ವೈಯಕ್ತಿಕ ದಾಳಿಗಾಗಿ ಕಾನೂನುಗಳ ದುರ್ಬಳಕೆ: ಆಕಾರ್‌ ಪಟೇಲ್‌ ಆರೋಪ

ಜೈಸಿಂಗ್‌ ಅವರಿಗಾಗಿ FCRA ಹಾಗೂ ವರದರಾಜನ್‌ ಅವರಿಗಾಗಿ OCI ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ, ಎಂದು ಆಕಾರ್‌ ಪಟೇಲ್‌ ಅವರು ಆರೋಪಿಸಿದ್ದಾರೆ.
ವೈಯಕ್ತಿಕ ದಾಳಿಗಾಗಿ ಕಾನೂನುಗಳ ದುರ್ಬಳಕೆ: ಆಕಾರ್‌ ಪಟೇಲ್‌ ಆರೋಪ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವೈಯಕ್ತಿಕವಾಗಿ ಜನರ ಮೇಲೆ ದಾಳಿ ಮಾಡಲು ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮಾಜಿ ಕಾರ್ಯಕಾರಿ ನಿರ್ದೇಶಕರಾದ ಆಕಾರ್‌ ಪಟೇಲ್‌ ಅವರು ಆರೋಪಿಸಿದ್ದಾರೆ.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಅವರು, “ಜೈಸಿಂಗ್‌ ಅವರಿಗಾಗಿ FCRA ಹಾಗೂ ವರದರಾಜನ್‌ ಅವರಿಗಾಗಿ OCI ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ. ಈಷ್ಟೋಂದು ಮಾನಸಿಕ ವಿಭ್ರಮೆಯ ಸ್ಥಿತಿಯಲ್ಲಿ ಸರ್ಕಾರವಿದೆ,” ಎಂದು ಅವರು ಟೀಕಿಸಿದ್ದಾರೆ.

ಇನ್ನು ಕಾನೂನುಗಳ ಸರ್ಕಾರ, ವೈಯಕ್ತಿಕ ಜನರಿಂದಲ್ಲ ಎಂದು ಅನ್ನಿಸಿಕೊಂಡಿದ್ದ ಭಾರತವನ್ನು ಅದರ ವಿರುದ್ದ ದಿಕ್ಕಿನಲ್ಲಿ ಮೋದಿ ಕೊಂಡೊಯ್ಯುತ್ತಿದ್ದಾರೆ. ʼಬನಾನಾʼ ರಿಪಬ್ಲಿಕ್‌ ಸಂಪೂರ್ಣ ಪ್ರಪಂಚದ ಎದುರು ಬೆತ್ತಲೆಗೊಳ್ಳುತ್ತಿದೆ, ಎಂದು ಅವರು ಹೇಳಿದ್ದಾರೆ.

ಸರ್ಕಾರವು ಮಿಶನರಿಗಳಿಗೆ, ತಬ್ಲೀಘಿಗಳಿಗೆ, ಅಧ್ಯಯನಕಾರರಿಗೆ, ಚಾರಣಿಗರಿಗೆ ಹಾಗೂ ಪತ್ರಿಕೋದ್ಯಮದಲ್ಲಿ ಇರುವವರಿಗೆ ಅನ್ವಯವಾಗುವಂತೆ OCI (ವಿದೇಶಿ ಭಾರತೀಯ ಪ್ರಜೆ) ಕಾನೂನುಗಳನ್ನು ಇತ್ತೀಚಿಗೆ ಬದಲಾವಣೆ ಮಾಡಿತ್ತು. ಇದರ ಪ್ರಕಾರ, ಈವರುಗಳು ಒಸಿಐ ಕಾರ್ಡ್‌ ಹೊಂದಿರುವವರು, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗಳ ಬಳಿ ವಿಶೇಷ ಅನುಮತಿಯನ್ನು ಪಡೆಯತಕ್ಕದ್ದು, ಎಂದು ಉಲ್ಲೇಖಿಸಲಾಗಿತ್ತು.

ಈ ನಿಯಮಗಳನ್ನು ಸರ್ಕಾರದ ನೀತಿಗಳ ವಿರುದ್ದ ದನಿ ಎತ್ತುತ್ತಿರುವ ವ್ಯಕ್ತಿಗಳ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸಲು ಬಲಸಿಕೊಳ್ಳಲಾಗುತ್ತಿದೆ ಎಂದು ಆಕಾರ್‌ ಪಟೇಲ್‌ ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com