3 ಲಕ್ಷ ಕೋಟಿ ರೂ. ಜಿಎಸ್‌ಟಿ ಪರಿಹಾರದ ಕೊರತೆ ಎದುರಿಸಲಿರುವ ರಾಜ್ಯಗಳು: ICRA ವರದಿ

ಜಿಎಸ್ಟಿ ನಿರ್ವಹಣೆಯಲ್ಲಿ ಮತ್ತು ಸರಿದೂಗಿಸುವಲ್ಲಿ ರಾಜ್ಯಗಳನ್ನು ಕಾಡುವ ದೊಡ್ಡ ತೊಡಕೆಂದರೆ ಇಲ್ಲಿಯವರೆಗೆ‌ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾದ ಜಿಎಸ್ಟಿ ಪರಿಹಾರದ ಕೊರತೆಗೆ ಧನಸಹಾಯ ನೀಡುವ ವ್ಯವಸ್ಥೆಯನ್ನು ಪ್ರಸ್ತಾಪಿಸಿಲ್ಲದಿರುವುದು.
3 ಲಕ್ಷ ಕೋಟಿ ರೂ. ಜಿಎಸ್‌ಟಿ ಪರಿಹಾರದ ಕೊರತೆ ಎದುರಿಸಲಿರುವ ರಾಜ್ಯಗಳು: ICRA ವರದಿ

ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯಗಳು 3 ಲಕ್ಷ ಕೋಟಿ ರೂ.ಗಳ ಜಿಎಸ್ಟಿ ಪರಿಹಾರದ ಕೊರತೆಯನ್ನು ಎದುರಿಸಬೇಕಾಗಬಹುದು ಮತ್ತು ಈ ಪರಿಸ್ಥಿತಿಯು ಮಾರುಕಟ್ಟೆಗಳಿಂದ ಹೆಚ್ಚಿನ ಸಾಲವನ್ನು ಪಡೆಯಲು ಒತ್ತಾಯಿಸುತ್ತದೆ ಎಂದು ವರದಿಯೊಂದು ಹೇಳಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವಾಗಿ ರಾಜ್ಯಗಳು 2.7-3 ಲಕ್ಷ ಕೋಟಿ ರೂ.ಗಳ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆ ಮೊತ್ತದಲ್ಲಿ, ಸೆಸ್ ಸಂಗ್ರಹದಿಂದಾದ ಕೊರತೆ 1.6-2 ಲಕ್ಷ ಕೋಟಿ ರೂ.ಗಳಾಗಲಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಇಕ್ರಾ ವರದಿಯಲ್ಲಿ ತಿಳಿಸಲಾಗಿದೆ.

2021ನೇ ಆರ್ಥಿಕ ವರ್ಷದಲ್ಲಿ, ಕೇಂದ್ರದಿಂದ ಬರಬೇಕಾಗಿರುವ ಜಿಎಸ್‌ಟಿಯಲ್ಲಿ ರಾಜ್ಯಗಳು 1.1 ಲಕ್ಷ ಕೋಟಿ ರೂ.ಗಳ ಕೊರತೆಯನ್ನು ಎದುರಿಸುತ್ತಿವೆ.

ರೇಟಿಂಗ್ ಏಜೆನ್ಸಿಯ ಪ್ರಕಾರ, ಈ ಕೊರತೆಯು ರಾಜ್ಯಗಳಿಂದ ಕನಿಷ್ಠ 2.2 ಲಕ್ಷ ಕೋಟಿ ರೂ.ಗಳನ್ನು ಮಾರುಕಟ್ಟೆಗೆ ಎರವಲು ಪಡೆಯಬೇಕಾಗುತ್ತದೆ. ಅಂದರೆ ಅವರು 2022 ರಲ್ಲಿ ತಮ್ಮ ಪಡೆದುಕೊಳ್ಳಬಹುದಾದ ಸಾಲದ ಮಿತಿಯ 90 ಪ್ರತಿಶತವನ್ನು ಬಳಸಿಕೊಳ್ಳಬೇಕಾಗುತ್ತದೆ.

"2022ರ ಆರ್ಥಿಕ ವರ್ಷದ ಕೇಂದ್ರದ ಜಿಡಿಪಿ ಅಂದಾಜಿನ ಆಧಾರದ ಮೇಲೆ, ಕೇಂದ್ರದಿದ 1.6-2 ಲಕ್ಷ ಕೋಟಿ ರೂ ಗಳು ಬರಬೇಕಿದ್ದು, ಒಟ್ಟಾರೆ ಜಿಎಸ್‌ಟಿ ಪರಿಹಾರದ ಕೊರತೆಯನ್ನು 2.7-3 ಲಕ್ಷ ಕೋಟಿ ರೂಗಳಾಗಲಿವೆ. ಹಾಗಾಗಿ ರಾಜ್ಯಗಳು ಒಟ್ಟು ಜಿಎಸ್‌ಡಿಪಿಯ ಶೇ 1 ರಷ್ಟು ಅಥವಾ 2.2 ಲಕ್ಷ ಕೊರತೆ ಅನುಭವಿಸಲಿದೆ "ಎಂದು ಇಕ್ರಾದಲ್ಲಿ ಕಾರ್ಪೊರೇಟ್ ವಲಯದ ರೇಟಿಂಗ್ ವಿಭಾಗದ ಮುಖ್ಯಸ್ಥರಾಗಿರುವ ಜಯಂತ ರಾಯ್ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

15 ನೇ ಹಣಕಾಸು ಆಯೋಗವು ರಾಜ್ಯಗಳ ನಿವ್ವಳ ಸಾಲಗಳ ಸಾಮಾನ್ಯ ಮಿತಿಯನ್ನು ಎಫ್‌ವೈ (ಆರ್ಥಿಕ ವರ್ಷ)22 ರಲ್ಲಿ ಜಿಎಸ್‌ಡಿಪಿಯ ಶೇಕಡಾ 4 ಕ್ಕೆ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಿದೆ, ಇದು ಮೂಲ ಸಾಲ ಮಿತಿ ಶೇಕಡಾ 3 ಕ್ಕಿಂತ ಹೆಚ್ಚಾಗಿದೆ. ವಿದ್ಯುತ್ ವಲಯದ ಸುಧಾರಣೆಗೆ ಸಂಬಂಧಿಸಿದ ಕೆಲವು ಷರತ್ತುಗಳನ್ನು ರಾಜ್ಯಗಳು ಪೂರ್ಣಗೊಳಿಸಿದರೆ, ಎಫ್‌ವೈ 22-25ರ ಅವಧಿಯಲ್ಲಿ ರಾಜ್ಯಗಳಿಗೆ ಶೇಕಡಾ 0.5 ರಷ್ಟು ಹೆಚ್ಚುವರಿ ಸಾಲವನ್ನು ನೀಡುವಂತೆ ಆಯೋಗವು ಶಿಫಾರಸು ಮಾಡಿದೆ.

ಎಫ್‌ವೈ 22 ರಲ್ಲಿ ವಿದ್ಯುತ್ ವಲಯಕ್ಕೆ ಸಂಬಂಧಿಸಿದಂತೆ ಗರಿಷ್ಠ 1.1 ಲಕ್ಷ ಕೋಟಿ ರೂ ಹೆಚ್ಚುವರಿ ಸಾಲಗಳನ್ನು ಮಾತ್ರ ಪಡೆಯುವಂತೆ ಕೇಂದ್ರ ಅಂದಾಜಿಸಿದೆ. ಇದು ಮತ್ತೊಂದು ಎಂದು ನಾವು ಅಂದಾಜು ಮಾಡುವ ಎಫ್‌ವೈ 21 ರ ಯಾವುದೇ ಕ್ಯಾರಿಡ್ ಫಾರ್ವರ್ಡ್‌ ಸಾಲವಾದ ಅಂದಾಜು 1.1 ಲಕ್ಷ ಕೋಟಿ ರೂ ತೆಗೆದುಕೊಳ್ಳುವುದರಿಂದ ರಾಜ್ಯಗಳಿಗೆ ಎಫ್‌ವೈ 22 ರಲ್ಲಿ ಬಂಡವಾಳ ವೆಚ್ಚಕ್ಕಾಗಿ ಹೆಚ್ಚು ಖರ್ಚು ಮಾಡಲು ಸಾಕಷ್ಟು ಸ್ಥಳಾವಕಾಶ ದೊರೆಯುತ್ತದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯಗಳ ಯೋಜಿತ ಆದಾಯ 8.7 ಲಕ್ಷ ಕೋಟಿ ರೂ ಇರಬಹುದು ಎಂದು ಇಕ್ರಾ ಸಂಸ್ಥೆ ಅಂದಾಜಿಸಿದೆ, ಇದು ಎಫ್‌ವೈ 21 ರ 7.7 ಲಕ್ಷ ಕೋಟಿ ರೂ.ಗಿಂತ 14 ಶೇಕಡಾ ಹೆಚ್ಚಾಗಿದೆ.

ಎಲ್ಲಾ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ‌ ಮೂಲ ಜಿಎಸ್ಟಿ ಸಂಗ್ರಹವಾದ ಶೇಕಡಾ 23ರನ್ನು ಆಧಾರವಾಗಿಟ್ಟುಕೊಂಡು ಏಜೆನ್ಸಿಯು ಅಂದಾಜಿಸಿದೆ.

ಇದರ ಆಧಾರದ ಮೇಲೆ, ಎಲ್ಲಾ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಸ್‌ಜಿಎಸ್‌ಟಿ ಸಂಗ್ರಹವು ಎಫ್‌ವೈ 22 ರಲ್ಲಿ 5.7 ಲಕ್ಷ ಕೋಟಿ ರೂ ಇರಲಿದೆ. ಮತ್ತು ಅಂದಾಜು ಯೋಜಿತ ಆದಾಯ ಮತ್ತು ಎಸ್‌ಜಿಎಸ್‌ಟಿ ಸಂಗ್ರಹಗಳ ನಡುವಿನ ಅಂತರವು 3 ಲಕ್ಷ ಕೋಟಿ ರೂ. ಇರಲಿದೆ.

ಮಾರ್ಚ್ 9 ರವರೆಗೆ ರಾಜ್ಯ ಅಭಿವೃದ್ಧಿ ಸಾಲ ವಿತರಣೆ ಮತ್ತು‌ ಇನ್ನು ಉಳಿದಿರುವ ಮೂರು ವಾರಗಳವರೆಗೆ ಸಾಲಗಳನ್ನು ಸೂಚಿಸಿದ ಆಧಾರದ ಮೇಲೆ, ಎಸ್‌ಡಿಎಲ್‌ಗಳ ನಿವ್ವಳ ವಿತರಣೆಯನ್ನು ಎಫ್‌ವೈ 21 ರಲ್ಲಿ 6.7 ಲಕ್ಷ ಕೋಟಿ ರೂ. ಅಥವಾ ಅವರ ಒಟ್ಟು ನಿವ್ವಳ ಸಾಲ ಮಿತಿಯ ಶೇಕಡಾ 71 ರಷ್ಟು ಇರಲಿದೆ. ಇದರರ್ಥ ಹೊರಹೋಗುವ ಹಣಕಾಸಿನಲ್ಲಿ ರಾಜ್ಯಗಳು ಹೆಚ್ಚುವರಿಯಾಗಿ 2.8 ಲಕ್ಷ ಕೋಟಿ ರೂ.ಗಳನ್ನು ಎರವಲು ಪಡೆಯಬಹುದು.

ಆದರೆ ಜಿಎಸ್ಟಿ ನಿರ್ವಹಣೆಯಲ್ಲಿ ಮತ್ತು ಸರಿದೂಗಿಸುವಲ್ಲಿ ರಾಜ್ಯಗಳನ್ನು ಕಾಡುವ ದೊಡ್ಡ ತೊಡಕೆಂದರೆ ಇಲ್ಲಿಯವರೆಗೆ‌ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾದ ಜಿಎಸ್ಟಿ ಪರಿಹಾರದ ಕೊರತೆಗೆ ಧನಸಹಾಯ ನೀಡುವ ವ್ಯವಸ್ಥೆಯನ್ನು ಪ್ರಸ್ತಾಪಿಸಿಲ್ಲದಿರುವುದು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com