ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದು ಭಾರತ ಮಾತೆ ವಿರುದ್ಧ ಮಾತನಾಡಿದಂತೆ -ಸುವೆಂದು ಅಧಿಕಾರಿ

ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದು ಭಾರತ ಮಾತೆ ವಿರುದ್ಧ ಮಾತನಾಡಿದಂತೆ -ಸುವೆಂದು ಅಧಿಕಾರಿ

ನರೇಂದ್ರ ಮೋದಿ ಚುನಾಯಿತ ಪ್ರಧಾನಿ. ಅವರ ವಿರುದ್ಧ ಮಾತನಾಡುವುದು ಪ್ರಜಾಪ್ರಭುತ್ವದ ವಿರುದ್ಧ ಮಾತನಾಡುವಂತೆ. ಅವರ ವಿರುದ್ಧ ಮಾತನಾಡುವುದು ಭಾರತ್ ಮಾತಾ ವಿರುದ್ಧ ಮಾತನಾಡಿದಂತೆ ಎಂದು ಸುವೆಂದು ಅಧಿಕಾರಿ ಹೇಳಿದ್ದಾರೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನಯ ಟೀಕಿಸುವ ಭರದಲ್ಲಿ ಬಿಜೆಪಿ ನಾಯಕ ಸುವೆಂಧು ಅಧಿಕಾರಿ ʼಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿರುದ್ಧ ಮಾತನಾಡುವುದು ಭಾರತ ಮಾತೆ ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದಂತೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಚುನಾಯಿತ ಪ್ರಧಾನಿ. ಅವರ ವಿರುದ್ಧ ಮಾತನಾಡುವುದು ಪ್ರಜಾಪ್ರಭುತ್ವದ ವಿರುದ್ಧ ಮಾತನಾಡುವಂತೆ. ಅವರ ವಿರುದ್ಧ ಮಾತನಾಡುವುದು ಭಾರತ್ ಮಾತಾ ವಿರುದ್ಧ ಮಾತನಾಡಿದಂತೆ ಎಂದು ಸುವೆಂದು ಅಧಿಕಾರಿ ಹೇಳಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನೀವು ಪ್ರಧಾನಮಂತ್ರಿ ನರೇಂದ್ರ ಮೋದಿಯ ಕೋವಿಡ್‌ ಲಸಿಕೆಯನ್ನೇ ಹಾಕಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಪಾಕಿಸ್ತಾನದಲ್ಲಿ ಹಾಗೂ ಬಾಂಗ್ಲಾದೇಶದಲ್ಲಿ ಕರೋನಾಗೆ ಲಸಿಕೆಯೇ ಇಲ್ಲ ಎಂದು ಸುವೆಂದು ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಕೋವಿಡ್‌ ಲಸಿಕೆ ಅಸಮರ್ಪಕತೆ ಸೇರಿದಂತೆ ಹಲವು ವಿಚಾರಗಳಲ್ಲಿ ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯವರನ್ನು ತೀಕ್ಷ್ಣವಾಗಿ ಟೀಕಿಸಿದ್ದರು. ಅಲ್ಲದೆ, ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರಗೊಂಡಿರುವ ಸುವೆಂದು ಅಧಿಕಾರಿಯನ್ನು ದ್ರೋಹಿ, ಮೀರ್‌ ಜಾಫರ್‌ ಎಂದು ಜರೆದಿದ್ದರು.

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಮತಾ ಬ್ಯಾನರ್ಜಿ ಹಾಗೂ ಸುವೆಂದು ಅಧಿಕಾರಿ ಸ್ಪರ್ಧಿಸಿರುವ ನಂದಿಗ್ರಾಮ ಕ್ಷೇತ್ರದಲ್ಲಿ ಎಪ್ರಿಲ್‌ 1 ರಂದು, ಎರಡನೆಯ ಹಂತದಲ್ಲಿ ಮತದಾನ ನಡೆಯಲಿದೆ.

ಮಾರ್ಚ್‌ 27 ರಿಂದ ಎಪ್ರಿಲ್‌ 29ರವರೆಗೆ ಎಂಟು ಹಂತದಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶ ಮೇ 2 ರಂದು ಹೊರಬೀಳಲಿದೆ.

ಮೂಲ: NDTV

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com