ಉದ್ಧವ್ ಠಾಕ್ರೆ ವಿರುದ್ಧ ಮಾತನಾಡಿದ ಪಕ್ಷೇತರ ಸಂಸದೆಗೆ ಆಸಿಡ್‌ ಬೆದರಿಕೆ; ಆರೋಪ

ಶಿವಸೇನೆ ಸಂಸದ ಅರವಿಂದ ಸಾವಂತ್ ಬೆದರಿಕೆ ಹಾಕಿದ ರೀತಿ ನನಗೆ ಮಾತ್ರವಲ್ಲ, ದೇಶದ ಎಲ್ಲ ಮಹಿಳೆಯರಿಗೂ ಮಾಡಿದ ಅವಮಾನವಾಗಿದೆ ಎಂದು ಕೌರ್‌ ಹೇಳಿದ್ದಾರೆ
ಉದ್ಧವ್ ಠಾಕ್ರೆ ವಿರುದ್ಧ ಮಾತನಾಡಿದ ಪಕ್ಷೇತರ ಸಂಸದೆಗೆ ಆಸಿಡ್‌ ಬೆದರಿಕೆ; ಆರೋಪ

ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದ ಪಕ್ಷೇತರ ಸಂಸದೆ ನವನೀತ್‌ ಕೌರ್‌ ರಾಣಾ ಅವರು ಶಿವಸೇನೆ ಸಂಸದ ಅರವಿಂದ್‌ ಸಾವಂತ್‌ ವಿರುದ್ಧ ಬೆದರಿಕೆ ಆರೋಪ ಹೊರಿಸಿದ್ದಾರೆ.

ಈ ಕುರಿತು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ನವನನೀತ್‌ ಕೌರ್‌, ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡದಂತೆ ಅರವಿಂದ್‌ ಸಾವಂತ್‌ ಬೆದರಿಕೆ ಹಾಕಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಹಾಕಿಸುವುದಾಗಿ ಬೆದರಿಸಿದ್ದಾರೆಂದು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಅವರು ಆರೋಪಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶಿವಸೇನೆ ಸಂಸದ ಅರವಿಂದ ಸಾವಂತ್ ಬೆದರಿಕೆ ಹಾಕಿದ ರೀತಿ ನನಗೆ ಮಾತ್ರವಲ್ಲ, ದೇಶದ ಎಲ್ಲ ಮಹಿಳೆಯರಿಗೂ ಮಾಡಿದ ಅವಮಾನವಾಗಿದೆ. ಆದ್ದರಿಂದ ಅರವಿಂದ ಸಾವಂತ್ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲು ಅವರು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ವಿರುದ್ಧ ಮಾತನಾಡಿದಕ್ಕೆ ಸಾವಂತ್‌ ನನ್ನ ವಿರುದ್ಧ ಕೋಪಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಹೇಗೆ ತಿರುಗಾಡುತ್ತೀ ಎಂದು ಅವರು ಸವಾಲು ಹಾಕಿದ್ದಾರೆಂದು ಕೌರ್‌ ಹೇಳಿದ್ದಾರೆ.

ಲೋಕಸಭಾ ಲೋಬಿಯಲ್ಲಿ ನನಗೆ ಬೆದರಿಕೆ ಹಾಕಿರುವುದಕ್ಕೆ ರಾಜಮುಂದ್ರಿ ಸಂಸದ ಭಾರತ್‌ ಮರ್ಗಾನಿ ಸಾಕ್ಷಿಯಾಗಿದ್ದಾರೆಂದು ಸಂಸದೆ ಎಎನ್‌ಐಗೆ ತಿಳಿಸಿದ್ದಾರೆ.

ಅದಲ್ಲದೆ ಶಿವಸೇನೆ ಕಾರ್ಯಕರ್ತರಿಂದ ನನಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದೆ. ಉದ್ಧವ್‌ ಠಾಕ್ರೆ ವಿರುದ್ಧ ಮಾತನಾಡಿದರೆ ನೀವು ಹೆಮ್ಮೆ ಪಡುವ ನಿಮ್ಮ ಸುಂದರ ಮುಖವನ್ನು ಆಸಿಡ್‌ ಹಾಕಿ ವಿರೂಪಗೊಳಿಸಲಾಗುವುದು ಎಂದು ಬೆದರಿಕೆ ಬಂದಿದೆ ಎಂದು ಆರೋಪಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com