂದು ಭಾರತೀಯರನ್ನೇ ಪ್ರತ್ಯೇಕಿಸುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಭಾರತ ಮಾತೆಯ ಮಕ್ಕಳೇ. ನಮ್ಮನ್ನು ಇಲ್ಲಿ ಪ್ರವಾಸಿಗರೆಂದು ಕರೆಯಲಾಗುತ್ತಿದೆ. ನಮ್ಮನ್ನು ಅಪಹಾಸ್ಯಗೊಳಿಸಲಾಗುತ್ತಿದೆ. ರವೀಂದ್ರನಾಥರ ಜನರು ಯಾರನ್ನೂ ಹೊರಗಿನವರೆಂದು ಪರಿಗಣಿಸುವುದಿಲ್ಲ ಎಂದು ಮಮತಾಗೆ ಟಾಂಗ್‌ ಕೊಟ್ಟಿದ್ದಾರೆ.

ದೆಹಲಿಯಿಂದ ಅಥವಾ ಗುಜರಾತಿನಿಂದ ಬಂದ ಹೊರಗಿನವರು ಬಂಗಾಳವನ್ನು ಆಳಲು ಬಿಡುವುದಿಲ್ಲ ಎಂದು ಮಮತಾ ಚುನಾವಣಾ ಪ್ರಚಾರದಲ್ಲಿ ಹೇಳುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಈ ಪ್ರತ್ಯುತ್ತರ ಬಂದಿದೆ.

ಯಾವ ಭಾರತೀಯನೂ ಬಂಗಾಳದಲ್ಲಿ ಹೊರಗಿನವನಲ್ಲ: ಮಮತಾಗೆ ಪ್ರಧಾನಿ ಮೋದಿ ಪ್ರತ್ಯುತ್ತರ
ಪ್ರಧಾನಿ ಮೋದಿ ದೇಶ ಕಂಡ ದೊಡ್ಡ ದಂಗೆಕೋರ -ಮಮತಾ ಬ್ಯಾನರ್ಜಿ

ಭಾರೀ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೇಗಾದರೂ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಪಶ್ಚಿಮ ಬಂಗಾಳದ ಹಲವಾರು ರಾಜಕೀಯ ನಾಯಕಿಯರನ್ನು ಬಿಜೆಪಿ ತನ್ನೆಡೆಗೆ ಸೆಳೆದಿದೆ.

ಅಧಿಕಾರ ಹೇಗಾದರೂ ಉಳಿಸಿಕೊಳ್ಳುವ ಪರಿಶ್ರಮದಲ್ಲಿರುವ ತೃಣಮೂಲ ಕಾಂಗ್ರೆಸ್‌ ಪ್ರಾದೇಶಿಕತೆಯನ್ನೇ ತನ್ನ ಮುಖ್ಯ ಬಂಡವಾಳವನ್ನಾಗಿಸಿದೆ. ಅದೇ ಹಿನ್ನೆಲೆಯಲ್ಲಿ, ತೃಣಮೂಲ ಕಾಂಗ್ರೆಸ್‌ ʼಬಂಗಾಳ ತನ್ನ ಸ್ವಂತ ಮಗಳನ್ನು (ಮುಖ್ಯಮಂತ್ರಿಯನ್ನಾಗಿ) ಬಯಸುತ್ತಿದೆ ಎಂಬ ಅಭಿಯಾನ ಪ್ರಾರಂಭಿಸಿದೆ. ಹಾಗೂ ಚುನಾವಣಾ ಪ್ರವಾಸಿಗರು ಎಂದು ಬಿಜೆಪಿ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದೆ.

ಯಾವ ಭಾರತೀಯನೂ ಬಂಗಾಳದಲ್ಲಿ ಹೊರಗಿನವನಲ್ಲ: ಮಮತಾಗೆ ಪ್ರಧಾನಿ ಮೋದಿ ಪ್ರತ್ಯುತ್ತರ
ಬಂಗಾಳಕ್ಕೆ ದುಶ್ಯಾಸನ, ದುರ್ಯೋಧನನ ಅಗತ್ಯವಿಲ್ಲ; ಮೋದಿ, ಶಾ ವಿರುದ್ಧ ಮಮತಾ ವಾಗ್ದಾಳಿ
ಯಾವ ಭಾರತೀಯನೂ ಬಂಗಾಳದಲ್ಲಿ ಹೊರಗಿನವನಲ್ಲ: ಮಮತಾಗೆ ಪ್ರಧಾನಿ ಮೋದಿ ಪ್ರತ್ಯುತ್ತರ
ಬಂಗಾಳದ ಚುನಾವಣಾ ಲೆಕ್ಕಾಚಾರ ಬದಲಿಸುವುದೇ ನಂದಿಗ್ರಾಮ ದಾಳಿ ಘಟನೆ?

ನಂದಿಗ್ರಾಮದಲ್ಲಿ ಮಮತಾ ಅಪಘಾತ ಪ್ರಕರಣವನ್ನು ಉಲ್ಲೇಖಿಸಿದ ಮೋದಿ, ʼನೀವು (ಮಮತಾ) ನಂದಿಗ್ರಾಮದ ಜನರನ್ನು ಅವಮಾನಿಸಿದ್ದೀರಿ. ನಂದಿಗ್ರಾಮದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ನೀವು ನಂದಿಗ್ರಾಮ ಹಾಗೂ ನಂದಿಗ್ರಾಮದ ಇಡೀ ಜನತೆಯ ಮಾನವನ್ನು ದೇಶದ ಎದುರು ಕಳೆದಿದ್ದೀರಿ. ನಂದಿಗ್ರಾಮವೂ ನಿಮಗೆ ಇದನ್ನೇ ಮಾಡುತ್ತದೆ. ನಂದಿಗ್ರಾಮದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ. ಇದೇ ರೀತಿಯಲ್ಲಿ ನಿಮಗೆ ಅವರು ಪ್ರತ್ಯತ್ತರ ನೀಡುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ.

ಯಾವ ಭಾರತೀಯನೂ ಬಂಗಾಳದಲ್ಲಿ ಹೊರಗಿನವನಲ್ಲ: ಮಮತಾಗೆ ಪ್ರಧಾನಿ ಮೋದಿ ಪ್ರತ್ಯುತ್ತರ
ಎಲ್ಲಾ ಮಾರಿ ಕೊನೆಗೆ ಉಳಿಯುವುದು ಮೋದಿಯ ʼಸುಳ್ಳಿನ ಕಾರ್ಖಾನೆʼ ಮಾತ್ರ: ಮಮತಾ ಬ್ಯಾನರ್ಜಿ

ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ತನ್ನ ಮೇಲೆ ಅಪರಿಚಿತ ಗೂಂಡಾಗಳು ಹಲ್ಲೆ ಮಾಡಿದ್ದಾರೆಂದು ಮಮತಾ ಆರೋಪಿಸಿದ್ದರು. ಆದರೆ, ಚುನಾವಣಾ ಆಯೋಗವು, ಸ್ಥಳದಲ್ಲಿ ಉಂಟಾದ ನೂಕು ನುಗ್ಗಲಿನ ಪರಿಣಾಮ ಮಮತಾರಿಗೆ ಗಾಯಗಳಾಗಿವೆ ಎಂದಿತ್ತು.

ಮಮತಾ ಹಾಗೂ ಬಂಗಾಳ ಸರ್ಕಾರವನ್ನು ತೀವ್ರ ತರಾಟಗೆ ತೆಗೆದ ಮೋದಿ, ಕೇಂದ್ರ ಸರ್ಕಾರದ ಯೋಜನೆಗಳು ಪಶ್ಚಿಮ ಬಂಗಾಳ ತಲುಪದಂತೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ತಡೆಯುತ್ತಿದೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇನ್ನಷ್ಟು ಪ್ರಗತಿಯಾಗಲಿದೆ. ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.

ಯಾವ ಭಾರತೀಯನೂ ಬಂಗಾಳದಲ್ಲಿ ಹೊರಗಿನವನಲ್ಲ: ಮಮತಾಗೆ ಪ್ರಧಾನಿ ಮೋದಿ ಪ್ರತ್ಯುತ್ತರ
ಪಶ್ಚಿಮ ಬಂಗಾಳ ಚುನಾವಣಾ ಹಿನ್ನಲೆಯಲ್ಲಿ ಸಿಎಂ ಮಮತಾ ಸುತ್ತ ಹೆಣೆಯಲ್ಪಟ್ಟ ಸುಳ್ಳುಗಳು

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com