ಸೌದಿ ತೈಲ ಆಮದು ಕಡಿತಗೊಳಿಸಲು ನಿರ್ಧರಿಸಿದ ಭಾರತದ ತೈಲ ಸಂಸ್ಕರಣ ಘಟಕಗಗಳು -ವರದಿ

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತವು ತನ್ನ 80% ಕ್ಕಿಂತ ಹೆಚ್ಚು ತೈಲ ಅಗತ್ಯಗಳನ್ನು ಆಮದು ಮಾಡಿಕೊಳ್ಳಲು ಮಧ್ಯಪ್ರಾಚ್ಯವನ್ನು ಹೆಚ್ಚು ಅವಲಂಬಿಸಿದೆ.
ಸೌದಿ ತೈಲ ಆಮದು ಕಡಿತಗೊಳಿಸಲು ನಿರ್ಧರಿಸಿದ ಭಾರತದ ತೈಲ ಸಂಸ್ಕರಣ ಘಟಕಗಗಳು -ವರದಿ

ಜಾಗತಿಕ ಆರ್ಥಿಕತೆಗೆ ಸಹಕರಿಸಲು ಅನಿಲ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ ನವದೆಹಲಿಯಿಂದ ಬಂದ ಕರೆಗಳನ್ನು ನಿರ್ಲಕ್ಷಿಸಿದ ಒಪೆಕ್ ನಿರ್ಧಾರವನ್ನು ವಿರೋಧಿಸಿ ಸರ್ಕಾರಿ ಸ್ವಾಮ್ಯದ ರಿಫೈನರ್‌ಗಳು ಸೌದಿ ಅರೇಬಿಯಾದಿಂದ ಮಾಡುತ್ತಿದ್ದ ತೈಲ ಆಮದನ್ನು ಮೇ ತಿಂಗಳಲ್ಲಿ ಕಾಲು ಭಾಗದಷ್ಟು ಕಡಿತಗೊಳಿಸಲು ಯೋಜಿಸುತ್ತಿದೆ.

ಮಧ್ಯಪ್ರಾಚ್ಯದಿಂದ ಆಮದಾಗುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಸರ್ಕಾರದ ನಿರ್ಧಾರದ ಭಾಗವಾಗಿ ಈ ಕಡಿತಗೊಳಿಸುವಿಕೆ ಜಾರಿಗೆ ಬಂದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ, ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮೇ ತಿಂಗಳಲ್ಲಿ ಸುಮಾರು 10.8 ಮಿಲಿಯನ್ ಬ್ಯಾರೆಲ್‌ಗಳನ್ನು ಕಡಿತಗೊಳಿಸುವ ತಯಾರಿ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ದಿನಕ್ಕೆ 5 ಮಿಲಿಯನ್ ಬ್ಯಾರೆಲ್‌ಗಳಲ್ಲಿ (ಬಿಪಿಡಿ) ಸುಮಾರು 60% ಸಂಸ್ಕರಣಾ ಸಾಮರ್ಥ್ಯವನ್ನು ನಿಯಂತ್ರಿಸುವ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಒಟ್ಟಾಗಿ ಒಂದು ತಿಂಗಳಲ್ಲಿ ಸರಾಸರಿ 14.7-14.8 ಮಿಲಿಯನ್ ಬ್ಯಾರೆಲ್ ಸೌದಿ ತೈಲವನ್ನು ಆಮದು ಮಾಡಿಕೊಳ್ಳುತ್ತವೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತವು ತನ್ನ 80% ಕ್ಕಿಂತ ಹೆಚ್ಚು ತೈಲ ಅಗತ್ಯಗಳನ್ನು ಆಮದು ಮಾಡಿಕೊಳ್ಳಲು ಮಧ್ಯಪ್ರಾಚ್ಯವನ್ನು ಹೆಚ್ಚು ಅವಲಂಬಿಸಿದೆ.

ತೈಲ ಬೆಲೆ ಏರಿಕೆಯಿಂದಾಗಿ ತೀವ್ರ ಸಂಕಷ್ಟ ಎದುರಾದಾಗ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಮತ್ತು ಒಪೆಕ್ + ಎಂದು ಕರೆಯಲ್ಪಡುವ ಅದರ ಮಿತ್ರ ರಾಷ್ಟ್ರಗಳಿಗೆ ಪದೇ ಪದೇ ಕರೆ ಮಾಡಿದ್ದರು. ಮತ್ತು ಜಾಗತಿಕ ಪೆಟ್ರೋಲ್ ಬೆಲೆ ಏರಿಕೆಗೆ ಸೌದಿಯ ಸ್ವಯಂ ಪ್ರೇರಿತ ಕಡಿತವೇ ಕಾರಣವೆಂದು ಆಪಾದಿಸಿದ್ದರು.

ಹೆಚ್ಚಿನ ಕಡಿತಗಳನ್ನು ಏಪ್ರಿಲ್ ವರೆಗೆ ವಿಸ್ತರಿಸಲು ಒಪೆಕ್ + ಈ ತಿಂಗಳು ನಿರ್ಧರಿಸಿದೆ. ಶ್ರೀ ಪ್ರಧಾನ್ ಅವರ ಮನವಿಗೆ ಸ್ಪಂದಿಸದ ಸೌದಿಯ ಇಂಧನ ಸಚಿವ ಪ್ರಿನ್ಸ್ ಅಬ್ದುಲ್ ಅಝೀಝ್ ಬಿನ್ ಸಲ್ಮಾನ್ ಕಳೆದ ವರ್ಷ ಖರೀದಿಸಿದ ಅಗ್ಗದ ಎಣ್ಣೆಯನ್ನು ಬಳಸಿಕೊಳ್ಳುವಂತೆ ಸೂಚಿಸಿದರು.

ಇದಕ್ಕೆ ಪ್ರತಿಯಾಗಿ ಸಚಿವಾಲಯವು ರಿಫೈನರ್‌ಗಳಿಗೆ ತಮ್ಮ ಕಚ್ಚಾ ಮೂಲಗಳನ್ನು ಬದಲಾಯಿಸಲು ಮತ್ತು ಮಧ್ಯಪ್ರಾಚ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸೂಚಿಸಿತ್ತು.

ಮಾರ್ಚ್ ಆರಂಭದಲ್ಲಿ ಒಪೆಕ್ + ನಿರ್ಧಾರಕ್ಕೆ ಮುಂಚಿತವಾಗಿ ತೈಲಕ್ಕೆ ಬೇಡಿಕೆ ಸಲ್ಲಿಸಿದ್ದರಿಂದ ಸೌದಿ ಅರೇಬಿಯಾದಿಂದ ಏಪ್ರಿಲ್ ತೈಲ ಆಮದನ್ನು ಕಡಿತಗೊಳಿಸಲು ರಿಫೈನರ್‌ಗಳಿಗೆ ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ‌. ಆದರೆ ಮೇ ತಿಂಗಳ ಯೋಜನೆಗಳ ಬಗ್ಗೆ ಎಪ್ರಿಲ್ ಆರಂಭದಲ್ಲಿ ತಿಳಿಯಬಹುದು.

ಕೆಲವು ಏಷ್ಯನ್ ರಿಫೈನರ್‌ಗಳಿಗೆ ಸೌದಿ ಅರೇಬಿಯಾ ಏಪ್ರಿಲ್ ತೈಲ ಸರಬರಾಜನ್ನು ಕಡಿತಗೊಳಿಸಿದೆ ಆದರೆ ಭಾರತೀಯ ರಿಫೈನರ್‌ಗಳಿಗೆ ಸರಾಸರಿ ಮಾಸಿಕ ಪ್ರಮಾಣವನ್ನು ಕಾಯ್ದುಕೊಂಡಿದೆ. ಆದಾಗ್ಯೂ, ಹೆಚ್ಚುವರಿ ಸರಬರಾಜಿಗಾಗಿ ಭಾರತೀಯ ಕಂಪನಿಗಳ ಬೇಡಿಕೆಯನ್ನು ಸೌದಿ ತಿರಸ್ಕರಿಸಿದೆ.

ಭಾರತದ ಒಟ್ಟಾರೆ ಆಮದಿನ ಮಧ್ಯಪ್ರಾಚ್ಯದ ಪಾಲು ಈಗಾಗಲೇ ಫೆಬ್ರವರಿಯಲ್ಲಿ 22 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಫೆಬ್ರವರಿಯಲ್ಲಿ, ಇರಾಕ್ ನಂತರ ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ಎರಡನೇ ಅತಿದೊಡ್ಡ ಸರಬರಾಜುದಾರನಾಗಿ ಹೊರಹೊಮ್ಮಿತು.ಆದರೆ ಭಾರತದ ಅಗ್ರ ಎರಡು ಪೂರೈಕೆದಾರರಲ್ಲಿ ಒಬ್ಬರಾಗಿರುವ ಸೌದಿ ಅರೇಬಿಯಾ ಜನವರಿ 2006 ರ ನಂತರ ಇದೇ ಮೊದಲ ಬಾರಿಗೆ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.

ಐಐಸಿ ಮತ್ತು ಎಂಆರ್‌ಪಿಎಲ್ ಎಂಬ ಎರಡು ರಿಫೈನರ್‌ಗಳು ಮೇ ತಿಂಗಳಲ್ಲಿ ವಿತರಣೆಗೆ ತೈಲವನ್ನು ಕೋರಿ ಟೆಂಡರ್‌ಗಳನ್ನು ಸಹ ಕರೆದಿವೆ. "ತೈಲ ಕಂಪನಿಗಳು ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತವೆ" ಎಂದು ಪೆಟ್ರೋಲಿಯಂ ಸಚಿವಾಲಯ ರಾಯಿಟರ್ಸ್‌ಗೆ ತಿಳಿಸಿದೆ. ರಾಯಿಟರ್ಸ್ ಕೋರಿಕೆಗೆ ಸಾರ್ವಜನಿಕರ ವಲಯದ ರಿಫೈನರ್‌ಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೂಲ: News18

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com