ಕಾನೂನು ತರುವ ಮೊದಲು ರೈತರೊಂದಿಗೆ ಚರ್ಚಿಸಿದ್ದರೆ ಈಗ ಪ್ರತಿಭಟನೆಗಳು ಇರುತ್ತಿರಲಿಲ್ಲವೆಂದ UP ಬಿಜೆಪಿ ನಾಯಕ

ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೊದಲು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿತ್ತು. ಹಾಗೆ ಮಾಡಿದ್ದಲ್ಲಿ ಇಂದು ಆಂದೋಲನ ನಡೆಯುತ್ತಲೇ ಇರಲಿಲ್ಲ, ಎಂದು ಬಿಜೆಪಿ ನಾಯಕ ಹೇಳಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
ಕಾನೂನು ತರುವ ಮೊದಲು ರೈತರೊಂದಿಗೆ ಚರ್ಚಿಸಿದ್ದರೆ ಈಗ ಪ್ರತಿಭಟನೆಗಳು ಇರುತ್ತಿರಲಿಲ್ಲವೆಂದ UP ಬಿಜೆಪಿ ನಾಯಕ

ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೊದಲು ರೈತರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲಿ, ಇಷ್ಟು ದೊಡ್ಡ ಆಂದೋಲನವನ್ನು ನೋಡಬೇಕಾದ ಅಗತ್ಯವಿರುತ್ತಿರಲಿಲ್ಲ, ಎಂದು ಉತ್ತರ ಪ್ರದೇಶ ಬಿಜೆಪಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮ್‌ ಇಕ್ಬಾಲ್‌ ಸಿಂಗ್‌ ಅವರು ಹೇಳಿದ್ದಾರೆ. ಈ ಹೇಳಿಕೆ ನಿಜಕ್ಕೂ ಅಚ್ಚರಿ ತರಿಸಿದೆ. ಏಕೆಂದರೆ, ಕಾನೂನುಗಳನ್ನು ಜಾರಿಗೆ ತರುವ ಮೊದಲು ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡಿದ್ದರು.

ಈಗ ರಾಮ್‌ ಅವರು ಮಾತುಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ. ಸರ್ಕಾರ ರೈತರೊಂದಿಗೆ, ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲೇ ಇಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಹಿಂದೆ ರೈತರೊಂದಿಗೆ ಸಮಾಲೋಚನೆ ನಡೆಸಲಾದ ಸಭೆಗಳ ಕಡತಗಳು ಸರ್ಕಾರದ ಬಳಿ ಇಲ್ಲ ಎಂದು ಆರ್‌ಟಿಐ ಪ್ರಶ್ನೆಗೊಂದಕ್ಕೆ ಕೃಷಿ ಸಚಿವಾಲಯವು ಉತ್ತರಿಸಿತ್ತು. ಆ ಸಂದರ್ಭದಲ್ಲಿಯೂ ಯಾವ ಆಧಾರದ ಮೇಲೆ ಸರ್ಕಾರ ಈ ಕಾನೂನುಗಳನ್ನು ಜಾರಿಗೆ ತಂದಿದೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೈತರ ಬೇಡಿಕೆಗಳ ಕುರಿತಾಗಿ ದನಿ ಎತ್ತಿರುವ ರಾಮ್‌ ಇಕ್ಬಾಲ್‌ ಅವರು, ಕನಿಷ್ಟ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಕೂಡಾ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡಲು ನಿರಾಕರಿಸುವವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕೆಂದು ಅವರು ಹೇಳಿದ್ದಾರೆ.

“ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೊದಲು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿತ್ತು. ಹಾಗೆ ಮಾಡಿದ್ದಲ್ಲಿ ಇಂದು ಆಂದೋಲನ ನಡೆಯುತ್ತಲೇ ಇರಲಿಲ್ಲ. ಎಂಎಸ್‌ಪಿಯನ್ನು ಕಾನೂನಾತ್ಮಕವಾಗಿ ಜಾರಿಗೆ ತರಬೇಕು. ಈಗ ಹೆಚ್ಚಿಸಿರುವ ಎಂಎಸ್‌ಪಿ, ಹೆಚ್ಚುತ್ತಲೇ ಇರುವ ಪೆಟ್ರೋಲ್‌ ಡೀಸೆಲ್‌ ಬೆಲೆಗೆ ತಕ್ಕುದಾಗಿಲ್ಲ. ಅದನ್ನು ಕೂಡಾ ಸರಿ ಪಡಿಸಬೇಕಾಗಿದೆ,” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈಗ ಬಿಜೆಪಿಯ ನಾಯಕರೇ ರೈತರ ಆಂದೋಲನಕ್ಕೆ ಬೆಂಬಲ ನೀಡುತ್ತಿರುವುದು ಸರ್ಕಾರಕ್ಕೆ ತೀವ್ರವಾದ ಮುಜುಗರ ಉಂಟುಮಾಡುತ್ತಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com