ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌

ಈ ನಿಯಮಗಳು ಸಾಮಾನ್ಯ ನಿಯಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ವಾಕ್‌ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿವೆ.
ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌

ಡಿಜಿಟಲ್‌ ಮಾಧ್ಯಮ, ಒಟಿಟಿ ಹಾಗೂ ಅಂತರ್ಜಾಲ ತಾಣಗಳಿಗೆ ನಿರ್ಬಂಧ ಹೇರುವ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳನ್ನು ಪ್ರಶ್ನಿಸಿ ʼThe Wireʼ ಸುದ್ದಿ ಜಾಲತಾಣ ಹಾಗೂ ಇತರರು ದೆಹಲಿ ಹೈಕೊರ್ಟ್‌ ಮೊರೆ ಹೋಗಿದ್ದಾರೆ.

ದೆಹಲಿಯ ಮುಖ್ಯನ್ಯಾಯಾಧೀಶರಾದ ಜಸ್ಟೀಸ್‌ ಡಿ ಎನ್‌ ಪಟೇಲ್‌ ಅವರು, ಬುಧವಾರದಂದು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಿದ್ದಾರೆ. Foundation for Independent Journalist ಪರವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.

ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌
ಸ್ವತಂತ್ರ ಮಾಧ್ಯಮಗಳ ನಿಯಂತ್ರಣಕ್ಕೆ ಹೊರಟ ಕೇಂದ್ರ ಸರ್ಕಾರ: ಸೋರಿಕೆಯಾದ ವರದಿಯಲ್ಲಿವೆ ಗಂಭಿರ ವಿಚಾರಗಳು!

ಫೆಬ್ರುವರಿ 25ರಂದು ಜಾರಿಗೆ ತರಲಾಗಿದ್ದ ಈ ನಿಯಾಮವಳಿಗಳನ್ನು ಹಲವು ಪತ್ರಕರ್ತರು, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದರು. ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡುವ ಪ್ರಯತ್ನ ಎಂದು ಹೇಳಿದ್ದರು. ಈ ನಿಯಮಗಳನ್ನು ವಾಪಾಸ್‌ ಪಡೆಯುವಂತೆ Editors Guild of India ಒತ್ತಡವನ್ನೂ ಹೇರಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಾಗಿ ಮಾತನಾಡಿರುವ ದ ವೈರ್‌ನ ಸಿದ್ದಾರ್ಥ ವರದರಾಜನ್‌ ಅವರು, ಈ ನಿಯಮಗಳು ಸಾಮಾನ್ಯ ನಿಯಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ವಾಕ್‌ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿವೆ. ಈಗಾಗಲೇ ಡಿಜಿಟಲ್‌ ಮಾಧ್ಯಮಗಳ ಮೇಲೆ ಹಲವು ಪ್ರಕರಣಗಳಿವೆ. ಕೆಲವು ಪ್ರಕರಣಗಳ ವಿರುದ್ದ ಬರೆಯದಂತೆ ನಿರ್ಬಂಧ ಹೇರಲಾಗಿದೆ. ಈಗಿರುವಂತಹ ನಿಯಮಗಳನ್ನೆ ಬಳಸಿ ಡಿಜಿಟಲ್‌ ಮಾಧ್ಯಮಗಳನ್ನು ನಿಯಂತ್ರಿಸಬಹುದಾಗಿದೆ.

ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌
ಮಾಹಿತಿ ತಂತ್ರಜ್ಞಾನದ ಹೊಸ ನಿಯಮ‌ ನಮ್ಮ ಡಿಜಿಟಲ್ ಹಕ್ಕುಗಳನ್ನು ಕಿತ್ತುಕೊಳ್ಳಲಿದೆಯೇ?

“ವೆಬ್‌ಸೈಟ್‌ಗಳಲ್ಲಿ ಸುದ್ದಿಗಳು ಪ್ರಕಟ ಮಾಡಬಹುದೇ ಇಲ್ಲವೇ? ಸುದ್ದಿ ಜಾಲತಾಣಗಳು ಜನರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿವೆಯೇ ಇಲ್ಲವೇ? ಎಂಬುದನ್ನು ನಿರ್ಧರಿಸಲು ಕೇಂದ್ರದ ಅಧಿಕಾರಿಗಳು ತೀರ್ಪು ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ,” ಎಂದು ಸಿದ್ದಾರ್ಥ್‌ ಹೇಳಿದ್ದಾರೆ.

ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌
ಡಿಜಿಟಲ್ ಹಕ್ಕುಗಳನ್ನು ರಕ್ಷಿಸಲು ವಿಫಲವಾದ ಜಾಗತಿಕ ದೂರಸಂಪರ್ಕ ಮತ್ತು ಟೆಕ್ ಕಂಪೆನಿಗಳು

ಈ ಟೀಕೆಗಳನ್ನು ಅಲ್ಲಗೆಳೆದಿರುವ ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಅವರು, ನಾಗರಿಕರ ಹಿತ ರಕ್ಷಣೆಗಾಗಿ ಈ ನಿಯಮಗಳ ಅಗತ್ಯವಿದೆ ಎಂದುದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com