ಹೊಸ ಐಟಿ ಕಾನೂನಿನ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ʼದಿ ವೈರ್ʼ ನೀಡಿದ ಕಾರಣಗಳೇನು?

ಡಿಜಿಟಲ್ ನ್ಯೂಸ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಕಂಟೆಂಟ್ ನಿರ್ದೇಶಿಸಲು ಪ್ರಯತ್ನಿಸುವ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ (IT) ನಿಯಮಗಳು ಮೂಲ ಐಟಿ ಕಾಯ್ದೆಯನ್ನು‌‌ ಉಲ್ಲಂಘಿಸಲಿರುವುದರಿಂದ ಅದನ್ನು ಜಾರಿಗೊಳಿಸಲು‌‌ ಅನುಮತಿ ನೀಡಬಾರದು ಎಂದು ಅರ್ಜಿ ಸಲ್ಲಿಸಲಾಗಿತ್ತು
ಹೊಸ ಐಟಿ ಕಾನೂನಿನ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ʼದಿ ವೈರ್ʼ ನೀಡಿದ ಕಾರಣಗಳೇನು?

ದಿ ವೈರ್‌ನ ಪ್ರಕಾಶಕರು ಸೇರಿದಂತೆ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಸಲ್ಲಿಸಿದ್ದ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಕಳೆದ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಡಿಜಿಟಲ್ ನ್ಯೂಸ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಕಂಟೆಂಟ್ ನಿರ್ದೇಶಿಸಲು ಪ್ರಯತ್ನಿಸುವ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ (IT) ನಿಯಮಗಳು ಮೂಲ ಐಟಿ ಕಾಯ್ದೆಯನ್ನು‌‌ ಉಲ್ಲಂಘಿಸಲಿರುವುದರಿಂದ ಅದನ್ನು ಜಾರಿಗೊಳಿಸಲು‌‌ ಅನುಮತಿ ನೀಡಬಾರದು ಎಂದು ಅರ್ಜಿ ಸಲ್ಲಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಏಪ್ರಿಲ್ 16ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಪ್ರಸ್ತುತ ಅರ್ಜಿಯನ್ನು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್- Intermediary Guidelines and Digital Media Ethics Code) ನಿಯಮಗಳು 2021 (ಐಟಿ ನಿಯಮಗಳು 2021 ಅಥವಾ ಇಂಪ್ಯೂಗ್ನ್ಡ್ ರೂಲ್ಸ್- “IT Rules, 2021” or “Impugned Rules”) ಮೂಲ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ನ್ನು ಉಲ್ಲಂಘಿಸುತ್ತದೆ ಎಂಬ ವಿಚಾರದ ಬಗ್ಗೆ ಸಲ್ಲಿಸಲಾಗಿದೆ. 'ಡಿಜಿಟಲ್ ಮೀಡಿಯಾ'ದ ಭಾಗವಾಗಿ ಸುದ್ದಿ ಮತ್ತು ಪ್ರಸ್ತುತ ವಿಚಾರಗಳನ್ನು ಪ್ರಕಟಿಸುವವರ ಮೇಲೆ ಸರ್ಕಾರವು‌ ಮೇಲ್ವಿಚಾರಣೆ ನಡೆಸುವ ಮತ್ತು ನೀತಿ ಸಂಹಿತೆ ಹೇರುವ ಹುನ್ನಾರ ಮಾಡುತ್ತಿದೆ. 'ಉತ್ತಮ ಅಭಿರುಚಿ', 'ಸಭ್ಯತೆ' ಮುಂತಾದ‌ ಅಸ್ಪಷ್ಟ ನೀತಿಗಳನ್ನು ಬಳಸಿ ಸುದ್ದಿ ಪೋರ್ಟಲ್‌ಗಳನ್ನು ಭಾಗ 3 ರ ಅಡಿ ನಿಯಂತ್ರಿಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಸರ್ಕಾರದ ಹಸ್ತಕ್ಷೇಪವಿಲ್ಲದೆ ಪತ್ರಿಕೆಗಳನ್ನು ನಿಯಂತ್ರಿಸಲು ಪ್ರೆಸ್ ಕೌನ್ಸಿಲ್ ಆಕ್ಟ್ 1978, ಕೇಬಲ್ ಟೆಲಿವಿಷನ್ ಅನ್ನು ನಿಯಂತ್ರಿಸಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ (ನಿಯಂತ್ರಣ- Regulation) ಕಾಯ್ದೆ 1995‌ ಈಗಾಗಲೇ ಜಾರಿಯಲ್ಲಿದೆ. ಆದರೆ ಮೂಲ ಮಾಹಿತಿ ತಂತ್ರಜ್ಞಾನ ಕಾಯ್ದೆಯು ಯಾವುದೇ ರೀತಿಯಲ್ಲಿ ಸುದ್ದಿ ಪೋರ್ಟಲ್‌ಗಳನ್ನು ನಿಯಂತ್ರಿಸಲು ಅಧಿಕಾರ ಒದಗಿಸುವುದಿಲ್ಲ. ಆದರೂ ಐಟಿ ನಿಯಮಗಳು 2021 ಮೂಲಕ ಇಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರ ಸನ್ನದ್ಧವಾಗಿದೆ.‌

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಲೆಕ್ಟ್ರಾನಿಕ್ ಡೇಟಾ ಮತ್ತು ಎಲೆಕ್ಟ್ರಾನಿಕ್ ಸಂವಹನ ವಿನಿಮಯದ ಕಾನೂನು ಮಾನ್ಯತೆ, ದೃಢೀಕರಣ ಮತ್ತು ಸೌಲಭ್ಯವನ್ನು ಒದಗಿಸಲು ಮತ್ತು ಅದರ ರಶೀದಿಯನ್ನು ಸಾಕ್ಷಿಯಾಗಿ ಒದಗಿಸಲು ಮೂಲ‌ ಐಟಿ ಕಾಯ್ದೆ ಅಂದರೆ 2000ದಲ್ಲಿ ರೂಪಿಸಲಾದ ಕಾಯ್ದೆ ಸೀಮಿತವಾಗಿದೆ. ಇದಲ್ಲದೆ‌ ಮೂಲ ಕಾಯ್ದೆಯು ಎರಡು ಸಂದರ್ಭಗಳನ್ನು ಹೊರತುಪಡಿಸಿ ಎಲೆಕ್ಟ್ರಾನಿಕ್ ವಿಚಾರಗಳನ್ನು ನಿಯಂತ್ರಿಸಲು ಅವಕಾಶ ಕಲ್ಪಿಸುವುದಿಲ್ಲ.

1.ಸೈಬರ್ ಭಯೋತ್ಪಾದನೆ (ಸೆಕ್ಷನ್ 66-ಎಫ್), ಅಶ್ಲೀಲ ವಿಷಯಗಳು (ಸೆಕ್ಷನ್ 67),ಸೆಕ್ಸುವಲ್ ಎಕ್ಸ್‌ಪ್ಲಿಸಿಟ್ ಮೆಟೀರಿಯಲ್ಸ್ (sexually explicit material )(ಸೆಕ್ಷನ್ 67-ಎ), ಮಕ್ಕಳ ನಗ್ನಚಿತ್ರಗಳು- child pornography (ಸೆಕ್ಷನ್ 67-ಬಿ) ಮತ್ತು ಇತರ ಅಪರಾಧಗಳಾದ ಟ್ಯಾಂಪರಿಂಗ್, ಸೈಬರ್ ಕಳ್ಳತನದಂತಹ ಅಪರಾಧಗಳನ್ನು ನಿಯಂತ್ರಿಸಲು ಆದೇಶಿಸುತ್ತದೆ.

2.ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ದೇಶದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಸ್ನೇಹ ಸಂಬಂಧಗಳು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಬಂದಾಗ ಸೆಕ್ಷನ್ 69 A ಅಡಿಯಲ್ಲಿ ಸೈಟ್ ಗಳನ್ನು ನಿಷೇಧಿಸಲು‌ ನಿರ್ದೇಶನ ನೀಡುತ್ತದೆ.

ಆದರೆ ಸುದ್ದಿ ಮಾಧ್ಯಮಗಳು ಇವೆರಡೂ‌ ಸಂದರ್ಭಗಳಲ್ಲಿ ಒಳಗೊಳ್ಳುವುದಿಲ್ಲ.

ಐಟಿ ನಿಯಮಗಳು 2021 ಸ್ಪಷ್ಟವಾಗಿ ಪ್ರಕಾಶಕರು ಮತ್ತು ಮಧ್ಯವರ್ತಿಗಳನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ . ಈ ನಿಯಂತ್ರಣದ ವಿಧಾನವು ಎರಡು ಭಾಗಗಳಲ್ಲಿದೆ: ಒಂದು, ‘ಮಧ್ಯವರ್ತಿಗಳು’ ಅನುಸರಿಸಬೇಕಾದ ನಿಯಮಗಳು ಇನ್ನೊಂದು‌ ಪ್ರಕಾಶಕರು ಅನುಸರಿಸಬೇಕಾದ ನೀತಿ ಸಂಹಿತೆ.

ಹೊಸ ಐಟಿ ಕಾನೂನಿನ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ʼದಿ ವೈರ್ʼ ನೀಡಿದ ಕಾರಣಗಳೇನು?
‘ದಿ ವೈರ್ʼ ಸ್ಥಾಪಕ ಸಂಪಾದಕ ಸಿದ್ದಾರ್ಥ್ ವರದರಾಜನ್‌ಗೆ ಅಂತರಾಷ್ಟ್ರೀಯ ಗೌರವ

ಸುದ್ದಿ ವಿಷಯಗಳನ್ನು‌ ನಿಯಂತ್ರಿಸಲು ನಿಯಮ 9 ಮೂರು‌ ಹಂತದ ನೀತಿ ರೂಪಿಸಿದೆ.

1. ಪ್ರಕಾಶಕರಿಂದ ಸ್ವಯಂ‌ನಿಯಂತ್ರಣ

2. ಸಚಿವಾಲಯದ ಅನುಮೋದನೆಗೆ ಒಳಪಟ್ಟ ಸ್ವಯಂ‌ ನಿಯಂತ್ರಣ ಮಾಡುವ ಸಂಸ್ಥೆಗಳು

3. ಕೇಂದ್ರ ಸರ್ಕಾರದಿಂದ ನೇರವಾಗಿ ಅಧಿಕೃತ ಅಧಿಕಾರಿಯ ನೇಮಕ

ಮೇಲಿನ ಎಲ್ಲದರ ಜೊತೆಗೆ, ಯಾವ ಸ್ಪಷ್ಟೀಕರಣವನ್ನೂ‌ ನೀಡದೆ ಅವಕಾಶವನ್ನು ಮಧ್ಯಂತರ ಆದೇಶಗಳನ್ನು ರವಾನಿಸಲು ಐ&ಬಿ ಸಚಿವಾಲಯದ ಕಾರ್ಯದರ್ಶಿಗೆ‌ ಅಧಿಕಾರ ಕಾಯ್ದಿರಿಸಲಾಗಿದೆ (ನಿಯಮ 16)

ಮೂಲ ಕಾಯ್ದೆಯ ಸೆಕ್ಷನ್ 69-ಎ ಅಗತ್ಯವಿದ್ದಾಗ ಮಧ್ಯವರ್ತಿಗಳನ್ನು ನಿರ್ಬಂಧಿಸುವ ಅಧಿಕಾರವನ್ನು ಒದಗಿಸುತ್ತದೆ. ಆದರೆ 2021ರ ಐಟಿ ನಿಯಮಗಳು , ಮಧ್ಯವರ್ತಿ ಅಲ್ಲದ ಡಿಜಿಟಲ್ ನ್ಯೂಸ್ ಮಾಧ್ಯಮಕ್ಕೆ ನಿಯಂತ್ರಕ ವ್ಯವಸ್ಥೆಯನ್ನು ಹೇರಲು ಮುಂದಾಗಿದೆ. ಇದನ್ನು ಕೋರ್ಟಿನಲ್ಲಿ ಪ್ರಶ್ನಿಸಿರುವ ದಿ ವೈರ್ ಸಚಿವಾಲಯಕ್ಕೆ ಅನಿಯಮಿತ ಹಕ್ಕು ಇಲ್ಲ ಮತ್ತು ಅಧೀನ ಶಾಸನವು ಮೂಲ ಕಾಯ್ದೆಯ ವ್ಯಾಪ್ತಿಯನ್ನು ಮೀರಿ ಹೋಗಲು ಸಾಧ್ಯವಿಲ್ಲ. ಅಂತಹ ನಿಯಮ ಅಥವಾ ನಿಯಂತ್ರಣವು‌ ಮೂಲ ಕಾಯ್ದೆಯ ಮಿತಿಯನ್ನು ಮೀರಿದರೆ, ಅದು ಅಜಯ್ ಕುಮಾರ್ ಬ್ಯಾನರ್ಜಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ‌ ಪ್ರಕರಣದಲ್ಲಿ (1984) ಸುಪ್ರೀಂ ಕೋರ್ಟ್‌ನ 3 ನ್ಯಾಯಾಧೀಶರ ನ್ಯಾಯಪೀಠವು ನೀಡಿರುವ ಆದೇಶದ ಪ್ರಕಾರ ಮೂಲ‌ ಕಾಯ್ದೆಯನ್ನು ಅಧೀನ ಕಾಯ್ದೆ ಅಲ್ಟ್ರಾ ವೈರ್ಸ್ (ultra vires) ಮಾಡಿದಂತಾಗುತ್ತದೆ ಎಂದು ವಾದಿಸಿದೆ.

ಮೂಲ: ದಿ ವೈರ್

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com