ಇ-ಕಾಮರ್ಸ್ ವಹಿವಾಟು ನಿಯಂತ್ರಣಕ್ಕೆ ಕರಡು ನೀತಿ ರೂಪಿಸುತ್ತಿರುವ ಕೇಂದ್ರ ಸರ್ಕಾರ

ಅನಧಿಕೃತ ವ್ಯಕ್ತಿಗಳಿಂದ ದತ್ತಾಂಶ ದುರುಪಯೋಗ ಮತ್ತು ದತ್ತಾಂಶ ಪ್ರವೇಶವನ್ನು ತಡೆಗಟ್ಟಲು ಸರ್ಕಾರವು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ.
ಇ-ಕಾಮರ್ಸ್ ವಹಿವಾಟು ನಿಯಂತ್ರಣಕ್ಕೆ ಕರಡು ನೀತಿ ರೂಪಿಸುತ್ತಿರುವ ಕೇಂದ್ರ ಸರ್ಕಾರ

ಭಾರತದಲ್ಲಿವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಕ್ಷೇತ್ರದ ವಹಿವಾಟನ್ನು ನಿಯಂತ್ರಿಸಲು ಸರ್ಕಾರವು ಕರಡುನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಎಲ್ಲಾ ಮಾರಾಟಗಾರರಿಗೂ ಸಮಾನವಾದ ಅವಕಾಶ ರಿಯಾಯಿತಿಯ ಮೇಲಿನ ಸ್ಪಷ್ಟ ಮತ್ತು ಪಾರದರ್ಶಕ ನೀತಿಗಳು ಮತ್ತು ನಕಲಿ ವಸ್ತುಗಳ ಮಾರಾಟವನ್ನು ನಿರ್ಮೂಲನೆ ಮಾಡುವುದು ಇವುಹೊಸ ಕರಡು ನೀತಿಯ ಮೂಲಕ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಇ-ಕಾಮರ್ಸ್ ಸಂಸ್ಥೆಗಳಿಗೆನಿಗದಿಪಡಿಸಿರುವ ಮಾರ್ಗ ಸೂಚಿ ಆಗಿದೆ. ಸರ್ಕಾರ ಈ ಕರಡನ್ನು ಅಂತಿಮಗೊಳಿಸಿದರೆ, ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಗಳು ದೊರೆಯಲಿವೆಮತ್ತು ಆಯ್ದ ಸಂಸ್ಥೆಗಳ ಪ್ರಾಬಲ್ಯವನ್ನು ತಡೆಯಲು ಅನುವಾಗಲಿದೆಯಲ್ಲದೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಸಂಸ್ಥೆಗಳ ಮೇಲೆ ನಿಯಂತ್ರಕರಪರಿಶೀಲನೆಯನ್ನು ಹೆಚ್ಚಿಸುತ್ತದೆ. ಇ-ಕಾಮರ್ಸ್ ಕಂಪೆನಿಗಳಲ್ಲಿನ FDI ಹೂಡಿಕೆಗಳನ್ನು ನಿಯಂತ್ರಿಸುವ ಏಪ್ರಿಲ್ 2018 ರ ಮಾನದಂಡಗಳನ್ನು ಇ-ಕಾಮರ್ಸ್ ಸಂಸ್ಥೆಗಳು ಉಲ್ಲಂಘಿಸುತ್ತಿವೆ ಎಂದು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಪದೇ ಪದೇ ಆರೋಪಿಸುತ್ತಿದೆ. ಮಾರಾಟಗಾರರು ತಮ್ಮ ಸರಕುಗಳನ್ನು ಮಾರಾಟ ಮಾಡುವಲ್ಲಿಮಾರುಕಟ್ಟೆಯ ಅಗಿ ಕಾರ್ಯನಿರ್ವಹಿಸುವ ಬದಲಿಗೆ ಈ ಇ-ಕಾಮರ್ಸ್ ಮಾರುಕಟ್ಟೆಗಳು ದಾಸ್ತಾನು ಆಧಾರಿತ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಇ-ಕಾಮರ್ಸ್ ಸಂಸ್ಥೆಗೆ ಸಂಬಂಧಿಸಿದ ಮಾರಾಟಗಾರನು ಇತರ ಮಾರಾಟಗಾರರಿಗಿಂತ ಆದ್ಯತೆಯನ್ನು ಪಡೆಯುತ್ತಿದ್ದಾನೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವರ್ಷದ ಆರಂಭದಲ್ಲಿ, ಇ-ಕಾಮರ್ಸ್ ಸಂಸ್ಥೆಗಳ ವಿರುದ್ಧ ಸಿಎಐಟಿ ನೀಡಿದ ದೂರುಗಳನ್ನು ಸರ್ಕಾರವುಅಗತ್ಯ ಕ್ರಮಕೈಗೊಳ್ಳಲುಜಾರಿ ನಿರ್ದೇಶನಾಲಯ (ಇಡಿ) ಮತ್ತು RBIಗೆ ರವಾನಿಸಿತ್ತು.ಬೆಲೆಗಳನ್ನು ನಿಗದಿ ಪಡಿಸಿರುವ ಬಗ್ಗೆಯೂ ಸರ್ಕಾರ ಅತಂಕ ವ್ಯಕ್ತಪಡಿಸಿದ್ದು ಈಗ ಇ-ಕಾಮರ್ಸ್ ಕಂಪೆನಿಗಳಿಗಳು ಗ್ರಾಹಕರನ್ನು ಸೆಳೆಯಲು ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿವೆ ಎಂದೂ ತಿಳಿಸಿತ್ತು.ಇತರ ವಿಷಯಗಳ ಪೈಕಿ, ಕರಡು ನೀತಿಯು ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಕೆಲವು ಲೋಪದೋಷಗಳನ್ನು ಸರಿಪಡಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ತಮಗೆ ಬೇಕಾದ ಮಾರಾಟಗಾರರಿಗೆ ಆದ್ಯತೆ ನೀಡುವ ದೊಡ್ಡ ಇ-ಕಾಮರ್ಸ್ ಮಾರುಕಟ್ಟೆ ಕಂಪೆನಿಗಳ ನೀತಿಗೆ ಕಡಿವಾಣ ಹಾಕಲಿದೆ. ಇ-ಕಾಮರ್ಸ್ ಆಪರೇಟರ್ಗಳು ತಮ್ಮ ಪ್ಲಾಟ್ಫಾರ್ಮ್ನಲ್ಲಿ ಮಾರಾಟಗಾರರೊಂದಿಗೆ ನಿರ್ಲಿಪ್ತ ಸಂಬಂಧವನ್ನು ಹೊಂದಿರಬೇಕು ಮತ್ತು ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಇತರ ಮಾರಾಟಗಾರರ ವಿರುದ್ಧ ಮಾರುಕಟ್ಟೆ ಲಾಭ ಪಡೆಯಲು ಬಳಸಬಾರದು ಎಂದು ಆದೇಶಿಸಿದೆ.

ಈ ಸಂಬಂಧಿತ ಮಾರಾಟಗಾರರು ಯಾರೆಂದು ಸರ್ಕಾರ ತಿಳಿಸುತ್ತದೆ ಮತ್ತು ಇ-ಕಾಮರ್ಸ್ ಮಾರುಕಟ್ಟೆ ಸ್ಥಳಗಳಿಗೆ ನಿಷೇಧಿತ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ನಿಷೇಧಿಸಲಾಗುವುದು. ಇ-ಕಾಮರ್ಸ್ ಆಪರೇಟರ್ಗಳು ತಮ್ಮ ಪ್ಲ್ಯಾಟ್ಫಾರ್ಮ್ಗಳಲ್ಲಿ ನೋಂದಾಯಿಸಲಾದ ಎಲ್ಲಾ ಮಾರಾಟಗಾರರಿಗೂ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಆಯ್ದ ಮಾರಾಟಗಾರರಿಗೆ ಆದ್ಯತೆ ನೀಡುವ ನೀತಿಯನ್ನು ಅಳವಡಿಸಿಕೊಳ್ಳಬಾರದು ಎಂದು ಕರಡು ಹೇಳಿದೆ. ಇ-ಕಾಮರ್ಸ್ ಆಪರೇಟರ್ಗಳು ರಿಯಾಯಿತಿಯ ಬಗ್ಗೆ ಸ್ಪಷ್ಟ ಮತ್ತು ಪಾರದರ್ಶಕ ನೀತಿಗಳನ್ನು ಹೊರತರುವಂತೆ ನೋಡಿಕೊಳ್ಳಬೇಕು, ವಿವಿಧ ಉತ್ಪನ್ನಗಳು / ಪೂರೈಕೆದಾರರಿಗೆ ಪ್ಲಾಟ್ಫಾರ್ಮ್ಗಳು ಧನಸಹಾಯ ನೀಡುವ ರಿಯಾಯಿತಿ ದರಗಳ ಆಧಾರ ಮತ್ತು ರಿಯಾಯಿತಿ ಯೋಜನೆಗಳಲ್ಲಿ ಭಾಗವಹಿಸುವಿಕೆ / ಭಾಗವಹಿಸದಿರುವಿಕೆಯ ಪರಿಣಾಮಗಳನ್ನು ಒಳಗೊಂಡಂತೆ. ನ್ಯಾಯಯುತ ಮತ್ತು ಸಮಾನ ಅವಕಾಶಗಳನ್ನು ಒದಗಿಸಿಕೊಡಬೇಕಿದೆ.

ಭಾರತೀಯ ಗ್ರಾಹಕ ಮತ್ತು ಸ್ಥಳೀಯ ವ್ಯವಸ್ಥೆಯ ಹಿತದೃಷ್ಟಿಯಿಂದ ಭಾರತದಲ್ಲಿ ಡಿಜಿಟಲ್ ಏಕಸ್ವಾಮ್ಯಗಳು ರೂಪುಗೊಳ್ಳದಂತೆ ಸರ್ಕಾರವು ಹೇಗೆ ಖಚಿತಪಡಿಸುತ್ತದೆ ಎಂಬುದರ ಬಗ್ಗೆ ಕರಡುತಿಳಿಸಿದೆ. ಕರಡು ನೀತಿಯು ದತ್ತಾಂಶ ಸಂರಕ್ಷಣೆಯ ಮಹತ್ವ ಮತ್ತು ಉಲ್ಲಂಘನೆಗಳಿಗೆ ದಂಡ ವಿಧಿಸುವ ಸರ್ಕಾರದ ಉದ್ದೇಶವನ್ನು ಪರಿಶೀಲಿಸುತ್ತದೆ. ಅನಧಿಕೃತ ವ್ಯಕ್ತಿಗಳಿಂದ ದತ್ತಾಂಶ ದುರುಪಯೋಗ ಮತ್ತು ದತ್ತಾಂಶ ಪ್ರವೇಶವನ್ನು ತಡೆಗಟ್ಟಲು ಸರ್ಕಾರವು ಸಾಕಷ್ಟು ಸುರಕ್ಷತೆಗಳನ್ನು ಜಾರಿಗೆ ತರಬೇಕಾಗಬಹುದು. ಅಂತಹ ಸುರಕ್ಷತೆಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ದತ್ತಾಂಶಗಳ ಗಡಿಯಾಚೆಗಿನ ಮತ್ತು ಭಾರತದಲ್ಲಿ ನಡೆಯುತ್ತಿರುವ ವಹಿವಾಟುಗಳನ್ನು ನಿಯಂತ್ರಿಸುವುದು ಮತ್ತು ಭಾರತೀಯ ಸಂಸ್ಥೆಗಳು ನಡೆಸಬೇಕಾದ ಸಮರ್ಪಕ ಲೆಕ್ಕಪರಿಶೋಧನೆಯ ಅವಶ್ಯಕತೆ ಒಳಗೊಂಡಿರಬೇಕು ಎಂದು ನೀತಿ ಹೇಳುತ್ತದೆ.ಸುರಕ್ಷತೆಗಳ ಉಲ್ಲಂಘನೆಯನ್ನು ಗಂಭೀರವಾಗಿಪರಿಗಣಿಸಲಾಗುತ್ತದೆಮತ್ತು ಭಾರಿ ದಂಡವನ್ನುವಿಧಿಸಲಾಗುತ್ತದೆ. ಒಂದು ಅಥವಾ ಎರಡು ಪ್ರಬಲ ಕಂಪೆನಿಗಳಲ್ಲಿ ಇ-ಕಾಮರ್ಸ್‌ ಮಾರುಕಟ್ಟೆಯಲ್ಲಿ ನಾಯಕರಾಗಿ ಹೊರಹೊಮ್ಮುವ ಪ್ರವೃತ್ತಿ ಇದೆ ಮತ್ತು ಸಂಗ್ರಹಿಸಿದ ಡೇಟಾದ ಭಂಡಾರದ ಮೇಲೆ ನಿಯಂತ್ರಣವನ್ನು ಕರಡು ಗಮನಿಸಿದೆ. ಜಗತ್ತಿನಲ್ಲಿ, ಡಿಜಿಟಲ್ ಬಂಡವಾಳವನ್ನು ಕೈಗಾರಿಕಾ ಬಂಡವಾಳ ಕ್ಕಿಂತ ಕಡಿಮೆಯಿಲ್ಲ ಎಂದು ಪರಿಗಣಿಸಲಾಗಿದೆ ಎಂದು ನೀತಿ ಹೇಳುತ್ತದೆ. ಮಾರುಕಟ್ಟೆಯ ಬಗ್ಗೆ ಗರಿಷ್ಠ ಮಾಹಿತಿಗೆ ಪ್ರವೇಶವನ್ನು ಹೊಂದಿರುವ ಒಂದು ಘಟಕವು ಅದರ ಮೇಲೆ ಪ್ರಾಬಲ್ಯ ಸಾಧಿಸುವ ಸ್ಥಿತಿಯಲ್ಲಿದೆ. ಇದು ಸ್ಪರ್ದಾತ್ಮಕತೆಯನ್ನು ಕುಂಠಿತಗೊಳಿಸುತ್ತದೆ.

ಪೈರಸಿಯನ್ನುನಿಗ್ರಹಿಸುವ ಕ್ರಮಗಳನ್ನು ನೀತಿಯು ಪ್ರಸ್ತಾಪಿಸುತ್ತದೆ.ಉದ್ಯಮಿಗಳನ್ನು ಒಳಗೊಂಡಸಮಿತಿಯನ್ನು ರಚಿಸುವ ಮೂಲಕಪೈರಸಿ ಗೆ ಅವಕಾಶ ಮಾಡಿಕೊಡುವ ಇ ಕಾಮರ್ಸ್ ಕಂಪೆನಿಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಮಿತಿ ರಚನೆಯನ್ನೂಕರಡು ಪ್ರಸ್ತಾಪಿಸಿದೆ. ನವದೆಹಲಿ ಮೂಲದ ಕಾನೂನು ಸಂಸ್ಥೆ ಜೆ ಸಾಗರ್ ಅಸೋಸಿಯೇಟ್ಸ್‌ನ ಲಲಿತ್ ಕುಮಾರ್ ಅವರ ಪ್ರಕಾರ ಈ ನೀತಿಯು ಪ್ರಗತಿಪರ ಬೆಳವಣಿಗೆ ಆಧಾರವಾಗಿದೆ. ಏಕೆಂದರೆ ಇದು ಒಂದು ಉತ್ತಮ ಮಟ್ಟದ ಮಾರುಕಟ್ಟೆ ವೇದಿಕೆಯನ್ನು ಸೃಷ್ಟಿಸುತ್ತದೆಯಲ್ಲದೆ ಎಲ್ಲಾ ಮಾರಾಟಗಾರರಿಗೆ ಸಮಾನ ಅವಕಾಶವನ್ನು ಒದಗಿಸಿ ಪಕ್ಷಪಾತದ ನಡವಳಿಕೆಯನ್ನು ನಿರ್ಬಂಧಿಸುತ್ತದೆ. ನಿಯಮಗಳ ಉಲ್ಲಂಘನೆಗಳ ಅನುಸರಣೆ ಮತ್ತು ಶಿಕ್ಷೆಯ ಮೇಲ್ವಿಚಾರಣೆ ಮಾಡಲು ಮತ್ತು ದತ್ತಾಂಶದ ದುರುಪಯೋಗ ಮತ್ತು ತಪ್ಪಾಗಿ ನಿರ್ವಹಿಸುವುದನ್ನು ತಡೆಯಲು ಮಾರ್ಗಸೂಚಿಯಲ್ಲಿ ಸಾಕಷ್ಟು ಕ್ರಮಗಳನ್ನು ರೂಪಿಸಿವೆ ಎಂದು ಅವರು ಶ್ಲಾಘಿಸಿದ್ದಾರೆ.

ಆದರೆ,ಅಸೋಸಿಯೇಟ್ಸ್ ಮತ್ತು ಸಂಬಂಧಿತ ಸಂಸ್ಥೆಗಳ ಅರ್ಥವನ್ನು ಮೊದಲೇ ವ್ಯಾಖ್ಯಾನಿಸುವುದು ಅವಶ್ಯಕವಾಗಿದ್ದುಇದು ಇ-ಕಾಮರ್ಸ್ ಕ್ಷೇತ್ರಕ್ಕೆ ಖಚಿತತೆ ಮತ್ತು ನಿರಂತರತೆಯನ್ನು ಖಚಿತಪಡಿಸುತ್ತದೆ. ಮುಕ್ತ ಮತ್ತು ಅಸ್ಪಷ್ಟ ಪರಿಕಲ್ಪನೆಗಳು ಖಂಡಿತವಾಗಿಯೂ ಅನುಮಾನಗಳಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com