ಪುದುಚೆರಿ ಚುನಾವಣೆ: ಮಾಜಿ ಮುಖ್ಯಮಂತ್ರಿಗೆ ಟಿಕೆಟ್‌ ನಿರಾಕರಿಸಿದ ಕಾಂಗ್ರೆಸ್‌

ಕಳೆದ ತಿಂಗಳಷ್ಟೇ ಪುದುಚೆರಿ ಸರ್ಕಾರ ಬಹುಮತ ಕಳೆದುಕೋಂಡಿದ್ದರಿಂದ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ರಾಜಿನಾಮೆ ನೀಡಿದ್ದರು. ಈಗ ಅವರಿಗೇ ಟಿಕೆಟ್‌ ನಿರಾಕರಿಸಲಾಗಿದೆ.
ಪುದುಚೆರಿ ಚುನಾವಣೆ: ಮಾಜಿ ಮುಖ್ಯಮಂತ್ರಿಗೆ ಟಿಕೆಟ್‌ ನಿರಾಕರಿಸಿದ ಕಾಂಗ್ರೆಸ್‌

ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಬಳಿಕ ಟಿಕೆಟ್‌ ಪಡೆಯಲು ಆಕಾಂಕ್ಷಿಗಳ ಪೈಪೋಟಿ ನಡೆದಿದೆ. ಈ ಮಧ್ಯೆ ಕೆಲವ ಅಚ್ಚರಿಯ ಬೆಳವಣಿಗೆಗಳು ಕೂಡಾ ಸುದ್ದಿಯಾಗಿವೆ. ಈಗ ಪುದುಚೆರಿಯ ಹಿಂದಿನ ಮುಖ್ಯಮಂತ್ರಿಯಾಗಿದ್ದ ವಿ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತಾಗಿ ಮಾಹಿತಿ ನೀಡಿರುವ ತಮಿಳುನಾಡು ಹಾಗೂ ಪುದುಚೆರಿ ಕಾಂಗ್ರೆಸ್‌ ಉಸ್ತಿವಾರಿಯಾಗಿರುವ ದಿನೇಶ್‌ ಗುಂಡುರಾವ್‌ ಅವರು, 2021ರ ಚುನಾವಣೆಯಲ್ಲಿ ನಾರಾಯಣಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ.

“ನಾರಾಯಣಸ್ವಾಮಿ ಅವರಿಗೆ ಈ ಬಾರಿಯ ಚುನಾವಣೆಯ ಪ್ರಚಾರ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿದೆ,” ಎಂದು ಹೇಳಿ ಪಕ್ಷದೊಳಗಿನ ಅಸಮಾಧಾನವನ್ನು ಮುಚ್ಚಿಹಾಕುವ ಕೆಲಸ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ತಿಂಗಳಷ್ಟೇ ಪ್ರಮುಖ ಕಾಂಗ್ರೆಸ್‌ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿತ್ತು. ಹಠಾತ್‌ ಬೆಳವಣಿಗೆಗಳ ನಂತರ ಮುಖ್ಯಮಂತ್ರಿಯಾಗಿದ್ದ ನಾರಾಯಣಸ್ವಾಮಿ ಅವರು ರಾಜಿನಾಮೆ ನೀಡಿದ್ದರು. ಇವರು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸದ ಕಾರಣ ಟಿಕೆಟ್‌ ನಿರಾಕರಿಸಲಾಗಿದೆ ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ.

ಪುದುಚೆರಿಯ 30 ಕ್ಷೇತ್ರಗಳಿಗೆ ಏಪ್ರಿಲ್‌ 6ರಂದು ಒಂದು ಸುತ್ತಿನಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com