ಚಾಯ್‌ವಾಲ ಎಂದು ಜರೆದವರು ಈಗ ʼಚಾʼಎಲೆಗಳನ್ನ ಕೀಳುತ್ತಿದ್ದಾರೆ –ರಾಜನಾಥ್‌ ಸಿಂಗ್

ಕಾಂಗ್ರೆಸ್ ಹಾಗೂ ಬಿಜೆಪಿ ಅಸ್ಸಾಮಿನಲ್ಲಿ ʼಚಹಾವನ್ನುʼ ಮುಖ್ಯ ಚುನಾವಣಾ ವಿಷಯವಾಗಿ ಬಳಸಿಕೊಂಡಿದೆ. ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ ಚಾಯ್ವಾಲಾನ ಸಮಸ್ಯೆಯನ್ನು ಉದ್ದೇಶಿಸಿ ಮಾತನಾಡಿದರೆ.ರಾಹುಲ್ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಚಹಾ ತೋಟಗಳಿಗೆ ಭೇಟಿನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಚಾಯ್‌ವಾಲ ಎಂದು ಜರೆದವರು ಈಗ ʼಚಾʼಎಲೆಗಳನ್ನ ಕೀಳುತ್ತಿದ್ದಾರೆ –ರಾಜನಾಥ್‌ ಸಿಂಗ್

ಮೋದಿಗೆ ಚಾಯ್‌ವಾಲ ಎಂದು ಅಪಹಾಸ್ಯಮಾಡಿದ ಜನರಿಂದು ಚಹಾದ ಎಲೆಗಳನ್ನು ಕೀಳುತ್ತಿದ್ದಾರೆ ಮತ್ತು ಮಾರುತ್ತಿದ್ದಾರೆಂದು ಕೇಂದ್ರ ರ್ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅಸ್ಸಾಂ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಹಾಗು ರಾಹುಲ್‌ ಗಾಂಧಿ ಅವರನ್ನು ಕಾಲೆಳೆದಿದ್ದಾರೆ.

ಪ್ರಧಾನ ಮಂತ್ರಿ ನೈಜ ಮತ್ತು ಪ್ರಾಮಾಣಿಕ ಚಾಯ್‌ವಾಲ, ಅವರನ್ನು ಈ ಹಿಂದೆ ಚಾಯ್‌ವಾಲ ಎಂದು ವ್ಯಂಗ್ಯ ಮಾಡಲಾಗಿತ್ತು. ನಿಜವಾದ ಚಾಯ್‌ವಾಲ ಅವರು ಅಪಹಾಸ್ಯಮಾಡಿದವರನ್ನು ಚಹಾ ತೋಟಕ್ಕೆ ಕರೆತಂದಿದ್ದಾರೆ. ಜನರೇ ನೀವು ಜಾಗರೂಕರಾಗಿ, ನಮ್ಮೊಂದಿಗಿರುವುದು ನೈಜ ಮತ್ತು ಪ್ರಾಮಾಣಿಕ ಚಾಯ್‌ವಾಲ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಸ್ಸಾಂ ವಿಧಾಸಭಾ ಚುನಾವಣೆ ಹಿನ್ನಲೆ, ಮಾರ್ಚ್‌ 2 ರಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಅಸ್ಸಾಂ ನ ಬಿಸ್ವಾನಾಥದಲ್ಲಿ ಚಹಾ ತೋಟದ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. ಪ್ರಿಯಾಂಕ ಗಾಂಧಿ ಕಾರ್ವಿಕರೊಂದಿಗೆ ಸಂವಾದ ನಡೆಸಿದ ಫೋಟೋ ಹಾಗು ಚಾ ಎಲೆಗಳನ್ನು ಕೀಳುತ್ತಿರುವ ಪೋಟೋವನ್ನು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು.

ರಾಹುಲ್‌ ಗಾಂಧಿ ಕೂಡ ಅಸ್ಸಾಂ ಚಹಾ ತೋಟದ ಕಾರ್ಮಿಕರನ್ನು ಭೇಟಿಯಾಗಿದ್ದರು. ಇದೀಗ ಬಿಜೆಪಿ ಕೂಡ ಇದೇ ವಿಚಾರವನ್ನಿಟ್ಟುಕೊಂಡು ಅಸ್ಸಾಂ ಮತದಾರರನ್ನು ಸೆಳೆಯಲು ಗಾಳವಾಗಿ ಬಳಸಿಕೊಂಡಿದೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಕೂಡ ಅಸ್ಸಾಮಿನ ಚಹಾವನ್ನು ಉಲ್ಲೇಖಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು.

ಚಾಯ್‌ವಾಲ ಎಂದು ಜರೆದವರು ಈಗ ʼಚಾʼಎಲೆಗಳನ್ನ ಕೀಳುತ್ತಿದ್ದಾರೆ –ರಾಜನಾಥ್‌ ಸಿಂಗ್
ಚಾಯ್‌‌ವಾಲ ನಿಮ್ಮ ನೋವು ಅರ್ಥೈಸದಿದ್ದರೆ, ಇನ್ಯಾರಿಂದ ಸಾಧ್ಯ? ಮೋದಿ ಪ್ರಶ್ನೆ

ವಿದೇಶಾಂಗ ಸಚಿವ ರಾಜನಾಥ್‌ಸಿಂಗ್‌ ಅಸ್ಸಾಂ ನ ಲುಮ್‌ಡಿಂಗ್‌ನ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಚಾಯ್‌ವಾಲ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್‌ನ ಟೀಕೆ ಅಪಹಾಸ್ಯ ಮಾಡುವುದರ ಜೊತೆಗೆ ಅಸ್ಸಾಂ ಗೆ ಬಾಂಗ್ಲಾದೇಶದ ಅಕ್ರಮ ವಲಸಿಗರ ವಿಚಾರದಲ್ಲಿ ರಾಜಕೀಯ ಬೇಡ, ಬ್ಲಾಂಗ್ಲಾದಿಂದ ಒಳನುಸುಳುವಿಕೆ ತಡೆಯಲು, ಬಿಜೆಪಿ ಸರ್ಕಾರ ಅಸ್ಸಾಂನ ಇಂಡೋ-ಬಾಂಗ್ಲಾ ಗಡಿಯುದ್ದಕ್ಕೂ ಎಲೆಕ್ಟ್ರಾನಿಕ್ ಕಣ್ಗಾವಲು ಸ್ಥಾಪಿಸಿದೆ ಎಂದಿದ್ದಾರೆ.

ಅಸ್ಸಾಂ ನ ಸಂಸ್ಕೃತಿ ಮತ್ತು ಗುರುತನ್ನು ರಕ್ಷಿಸುತ್ತೇವೆ. ನಮಗೆ ಕೆಟ್ಟ ಉದ್ದೇಶವಿದಿದ್ದರೆ ಡಾ ಭೂಪೆನ್‌ ಹಜರಿಕಾ ಅವರಿಗೆ ಭಾರತ ರತ್ನವನ್ನು ನೀಡುತ್ತಿರಲಿಲ್ಲ ಎಂದು ಸಿಂಗ್ ಹೇಳಿರುವುದಾಗಿ ‌ ಪಿಟಿಐ ವರದಿ ಮಾಡಿದೆ. ನೀವು ಬಿಜೆಪಿಯನ್ನು ಗೆಲ್ಲಿಸಿದರೆ ಅಸ್ಸಾಂ ಪ್ರವಾಹ ಮುಕ್ತಮಾಡಲು ಶ್ರಮಿಸುತ್ತೇವೆಂಬ ಭರವಸೆಯನ್ನು ಸಿಂಗ್‌ ನೀಡಿದ್ದಾರೆ.

ಬಿಜೆಪಿ ಮಂಗಳವಾರ (ಮಾರ್ಚ್‌23) ರಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಆತ್ಮನಿರ್ಭರ ಅಸ್ಸಾಂ ಗೆ ಪ್ರಣಾಳಿಕೆಯಲ್ಲಿ ಪ್ರಮುಖ ಹತ್ತು ಭರವಸೆಗಳನ್ನು ನೀಡಿದೆ.

ಅಸ್ಸಾಂ ರಾಜ್ಯದಲ್ಲಿ ಮಾರ್ಚ್‌ 27 ರಿಂದ ಒಟ್ಟು 126 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com