ಟೂಲ್‌ಕಿಟ್‌ ಪ್ರಕರಣ: ʼದಂಗೆಗೆ ಪ್ರಚೋದನೆʼ ಆರೋಪಿಸಿ ಜಾಮೀನು ಅರ್ಜಿ ವಿರೋಧಿಸಿದ ದೆಹಲಿ ಪೊಲೀಸರು

ಜನವರಿ 26 ರಂದು ರಾಷ್ಟ ರಾಜಧಾನಿಯ ಕೆಂಪು ಕೋಟೆ ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆದ ಘಟನೆಗೂ ಈ ಹಿಂದೆ ಸಿಏಏ ಮತ್ತು ಎನ್ಆರ್ಸಿ ವಿರೋಧಿಸಿ ಈಶಾನ್ಯ ದೆಹಲಿ ಗಲಭೆಗಳ ನಡುವೆ ಸಾಮ್ಯತೆ ಇದೆ ಎಂದು ಪೋಲೀಸರು ಹೇಳಿದ್ದಾರೆ.
ಟೂಲ್‌ಕಿಟ್‌ ಪ್ರಕರಣ: ʼದಂಗೆಗೆ ಪ್ರಚೋದನೆʼ ಆರೋಪಿಸಿ ಜಾಮೀನು ಅರ್ಜಿ ವಿರೋಧಿಸಿದ ದೆಹಲಿ ಪೊಲೀಸರು

ಜನವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿದ ಆರೋಪದಲ್ಲಿ ಟ್ವಿಟರ್ ನಲ್ಲಿ ಟೂಲ್ ಕಿಟ್ ನ್ನು ಶೇರ್ ಮಾಡಲಾಗಿತ್ತು. ಇದೇ ಆರೋಪದಡಿಯಲ್ಲಿ ದೆಹಲಿ ಪೋಲೀಸರು ಬೆಂಗಳೂರಿನ ಯುವತಿ ದಿಶಾ ರವಿ ಅವರನ್ನು ಬಂಧಿಸಿದ್ದರು. ಇವರ ಜತೆಗೇ ಮುಂಬೈ ಮೂಲಕ ಸಾಮಾಜಿಕ ಹೋರಾಟಗಾರರಾದ ಶಂತನು ಮುಲುಕ್ ಮತ್ತು ನಿಕಿತಾ ಜೇಕಬ್ ಅವರನ್ನು ದೇಶ ದ್ರೋಹದ ಆರೋಪದಡಿಯಲ್ಲಿ ಬಂಧಿಸಲು ಪೋಲೀಸರು ಬಲೆ ಬೀಸಿದ್ದರು. ಆದರೆ ನ್ಯಾಯಾಲಯವು ಅವರಿಗೆ ಮದ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ದೆಹಲಿ ಪೋಲೀಸರು ಅವರ ವಿರುದ್ದ ವಿವಿಧ ಆರೋಪಗಳನ್ನು ಮಾಡಿ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್ ನಲ್ಲಿ ಭಾರತ ಸರ್ಕಾರದ ವಿರುದ್ಧ ಜನರನ್ನು ದಂಗೆ ಎಬ್ಬಿಸಲು ಟೂಲ್ಕಿಟ್ ಅನ್ನು ಬಳಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಮುಲುಕ್ ವಿರುದ್ದ ದೇಶದ್ರೋಹ, ವಿವಿಧ ಸಮುದಾಯಗಳಲ್ಲಿ ದ್ವೇಷವನ್ನು ಬೆಳೆಸುವುದು ಮತ್ತು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ. ಜಾಮೀನು ಕೋರಿರುವುದನ್ನು ವಿರೋಧಿಸಿ ದೆಹಲಿ ಪೊಲೀಸರು ಈ ಸಿದ್ಧ ಟೆಂಪ್ಲೆಟ್ ಗಳನ್ನು ಹಿಂಸಾಚಾರವನ್ನು ಉಂಟುಮಾಡುವ ಮತ್ತು ಸುಳ್ಳು ವದಂತಿಗಳನ್ನು ಹರಡಲು ಪ್ರಬಲ ಸಾಧನಗಳು ಎಂದು ವಿವರಿಸಿದ್ದಾರೆ.

ಜನವರಿ 26 ರಂದು ರಾಷ್ಟ ರಾಜಧಾನಿಯ ಕೆಂಪು ಕೋಟೆ ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆದ ಘಟನೆಗೂ ಈ ಹಿಂದೆ ಸಿಏಏ ಮತ್ತು ಎನ್ಆರ್ಸಿ ವಿರೋಧಿಸಿ ಈಶಾನ್ಯ ದೆಹಲಿ ಗಲಭೆಗಳ ನಡುವೆ ಸಾಮ್ಯತೆ ಇದೆ ಎಂದು ಪೋಲೀಸರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ವದಂತಿಯನ್ನು ಹರಡುವ ಮೂಲಕ ಕೋಮು ಮತ್ತು ಹಿಂಸಾಚಾರಕ್ಕೆ ಜನಸಮೂಹವನ್ನು ಪ್ರಚೋದಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಮುಲುಕ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರ ನ್ಯಾಯಾಲಯದಲ್ಲಿ ಪೊಲೀಸರು ಮಂಗಳವಾರ ತಮ್ಮ ಉತ್ತರವನ್ನು ಸಲ್ಲಿಸಿದ್ದಾರೆ. ನ್ಯಾಯಾಧೀಶರು ಮುಲುಕ್ ಅವರ ಅರ್ಜಿಯ ಮುಂದಿನ ವಿಚಾರಣೆಯವರೆಗೆ ಮಾರ್ಚ್ 15 ರ ವರೆಗೆ ಬಂಧನದಿಂದ ರಕ್ಷಣೆ ನೀಡಿದ್ದಾರೆ. ಬಾಂಬೆ ಹೈಕೋರ್ಟ್ನ ಫೆಬ್ರವರಿ 17 ರ ಆದೇಶವನ್ನು ಅನುಸರಿಸಿ ಈ ಪ್ರಕರಣದಲ್ಲಿ ಮುಲುಕ್ ಜಾಮೀನಿನಲ್ಲಿದ್ದಾರೆ. ಈ ಹಿಂದೆ ದೆಹಲಿ ಪೊಲೀಸರು ದಿಶಾ ರವಿ ಅವರ ಜಾಮೀನು ವಿರೋಧಿಸಿದ್ದರಲ್ಲದೆ , ಟೂಲ್ಕಿಟ್ "ಜಿನೊಸೈಡ್ ವಾಚ್.ಆರ್ಗ್" ವೆಬ್ಸೈಟ್ಗೆ ಲಿಂಕ್ ಹೊಂದಿದ್ದಾರೆ ಇದು ಭಾರತದ ವಿರುದ್ಧ ದ್ವೇಷ ಮತ್ತು ತಿರಸ್ಕಾರವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ದಿಶಾ ರವಿ ವಿರುದ್ಧದ ಈ ಸಾಕ್ಷ್ಯವನ್ನು ತಿರಸ್ಕರಿಸಿದ ನ್ಯಾಯಾಲಯವು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದ ವಿಷಯವನ್ನು ಸುಳ್ಳು ಅಥವಾ ಉತ್ಪ್ರೇಕ್ಷೆಯಾಗಿರಬಹುದು ಆದರೆ ದೇಶದ್ರೋಹವಲ್ಲ ಎಂದು ಹೇಳಿ ಜಾಮೀನು ನೀಡಿತ್ತು. ಮುಲುಕ್ ಅವರ ಮೇಲೆ ದೇಶದ ವಿರುದ್ದ ಪಿತೂರಿಯ ಆರೋಪ ಹೊರಿಸಿರುವ ಪೋಲೀಸರು ಮುಲುಕ್ ಅವರು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ನೊಂದಿಗೆ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವವನ್ನು ಕೇಂದ್ರೀಕರಿಸಿ ಸರಣಿ ಕ್ರಮಗಳನ್ನು ಆಯೋಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷಾಂತರ ಜನರು ಹಂಚಿಕೊಂಡ ಟೂಲ್ ಕಿಟ್ ಪೋಸ್ಟ್ ಮಾಡಲು ಸಿದ್ಧ ಟೆಂಪ್ಲೆಟ್ಗಳನ್ನು ಸೃಷ್ಟಿಸುವಲ್ಲಿ ಮುಲುಕ್ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಒಂದೇ ಕ್ಲಿಕ್ನ ಪ್ರೆಸ್ನಲ್ಲಿ ಟೆಂಪ್ಲೆಟ್ಗಳನ್ನು ವಿಶ್ವಾದ್ಯಂತ ಮಿಂಚಿನ ವೇಗದಲ್ಲಿ ಹರಡಬಹುದು, ಅದನ್ನು ತಡೆಯಲು ಯಾವುದೇ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಟೆಂಪ್ಲೆಟ್ಗಳಲ್ಲಿನ ವಿಷಯಗಳು ವಾಸ್ತವಿಕವಾಗಿ ತಪ್ಪಾಗಿವೆ ಸುಳ್ಳು ವದಂತಿಗಳಾಗಿವೆ ಎಂದು ಅಫಿಡವಿಟ್ ತಿಳಿಸಿದೆ. ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಲು ಈ ಸುಳ್ಳು ಸುದ್ದಿ ಟೆಂಪ್ಲೆಟ್ಗಳನ್ನು ಉದ್ವಿಗ್ನ ಸಮಯದಲ್ಲಿ ಪೋಸ್ಟ್ ಮಾಡಲು ಮತ್ತು ವದಂತಿಗಳನ್ನು ಹರಡಲು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನೇಕ ಸಾಮಾಜಿಕ ಮಾಧ್ಯಮ ಸಂಶೋಧನೆಗಳನ್ನು ಉಲ್ಲೇಖಿಸಿ, ಅಫಿಡವಿಟ್ ಸುಳ್ಳು ವದಂತಿಗಳ ಪರಿಣಾಮವನ್ನು ವಿವರಿಸಿದೆ. ಸುಳ್ಳು ವದಂತಿಯು ಎರಡು ಗಂಟೆಗಳಲ್ಲಿ ಎಲ್ಲೆಡೆ ಹರಡಿದರೆ ಅದನ್ನು ಸುಳ್ಳೆಂದು ಸಾಬೀತುಪಡಿಸಲು ಸುಮಾರು 14 ಗಂಟೆಗಳ ಸಮಯ ಬೇಕಾಗುತ್ತದೆ. ಈ ವಿಷಯವನ್ನು ಒತ್ತಿಹೇಳಿದ್ದಾರೆ. ಪೊಲೀಸರು ಈಶಾನ್ಯ ದೆಹಲಿ ಗಲಭೆಯ ನಂತರ, ಮಾರ್ಚ್ 1, 2020 ರಂದು ಪ್ರಕಟವಾದ ಟ್ವೀಟ್ಗಳ ಸರಣಿಯನ್ನು ಉಲ್ಲೇಖಿಸಿದ್ದಾರೆ, ಇದರಲ್ಲಿ ಹಿಂಸಾಚಾರ ಮತ್ತು ಸಾವುನೋವುಗಳ ಸುಳ್ಳು ಸುದ್ದಿಗಳು ಕೇವಲ ಒಂದು ಗಂಟೆಯೊಳಗೆ ಪಶ್ಚಿಮ, ವಾಯುವ್ಯ, ನೈರುತ್ಯ ಮತ್ತು ಆಗ್ನೇಯ ದೆಹಲಿಯ ದೊಡ್ಡ ಪ್ರದೇಶಗಳಲ್ಲಿ ಹರಡಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು ಎಂದು ತಿಳಿಸಿದ್ದಾರೆ. ಈ ವದಂತಿಯ ಪರಿಣಾಮದಿಂದಾಗಿ ಮಾರುಕಟ್ಟೆಗಳು ಕೂಡಲೇ ಮುಚ್ಚಲ್ಪಟ್ಟವು, ಜನರು ಭಯಭೀತರಾದರು, ಪ್ರಮುಖ ಕಾಲೋನಿ ಗೇಟ್ಗಳನ್ನು ಮುಚ್ಚಲಾಯಿತು ಮತ್ತು ಈ ವೇಳೆ ಪೊಲೀಸರು ಘಟನೆಯನ್ನು ಎದುರಿಸಲು ಲಾಠಿ ಮತ್ತು ಕೋಲುಗಳನ್ನು ಹಿಡಿದಿದ್ದರು ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಗಲಭೆ ಮತ್ತು ಹಿಂಸಾಚಾರದ ಬಗ್ಗೆ ಅನೇಕ ವದಂತಿಗಳು ಬಂದವು, ಇದು ಇನ್ನಷ್ಟು ಭೀತಿ, ಆತಂಕ ಮತ್ತು ಕೋಮು ಉದ್ವಿಗ್ನತೆಯನ್ನು ಉಂಟುಮಾಡಿತು ಎಂದು ಅಫಿಡವಿಟ್ನಲ್ಲಿ ಸೇರಿಸಲಾಗಿದೆ. ಸುಳ್ಳು ವದಂತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ತಡರಾತ್ರಿಯ ಹೊತ್ತಿಗೆ ಸಾಮಾನ್ಯ ಸ್ಥಿತಿಗೆ ಮರಳಿಸಲು ಪೊಲೀಸರ ಶ್ರಮದಿಂದ ಸಾಧ್ಯವಾಯಿತು ಎಂದು ಪೊಲೀಸರು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಟೂಲ್ ಕಿಟ್ ಪ್ರಕರಣ ಸಂಬಂಧ ಒಂದು ಸರಳವಾದ ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರತ್ಯೇಕವಾಗಿ ನೋಡಿದಾಗ ನಿರಪಾಯಕಾರಿ ಎಂದು ತೋರುತ್ತದೆ, ಆದರೆ ಅದೇ ಸುಳ್ಳು ವದಂತಿಯನ್ನು ಪುನರಾವರ್ತಿಸಿ ಬಲಪಡಿಸಿದಾಗ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆ ಮಾಡಿದಾಗ ಅದು ದೊಡ್ಡ ಪ್ರಮಾಣದ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಬೆಂಕಿಹೊತ್ತಿಸಲು ಬಾಂಬ್ ನಂತೆ ಬಳಕೆಯಾಗುತ್ತದೆ ಎಂದು ಪೊಲೀಸರು ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದ್ದು ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com