ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ

ಈ ಕುರಿತು ಪ್ರತಿಕ್ರಿಯಿಸಿದ ಸುಬ್ರಮಣಿಯನ್‌ ಸ್ವಾಮಿ, ಪಶ್ಚಿಮ ಬಂಗಾಳ ಬಿಜೆಪಿ ಪ್ರಣಾಳಿಕೆಯನ್ನು ಅಮಿತ್‌ ಶಾ ಬಿಡುಗಡೆಗೊಳಿಸಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ

ಬಿಜೆಪಿಯನ್ನಾಗಲೀ, ಕೇಂದ್ರ ಸರ್ಕಾರವನ್ನಾಗಲಿ ಟೀಕಿಸಲು ಎಂದೂ ಹಿಂಜರಿಯದ ಹಿರಿಯ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಪಶ್ಚಿಮ ಬಂಗಾಳದ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಡುಗಡೆ ಮಾಡಿರುವುದನ್ನು ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಸುಬ್ರಮಣಿಯನ್‌ ಸ್ವಾಮಿ, ಪಶ್ಚಿಮ ಬಂಗಾಳ ಬಿಜೆಪಿ ಪ್ರಣಾಳಿಕೆಯನ್ನು ಅಮಿತ್‌ ಶಾ ಬಿಡುಗಡೆಗೊಳಿಸಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ಬಿಡುಗಡೆಗೊಳಿಸಿರುವುದು ಅನಿರೀಕ್ಷಿತ. ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ ಹಾಗೂ ಬಿಜೆಪಿಯ ಚುನಾವಣಾ ಭವಿಷ್ಯವನ್ನು ಘಾಸಿಕೊಳಿಸುತ್ತದೆ. ಪ್ರಣಾಳಿಕೆಯನ್ನು ಬಂಗಾಳ ಬಿಜೆಪಿ ಅಧ್ಯಕ್ಷರು ಬಿಡುಗಡೆ ಮಾಡಬೇಕಿತ್ತು ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಸ್ವಾಮಿ ಆತಂಕದಲ್ಲೂ ಹುರುಳಿದೆ. ಬಂಗಾಳದಲ್ಲಿ ಟಿಎಂಸಿ ಬಿಜೆಪಿಯನ್ನು ಆರಂಭಿಕವಾಗಿ ಎದುರಿಸಿದ್ದೇ ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಮುಂದಿಟ್ಟು. ಬಂಗಾಳಿ VS ಗುಜರಾತಿ ಎಂಬ ಆಯಾಮವನ್ನಿಟ್ಟು ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಗುರಿ ಮಾಡಿದ್ದರು. ಗುಜರಾತಿನಿಂದ ಕುಳಿತು ಬಂಗಾಳವನ್ನು ಆಳಲಾಗುವುದಿಲ್ಲ ಎಂದು ಅವರು ಹಿಂದೊಮ್ಮೆ ಹೇಳಿದ್ದರು.

ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ
ರಾವಣನ ನಾಡಿನಲ್ಲಿ ₹51, ರಾಮನ ನಾಡಿನಲ್ಲಿ ₹93: ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಸ್ವಾಮಿ ವ್ಯಂಗ್ಯ
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ
ಎರಡು ವರ್ಷಕ್ಕೊಮ್ಮೆ ಅದಾನಿ ಸಂಪತ್ತು ದ್ವಿಗುಣ, ಆದರೆ ಸಾಲ ಮರುಪಾವತಿ ಇಲ್ಲ; ಸುಬ್ರಮಣಿಯನ್ ಸ್ವಾಮಿ
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ
ಕೋವಿಶೀಲ್ಡ್ ಜನಬಳಕೆ ವಿರುದ್ಧ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಸಮರ!
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ
‘ದೇವರ ಆಟ’ ಬಲ್ಲವರಾರು ಎಂದ ಹಣಕಾಸು ಸಚಿವೆಗೆ ಸ್ವಾಮಿ ತಿರುಗೇಟು!
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ
ರಾಮಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿಯವರ ಯಾವುದೇ ಕೊಡುಗೆ ಇಲ್ಲ: ಸುಬ್ರಮಣಿಯನ್ ಸ್ವಾಮಿ
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ
ಗಡಿ ಉದ್ವಿಗ್ನತೆ ನಡುವೆ ಚೀನಾದೊಂದಿಗೆ ಮಾತನಾಡುವ ಅವಶ್ಯಕತೆ ಇಲ್ಲ- ಸ್ವಾಮಿ
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ
ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ- ಸುಬ್ರಮಣಿಯನ್ ಸ್ವಾಮಿ

ಸ್ವಾಮಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ರಿಜುದತ್ತಾ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇತ್ತು. ಇದೀಗ ಪ್ರಣಾಳಿಕೆ ಅಮಿತ್‌ ಶಾ ಅವರಿಂದ ಬಿಡುಗಡೆಗೊಳಿಸಲಾಗಿದೆ. ಇದು ಬಂಗಾಳ ಮತ್ತು ಬಂಗಾಳದಲ್ಲಿ 87% ಬಂಗಾಳಿ ಮಾತನಾಡುವ ಬಂಗಾಳಿಗಳಿಗೆ ಮಾಡಿದ ಅಗೌರವ. ಇದು ರಾಜಕೀಯ ಪರಿಣಾಮ ಬೀರಬಲ್ಲದು ಎಂದು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com