ಮಹಾರಾಷ್ಟ್ರದಲ್ಲಿ ದಿನೇ ದಿನೇ ಕರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ ಠಾಣೆ ನಗರದ ವ್ಯಾಪ್ತಿಯ 11 ಹಾಸ್ಸ್ಪಾಟ್ಗಳಲ್ಲಿ ಮಾರ್ಚ್ 13 ರಿಂದ 31 ರವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮುಂಬೈನಲ್ಲಿ ಕಳೆದೆರೆಡು ತಿಂಗಳಿಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಶೇಕಡಾ 89 ರಷ್ಟು ಹೆಚ್ಚಾಗಿದೆ.
ಮುಂಬೈನ ಅಂದೇರಿ, ಚೆಂಬೂರ್, ಗೋವಂಡಿ, ಸೇರಿದಂತೆ 8 ವಾರ್ಡ್ಗಳಲ್ಲಿ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಠಾಣಾ ಮುನ್ಸಿಪಲ್ ಕಮಿಷನರ್ ವಿಪಿನ್ ಶರ್ಮಾ ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ಹಿಂದೆ ಘೋಷಿಸಲಾದ ರಾಷ್ಟ್ರವ್ಯಾಪಿ ಲಾಕ್ಡೌನ್ ಸಮಯದಲ್ಲಿ ಜಾರಿಯಲ್ಲಿರುವ ಎಲ್ಲಾ ನಿರ್ಬಂಧಗಳು ಈ ಸಮಯದಲ್ಲಿ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಠಾಣೆ ಜಿಲ್ಲೆಯಲ್ಲಿ ಮಾರ್ಚ್ 8 ರಂದು ಒಟ್ಟು 2,69,845, ಪ್ರಕರಣಗಳು ದಾಖಲಾಗಿದ್ದು, 6,302 ರಷ್ಟು ಸಾವು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ 10 ಸಾವಿರಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಮಾರ್ಚ್ 8 ರ ವೇಳೆಗೆ 8,744 ಹೊಸ ಸೋಂಕು ಬೆಳಕಿಗೆ ಬಂದಿದೆ. ಒಟ್ಟು ಪ್ರಕರಣಗಳು 22,28,471 ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 52,500 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.