ಎಲ್ಲಾ ಮಾರಿ ಕೊನೆಗೆ ಉಳಿಯುವುದು ಮೋದಿಯ ʼಸುಳ್ಳಿನ ಕಾರ್ಖಾನೆʼ ಮಾತ್ರ: ಮಮತಾ ಬ್ಯಾನರ್ಜಿ

ಕೇಂದ್ರವು ಎಲ್ಲವನ್ನೂ ಮಾರಾಟ ಮಾಡುತ್ತಿದೆ. ಹೀಗೆ ಆದರೆ ಕೊನೆಗೆ ಉಳಿಯುವುದು ನರೇಂದ್ರ ಮೋದಿಯ ಸುಳ್ಳಿನ ಕಾರ್ಖಾನೆ ಮಾತ್ರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎಲ್ಲಾ ಮಾರಿ ಕೊನೆಗೆ ಉಳಿಯುವುದು ಮೋದಿಯ ʼಸುಳ್ಳಿನ ಕಾರ್ಖಾನೆʼ ಮಾತ್ರ: ಮಮತಾ ಬ್ಯಾನರ್ಜಿ

ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ರಾಜ್ಯಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದು, ಈ ಬಾರಿ ತನ್ನ ನೇರ ಎದುರಾಳಿಯಾಗಲಿರುವ ಬಿಜೆಪಿಯನ್ನು ಹಿಗ್ಗಾಮುಗ್ಗಾ ಗುರಿ ಮಾರಿ ಟೀಕಿಸುತ್ತಿದ್ದಾರೆ.

ಪುರುಲಿಯಾ ಜಿಲ್ಲೆಯ ಕಾಶಿಪುರ್‌ ಹಾಗೂ ರಘುನಾಥ್‌ಪುರ್‌ ಪ್ರದೇಶದಲ್ಲಿ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗಿಯಾದ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ, ಕೇಂದ್ರವು ಎಲ್ಲವನ್ನೂ ಮಾರಾಟ ಮಾಡುತ್ತಿದೆ. ಹೀಗೆ ಆದರೆ ಕೊನೆಗೆ ಉಳಿಯುವುದು ನರೇಂದ್ರ ಮೋದಿಯ ಸುಳ್ಳಿನ ಕಾರ್ಖಾನೆ ಮಾತ್ರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಚುನಾವಣಾ ಪ್ರಣಾಳಿಕೆಯಲ್ಲಿ ಪಶ್ಚಿಮ ಬಂಗಾಳದ ಜನೆತೆಗೆ ಭಾರೀ ಆಶ್ವಾಸನೆಯನ್ನು ನೀಡಿರುವ ಬಿಜೆಪಿಯ ಕಾಲೆಳೆದ ಮಮತಾ, ಬಿಜೆಪಿಯು ಅಸ್ಸಾಮಿನಲ್ಲಿ ಹಾಗೂ ತ್ರಿಪುರಾದಲ್ಲಿ ಕೊಟ್ಟ ಭರವಸೆಯನ್ನು ಉಳಿಸಿಲ್ಲ. ಪಶ್ಚಿಮ ಬಂಗಾಳದ ಜನರಿಗೆ ಇನ್ನೇನು ನೀಡಲಿದೆ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಕೃತ ಟೆಲಿಕಾಂ ಸಂಸ್ಥೆ, ರಾಷ್ಟ್ರೀಕೃತ ಬ್ಯಾಂಕುಗಳು, ಏರ್ ಇಂಡಿಯಾ ಮತ್ತು ರಕ್ಷಣಾ ಉತ್ಪಾದನೆಯಂತಹ ಇತರ ಪ್ರಮುಖ ಕ್ಷೇತ್ರಗಳಲ್ಲಿನ ಸರ್ಕಾರಿ ಕಂಪನಿಗಳನ್ನು ಮಾರಾಟ ಮಾಡಲು ಕೇಂದ್ರವು ಯೋಜಿಸುತ್ತಿದೆ, ಈ ಕಾರಣದಿಂದಾಗಿ ಸಾವಿರಾರು ಉದ್ಯೋಗಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಎಲ್ಲಾ ಮಾರಿ ಕೊನೆಗೆ ಉಳಿಯುವುದು ಮೋದಿಯ ʼಸುಳ್ಳಿನ ಕಾರ್ಖಾನೆʼ ಮಾತ್ರ: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಚುನಾವಣಾ ಹಿನ್ನಲೆಯಲ್ಲಿ ಸಿಎಂ ಮಮತಾ ಸುತ್ತ ಹೆಣೆಯಲ್ಪಟ್ಟ ಸುಳ್ಳುಗಳು

ಕೇಂದ್ರ ಸರ್ಕಾರದ ಎಲ್ಲಾ ಉದ್ದಿಮೆಗಳನ್ನು ಹೀಗೆ ಖಾಸಗಿಯವರಿಗೆ ಮಾರಿ ಮಾರಿ, ಕೊನೆಗೆ ದೇಶಕ್ಕೆ ಉಳಿಯುವುದು ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳಿನ ಕಾರ್ಖಾನೆ ಮತ್ತು ಬಿಜೆಪಿಯ ಮೋಸಗಳು ಮಾತ್ರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್‌ 27ರಿಂದ ಎಪ್ರಿಲ್‌ 29 ರವರೆಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ಬಿಜೆಪಿ ತನ್ನ ಮತ ಹಂಚಿಕೆಯನ್ನು ಗಣನೀಯವಾಗಿ ವೃದ್ಧಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಅದಾಗ್ಯೂ, ಬಹುತೇಕ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಬಂಗಾಳದಲ್ಲಿ ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸರ್ಕಾರ ರಚಿಸಲಿದೆ ಎಂದಿವೆ.

ಎಲ್ಲಾ ಮಾರಿ ಕೊನೆಗೆ ಉಳಿಯುವುದು ಮೋದಿಯ ʼಸುಳ್ಳಿನ ಕಾರ್ಖಾನೆʼ ಮಾತ್ರ: ಮಮತಾ ಬ್ಯಾನರ್ಜಿ
ಬಂಗಾಳಕ್ಕೆ ದುಶ್ಯಾಸನ, ದುರ್ಯೋಧನನ ಅಗತ್ಯವಿಲ್ಲ; ಮೋದಿ, ಶಾ ವಿರುದ್ಧ ಮಮತಾ ವಾಗ್ದಾಳಿ
ಎಲ್ಲಾ ಮಾರಿ ಕೊನೆಗೆ ಉಳಿಯುವುದು ಮೋದಿಯ ʼಸುಳ್ಳಿನ ಕಾರ್ಖಾನೆʼ ಮಾತ್ರ: ಮಮತಾ ಬ್ಯಾನರ್ಜಿ
ನೆನಪಿಡಿ ಗಾಯಗೊಂಡ ಹುಲಿ ಅತ್ಯಂತ ಅಪಾಯಕಾರಿ: ಮಮತಾ ಬ್ಯಾನರ್ಜಿ ಎಚ್ಚರಿಕೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com