ಬದಲಾವಣೆ ಮಾತ್ರ ಸಾಲದು, ಮೋದಿ-ಷಾ ಕನಸು ಚೂರು ಚೂರಾಗಬೇಕು: ಸ್ಟಾಲಿನ್‌ ಕರೆ

ಮೋದಿ ಮತ್ತು ಷಾ ಭಾರತದಲ್ಲಿ ಕೋಮು ವಿಭಜನೆ ಮಾಡಿ ಭಾರತವನ್ನೇ ನುಚ್ಚು ನೂರಾಗಿಸಲು ಹೊರಟಿದ್ದಾರೆ ಎಂದು ಆರೋಪಿಸಿರುವ ಸ್ಟಾಲಿನ್‌, ಅವರ ಕನಸು ಕನಸಾಗಿಯೇ ಉಳಿಯಬೇಕೆಂದರೆ ಡಿಎಂಕೆ ಮಿತ್ರ ಪಕ್ಷಗಳಿಗೆ ಮತಚಲಾಯಿಸಬೇಕೆಂದು ಕೇಳಿಕೊಂಡಿದ್ದಾರೆ.
ಬದಲಾವಣೆ ಮಾತ್ರ ಸಾಲದು, ಮೋದಿ-ಷಾ ಕನಸು ಚೂರು ಚೂರಾಗಬೇಕು: ಸ್ಟಾಲಿನ್‌ ಕರೆ

ಜಾತ್ಯಾತೀತ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಗಳನ್ನು ನೀವು ಗೆಲ್ಲಿಸುತ್ತೀರಾ? ಇದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್‌ ಎಪ್ರಿಲ್‌ 6 ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮತ ಕೇಳುವ ಶೈಲಿ.

ನೇರವಾಗಿ ಬಿಜೆಪಿಯನ್ನೇ ಗುರಿ ಮಾಡಿರುವ ಸ್ಟಾಲಿನ್‌, ಈ ಬಾರಿ ಕೇವಲ ಬದಲಾವಣೆ ಬಂದರೆ ಸಾಲದು ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಕನಸು ನುಚ್ಚು ನೂರಾಗಬೇಕು ಎಂದು ತಿರುನಲ್ವೇಲಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಜನತೆಗೆ ಕರೆ ನೀಡಿದ್ದಾರೆ.

ಮೋದಿ ಮತ್ತು ಷಾ ಭಾರತದಲ್ಲಿ ಕೋಮು ವಿಭಜನೆ ಮಾಡಿ ಭಾರತವನ್ನೇ ನುಚ್ಚು ನೂರಾಗಿಸಲು ಹೊರಟಿದ್ದಾರೆ ಎಂದು ಆರೋಪಿಸಿರುವ ಸ್ಟಾಲಿನ್‌, ಅವರ ಕನಸು ಕನಸಾಗಿಯೇ ಉಳಿಯಬೇಕೆಂದರೆ ಡಿಎಂಕೆ ಮಿತ್ರ ಪಕ್ಷಗಳಿಗೆ ಮತಚಲಾಯಿಸಬೇಕೆಂದು ಮತದಾರರಲ್ಲಿ ಕೇಳಿಕೊಂಡಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾಷಣದಲ್ಲಿ ಮೋದಿ, ಷಾ ಹಾಗೂ ಕೋಮುವಾದಿ ರಾಜಕಾರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸ್ಟಾಲಿನ್‌, ʼನೀವು ಜಾತ್ಯಾತೀತ, ಪ್ರಗತಿಪರ ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತೀರಾ, ಮತ ಚಲಾಯಿಸುತ್ತೀರಾ ಎಂದು ನೆರೆದ ಸಭಿಕರಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನೆರೆದಿದ್ದ ಜನಸ್ತೋಮದ ನಡುವೆಯಿಂದ ʼಮಾಡುತ್ತೇವೆʼ ಎಂಬ ಉದ್ಘಾರ ಭಾರಿ ಸದ್ದಿನಿಂದ ಮೊಳಗಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ರಾಜ್ಯದ ಹಕ್ಕುಗಳ ವಿಷಯದಲ್ಲಿ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿದೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರಕ್ಕೆ ಅಧೀನವಾಗಿದೆ ಎಂದು ಡಿಎಂಕೆ ಮುಖ್ಯಸ್ಥ ಆರೋಪಿಸಿದ್ದಾರೆ. ಹಾಗಾಗಿ ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ತಮಿಳುನಾಡಿಗೆ ಹಾಗೂ ಭಾರತಕ್ಕೆ ಕಂಟಕವಾಗಿದ್ದು ಜಾತ್ಯಾತೀತ ಶಕ್ತಿಗಳಿಗೆ ಮತಚಲಾಯಿಸುವಂತೆ ಕರೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಎಪ್ರಿಲ್‌ 6 ರಂದು 234 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಮೇ 2 ರಂದು ಫಲಿತಾಂಶ ಘೋಷಣೆಯಾಗಲಿದೆ. ಈವರೆಗೂ ನಡೆಸಲ್ಪಟ್ಟ ಬಹುತೇಕ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಯೂ ಡಿಎಂಕೆ ಮೈತ್ರಿಕೂಟ ಬಹುಮತ ಪಡೆಯುವುದಾಗಿ ಹೇಳಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com