ಭಾರತದಲ್ಲಿ ಈಗ “ ಭಾಗಃಶ ಮುಕ್ತತೆ” ಮಾತ್ರ ಇದೆ ಅಂದ 'ಫ್ರೀಡಂ ಹೌಸ್‌' ವರದಿ ದುರುದ್ದೇಶಪೂರಿತ : ಕೇಂದ್ರ

"2014 ರಲ್ಲಿ ಮೋದಿಯವರು ಅಧಿಕಾರ ವಹಿಸಿಕೊಂಡಾಗಿನಿಂದ ಭಾರತದಲ್ಲಿನ ಬದಲಾವಣೆಗಳು ಮತ್ತಷ್ಟು ಹೆಚ್ಚುತ್ತಿದ್ದು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರವಾದದ ನಡುವಿನ ಅಂತರ‌‌ ಕಡಿಮೆಯಾಗುತ್ತಿದೆ. ಸರ್ವಾಧಿಕಾರಿಗಳು ಸಾಮಾನ್ಯವಾಗಿ ಅಧಿಕಾರವನ್ನು ಬಲಪಡಿಸಲು ಅಥವಾ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಹೊಸ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ" ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಈಗ “ ಭಾಗಃಶ ಮುಕ್ತತೆ” ಮಾತ್ರ ಇದೆ ಅಂದ 'ಫ್ರೀಡಂ ಹೌಸ್‌' ವರದಿ ದುರುದ್ದೇಶಪೂರಿತ : ಕೇಂದ್ರ

ಮುಕ್ತತೆಗೆ ಹೆಸರಾಗಿದ್ದ ದೇಶವಾದ ಭಾರತದದಲ್ಲಿ ಈಗ "ಭಾಗಶಃ ಮುಕ್ತತೆ" ಮಾತ್ರ ಇದೆ ಎಂದು ಹೇಳುವ ಫ್ರೀಡಂ ಹೌಸ್ ವರದಿಯು 'ದಾರಿತಪ್ಪಿಸುವ ಮತ್ತು ತಪ್ಪಾದ' ವರದಿಯಾಗಿದೆ ಎಂದು ಸರ್ಕಾರವು ಯುಎಸ್ ಮೂಲದ ಥಿಂಕ್ ಟ್ಯಾಂಕ್‌ನ ಮೌಲ್ಯಮಾಪನಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ವ್ಯವಸ್ಥೆಯೇ ದೋಷಪೂರಿತವಾಗಿದೆ ಎಂಬುದಕ್ಕೆ "ಭಾರತದ ಅನೇಕ ರಾಜ್ಯಗಳು ರಾಷ್ಟ್ರಮಟ್ಟದ ಪಕ್ಷಗಳನ್ನು ಹೊರತುಪಡಿಸಿ, ಸ್ವತಂತ್ರ, ನ್ಯಾಯಸಮ್ಮತ ಮತ್ತು ಸ್ವತಂತ್ರ ಚುನಾವಣಾ ಸಂಸ್ಥೆಯಿಂದ ನಡೆಸಲ್ಪಡುವ ಚುನಾವಣಾ ಪ್ರಕ್ರಿಯೆಯ ಮೂಲಕ ಆಡಳಿತ ನಡೆಸುತ್ತೇವೆ" ಎಂಬ ಅಂಶವು ಸಾಕ್ಷಿಯಾಗಿದೆ ಎಂದಿರುವ ಸರ್ಕಾರವು ವರದಿಗೆ ತೀವ್ರ ಆಕ್ಷೇಪ ಸಲ್ಲಿಸಿದೆ.

ದೆಹಲಿ ಗಲಭೆಯಲ್ಲಿ 'ಮುಸ್ಲಿಮರ ವಿರುದ್ಧದ ಹಿಂಸಾಚಾರ', ವಿಮರ್ಶಕರ ವಿರುದ್ಧ ದೇಶದ್ರೋಹ ಕಾನೂನುಗಳ ಬಳಕೆ ಮತ್ತು ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಪೂರ್ವ ತಯಾರಿ ಇಲ್ಲದೆ ಲಾಕ್ಡೌನ್ ಹೇರಿರುವುದನ್ನು ಪ್ರಮುಖ ವಿಚಾರವಾಗಿ ತೆಗೆದುಕೊಂಡಿರುವ ಅಮೆರಿಕ ಮೂಲದ 'ಡೆಮಾಕ್ರಸಿ ರೀಸರ್ಚ್ ಇನ್ಸ್ಟಿಟ್ಯೂಟ್' ತನ್ನ ವಾರ್ಷಿಕ ವರದಿಯಲ್ಲಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಸರ್ವಾಧಿಕಾರಕ್ಕೆ ಇಳಿಯುತ್ತಿದೆ ಎಂದು ವರದಿ ಮಾಡಿತ್ತು.

"ಭಾರತ ಸರ್ಕಾರವು ತನ್ನ ಎಲ್ಲ ನಾಗರಿಕರನ್ನು ದೇಶದ ಸಂವಿಧಾನದಡಿಯಲ್ಲಿ ಪ್ರತಿಪಾದಿಸಿದಂತೆ ಸಮಾನತೆಯಿಂದ ಪರಿಗಣಿಸುತ್ತದೆ ಮತ್ತು ಎಲ್ಲಾ ಕಾನೂನುಗಳನ್ನು ತಾರತಮ್ಯವಿಲ್ಲದೆ ಅನ್ವಯಿಸಲಾಗುತ್ತದೆ. ಆರೋಪಿಯ ಗುರುತನ್ನು ಲೆಕ್ಕಿಸದೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ "ಎಂದು ಕೇಂದ್ರ ಹೇಳಿದೆ. "2019 ರ ಜನವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗಳ ಬಗ್ಗೆ ನಿರ್ದಿಷ್ಟ ಉಲ್ಲೇಖದೊಂದಿಗೆ, ಕಾನೂನು ಜಾರಿ ವ್ಯವಸ್ಥೆಗಳು ನಿಷ್ಪಕ್ಷಪಾತ ಮತ್ತು ನ್ಯಾಯಯುತ ರೀತಿಯಲ್ಲಿ ಕಾರ್ಯನಿರ್ವಹಿಸಿದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಸಮಯೋಚಿತ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದೂ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೇಶದ್ರೋಹ ಕಾನೂನಿನ ಬಳಕೆಯ ಬಗೆಗಿನ ಟೀಕೆಗೆ ಉತ್ತರಿಸುತ್ತಾ ಸರ್ಕಾರವು" 'ಸಾರ್ವಜನಿಕ ಸುವ್ಯವಸ್ಥೆ' ಮತ್ತು 'ಪೊಲೀಸ್' ರಾಜ್ಯಗಳ ಹೊಣೆಗಾರಿಕೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧಗಳ ತನಿಖೆ ನಡೆಸುವ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ" ಎಂದು ಹೇಳಿದೆ. ಲಾಕ್‌ಡೌನ್ ಟೀಕೆಗೆ ಪ್ರತಿಕ್ರಿಯಿಸಿದ ಸರ್ಕಾರ‌ "ಜನರ ಯಾವುದೇ ಸಾಮೂಹಿಕ ವಲಸೆಯು ದೇಶಾದ್ಯಂತ ವೇಗವಾಗಿ ರೋಗವನ್ನು ಹರಡುತ್ತಿತ್ತು. ಈ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡು, ಜಾಗತಿಕ ಅನುಭವ ಮತ್ತು ದೇಶಾದ್ಯಂತ ವಿವಿಧ ನಿಯಂತ್ರಣ ಕ್ರಮಗಳ ವಿಧಾನ ಮತ್ತು ಅನುಷ್ಠಾನದಲ್ಲಿ ಸ್ಥಿರತೆಯ ಅಗತ್ಯತೆಯನ್ನು ಮನಗಂಡು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಲಾಗಿದೆ" ಎಂದು ಕೇಂದ್ರ ತಿಳಿಸಿದೆ.

ಲಾಕ್‌ಡೌನ್‌ನಿಂದ ಹೆಚ್ಚು ಹಾನಿಗೊಳಗಾದವರ ಸಮಸ್ಯೆಗಳನ್ನು ನಿವಾರಿಸಲು ತೆಗೆದುಕೊಳ್ಳಲಾದ ಕ್ರಮಗಳನ್ನು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರವು "ಭಾರತವು ಜಾಗತಿಕವಾಗಿ ಸಕ್ರಿಯ ಕೋವಿಡ್ ಪ್ರಕರಣಗಳು ಮತ್ತು ಸಾವುಗಳ ಕಡಿಮೆ ದರದಲ್ಲಿ ಸಂಭವಿಸಿದ ದೇಶಗಳಲ್ಲಿ ಒಂದಾಗಿದೆ" ಎಂದು ಹೇಳಿದೆ.

ಫ್ರೀಡಂ ಹೌಸ್ ವರದಿಯು" 'ಶಿಕ್ಷಣ ತಜ್ಞರು ಮತ್ತು ಪತ್ರಕರ್ತರನ್ನು ಬೆದರಿಸುವುದು ಮತ್ತು ಮಾಧ್ಯಮಗಳು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ಹತ್ತಿಕ್ಕಲಾಗುತ್ತಿದೆ " ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಸಂವಿಧಾನದ 19 ನೇ ವಿಧಿಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ ಎಂದಿದೆ.

"ಚರ್ಚೆ, ವಾದ ಮತ್ತು ಭಿನ್ನಾಭಿಪ್ರಾಯಗಳು ಭಾರತೀಯ ಪ್ರಜಾಪ್ರಭುತ್ವದ ಭಾಗವಾಗಿದೆ. ಪತ್ರಕರ್ತರು ಸೇರಿದಂತೆ ದೇಶದ ಎಲ್ಲಾ ನಿವಾಸಿಗಳ ಸುರಕ್ಷತೆಗೆ‌ ಭಾರತ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಾಧ್ಯಮ ವ್ಯಕ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮನವಿ ಮಾಡುವ ಪತ್ರಕರ್ತರ ಸುರಕ್ಷತೆ ಕುರಿತು ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ಸಲಹೆಯನ್ನು ನೀಡಿದೆ" ಎಂದೂ ಹೇಳಿದೆ.

ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯಲ್ಲಿನ‌‌ ಟೀಕೆಯ ಬಗ್ಗೆಯೂ ಹೇಳಿಕೆ ನೀಡಿದ ಕೇಂದ್ರ "ಕಟ್ಟುನಿಟ್ಟಾದ ಸುರಕ್ಷತೆಗಳ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮೇಲಿನ ತನ್ನ ನಿರ್ಧಾರವನ್ನು ಸಮರ್ಥಿಸಿದ ಸರ್ಕಾರ, ಇದು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಎಂದು ತಪ್ಪಾಗಿ ವರ್ಗೀಕರಿಸುವ ಮೂಲಕ ಭಾರತದಲ್ಲಿ ನೋಂದಾಯಿಸಲ್ಪಟ್ಟ ನಾಲ್ಕು ಘಟಕಗಳಿಗೆ ಅಕ್ರಮವಾಗಿ ದೊಡ್ಡ ಮೊತ್ತದ ಹಣವನ್ನು ಸುರಿದಿದೆ ಎಂದು ಹೇಳಿದೆ.

ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುಸಿತದಲ್ಲಿ 73ನೇ ಸ್ಥಾನಕ್ಕೆ ಭಾರತವು ಕುಸಿದಿದೆ ಎಂದು ಬುಧವಾರ ಹೊರಡಿಸಿದ ಪ್ರಕಟಣೆಯಲ್ಲಿ‌‌ ತಿಳಿಸಲಾಗಿದೆ.

"2014 ರಲ್ಲಿ ಮೋದಿಯವರು ಅಧಿಕಾರ ವಹಿಸಿಕೊಂಡಾಗಿನಿಂದ ಭಾರತದಲ್ಲಿನ ಬದಲಾವಣೆಗಳು ಮತ್ತಷ್ಟು ಹೆಚ್ಚುತ್ತಿದ್ದು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರವಾದದ ನಡುವಿನ ಅಂತರ‌‌ ಕಡಿಮೆಯಾಗುತ್ತಿದೆ. ಸರ್ವಾಧಿಕಾರಿಗಳು ಸಾಮಾನ್ಯವಾಗಿ ಅಧಿಕಾರವನ್ನು ಬಲಪಡಿಸಲು ಅಥವಾ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಹೊಸ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ" ಎಂದು ವರದಿ ತಿಳಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com