ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕರ್ನಾಟಕದ ನಾಯಕರ ಬ್ಯಾಟಿಂಗ್

ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ. ತಮಿಳುನಾಡಿನಲ್ಲಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ವ ಪ್ರಯತ್ನ ಮಾಡುತ್ತಿದೆ.
ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕರ್ನಾಟಕದ ನಾಯಕರ ಬ್ಯಾಟಿಂಗ್

ಪಂಚರಾಜ್ಯಗಳ‌ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ತಮಿಳುನಾಡು, ಪಶ್ಚಿಮಬಂಗಾಳ , ಕೇರಳ, ಪುದುಚೇರಿ, ಅಸ್ಸಾಂನಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಪ್ರಚಾರ ಬಿರುಸಿಕೊಂಡಿದೆ. ತಮಿಳುನಾಡಿನ ಉದಕಮಂಡಲಂನಲ್ಲಿ ಬಿಜೆಪಿ ಅರ್ಭ್ಯರ್ಥಿ ಪರ, ಸಚಿವ ಎಸ್‌ಟಿ ಸೋಮಶೇಖರ್‌ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.‌ ಕರ್ನಾಟಕದಲ್ಲಿ ಸಿಂಗಂ ಎಂದು ಹೆಸರು ಪಡೆದುಕೊಂಡಿದ್ದ ಅಣ್ಣಾಮಲೈ ಅವರ ಪರ ಶಾಸಕ ಮುನಿರತ್ನ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಪ್ರಚಾರ ಕೈಗೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿ ಅಭ್ಯರ್ಥಿ ಬೋಜರಾಜನ್ ಅವರ ಜೊತೆಗೂಡಿ ಇಂದಿನಿಂದ ಉದಕಮಂಡಲಂ ನ ಹಲವೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ ಮತ್ತು ಕರ್ನಾಟಕದಲ್ಲಿ ಬಿಜೆಪಿ ಕೈಗೊಂಡ ಜನಪರ ಕಾರ್ಯಗಳನ್ನು ಅಲ್ಲಿನ ಜನತೆಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಕ್ಷೇತ್ರ ಅಭಿವೃದ್ಧಿಯತ್ತ ಸಾಗಬೇಕೆಂದರೆ ನಿಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ. ಅವರು ನಿಮ್ಮ ಸಮಸ್ಯೆಯನ್ನು ಆಲಿಸಿ ಬಗೆಹರಿಸುತ್ತಾರೆಂಬ ಭರವಸೆ ನೀಡಿದ್ದಾರೆ.

ಸಚಿವ ಸೋಮಶೇಖರ್‌ ಜೊತೆಗೆ ಮೈಸೂರು ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ ಹಾಗೂ ಬಿಜೆಪಿ ರಾಜ್ಯ ವಕ್ತಾರರಾದ ಎಂ.ಜಿ.ಮಹೇಶ್ ಚುನಾವಣಾ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದು, ಉದಗಮಂಡಲಂನ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದರ ಜೊತೆಗೆ ಅಲ್ಲಿನ ಬಿಷಪ್‌ರನ್ನೂ ಭೇಟಿಯಾಗಿ ಬಿಜೆಪಿ ಪರ ಮತಯಾಚಿಸಿದ್ದಾರೆ.

ಅಣ್ಣಾಮಲೈ ಅವರು ಸ್ಪರ್ಧೆ ಮಾಡುತ್ತಿರುವ ಅರವಕುರಿಚ್ಚಿ ಕ್ಷೇತ್ರದಲ್ಲಿ, ತೇಜಸ್ವಿ ಸೂರ್ಯ ಹಾಗೂ ಮುನಿರತ್ನ ಅವರು ಸೈಕಲ್‌ ಮೇಲೆ ಸವಾರಿ ಕೂಡಾ ನಡೆಸಿದ್ದಾರೆ. ಅಣ್ಣಾಮಲೈ ಅವರ ನಾಮಪತ್ರ ಸಲ್ಲಿಕೆಯ ವೇಳೆಗೆ ಕರ್ನಾಟಕದ ಬಿಜೆಪಿ ನಾಯಕರು, ಸಾಥ್‌ ನೀಡಿದ್ದರು.

ಒಟ್ಟಿನಲ್ಲಿ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆ ಹೆಚ್ಚಿಸುವ ದೃಷ್ಟಿಯಿಂದ ರಾಜ್ಯಗಳ ಬಿಜೆಪಿ ನಾಯಕರು ಒಗ್ಗೂಡಿ ಅಖಾಡಕ್ಕಿಳಿದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com