2 ವರ್ಷಗಳಿಂದ 2 ಸಾವಿರ ನೋಟು ಮುದ್ರಿಸಲಾಗುತ್ತಿಲ್ಲ – ಹಣಕಾಸು ಸಚಿವಾಲಯ

2016 ನವೆಂಬರ್‌ನಲ್ಲಿ ನರೇಂದ್ರ ಮೋದಿ ಸರ್ಕಾರದ ನೋಟು ಅಮಾನೀಕರಣದ ನಂತರ ಹೊಸ ನೋಟುಗಳಾದ 2000, 500, 200, 100 ಮತ್ತು 50 ರೂ ನೋಟುಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದವು. ಬಳಿಕ 2000 ರೂ ಮುಖಬೆಲೆಯ ನೋಟಿನ ಬಳಕೆ ಕಡಿಮೆಯಾಗಿತ್ತು.
2 ವರ್ಷಗಳಿಂದ 2 ಸಾವಿರ ನೋಟು ಮುದ್ರಿಸಲಾಗುತ್ತಿಲ್ಲ – ಹಣಕಾಸು ಸಚಿವಾಲಯ

ಎರಡು ವರ್ಷದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳು ಮುದ್ರಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯ ಸೋಮವಾರ ಸಂಸತ್ತಿನಲ್ಲಿ ಹೇಳಿದೆ. 2019-20 ಮತ್ತು 2020-21 ರಲ್ಲಿ ನೋಟು ಮುದ್ರಣಾಲಯಕ್ಕೆ ಕಳಿಸಲಾಗಿಲ್ಲ ಎಂದು ಹಣಕಾಸು ಸಚಿವ ಅನುರಾಗ್‌ ಠಾಕೂರ್‌ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಎಂಡಿಕೆಎಂ ಸಂಸದ ಗಣೇಶ್‌ ಮೂರ್ತಿ ಪ್ರಶ್ನಿಸಿ, ಸಾರ್ವಜನಿಕವಾಗಿ 2 ಸಾವಿರ ಮುಖಬೆಲೆಯ ನೋಟು ಬಳಸುವುದು ತೀರಾ ಕಡಿಮೆಯಾಗಿದೆ ಮತ್ತು ಬ್ಯಾಂಕ್‌, ಎಟಿಎಂ ಗಳಲ್ಲಿ ಲಭ್ಯವಿಲ್ಲದಿರುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತೀಚೆಗೆ 2 ಸಾವಿರ ನೋಟುಗಳ ಚಲಾವಣೆ ಇಳಿಕೆಯಾಗಿದೆ. ಸಾರ್ವಜನಿಕ ವಹಿವಾಟಿಗೆ ಮತ್ತು ಬೇಡಿಕೆಗೆ ಅನುಗುಣವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನೊಂದಿಗೆ ಸರ್ಕಾರ ಸಮಾಲೋಚನೆ ನಡೆಸಿ ನಿರ್ಧರಿಸುತ್ತದೆ, ಎಂದು ಹಣಕಾಸು ಸಚಿವ ಅನುರಾಗ್‌ ಠಾಕೂರ್‌ ಉತ್ತರಿಸಿದ್ದಾರೆ.

2016 ನವೆಂಬರ್‌ನಲ್ಲಿ ನರೇಂದ್ರ ಮೋದಿ ಸರ್ಕಾರದ ನೋಟು ಅಮಾನೀಕರಣದ ನಂತರ ಹೊಸ ನೋಟುಗಳಾದ 2000, 500, 200, 100 ಮತ್ತು 50 ರೂ ನೋಟುಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದವು. ಬಳಿಕ 2000 ರೂ ಮುಖಬೆಲೆಯ ನೋಟಿನ ಬಳಕೆ ಕಡಿಮೆಯಾಗಿತ್ತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com