ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ: ವಿಪಕ್ಷ ನಾಯಕರ ಮೇಲೆ ಗಂಭೀರ ಹಲ್ಲೆ

ಇಂದು ನೀವು ಹೊತ್ತಿಸಿರುವ ಕಿಡಿ ನಾಳೆ ನಿಮ್ಮ ದುರಾಡಳಿತವನ್ನು ಸುಟ್ಟು ಹಾಕುತ್ತದೆ. ಬಿಹಾರ ಎಲ್ಲ ಲೆಕ್ಕ ಚುಕ್ತಾ ಮಾಡಲಿದೆ. ಅದೂ ಶೀಘ್ರದಲ್ಲಿಯೇ, ಎಂದು ತೇಜಸ್ವಿ ಯಾದವ್‌ ತಾಯಿ ರಾಬ್ರಿ ದೇವಿ ಟ್ವೀಟ್‌ ಮಾಡಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ: ವಿಪಕ್ಷ ನಾಯಕರ ಮೇಲೆ ಗಂಭೀರ ಹಲ್ಲೆ

ಬಿಹಾರ ವಿಧಾನಸಭಾ ಅಧಿವೇಶನ ಗೊಂದಲಗಲ ಗೂಡಾಗಿ ಮಾರ್ಪಟ್ಟಿದೆ. ವಿಪಕ್ಷ ನಾಯಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಸದನದ ಒಳಗೆ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಪಕ್ಷದ ಶಾಸಕರನನ್ನು ನಿತೀಶ್‌ ಕುಮಾರ್ ಥಳಿಸಿದ್ದಾರೆ, ಪೊಲೀಸರು ಹಾಗು ಸ್ಥಳೀಯ ಗೂಂಡಾಗಳಿಂದ ಪ್ರತಿಭಟನೆ ಹತ್ತಿಕ್ಕುವ ಕಾರ್ಯನಡೆದಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆರೋಪಿಸಿದ್ದಾರೆ.

ಬಿಹಾರದಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಸಲುವಾಗಿ, ಹೊಸ ಮಸೂದೆಯೊಂದನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರ ತರಲು ಹೊರಟಿತ್ತು. ಪ್ರತಿಪಕ್ಷಗಳು ಇದನ್ನು ವಿರೋಧಿಸಿ ಮಂಗಳವಾರ ಸದನದಲ್ಲಿ ಪ್ರತಿಭಟನೆ ನಡೆಸಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶಾಸಕ ಸತೀಶ್‌ ಕುಮಾರ್‌ ರವರು ಬಡಕುಟುಂಬದಿಂದ ಬಂದವರಾಗಿದ್ದು, ಹೋರಾಟ ಮನೋಭಾವ ಹೊಂದಿದ ಶಾಸಕ, ಇದೀಗ ನಿತೀಶ್‌ ಕುಮಾರ್‌ ಸರ್ಕಾರದ ಗೂಂಡಾಗಿರಿಗೆ ಬಲಿಯಾಗಿದ್ದಾರೆ. ದಾಳಿಯಲ್ಲಿ ಅವರ ತಲೆಗೆ ಪೆಟ್ಟು ಬಿದ್ದಿದೆ, ಇದಕ್ಕೆ ಫೋಟೋ ಸಾಕ್ಷಿಯಿದೆ ಎಂದು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಆರ್‌ಜೆಡಿ, ಕಾಂಗ್ರೆಸ್‌ ಹಾಗು ಇತರೆ ಪ್ರತಿಪಕ್ಷಗಳು ಮಂಗಳವಾರ ಸದನದಲ್ಲಿ 2021 ರ ಬಿಹಾರದ ವಿಶೇಷ ಸಶಸ್ತ್ರ ಪೊಲೀಸ್‌ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾದ ಕಾರಣ ವಿಧಾನಸಭೆ ಅಧಿವೇಶನವನ್ನು 5 ಬಾರಿ ಮುಂದೂಡಲಾಗಿತ್ತು.

ಈ ಕುರಿತಾಗಿ ಸರಣಿ ಟ್ವೀಟ್‌ ಮಾಡಿರುವ ತೇಜಸ್ವಿ ಯಾದವ್‌ ಅವರು, ಪೊಲೀಸರಿಗೆ ವಿಶೇಷ ಅಧಿಕಾರವನ್ನು ನೀಡುವ ಹೊಸ ಕಾಯ್ದೆ ಜಾರಿಯಾದರೆ, ಪೊಲೀಸ್‌ ವ್ಯವಸ್ಥೆ ನಿತೀಶ್ ಕುಮಾರ್‌ರವರ ಸರ್ವಾಧಿಕಾರಿ ಸರ್ಕಾರದ ಬಂಧಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಸದನದಲ್ಲಿ ಕಾಯ್ದೆಯ ವಿರೋಧ ಪ್ರತಿಭಟಿಸಿದ ಸಂಬಂಧ ಪೊಲೀಸರನ್ನೇ ಬಳಸಿಕೊಂಡು ಪಕ್ಷದ ಶಾಸಕರನ್ನು ಹೊರಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸದನದ ಒಳಗೆ ಮತ್ತು ಹೊರಗಿನ ಅವ್ಯವಸ್ಥೆಯ ವೀಡಿಯೊವನ್ನು ಕೂಡಾ ಹಂಚಿಕೊಂಡಿದ್ದಾರೆ.

ಮಹಿಳಾ ಶಾಸಕರು ಮತ್ತು ಮಹಿಳಾ ಭದ್ರತಾ ಸಿಬ್ಬಂದಿ ನಡುವೆಯೂ ತಳ್ಳಾಟ ನಡೆದಿದ್ದು, ತೇಜಸ್ವಿ ಯಾದವ್ ಅವರ ತಾಯಿ ರಾಬ್ರಿ ದೇವಿ ಮಹಿಳಾ ಶಾಸಕರನ್ನು ಮಹಿಳಾ ಭದ್ರತಾ ಸಿಬ್ಬಂದಿ ಕರೆದೊಯ್ಯುತ್ತಿರುವ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಇಂದು ನೀವು ಹೊತ್ತಿಸಿರುವ ಕಿಡಿ ನಾಳೆ ನಿಮ್ಮ ದುರಾಡಳಿತವನ್ನು ಸುಟ್ಟು ಹಾಕುತ್ತದೆ. ಬಿಹಾರ ಎಲ್ಲ ಲೆಕ್ಕ ಚುಕ್ತಾ ಮಾಡಲಿದೆ. ಅದೂ ಶೀಘ್ರದಲ್ಲಿಯೇ, ಎಂದು ಹಿಂದಿಯಲ್ಲಿ ರಾಬ್ರಿ ದೇವಿ ಟ್ವೀಟ್‌ ಮಾಡಿದ್ದಾರೆ.

ಸರ್ಕಾರದ ಜನವಿರೋಧಿ ಕಾಯ್ದೆಗಳ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಕೂಡ ತಾತ್ಕಾಲಿಕವಾಗಿ ಬಂಧಿಸಲಾಗಿತ್ತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com