ಎಲ್ಲಾ ಬ್ಯಾಂಕುಗಳು ಖಾಸಗೀಕರಣಗೊಳ್ಳುವುದಿಲ್ಲ – ನಿರ್ಮಲಾ ಸೀತಾರಾಮನ್‌

ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ಬ್ಯಾಂಕ್‌ ನೌಕರರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ.
ಎಲ್ಲಾ ಬ್ಯಾಂಕುಗಳು ಖಾಸಗೀಕರಣಗೊಳ್ಳುವುದಿಲ್ಲ – ನಿರ್ಮಲಾ ಸೀತಾರಾಮನ್‌

ಕೇಂದ್ರ ಸರ್ಕಾರದ ಬ್ಯಾಂಕ್‌ ಖಾಸಗೀಕರಣ ನೀತಿಯ ವಿರುದ್ದ ಸಿಡಿದೆದ್ದ ನೌಕರರ ಹೋರಾಟದ ಬಿಸಿ ಕೇಂದ್ರಕ್ಕೆ ತಟ್ಟಿದಂತಿದೆ. ಈ ಕುರಿತಾಗಿ ಹೇಳಿಕೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಎಲ್ಲಾ ಬ್ಯಾಂಕುಗಲನ್ನು ಖಾಸಗಿಯವರ ಕೈಗೆ ಒಪ್ಪಿಸುವುದಿಲ್ಲ ಎಂದು ಹೇಳಿದ್ದಾರೆ.

“ಖಾಸಗೀಕರಣದ ನಿರ್ಧಾರವನ್ನು ಸಾಕಷ್ಟು ಆಲೋಚನೆಯ ನಂತರ ತೆಗೆದುಕೊಂಡಿದ್ದೇವೆ. ಪ್ರತಿಯೊಬ್ಬ ನೌಕರರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ದವಿದೆ. ಈಗಿರುವ ನೌಕರರನ್ನು ಕೂಡಾ ಸರ್ಕಾರ ಕಾಪಾಡಲಿದೆ,” ಎಂದು ಅವರು ಹೇಳಿದ್ದಾರೆ.

ಖಾಸಗಿಕರಣ ನೀತಿಯ ವಿರುದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನೀಡಿದ್ದ ಕರೆ ಯಶಸ್ವಿಯಾಗಿದೆ. ಶನಿವಾರದಿಂದ ಮಂಗಳವಾರದವರೆಗೆ ಬ್ಯಾಂಕು ಸೇವೆಗಳಲ್ಲಿ ಬಹಳಷ್ಟು ವ್ಯತ್ಯಯ ಉಂಟಾಗಿದೆ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ಬ್ಯಾಂಕ್‌ ನೌಕರರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ.

ಒಟ್ಟಿನಲ್ಲಿ ಕೇಂದ್ರದ ನೀತಿಯ ವಿರುದ್ದ ತೀಕ್ಷ್ಣವಾದ ಪ್ರತಿರೋಧವನ್ನು ಒಡ್ಡಿರುವ ಬ್ಯಾಂಕ್‌ ನೌಕರರ ಹಿತಾಸಕ್ತಿಯನ್ನು ಕಾಪಾಡಲು ತಯಾರಿದ್ದೇವೆ ಎಂಬ ಸಂದೇಶವನ್ನು ವಿತ್ತ ಸಚಿವೆ ರವಾನಿಸಿದ್ದಾರೆ. ಆದರೆ ಯಾವ ಯಾವ ಬ್ಯಾಂಕುಗಳು ಖಾಸಗಿಕರಣಗೊಳ್ಳಲಿವೆ ಎಂಬ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com