ಒಪ್ಪಿಗೆ ಪಡೆಯದೆಯೇ ಅಭ್ಯರ್ಥಿಯಾಗಿ ಆಯ್ಕೆ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಮುಜುಗರಕ್ಕೀಡಾದ ಬಿಜೆಪಿ

ವ್ಯಕ್ತಿಯೊಬ್ಬರ ಒಪ್ಪಿಗೆ ಪಡೆಯದೆ ತನ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿ ಕೇರಳದಲ್ಲಿ ಮುಜುಗರಕ್ಕೀಡಾಗಿದ್ದ ಬಿಜೆಪಿ, ಅದೇ ಎಡವಟ್ಟನ್ನು ಪಶ್ಚಿಮ ಬಂಗಾಳದಲ್ಲೂ ಮಾಡಿದೆ.
ಒಪ್ಪಿಗೆ ಪಡೆಯದೆಯೇ ಅಭ್ಯರ್ಥಿಯಾಗಿ ಆಯ್ಕೆ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಮುಜುಗರಕ್ಕೀಡಾದ ಬಿಜೆಪಿ

ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆ ಹಿನ್ನಲೆ, ಬಿಜೆಪಿ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್‌18 ರಂದು ಬಿಡುಗಡೆ ಮಾಡಿದೆ. ಕೋಲ್ಕತ್ತಾದ ಚೌರಿಂಗ್ಹೀ ವಿಧಾನಸಭಾ ಕ್ಷೇತ್ರದ ಪಕ್ಷದ ಅರ್ಭ್ಯಥಿಯ ಒಪ್ಪಿಗೆ ಇಲ್ಲದೆ ಹೆಸರನ್ನು ಘೋಷಿಸಲಾಗಿದ್ದು, ಆ ಅಭ್ಯರ್ಥಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡ ದಿವಂಗತ ಸೋಮೆನ್‌ ಮಿತ್ರಾ ಅವರ ಪತ್ನಿ ಸಿಖಾ ಮಿತ್ರ ಅವರು “ನಾನು ಎಲ್ಲಿಂದಲೂ ಸ್ಪರ್ಧೆ ನಡೆಸುತ್ತಿಲ್ಲ, ನನ್ನ ಒಪ್ಪಿಗೆ ಇಲ್ಲದೆ ನನ್ನ ಹೆಸರು ಘೋಷಿಸಲಾಗಿದೆ. ನಾನು ಬಿಜೆಪಿ ಯನ್ನು ಸೇರುತ್ತಿಲ್ಲ” ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಟಿಎಂಸಿ ಯಿಂದ ಬಿಜೆಪಿಗೆ ವಲಸೆ ಹೋದ ಸುವೆಂದು ಅಧಿಕಾರಿಯನ್ನು ಸಿಖಾ ಮಿತ್ರ ಅವರು ಭೇಟಿಯಾಗಿದ್ದರು. ಭೇಟಿಯ ನಂತರ ಸಿಖಾ ಮಿತ್ರ ಅವರು ಬಿಜೆಪಿ ಸೇರಲಿದ್ದಾರೆಂಬ ವದಂತಿಗಳು ಹಬ್ಬಿದ್ದವು.

ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ನೇರ ಎದುರು ಹಾಕಿರುವ ಬಿಜೆಪಿ ಟಿಎಂಸಿಯಿಂದ ವಲಸೆ ಬಂದವರಿಗೆಯೇ ಟಿಕೆಟ್‌ ನೀಡಿ ಪಕ್ಷದ ಕಾರ್ಯಕರ್ತರಿಂದ ಆಕ್ರೋಶ ಎದುರಿಸುತ್ತಿದ್ದು, ಇದೀಗ ಮತ್ತೊಂದು ದೊಡ್ಡ ಮುಜುಗರಕ್ಕೀಡಾಗಿದೆ.

ಅಂತಿಮವಾಗಿ ಬಿಜೆಪಿ ಎರಡು ವಾರಗಳ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್‌ ಮಾಡಿದ್ದು, ಪಟ್ಟಿಯಲ್ಲಿ ಹೆಸರು ಘೋಷಿಸಲಾದ ಅಭ್ಯರ್ಥಿಗಳೇ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ. ಇಲ್ಲಿ ಕೆಲವರು ನಾವು ಬಿಜೆಪಿ ಪಕ್ಷದಲ್ಲಿಲ್ಲ ಮತ್ತು ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಲ್ಲ ಎನ್ನುತ್ತಿದ್ದಾರೆಂದು ತೃಣಮೂಲ ಸಂಸದೆ ಮಾಹುವಾ ಮೊಯಿತ್ರಾ ಟ್ವೀಟ್‌ ಮಾಡಿದ್ದಾರೆ.

ಟಿಎಂಸಿಯ ಹಿರಿಯ ನಾಯಕ ಡೆರೆಕ್‌ ಕೂಡ ಟ್ವೀಟ್‌ ಮಾಡಿ ಬಿಜೆಪಿಯನ್ನು ಕಾಲೆಳೆದಿದ್ದಾರೆ. ಬಿಜೆಪಿಯೂ ಪ್ರತಿಬಾರಿಯೂ ಪಶ್ಚಿಮಬಂಗಾಳ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದಾಗ ನೀವು ಆಮ್ಲೇಟ್‌ ಮಾಡಬಹುದು ಅವರ ಮುಖದಲ್ಲಿ ಹೆಚ್ಚಿನ ಮೊಟ್ಟೆಗಳಿರುತ್ತವೆ ಎಂದಿದ್ದಾರೆ.

ಒಪ್ಪಿಗೆ ಪಡೆಯದೆಯೇ ಅಭ್ಯರ್ಥಿಯಾಗಿ ಆಯ್ಕೆ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಮುಜುಗರಕ್ಕೀಡಾದ ಬಿಜೆಪಿ
ಕಮ್ಯುನಿಸ್ಟೂ ಅಲ್ಲ, ಬಿಜೆಪಿಯೂ ಅಲ್ಲ- ನಾನು ಅಂಬೇಡ್ಕರ್‌ ಹಿಂಬಾಲಕ: ಮಣಿಕಂಟನ್ ಸ್ಪಷ್ಟಣೆ

ಬಿಜೆಪಿ ಇದೇ ರೀತಿ ಮುಜುಗರಕ್ಕೀಡಾಗುವುದು ಇದೇ ಮೊದಲಲ್ಲ. ಕೇರಳ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲೂ ಇದೇ ರೀತಿಯ ಎಡವಟ್ಟು ಮಾಡಿಕೊಂಡಿತ್ತು. ವಯನಾಡು ಜಿಲ್ಲೆಯ ಮಾನಂದವಾಡಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಸ್ಪರ್ಧಿಯಾಗಿ ಆದಿವಾಸಿ ಸಮುದಾಯದ ಮಣಿಕಂಟನ್ ಅವರ ಹೆಸರನ್ನು ಘೋಷಿಸಲಾಗಿತ್ತು. ಆದರೆ ಮಣಿಕುಟ್ಟನ್‌ ತನ್ನ ಒಪ್ಪಿಗೆ ಇಲ್ಲದೆಯೇ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ತಾನು ಸ್ಪರ್ಧಿಸುವುದಿಲ್ಲವೆಂದು ಘೋಷಿಸಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com