ಬಿಸಿಲ ಬೇಗೆಯಲಿ ಬೆಂದ ರೈತ ಮಹಿಳೆಯರು ರೈತ ಹೋರಾಟದ ಪ್ರಮುಖ ಬಿಂದು

ದೇಶದ ಕೃಷಿಕ್ಷೇತ್ರಕ್ಕೆ ಮಹಿಳೆಯರು ಗಮನಾರ್ಹ ಕೊಡುಗೆ ನೀಡಿದ್ದು, ಪುರುಷನಂತೆ ಬಿಸಿಲ ಬೇಗೆಯಲಿ ಕೃಷಿಭೂಮಿಯಲ್ಲಿ ಬೆವರು ಹರಿಸಿ ಪುರುಷನಷ್ಟೆ ಶ್ರಮವಹಿಸಿ ದುಡಿಯುವುದರಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ. ಮೌಢ್ಯತೆಯಿಂದ ಹೊರಬಂದು ದಬ್ಬಾಳಿಕೆಯ ವಿರುದ್ಧ ಧ್ವನಿಯೆತ್ತಿದ್ದಾಳೆ. ಇದಕ್ಕೆ ಉದಾಹರಣೆ ಮನೆ ಮಠಗಳನ್ನು ತೊರೆದು ದೆಹಲಿಯ ಗಡಿಭಾಗಗಳಲ್ಲಿ ಪುರುಷ ರೈತರೊಂದಿಗೆ ಮಹಿಳಾ ರೈತರು ನಿರಂತರ ಹೋರಾಟದಲ್ಲಿ ಭಾಗಿಯಾಗುತ್ತಿರುವುದು.
ಬಿಸಿಲ ಬೇಗೆಯಲಿ ಬೆಂದ ರೈತ ಮಹಿಳೆಯರು ರೈತ ಹೋರಾಟದ ಪ್ರಮುಖ ಬಿಂದು

ಸಮಾಜದಲ್ಲಿ ನಡೆಯುವ ಹೋರಾಟದಲ್ಲಿ ಮಹಿಳೆಯರ ಧ್ವನಿ ಕೂಡ ಪ್ರಮುಖವಾಗಿದೆ. ಶೋಷಣೆಯ ವಿರುದ್ಧ ಎಚ್ಚೆತ್ತು. ಪುರುಷನಿಗೆ ಸರಿಸಮಾನಳಾಗಿ ಅನ್ಯಾಯ,ಸಮಸ್ಯೆಗಳ ವಿರುದ್ಧ ಮಹಿಳೆಯರು ಮುಖ್ಯವಾಹಿನಿಗೆ ಬಂದು ಹೋರಾಡಿರುವುದಕ್ಕೆ ಸಾಕಷ್ಟು ಊದಾಹರಣೆಗಳಿವೆ. ಇದೀಗ ನೂರು ದಿನಗಳಿಗೂ ಹೆಚ್ಚು ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ರೈತ ಮಹಿಳೆಯರದ್ದು ಪ್ರಮುಖ ಪಾತ್ರವಿದೆ.

ದೇಶದ ಕೃಷಿಕ್ಷೇತ್ರಕ್ಕೆ ಮಹಿಳೆಯರು ಗಮನಾರ್ಹ ಕೊಡುಗೆ ನೀಡಿದ್ದು, ಪುರುಷನಂತೆ ಬಿಸಿಲ ಬೇಗೆಯಲಿ ಕೃಷಿಭೂಮಿಯಲ್ಲಿ ಬೆವರು ಹರಿಸಿ ಪುರುಷನಷ್ಟೆ ಶ್ರಮವಹಿಸಿ ದುಡಿಯುವುದರಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ. ಮೌಢ್ಯತೆಯಿಂದ ಹೊರಬಂದು ನಾಲ್ಕು ಗೋಡೆಗೆ ಸೀಮಿತವಾದ ಮಹಿಳೆ ದಬ್ಬಾಳಿಕೆಯನ್ನು ಮಟ್ಟಿನಿಂತ್ತಿದ್ದಾಳೆ. ಇದಕ್ಕೆ ಉದಾಹರಣೆ ಮನೆ ಮಠಗಳನ್ನು ತೊರೆದು ದೆಹಲಿಯ ಗಡಿಭಾಗಗಳಲ್ಲಿ ಪುರುಷ ರೈತರೊಂದಿಗೆ ಮಹಿಳಾ ರೈತರು ನಿರಂತರ ಹೋರಾಟದಲ್ಲಿ ಭಾಗಿಯಾಗುತ್ತಿರುವುದು.

ಮಳೆಗಾಳಿ ಚಳಿಯೆನ್ನದೆ ಸ್ವಂತ ಸ್ಥಳವನ್ನು ತೊರೆದು, ಪರುಷನೊಂದಿಗೆ ರೈತ ಮಹಿಳೆಯೂ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ ವಿಚಾರಗಳನ್ನು ಅರಿತು ಮಾಧ್ಯಮಗಳ ಮುಂದೆ ಪ್ರಬುದ್ಧವಾದ ಹೇಳಿಕೆ ನೀಡಿರುವುದು ಆಧುನಿಕ ಸಮಾಜದಲ್ಲಿ ಮಹಿಳಾ ಹೋರಾಟದ ಧ್ವನಿಗೆ ಮತ್ತಷ್ಟು ಬಲಸಿಕ್ಕಂತಾಗಿದೆ.

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾದಿನ ಅಂಗವಾಗಿ ಭಾರತೀಯ ಕಿಸಾನ್ ಯೂನಿಯನ್ ರೈತ ಪ್ರತಿಭಟನೆಯಲ್ಲಿ ಮಹಿಳಾ ರೈತರ ಕಾರ್ಯ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವ ಸಲುವಾಗಿ ದೆಹಲಿಯ ಗಡಿಭಾಗಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ, ಆಧುನಿಕ ಸಮಾಜದಲ್ಲಿ ಹೆಚ್ಚು ಮಹಿಳೆಯರನ್ನು ಒಂದುಗೂಡಿಸಿ ಮುಕ್ತವಾಗಿ ಅಭಿಪ್ರಾಯ ಹಂಚಿಕೆಗೆ ಅವಕಾಶ ಮಾಡಿಕೊಟ್ಟ ಕೀರ್ತಿ ಈ ರೈತ ಚಳವಳಿಗೆ ಸಲ್ಲುತ್ತೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶ್ವದಾದ್ಯಂತ ಸದ್ದು ಮಾಡಿತು ರೈತ ಚಳವಳಿಯಲ್ಲಿ ಮಹಿಳೆಯ ಧ್ವನಿ

ಕೃಷಿಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ವಿಶ್ವದ ಪ್ರಮುಖ ಮಹಿಳಾ ಕಾರ್ಯಕರ್ತರನ್ನು ಗಮನಸೆಳೆದಿದೆ. ಉದಾಹರಣೆಗೆ ಪೋಪ್‌ ಗಾಯಕಿ ರಿಹನ್ನಾ, ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್‌, ಕಾನೂನು ಕಾರ್ಯಕರ್ತೆ ಮೀನಾ ಹ್ಯಾರಿಸ್‌, ಹಾಲಿವುಡ್‌ ನಟಿ ಸುಸಾನ ಸರಂಡನ್‌, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಮಿಚೆಲ್‌ ಬ್ಯಾಚೆಲೆಟ್‌ ಹಾಗು ಯುಕೆ ಯ ಗ್ರೀನ್‌ ಪಾರ್ಟಿ ಪಾರ್ಲಿಮೆಂಟ್‌ ಸದಸ್ಯೆ ಕ್ಯಾರೋಲಿನ್‌ ಲ್ಯೂಕಾಸ್‌ ಸೇರಿದಂತೆ ರಾಷ್ಟ್ರೀಯ ಹಾಗು ಜಾಗತೀಕ ಮಟ್ಟದಲ್ಲಿ ಮಹಿಳಾ ಸಂಘಸಂಸ್ಥೆಗಳು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿವೆ.

ಬಿಸಿಲ ಬೇಗೆಯಲಿ ಬೆಂದ ರೈತ ಮಹಿಳೆಯರು ರೈತ ಹೋರಾಟದ ಪ್ರಮುಖ ಬಿಂದು
ರಿಹಾನಾ, ರೈತ ಪ್ರತಿಭಟನೆ ಮತ್ತು ಮಹಿಳಾ ಧ್ವನಿಗಳು

ಸಮಾಜದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ನಿರಂತರ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರು ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡುವುದರ ಜೊತೆಗೆ ಜಾಗತೀಕ ಮಟ್ಟದಲ್ಲಿ ವಿಶೇಷ ಗಮನಸೆಳೆದಿರುವ ರೈತರ ಆಂದೋಲನ ಸೇರಿದಂತೆ ಇತರೆ ಚಳವಳಿಯಲ್ಲಿ ಸಮಾಜದ ಕಾಳಜಿಯನ್ನು ಮುಂದಿಟ್ಟುಕೊಂಡು ಅನ್ಯಾಯದ ವಿರುದ್ಧ ಧ್ವನಿಯೆತ್ತಿರುವುದು ಗಮನಾರ್ಹವಾಗಿದೆ.

ಚಳವಳಿಯಲ್ಲಿ ಗಮನ ಸೆಳೆದ ದೇಶದ ಇಬ್ಬರು ಮಹಿಳಾ ಕಾರ್ಯಕರ್ತೆಯರು

ರೈತ ಹೋರಾಟಕ್ಕೆ ನೋದೀಪ್‌ ಕೌರ್‌ ಮತ್ತು ದಿಶಾ ರವಿ ಅವರ ಬೆಂಬಲ ನಿರ್ದಿಷ್ಟ ಮಹತ್ವವನ್ನು ಪಡೆದುಕೊಂಡಿದೆ. ನೋದೀಪ್‌ ಕೌರ್‌ ಕೈಗಾರಿಕಾ ವಲಯದಲ್ಲಿ ಮಹಿಳಾ ಮತ್ತು ಪುರುಷ ಕಾರ್ಮಿಕರ ಶೋಷಣೆಯ ವಿರುದ್ಧದ ಹೋರಾಟವನ್ನು ಸಂಘಟಿಸಿರುವುದರ ಜೊತೆಗೆ ದೆಹಲಿಯ ಟಿಕ್ರಿ,ಗಾಝೀಪುರ, ಗಡಿಗಳಲ್ಲಿ ರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾ ಬಂದಿದ್ದರು. ಮತ್ತೊಂದೆಡೆ ರೈತ ಚಳವಳಿಯನ್ನು ಬೆಂಬಲಿಸುವಲ್ಲಿ ಹೆಚ್ಚು ಸುದ್ದಿಯಾಗಿದ್ದು, ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ, ಈ ಮಹಿಳಾ ಧ್ವನಿಗಳು ಸರ್ಕಾರವನ್ನು ನಡುಗಿಸುವಲ್ಲಿ ಯಶಸ್ವಿಯಾಗಿದ್ದವು, ಆಳುವ ವರ್ಗ ಧ್ವನಿಯನ್ನು ಅಡಗಿಸಲು ಕಾನೂನು ಸುವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಹೋರಾಟಗಾರ್ತಿಯರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಜೈಲುಪಾಲು ಮಾಡಿದ್ದರು. ಈ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಮಹತ್ವ ಪಡೆದುಕೊಂಡಿದ್ದೆ.

ಬಿಸಿಲ ಬೇಗೆಯಲಿ ಬೆಂದ ರೈತ ಮಹಿಳೆಯರು ರೈತ ಹೋರಾಟದ ಪ್ರಮುಖ ಬಿಂದು
ದಿಶಾ ರವಿ ಬಂಧನ ಖಂಡಿಸಿದ ಕನ್ನಡಿಗರು, ಇದು ಪ್ರಜಾಪ್ರಭುತ್ವದ ಮೇಲಾದ ದಾಳಿ ಎಂದ ದೆಹಲಿ ಸಿಎಂ ಕೇಜ್ರಿವಾಲ್

ಇಲ್ಲಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನೋದೀಪ್‌ ಕೌರ್‌ ಸಂಘಟಿಸಿದ ಕಾರ್ಮಿಕ ಹಾಗು ರೈತರ ನಡುವಿನ ಮೈತ್ರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಇದಕ್ಕೆ ಬಂಧನವೆಂಬ ಅಸ್ತ್ರವನ್ನು ಬಳಸಿದರು ಕೂಡ ಮತ್ತೆ ಜಾಗತೀಕ ಮಟ್ಟದಲ್ಲಿ ಮಹಿಳಾ ಧ್ವನಿಗಳು ಸರ್ಕಾರದ ವಿರುದ್ಧ ತಿರುಗಿನಿಂತವು ಇದಕ್ಕೆ ಉದಾಹರಣೆ ನೋದೀಪ್‌ ಕೌರ್‌ ಬಂಧನವನ್ನು ಖಂಡಿಸಿ ಅಮೇರಿಕಾದ ಮೀನಾ ಹ್ಯಾರಿಸ್‌ ಹೇಳಿಕೆ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಬೆಂಬಲವನ್ನು ಹೆಚ್ಚಿಸಿತ್ತು.

ದಿಶಾ ರವಿ ಮತ್ತು ನೋದೀಪ್‌ಕೌರ್‌ ಅವರ ಹೋರಾಟವು ದೇಶದಲ್ಲಿ ಹೊಸ ತಲೆಮಾರಿನ ಮಹಿಳಾ ಕಾರ್ಯಕರ್ತರ ಹೊರಹೊಮ್ಮುವಿಕೆಯನ್ನು ತೋರಿಸುತ್ತದೆ. ಮತ್ತು ಕಿರಿಯ ವಯಸ್ಸಿನ ಜಾಗತಿಕ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್‌ ಅವರ ಕ್ರಿಯಾಶೀಲತೆ ಹೆಚ್ಚು ಮಹಿಳಾ ಹೋರಾಟಗಾರರನ್ನು ಸೃಷ್ಟಿಸುವಲ್ಲಿಯೂ ಸಹಕಾರಿಯಾಗಿದೆ.

ಬಿಸಿಲ ಬೇಗೆಯಲಿ ಬೆಂದ ರೈತ ಮಹಿಳೆಯರು ರೈತ ಹೋರಾಟದ ಪ್ರಮುಖ ಬಿಂದು
ರೈತ ಹೋರಾಟಕ್ಕೆ ಬೆಂಬಲ ನೀಡುವುದೇ ದೇಶದ್ರೋಹವಾದರೆ, ನಾನು ಜೈಲಿನಲ್ಲಿರುತ್ತೇನೆ; ದಿಶಾ ರವಿ

ಹಿಂದಿನಿಂದಲೂ ಕೃಷಿ ಸಮುದಾಯದಲ್ಲಿ ಮಹಿಳೆಯರ ಪಾತ್ರ ದೊಡ್ಡ ಮಟ್ಟದಲ್ಲಿದ್ದು, ಪುರುಷನಿಗಿಂತ ಹೆಚ್ಚು ಕೆಲಸ ಮಾಡಿದ್ದರು, ಅವರಿಗೆ ಸಮಾಜದಲ್ಲಿ ಮಾನ್ಯತೆ ಸಿಗುವುದು ಕಡಿಮೆಯಾಗಿತ್ತು. ಆಧುನಿಕ ಸಮಾಜದಲ್ಲಿ ಆ ಪದ್ಧತಿ ಬದಲಾಗಿದೆ. ಹೋರಾಟಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ರೈತ ಚಳವಳಿಯಲ್ಲಿ ಪುರುಷ ರೈತರು ಮಹಿಳಾ ದಿನದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಮಹಿಳೆಯರಿಗಾಗಿಯೇ ವೇದಿಕೆ ಮೀಸಲಿಟಿದ್ದು ಉತ್ತಮ ಬೆಳವಣೆಗೆಯಾಗಿದೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಪ್ರಜಾಪ್ರಭುತ್ವದ ತತ್ವವನ್ನು ಬಲಗೊಳಿಸಿದ ರೈತ ಹೋರಾಟ ರೈತ ಮಹಿಳೆಯ ಶ್ರಮವನ್ನು ಗುರುತಿಸುವುದರ ಜೊತೆಗೆ ಮಾನವೀಯತೆ, ಸಮಾನತೆಯ ಮರೆತ ಸಮಾಜಕ್ಕೆ ಪ್ರಜಾಪ್ರಭುತ್ವದ ತತ್ವಗಳನ್ನು ಪರಿಚಯಿಸುವುದರಲ್ಲಿ ಆಧುನಿಕ ಭಾರತದ ರೈತ ಚಳವಳಿ ಪ್ರಮುಖ ಪಾತ್ರವಹಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com