ವಿಮಾನದಲ್ಲಿ ಸೋನು ಸೂದ್ ಮುಖ: ವಿಶಿಷ್ಟ ರೀತಿಯಲ್ಲಿ ಗೌರವ ಅರ್ಪಿಸಿದ ಸ್ಪೈಸ್‌ ಜೆಟ್

ಸ್ಪೈಸ್ ಜೆಟ್ ತನ್ನ ಬೋಯಿಂಗ್ 737 ವಿಮಾನದಲ್ಲಿ ಸೋನು ಸೂದ್‌ನ ಭಾವಚಿತ್ರವನ್ನು ಚಿತ್ರಿಸಿದೆ.
ವಿಮಾನದಲ್ಲಿ ಸೋನು ಸೂದ್ ಮುಖ: ವಿಶಿಷ್ಟ ರೀತಿಯಲ್ಲಿ  ಗೌರವ ಅರ್ಪಿಸಿದ ಸ್ಪೈಸ್‌ ಜೆಟ್

ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಲಕ್ಷಾಂತರ ಭಾರತೀಯರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡಿದ ಬಹುಭಾಷಾ ನಟ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಗೌರವಿಸಲು ಸ್ಪೈಸ್ ಜೆಟ್ ಏರ್ಲೈನ್ಸ್ ವಿಶೇಷ ವಿಮಾನವನ್ನು ಸಮರ್ಪಿಸಿದೆ.

ಸ್ಪೈಸ್ ಜೆಟ್ ತನ್ನ ಬೋಯಿಂಗ್ 737 ವಿಮಾನದಲ್ಲಿ ಸೋನು ಸೂದ್‌ನ ಭಾವಚಿತ್ರವನ್ನು ಚಿತ್ರಿಸಿದೆ.

ಸಾಂಕ್ರಾಮಿಕ ಸಮಯದಲ್ಲಿ ಸ್ಪೈಸ್‌ ಜೆಟ್‌ ಹಾಗೂ ಸೋನು ಸೂದ್‌ ಒಟ್ಟಾಗಿ ಕೆಲಸ ಮಾಡಿದ್ದರು. ಅವರ ಕಾರ್ಯಗಳಿಂದ ವಿದೇಶಗಳಲ್ಲಿ ಬಾಕಿಯಾದ ಸುಮಾರು ಜನ ವಿದ್ಯಾರ್ಥಿಗಳು, ಕಾರ್ಮಿಕರು, ಸಂಕಷ್ಟದಲ್ಲಿರುವವರು ಭಾರತಕ್ಕೆ ಮರಳುವಂತಾಗಿತ್ತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತು ಪ್ರತಿಕ್ರಿಯಿಸಿದ ಸ್ಪೈಸ್ ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್, “ಸೋನು ಸೂದ್ ಅವರೊಂದಿಗಿನ ನಮ್ಮ ಒಡನಾಟ ಮತ್ತು ಈ ಸಾಂಕ್ರಾಮಿಕ ಸಮಯದಲ್ಲಿ ನಾವು ಒಟ್ಟಾಗಿ ಮಾಡಿದ ಕಾರ್ಯದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಈ ವಿಶೇಷ ವಿಮಾನವು ಸೋನು ಅವರ ನಿಸ್ವಾರ್ಥ ಪ್ರಯತ್ನಗಳಿಗಾಗಿ ಸ್ಪೈಸ್ ಜೆಟ್‌ ನೀಡುವ ಗೌರವವಾಗಿದೆ. ಈ ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಲು ಅವರು ಮಾಡಿದ ಅತ್ಯುತ್ತಮ ಮತ್ತು ಅನುಕರಣೀಯ ಕಾರ್ಯಗಳಿಗಾಗಿ ಅವರಿಗೆ ಧನ್ಯವಾದಗಳು.” ಎಂದು ಹೇಳಿದ್ದಾರೆ.

ಸ್ಪೈಸ್‌ ಜೆಟ್‌ ಗೆ ಅಭಿಮಾನಕ್ಕೆ ಸೋನು ಸೂದ್‌ ಭಾವುಕರಾಗಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಸೋನು ಸೂದ್‌, ಈ ವೇಳೆ ನನ್ನ ಪೋಷಕರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಎಲ್ಲಾ ಪ್ರೀತಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ವಿಮಾನದಲ್ಲಿ ಸೋನು ಸೂದ್ ಮುಖ: ವಿಶಿಷ್ಟ ರೀತಿಯಲ್ಲಿ  ಗೌರವ ಅರ್ಪಿಸಿದ ಸ್ಪೈಸ್‌ ಜೆಟ್
ಕೇಸರಿ ಪಡೆ ಟ್ರಾಲ್‌ಗೆ ಮೋದಿ ವಿರುದ್ಧದ ಪೋಸ್ಟ್‌ನ್ನೇ ಡಿಲಿಟ್ ಮಾಡಿದ ಸೋನು ಸೂದ್
ವಿಮಾನದಲ್ಲಿ ಸೋನು ಸೂದ್ ಮುಖ: ವಿಶಿಷ್ಟ ರೀತಿಯಲ್ಲಿ  ಗೌರವ ಅರ್ಪಿಸಿದ ಸ್ಪೈಸ್‌ ಜೆಟ್
ಸುಶಾಂತ್ ಇದ್ದಿದ್ದರೆ, ತನ್ನ ಸಾವಿನ ಸುತ್ತ ನಡೆಯುತ್ತಿರುವ 'ಸರ್ಕಸ್' ನೋಡಿ ನಗುತ್ತಿದ್ದರು- ಸೋನು ಸೂದ್
ವಿಮಾನದಲ್ಲಿ ಸೋನು ಸೂದ್ ಮುಖ: ವಿಶಿಷ್ಟ ರೀತಿಯಲ್ಲಿ  ಗೌರವ ಅರ್ಪಿಸಿದ ಸ್ಪೈಸ್‌ ಜೆಟ್
20 ಸಾವಿರ ವಲಸೆ ಕಾರ್ಮಿಕರಿಗೆ ಉದ್ಯೋಗದೊಂದಿಗೆ ವಸತಿ ನೀಡಿದ ಸೋನು ಸೂದ್
ವಿಮಾನದಲ್ಲಿ ಸೋನು ಸೂದ್ ಮುಖ: ವಿಶಿಷ್ಟ ರೀತಿಯಲ್ಲಿ  ಗೌರವ ಅರ್ಪಿಸಿದ ಸ್ಪೈಸ್‌ ಜೆಟ್
ತನ್ನ ಮಗುವಿಗೆ ನಟ ಸೋನು ಸೂದ್ ಎಂದು ಹೆಸರಿಟ್ಟ ವಲಸೆ ಕಾರ್ಮಿಕ ಮಹಿಳೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com