ಪಶ್ಚಿಮ ಬಂಗಾಳದಲ್ಲಿ ಖೇಲಾ ಹೋಬೆ vs ವಿಕಾಸ್‌ ಹೋಬೆ: ದೀದಿ ವಿರುದ್ದ ಮೋದಿ ಗುಡುಗು

ಪಶ್ಚಿಮ ಬಂಗಾಳದಲ್ಲಿ ಖೇಲಾ ಹೋಬೆ vs ವಿಕಾಸ್‌ ಹೋಬೆ: ದೀದಿ ವಿರುದ್ದ ಮೋದಿ ಗುಡುಗು

ಮಮತಾ ಬ್ಯಾನರ್ಜಿ ಅವರ ಕಮಿಷನ್‌ ಆಡಳಿತದಿಂದಾಗಿ ಆದಿವಾಸಿಗಳು ಹಾಗೂ ಬಡವರು ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ, ಎಂದು ಮಮತಾ ಬ್ಯಾನರ್ಜಿ ವಿರುದ್ದ ಆರೋಪ ಮಾಡಿದ್ದಾರೆ.

ರಂಗೇರುತ್ತಿರುವ ಪಶ್ಚಿಮ ಬಂಗಾಳ ಚುನಾವಣಾ ಕಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಈಗ ಎಂಟ್ರಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ದ ತೀವ್ರವಾದ ಟೀಕಾಪ್ರಹಾರ ನಡೆಸಿರುವ ಪ್ರಧಾನಿ ಮೋದಿಯವರು, ಇದು ವಿಕಾಸ್‌ ಹೋಬೆ ಮತ್ತು ಖೇಲಾ ಹೋಬೆ ನಡುವಿನ ಚುನಾವಣೆ ಎಂದು ಹೇಳಿದ್ಧಾರೆ.

“ದೀದಿ, ನೀವು ಹತ್ತು ವರ್ಷ ಆಟವಾಡಿದ್ದೀರಾ. ಈಗ ಆಟ ಬಂದಾಗಲಿದೆ. ಅಭಿವೃದ್ದಿ ಆರಂಭವಾಗಲಿದೆ,” ಎಂದು ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಮೋದಿ ಗುಡುಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತಮ್ಮ ಭಾಷಣದುದ್ದಕ್ಕೂ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿದ ಪ್ರಧಾನಿ ಮೋದಿಯವರು, ಪಶ್ಚಿಮ ಬಂಗಾಳದಲ್ಲಿ ಭೃಷ್ಟಾಚಾರದ ಕಾರಣದಿಂದಾಗಿ ಅಭಿವೃದ್ದಿ ಸಂಪೂರ್ಣವಾಗಿ ನಿಂತುಹೋಗಿದೆ.

ಪಶ್ಚಿಮ ಬಂಗಾಳದಲ್ಲಿ ಖೇಲಾ ಹೋಬೆ vs ವಿಕಾಸ್‌ ಹೋಬೆ: ದೀದಿ ವಿರುದ್ದ ಮೋದಿ ಗುಡುಗು
ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ

“ದೀದಿ ಹೇಳ್ತಾರೆ, ಆಟ ಆರಂಭವಾಗಿದೆ ಎಂದು, ಬಿಜೆಪಿ ಹೇಳುತ್ತೆ, ಉದ್ಯೋಗ, ಶಿಕ್ಷಣ, ಅಭಿವೃದ್ದಿ, ಮಹಿಳಾ ಸಬಲೀಕರಣ, ಪ್ರತಿಯೊಬ್ಬರಿಗೂ ಮನೆ ಮತ್ತು ಶುದ್ದ ನೀರು ಸಿಗುತ್ತದೆ,” ಎಂದು ಭರವಸೆಗಳ ಮಹಾಪೂರವನ್ನೇ ಮೋದಿಯವರು ಹರಿಸಿದ್ದಾರೆ.

TMC ಎಂದರೆ Transfer My Commission (ಕಮಿಷನ್‌ ಹಣ ನೀಡಿ) ಎಂಬಂತಾಗಿದೆ, ಎಂದು ತೃಣಮೂಲ ಕಾಂಗ್ರೆಸ್‌ಗೆ ಹೊಸ ವ್ಯಾಖ್ಯಾನವನ್ನೇ ನೀಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಮಿಷನ್‌ ಆಡಳಿತದಿಂದಾಗಿ ಆದಿವಾಸಿಗಳು ಹಾಗೂ ಬಡವರು ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ. ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ ನೀಡಿದರೆ, ದೀದಿ ಅದರಲ್ಲೂ ಕಮಿಷನ್‌ ತೆಕೊಳುವುದು ಬಿಟ್ಟಿಲ್ಲ, ಎಂದು ಆರೋಪಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com