ಅಧಿಕಾರ ಉಳಿಸಲಿರುವ ಮಮತಾ, ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಪಡೆದಿರುವ ಬಿಜೆಪಿ ಟಿಎಂಸಿಗೆ ಪ್ರಧಾನ ಎದುರಾಳಿ ಆಗಲಿದೆ ಎಂದು ಊಹಿಸಲಾಗಿದೆ.
ಅಧಿಕಾರ ಉಳಿಸಲಿರುವ ಮಮತಾ, ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ, ಆದರೆ ಸ್ವಲ್ಪ ಕಡಿಮೆ ಬಹುಮತ ಪಡೆಯಬಹುದೆಂದು ಟೈಮ್ಸ್ ನೌ-ಸಿ-ವೋಟರ್ ನಡೆಸಿದ ಸಮೀಕ್ಷೆ ತಿಳಿಸಿದೆ.

ಅಂದಾಜಿನ ಪ್ರಕಾರ, ರಾಜ್ಯದ ಆಡಳಿತರೂಢ ಪಕ್ಷವು (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ ಸುಮಾರು 146 ರಿಂದ 162 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಇದು 2016 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳಿಂದ ಕಡಿಮೆಯಾಗಿದೆ. 2016ರ ಚುನಾವಣೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಪಡೆದುಕೊಂಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಾರ್ಚ್ 29 ರಿಂದ ಏಪ್ರಿಲ್ 29 ರವರೆಗೆ ರಾಜ್ಯದ 294 ವಿಧಾನಸಭಾ ಸ್ಥಾನಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಅಧಿಕಾರ ಉಳಿಸಲಿರುವ ಮಮತಾ, ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ
ಪಶ್ಚಿಮ ಬಂಗಾಳ; 200 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು

ದಾಖಲೆ ನಿರ್ಮಿಸುವ ನಿರೀಕ್ಷೆಯಲ್ಲಿ ಬಿಜೆಪಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಪಡೆದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಟಿಎಂಸಿಗೆ ಪ್ರಧಾನ ಎದುರಾಳಿ ಆಗಲಿದೆ ಎಂದು ಊಹಿಸಲಾಗಿದೆ. ಬಿಜೆಪಿ ಪಕ್ಷವು ರಾಜ್ಯದಲ್ಲಿ ಸ್ಥಾನಗಳ ಸಂಖ್ಯೆ ಮತ್ತು ಮತಗಳ ಶೇಕಡಾವಾರು ಸಂಖ್ಯೆಯಲ್ಲಿ ಗಣನೀಯ ಬೆಳೆಯುವ ನಿರೀಕ್ಷೆಯಿದೆ. ಸಮೀಕ್ಷೆಯು ಬಿಜೆಪಿಗೆ 99 ರಿಂದ 115 ಸ್ಥಾನ ಗೆಲ್ಲುವ ಸಾಧ್ಯತೆ ಇರುವುದಾಗಿ ಹೇಳಿದೆ.

ಈ ಸಮೀಕ್ಷೆ ನಿಜವಾದರೆ, ರಾಜ್ಯದ ವಿರೋಧ ಪಕ್ಷಕ್ಕೆ ನೇರ ಹೊಡೆತ ಎಂದೇ ಹೇಳಬಹುದು. ದಶಕಗಳಿಂದ ರಾಜ್ಯದಲ್ಲಿ ಸೀಮಿತ ಉಪಸ್ಥಿತಿಯನ್ನು ಹೊಂದಿದ್ದ ಬಿಜೆಪಿ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಪ್ರಬಲವಾಗಿ ಪ್ರತಿಷ್ಟಾಪಿಸಿದೆ. ರಾಜ್ಯದ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಬಿಜೆಪಿ ಗೆದ್ದ ನಂತರ ಆಡಳಿತಾರೂಢ ಟಿಎಂಸಿಯ ಪ್ರಮುಖ ಎದುರಾಳಿ ಆಗಿ ಹೊರಹೊಮ್ಮಿತ್ತು.

ಅಧಿಕಾರ ಉಳಿಸಲಿರುವ ಮಮತಾ, ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ
ಚುನಾವಣೆ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ: ಬಿಜೆಪಿಯೆಡೆಗೆ ಇನ್ನೂ ನಿಲ್ಲದ ಟಿಎಂಸಿ ನಾಯಕರ ವಲಸೆ

ಸಣ್ಣ ರಾಜಕೀಯ ಶಕ್ತಿಯಾಗಿ ಕಾಂಗ್ರೆಸ್ ನೇತೃತ್ವದ ಮೈತ್ರಿ

ಕಾಂಗ್ರೆಸ್ ನೇತೃತ್ವದ ಮೈತ್ರಿ ರಾಜ್ಯದಲ್ಲಿ ಸಣ್ಣ ರಾಜಕೀಯ ಶಕ್ತಿಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌ ಮೈತ್ರಿಯು 29 ರಿಂದ 37 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ಮೈತ್ರಿಯು 2016 ರಲ್ಲಿ 43 ಸ್ಥಾನಗಳನ್ನು ಪಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಮತ್ತು ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ 294 ಸದಸ್ಯರ ವಿಧಾನಸಭೆಯಲ್ಲಿ 92 ಸ್ಥಾನಗಳಿಗೆ ಸ್ಪರ್ಧಿಸಲು ಸಜ್ಜಾಗಿದೆ.

ಮ್ಯಾಜಿಕ್‌ ನಂಬರ್‌ 148

ಮತ ಹಂಚಿಕೆಯ ವಿಷಯದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ ಎಂದು ಅಭಿಪ್ರಾಯ ಸಂಗ್ರಹದಲ್ಲಿ ಅಂದಾಜಿಸಲಾಗಿದೆ. ಆಡಳಿತ ಪಕ್ಷವು ಶೇಕಡಾ 42.2 ರಷ್ಟು ಮತಗಳನ್ನು ಪಡೆಯುತ್ತದೆ, 2016 ಕ್ಕೆ ಹೋಲಿಸಿದರೆ ಕೇವಲ ಎರಡು ಶೇಕಡಾ ಕುಸಿತ, ಬಿಜೆಪಿಯು ಶೇಕಡಾ 37.5 ರಷ್ಟು ಪಾಲನ್ನು ಪಡೆಯಲಿದೆ, ಎಡ-ಕಾಂಗ್ರೆಸ್ ಮೈತ್ರಿಕೂಟವು ಶೇಕಡಾ 14.8 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ.

ಅಧಿಕಾರ ಉಳಿಸಲಿರುವ ಮಮತಾ, ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ
BJP ಸವಾಲು ಸ್ವೀಕರಿಸಿದ ಮಮತಾ ಬ್ಯಾನರ್ಜಿ: ನಂದಿಗ್ರಾಮದಿಂದ ಸ್ಪರ್ಧೆಗೆ ಸಿದ್ಧತೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com