ದುರ್ಬಲವಾಗುತ್ತಿದೆಯೇ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ?

ರಷ್ಯಾ ಭಾರತಕ್ಕೆ ಕೆಲವು ರೀತಿಯಲ್ಲಿ ಉಪಯುಕ್ತವಾಗಿದ್ದು ವಿಶೇಷವಾಗಿ ಭಾರತೀಯ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರ ದೊಡ್ಡದು. ಆದರೆ ಈಗ ಚೀನಾವನ್ನು ಬೆಂಬಲಿಸುವ ಮಾಸ್ಕೋದ ರಾಜಕೀಯ ನಿಲುವನ್ನು ಭಾರತ ಗಂಭೀರವಾಗಿ ಗಮನಹರಿಸಬೇಕಿದೆ.
ದುರ್ಬಲವಾಗುತ್ತಿದೆಯೇ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ?

ಭಾರತ ಮತ್ತು ರಷ್ಯಾ ಒಂದು ದಶಕಗಳ ಹಿಂದೆ ತುಂಬಾ ಅನ್ಯೋನ್ಯ ಸಂಬಂಧ ಹೊಂದಿದ್ದವು. ಈ ಸಂಬಂಧ ಬರೇ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ್ದೇ ಅಲ್ಲದೆ ಎರಡೂ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧವೂ ಉತ್ತಮವಾಗಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ರಷ್ಯಾ ಭಾರತದಿಂದ ದೂರಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಇತ್ತೀಚೆಗೆ, ಪಾಕಿಸ್ತಾನದ ಒತ್ತಾಸೆಯೆ ಮೇರೆಗೆ ರಷ್ಯವು ಅಫ್ಘಾನಿಸ್ತಾನದ ಕುರಿತಾದ ಚರ್ಚೆಗಳಿಂದ ಭಾರತವನ್ನು ದೂರವಿಡಲು ಪ್ರಯತ್ನಿಸಿದೆ ಎಂಬ ವರದಿಯನ್ನು ನವದೆಹಲಿಯ ರಷ್ಯಾ ರಾಯಭಾರ ಕಚೇರಿಯು ಮಾಧ್ಯಮ ಹೇಳಿಕೆಯ ಮೂಲಕ ನಿರಾಕರಿಸಿದೆ. ಆದರೆ ಭಾರತ ಮತ್ತು ರಷ್ಯಾ ನಡುವಿನ ಭಿನ್ನಾಭಿಪ್ರಾಯಗಳು, ಭೌಗೋಳಿಕ ವಿಷಯದ ಕುರಿತಾಗಿ ಹೆಚ್ಚುವ ಸಾಧ್ಯತೆಯಿದೆ, ಅಫ್ಘಾನಿಸ್ತಾನವು ಅಂತಹ ಅನೇಕ ವಿಷಯಗಳಲ್ಲಿ ಒಂದಾಗಿದೆ. ಭಾರತ ಮತ್ತು ರಷ್ಯಾ ಕೆಲವು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿದ್ದರೂ, ಮಾಸ್ಕೋ ತನ್ನದೇ ಆದ ನಿಬಂಧನೆಗಳನ್ನು ಹೊಂದಿದ್ದು, ನವದೆಹಲಿ ಅದನ್ನು ಅರ್ಥಮಾಡಿಕೊಳ್ಳಬೇಕು. ಪಶ್ಚಿಮ ರಾಷ್ಟ್ರಗಳೊಂದಿಗೆ ರಷ್ಯಾದ ಮುಖಾಮುಖಿ, ಮತ್ತು ನಿರ್ದಿಷ್ಟವಾಗಿ ಅಮೇರಿಕ ಜೊತೆ ಹದಗೆಟ್ಟಿರುವ ಸಂಬಂದದಿಂದಾಗಿ ಮಾಸ್ಕೋ ಬೀಜಿಂಗ್ ಮೇಲೆ ಹೆಚ್ಚು ಒಲವು ತೋರುವಂತೆ ಮಾಡುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಷ್ಯಾ ಭಾರತಕ್ಕೆ ಕೆಲವು ರೀತಿಯಲ್ಲಿ ಉಪಯುಕ್ತವಾಗಿದ್ದು ವಿಶೇಷವಾಗಿ ಭಾರತೀಯ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರ ದೊಡ್ಡದು. ಆದರೆ ಈಗ ಚೀನಾವನ್ನು ಬೆಂಬಲಿಸುವ ಮಾಸ್ಕೋದ ರಾಜಕೀಯ ನಿಲುವನ್ನು ಭಾರತ ಗಂಭೀರವಾಗಿ ಗಮನಹರಿಸಬೇಕಿದೆ. ಭಾರತೀಯ ನಿರ್ಧಾರ ತೆಗೆದುಕೊಳ್ಳುವವರು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಭಾರತೀಯ ರಾಜತಾಂತ್ರಿಕತೆಯು ರಷ್ಯಾ ಮತ್ತು ಚೀನಾ ನಡುವೆ ಒಡಕು ಮೂಡಿಸಲು ಆಶಿಸುತ್ತಿರಬಹುದು ಆದರೆ ಈ ತಿಳುವಳಿಕೆಯು ಚೀನಾಕ್ಕಿಂತ ಭಾರತವು ರಷ್ಯಾಕ್ಕೆ ಹೆಚ್ಚು ಉಪಯುಕ್ತವಾಗಿದೆ ಎಂದು ಊಹಿಸಬಹುದು. ಆದರೆ ಈ ಸಾದ್ಯತೆ ಕಡಿಮೆ. ಅಂತೆಯೇ, ಭಾರತ ಮತ್ತು ರಷ್ಯಾವು "ಮಲ್ಟಿಪೋಲಾರ್ ಗ್ಲೋಬಲ್ ಆರ್ಡರ್" ಅನ್ನು ಸ್ಥಾಪಿಸುವ ಬಗ್ಗೆ ಆಶಯ ಹೊಂದಬಹುದು. ಆದರೆ ಇದರಿಂದ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಏಕೆಂದರೆ ಚೀನಾದ ಆರ್ಥಿಕತೆಯು ಭಾರತದ ಮತ್ತು ರಷ್ಯಾದ ಒಟ್ಟು ಆರ್ಥಿಕತೆಗಿಂತ ಮೂರು ಪಟ್ಟು ದೊಡ್ಡದಾಗಿದೆ.

ಅಮೇರಿಕ ಮತ್ತು ರಷ್ಯಾದ ಹಿತಾಸಕ್ತಿಗಳ ನಡುವಿನ ಭಿನ್ನತೆಯ ಮೂಲವು ಅಮೇರಿಕ ಜೊತೆಗಿನ ಸಂಬಂಧದಲ್ಲಿ ರಷ್ಯಾ ಎದುರಿಸುತ್ತಿರುವ ನಿರಂತರ ಸಮಸ್ಯೆಗಳಲ್ಲಿದೆ. ಶೀತಲ ಸಮರದ ಅಂತ್ಯದ ನಂತರದ ದಶಕದಲ್ಲಿ ರಷ್ಯಾದ ಬಗ್ಗೆ ಅಮೇರಿಕ ಅಸಡ್ಡೆಯ ನಲುವನ್ನು ಹೊಂದಿತ್ತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣಕಾರಿ ನಡವಳಿಕೆಯು ಉಕ್ರೇನ್ನಿಂದ ಹಿಡಿದು, ಪಶ್ಚಿಮದಲ್ಲಿ ರಷ್ಯಾದ ವಿರೋಧಿಗಳ ವಿಷ ಪ್ರಾಶನದ ವರೆಗೆ ಮತ್ತು 2016 ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನಗಳವರೆಗೆ, ಎಲ್ಲವೂ ಅಮೇರಿಕದ ವಿರುದ್ಧ ದ್ವೇಷ ಸಾಧಿಸಿದ ಘಟನೆಗಳೇ ಎಂಬುದರಲ್ಲಿ ಅನುಮಾನವಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುಟಿನ್ ಅವರ ಕುರಿತು ಸಾಫ್ಟ್ ಕಾರ್ನರ್ ಹೊಂದಿರಬಹುದು. ಆದರೆ ರಷ್ಯಾಕ್ಕೆ ಅವರ ಆಡಳಿತವು ವಿಶೇಷವಾಗಿ ಮೃದುವಾಗಿರಲಿಲ್ಲ. ಈಗಿನ ಅಮೇರಿಕ ಅಧ್ಯಕ್ಷ ಬಿಡೆನ್ ಮತ್ತು ಅವರ ಆಡಳಿತವು ರಷ್ಯಾ ಬಗ್ಗೆ ಕಠಿಣವಾಗಬಹುದು, ಪುಟಿನ್ ಅವರು ಪಶ್ಚಿಮ ರಾಷ್ಟ್ರಗಳೆಡೆಗೆ ಮೃದುವಾಗುತ್ತಾರೆ ಎಂಬ ಬಗ್ಗೆ ಸೂಚನೆಯನ್ನು ತೋರಿಸಿದ್ದಾರೆ. ಇದು ಆರಂಭಿಕ ದಿನಗಳಾಗಿದ್ದು ನಂತರ ನಿಲುವು ಬದಲಾಗಬಹುದು. ಬಿಡೆನ್ ಅವರು ಅಧಿಕಾರ ವಹಿಸಿಕೊಂಡ ಕೇವಲ ಮೂರು ವಾರಗಳ ನಂತರ ಹೊಸ Sಖಿಂಖಖಿ ಪರಮಾಣು ಶಸ್ತ್ರಾಸ್ತ್ರ ಒಪ್ಪಂದವನ್ನು ವಿಸ್ತರಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ಅಥವಾ ಎರಡು ಕಡೆಯ ನಡುವಿನ ಉದ್ವಿಗ್ನತೆ ಕಡಿಮೆ ಆಗುವ ಸಾಧ್ಯತೆಯೂ ಇದೆ.

ಈ ಮುಖಾಮುಖಿಯ ಪರಿಣಾಮವೆಂದರೆ, ಮಾಸ್ಕೋ ಅಮೆರಿಕದ ಶಕ್ತಿಯನ್ನು ದುರ್ಬಲಗೊಳಿಸುವ ಮಾರ್ಗವಾಗಿ ಚೀನಾದ ಮೇಲೆ ಹೆಚ್ಚು ಒಲವು ತೋರಿದೆ. ಇವೆರಡರ ನಡುವಿನ ಮಿಲಿಟರಿ ಸಂಬಂಧವು ಹೆಚ್ಚು ಹತ್ತಿರವಾಗಿದೆ: ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಜೊತೆಗೆ, ಯಾವುದೇ ಪರಮಾಣು ಶಕ್ತಿಗೆ ತಂತ್ರಜ್ಞಾನದ ಅತ್ಯಂತ ಸೂಕ್ಷ್ಮ ಬಿಟ್ಗಳಲ್ಲಿ ಒಂದಾದ ಚೀನಾ ತನ್ನ ಕ್ಷಿಪಣಿ ಎಚ್ಚರಿಕೆ ವ್ಯವಸ್ಥೆಯನ್ನು ಸ್ಥಾಪಿಸಲು ರಷ್ಯಾ ಸಹ ಸಹಾಯ ಮಾಡುತ್ತಿದೆ. ಕಳೆದ ಅಕ್ಟೋಬರ್ನಲ್ಲಿ, ಪುಟಿನ್ ಅವರು ಉಭಯ ದೇಶಗಳ ನಡುವಿನ ಮಿಲಿಟರಿ ಮೈತ್ರಿಯನ್ನು ತಳ್ಳಿಹಾಕುವುದಿಲ್ಲ ಎಂದು ಹೇಳಿದ್ದರು, ಚೀನಾದ ಅಧಿಕಾರಿಗಳು ಇದನ್ನು ಒಪ್ಪಲಿಲ್ಲ ವಾದರೂ ಅದನ್ನು ತಿರಸ್ಕರಿಸಲಿಲ್ಲ. ರಷ್ಯಾವು ಇಂಡೋ-ಪೆಸಿಫಿಕ್ ಕಡೆಗೆ ಕಠಿಣ ಮತ್ತು ಕೆಲವೊಮ್ಮೆ ರಾಜತಾಂತ್ರಿಕ ನಿಲುವನ್ನು ತೆಗೆದುಕೊಂಡಿದೆ,

ಭಾರತ ಮತ್ತು ರಷ್ಯಾ ನಡುವಿನ ಹೆಚ್ಚಿದ ಅಂತರವು ಚೀನಾಕ್ಕೆ ಅನುಕೂಲಕರವಾಗಿದೆ. ಆದರೆ ಮಾಸ್ಕೋ ಮತ್ತು ವಾಷಿಂಗ್ಟನ್ ನಡುವಿನ ಬಿರುಕು ಹೆಚ್ಚಿದರೆ ಚೀನಗೆ ಅನುಕೂಲವಿದೆ. ಭಾರತದ ಅರ್ದದಷ್ಟು ಆರ್ಥಿಕತೆಯನ್ನು ಹೊಂದಿರುವ ರಷ್ಯಾವು ಚೀನಾಕ್ಕೆ ಪ್ರತಿದ್ವಂದ್ವಿಯಲ್ಲ. ಆದರೆ ರಷ್ಯಾ ಇನ್ನೂ ಚೀನಾಕ್ಕೆ ಉನ್ನತ ತಂತ್ರಜ್ಞಾನದ ಶಸ್ತ್ರಾಸ್ತ್ರಗಳ ಮೂಲವಾಗಬಹುದು. ಚೀನಾದ ವಿಶಾಲವಾದ ತಾಂತ್ರಿಕತೆಯು ರಷ್ಯಾವನ್ನು ಮೀರಿಸುತ್ತದೆ ಆದರೆ ಇದು ಇನ್ನೂ ದೌರ್ಬಲ್ಯವನ್ನು ಹೊಂದಿದೆ: ಇದು ಐದನೇ ತಲೆಮಾರಿನ ಫೈಟರ್ ಜೆಟ್ ಅನ್ನು ತಯಾರಿಸುತ್ತದೆ. ಆದರೆ ಇದಕ್ಕೆ ರಷ್ಯಾ ನಿರ್ಮಿತ ಎಂಜಿನ್ ಅಗತ್ಯವಿದೆ, ಇದಕ್ಕೆ ಈಗಲೂ ಬೀಜಿಂಗ್ ಅತೃಪ್ತಿ ಹೊಂದಿದೆ. ಅದಕ್ಕಿಂತ ಮುಖ್ಯವಾಗಿ, ಚೀನಾ ಇತರ ಹಲವು ರಾಷ್ಟ್ರಗಳೊಡನೆ ಗಡಿ ಬಿಕ್ಕಟ್ಟು ಹೊಂದಿರುವ ಸಮಯದಲ್ಲಿ ಬೀಜಿಂಗ್ಗೆ ರಷ್ಯಾ ಉಪಯುಕ್ತ ರಾಜಕೀಯ ಬೆಂಬಲವನ್ನು ನೀಡುತ್ತಿದೆ. ಎಲ್ಲಾ ಅಂತರರಾಷ್ಟ್ರೀಯ ಪಾಲುದಾರಿಕೆಗಳಂತೆ, ಭಾರತ -ರಷ್ಯಾ ಸಹಭಾಗಿತ್ದಂತೆ ಚೀನಾ-ರಷ್ಯಾ ಸಹಭಾಗಿತ್ವವು ಆ ಕ್ಷಣದ ಅನುಕೂಲವಾಗಿದೆ. ಆದರೆ ಅದಕ್ಕೆ ಕಾರಣವಾದ ಪರಿಸ್ಥಿತಿಗಳು ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆಯಿಲ್ಲ. ಭಾರತೀಯ ವಿದೇಶಾಂಗ ಇದನ್ನು ಅಂಗೀಕರಿಸಬೇಕು ಮತ್ತು ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com