ಅಸ್ಸಾಂ ಚುನಾವಣೆ: CAA, NRCಯನ್ನು ಚುನಾವಣಾ ದಾಳವಾಗಿಸಿದ ಬಿಜೆಪಿ ಮತ್ತು ಕಾಂಗ್ರೆಸ್‌

ಈಗಾಗಲೇ ಪೌರತ್ವ ಕಾಯ್ದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ. ಅದನ್ನು ಸಂಪೂರ್ಣ ಶ್ರದ್ದೆ ಮತ್ತು ಉತ್ಸಾಹದಿಂದ ಜಾರಿಗೊಳಿಸುತ್ತೇವೆ, ʼಸರಿಪಡಿಸಲಾದ NRC ಜಾರಿಗೊಳಿಸುತ್ತೇವೆ ಮತ್ತು ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಅಸ್ಸಾಂ ಚುನಾವಣೆ: CAA, NRCಯನ್ನು ಚುನಾವಣಾ ದಾಳವಾಗಿಸಿದ ಬಿಜೆಪಿ ಮತ್ತು ಕಾಂಗ್ರೆಸ್‌

ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಲ್ಲಿದ್ದು, ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ತಂತ್ರವನ್ನು ಹೆಣೆಯುತ್ತಿವೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸ್ಸಾಂ ಭೇಟಿ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಕೊಟ್ಟರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಂಗಳವಾರದಂದು (ಮಾರ್ಚ್ 23)‌ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅಸ್ಸಾಂನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಪಕ್ಷದ ಪ್ರಣಾಳಿಕೆಯಲ್ಲಿ 10 ಭರವಸೆಗಳ ನೀಡಲಾಗಿದೆ.

ಈಗಾಗಲೇ ಪೌರತ್ವ ಕಾಯ್ದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ. ಅದನ್ನು ಸಂಪೂರ್ಣ ಶ್ರದ್ದೆ ಮತ್ತು ಉತ್ಸಾಹದಿಂದ ಜಾರಿಗೊಳಿಸುತ್ತೇವೆ, ʼಸರಿಪಡಿಸಲಾದ NRC ಜಾರಿಗೊಳಿಸುತ್ತೇವೆ ಮತ್ತು ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.

ಬಿಜೆಪಿ ನೀಡಿದ ಪ್ರಮುಖ ಭರವಸೆಗಳು

ಮಿಷನ್‌ ಬ್ರಹ್ಮಪುತ್ರ ಯೋಜನೆ ಅಡಿ ರಾಜ್ಯದ ಜನರನ್ನು ಪ್ರವಾಹದಿಂದ ರಕ್ಷಣೆ ಮಾಡುವ ಗುರಿ.

ಅರುಣೋದಯ ಕಾರ್ಯಕ್ರಮ ವ್ಯಾಪ್ತಿ ವಿಸ್ತರಣೆ. 30 ಲಕ್ಷ ಜನರಿಗೆ ಮಾಸಿಕ ಮೂರು ಸಾವಿರ ಸಹಾಯಧನ.

ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರಿ ಸಂಸ್ಥೆಗಳಲ್ಲಿ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ. 8 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ ವಿತರಣೆ.

ಅಸ್ಸಾಂ ಅನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಣ್ಣ ಮತ್ತು ಅತೀ ಸಣ್ಣ ಮಟ್ಟದಲ್ಲಿ ಯೋಜನೆಗಳನ್ನು ಜಾರಿ ಮಾಡುವುದು.

ಅಸ್ಸಾಂ ಸಮುದಾಯದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 2 ಲಕ್ಷ ಹಣಕಾಸಿನ ನೆರವು.

ಎನ್‌ಆರ್‌ಸಿ ಕಾಯ್ದೆ ಮೂಲಕ ಭಾರತೀಯರ ರಕ್ಷಣೆ ಮತ್ತು ಒಳನುಸುಳುವಿಕೆಗೆ ತಡೆ. ಇದರಿಂದ ಅಸ್ಸಾಂ, ಅಸ್ಸಾಂನೊಂದಿಗೇ ಜೊತೆ ಉಳಿಯುತ್ತದೆ ಎಂದು ಪ್ರಸ್ತಾಪಿಸಲಾಗಿದೆ.

ಜನರ ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಗಡಿಗಳನ್ನು ಭದ್ರಗೊಳಿಸುವ ಭರವಸೆಯನ್ನು ನೀಡಲಾಗಿದೆ.

ಯುವಕರಿಗೆ ಉದ್ಯೋಗದ ಭರವಸೆ. ಉದ್ಯೋಗ ನೀಡುವ ದೃಷ್ಟಿಯಲ್ಲಿ ಅಸ್ಸಾಂ ನನ್ನು ದೇಶದಲ್ಲಿಯೇ ವೇಗವಾಗಿ ಉದ್ಯೋಗಗಳನ್ನು ಸೃಷ್ಟಿಸುವ ರಾಜ್ಯವನ್ನಾಗಿಸುವುದು.

2022 ಮಾರ್ಚ್‌ 31 ರ ಒಳಗೆ ರಾಜ್ಯದಲ್ಲಿ 1 ಲಕ್ಷ ಉದ್ಯೋಗ. 2 ಲಕ್ಷ ಸರ್ಕಾರಿ ಉದ್ಯೋಗ ಸೇರಿದಂತೆ 8 ಲಕ್ಷ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದ ಭರವಸೆ.

ಉದ್ಯಮ ಶೀಲತೆಯನ್ನು ಉತ್ತೇಜಿಸಲು, ಸ್ವಾಮಿ ವಿವೇಕನಂದ ಯುವಜನ ಉದ್ಯೋಗ ಯೋಜನೆಯಡಿಯಲ್ಲಿ 5 ವರ್ಷದ ಒಳಗೆ ಪ್ರತಿ ವರ್ಷ 2 ಲಕ್ಷ ಯವಕರನ್ನು ಉದ್ಯಮಿಗಳನ್ನಾಗಿ ರೂಪಿಸಲು ಪ್ರೋತ್ಸಾಹ.

ʼಪಟ್ಟಾʼ ಯೋಜನೆಯ ಮೂಲಕ ಭೂರಹಿತ ಜನರಿಗೆ ಬೆಂಬಲ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com