ಕೃಷಿ ಕಾನೂನಿನ ಅಪಾಯವನ್ನು ಮೊದಲು ಗುರುತಿಸಿದ್ದು ಕರ್ನಾಟಕ: ಯೋಗೇಂದ್ರ ಯಾದವ್

ಕೃಷಿ ಕಾನೂನಿನ ಅಪಾಯವನ್ನು ಮೊದಲು ಗುರುತಿಸಿದ್ದು‌, ಅದರ ವಿರುದ್ಧ ಮೊಟ್ಟ ಮೊದಲ ಹೋರಾಟ ನಡೆಸಿದ್ದು ಕರ್ನಾಟಕ. ಎಂಎಸ್‌ಪಿ ದಿಲಾವೋ ಆಂದೋಲನವನ್ನು ಇಲ್ಲಿಂದ ಆರಂಭಿಸಲು ಹೆಮ್ಮೆಯಾಗುತ್ತಿದೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.
ಕೃಷಿ ಕಾನೂನಿನ ಅಪಾಯವನ್ನು ಮೊದಲು ಗುರುತಿಸಿದ್ದು ಕರ್ನಾಟಕ: ಯೋಗೇಂದ್ರ ಯಾದವ್
Admin

ಕೃಷಿ ಕಾನೂನುಗಳ ಅಪಾಯ ಮೊದಲು ಗುರುತಿಸಿದ್ದು ಕರ್ನಾಟಕ. ಇಲ್ಲಿಯೇ ಮೊದಲು ಕೃಷಿ ಕಾನೂನುಗಳ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಯಿತು. ಕರ್ನಾಟಕ ರೈತ ಹೋರಾಟದ ಹೆಮ್ಮೆಯ ಸಂಕೇತವಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಎಂಎಸ್‌ಪಿ ದಿಲಾವೋ ಆಂದೋಲನ ಆರಂಭಿಸಿ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಯೋಗೇಂದ್ರ ಯಾದವ್‌, ರೈತರಿಗೆ ಎಂಎಸ್‌ಪಿ ಕೊಡಿಸಿ ಎಂಬ ರಾಷ್ಟ್ರೀಯ ಆಂದೋಲನವನ್ನು ಕರ್ನಾಟಕದ ಕಲ್ಬುರ್ಗಿಯಿಂದ ಆರಂಭಿಸುತ್ತಿದ್ದೇವೆ. ಿಲ್ಲಿಂದ ಇದನ್ನು ಆರಂಭಿಸುತ್ತಿರುವುದರಿಂದ ವೈಯಕ್ತಿಕವಾಗಿ ನನಗೆ ಸಂತೋಷವಾಗಿದೆ. ಯಾಕೆಂದರೆ ಕರ್ನಾಟಕ ರೈತ ಹೋರಾಟಗಳಿಗೆ ಸ್ಪೂರ್ತಿ ತರುವ ನಾಡು. ಇಲ್ಲಿ ಶಾಂತವೇರಿ ಗೋಪಾಲಗೌಡರು, ಪ್ರೊ ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಕಾಗೋಡು ಸತ್ಯಾಗ್ರಹ ನಡೆದಿದೆ. ಮುಖ್ಯವಾಗಿ, ಈ ಶಾಲು (ರೈತರ ಹಸಿರು ಶಾಲನ್ನು ಎತ್ತಿ ತೋರಿಸುತ್ತಾ) ಈ ರಾಜ್ಯದ ಹಳ್ಳಿಹಳ್ಳಿಯಲ್ಲೂ ಪ್ರತಿನಿಧಿಸುತ್ತದೆ. ಹಾಗಾಗಿ ಈ ಅಭಿಯಾನ ಇಲ್ಲಿಂದ ಪ್ರಾರಂಭವಾಗುತ್ತಿರುವುದು ನನಗೆ ಹೆಮ್ಮೆಯೆನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೃಷಿ ಕಾನೂನಿನ ಅಪಾಯವನ್ನು ಮೊದಲು ಗುರುತಿಸಿದ್ದು ಕರ್ನಾಟಕ: ಯೋಗೇಂದ್ರ ಯಾದವ್
APMC ಕಾಯ್ದೆ ತಿದ್ದುಪಡಿ ಮೂಲಕ ರೈತರ ಸುಲಿಗೆಗೆ ಅವಕಾಶ ಮಾಡಿಕೊಡಲಾಗಿದೆ: ಡಾ. ಪ್ರಕಾಶ್ ಕಮ್ಮರಡಿ

ಪ್ರಧಾನ ಮಂತ್ರಿಗಳು ಎಂಎಸ್‌ಪಿ ಇತ್ತು, ಈಗಲೂ ಇದೆ ಮತ್ತು ಮುಂದೆಯು ಇರಲಿದೆ ಎಂದು ಹೇಳಿದ್ದಾರೆ. ಅದು ಎಲ್ಲಿದೆ ತೋರಿಸಿ, ಅದರ ವಿಳಾಸ ಕೊಡಿ ಎಂದು ನಾವು ಕೇಳುತ್ತಿದ್ದೇವೆ. ಹಾಗಾಗಿ ರೈತರಿಗೆ ಎಂಎಸ್‌ಪಿ ಕೊಡಿಸಿ ಎಂಬ ರಾಷ್ಟ್ರೀಯ ಆಂದೋಲನವನ್ನು ಆರಂಭಿಸುತ್ತಿದ್ದೇವೆ ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

“ದೆಹಲಿಯಲ್ಲಿ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ 7 ಜನರ ಸಮನ್ವಯ ಸಮಿತಿಯ ಭಾಗವಾದ ನಾನು ಇಂದು ಇಂದು ಕರ್ನಾಟಕಕ್ಕೆ ಬಂದಿದ್ದೇನೆ. ಐತಿಹಾಸಿಕ ರೈತ ಹೋರಾಟವು ನೂರು ದಿನಗಳನ್ನು ಪೂರೈಸಿದೆ. ಇದರಿಂದ ನಮಗೆ ಸಂತೋಷವಾಗಿಲ್ಲ. ಏಕೆಂದರೆ ನಾವು ನೂರು ದಿನಗಳನ್ನು ಪೂರೈಸಲು ಹೋರಾಟ ನಡೆಸುತ್ತಿಲ್ಲ. ಬದಲಿಗೆ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ನೂರು ದಿನಗಳಲ್ಲಿ ಕೇಂದ್ರ ಸರ್ಕಾರವು ರೈತರೊಂದಿಗೆ ಕಠಿಣವಾಗಿ ವರ್ತಿಸಿದೆ. ರೈತರ ಮೇಲೆ ದಬ್ಬಾಳಿಕೆ ನಡೆಸಿದೆ. ರೈತರ ವಿರುದ್ಧ ಅಪಪ್ರಚಾರ ನಡೆಸಿದೆ. ಇದು ಸರ್ಕಾರದ ಉದ್ದಟತವನ್ನು ತೋರಿಸುತ್ತದೆ. ಕೇಂದ್ರ ಸರ್ಕಾರ ರೈತರ ವಿರುದ್ಧ ಸುಳ್ಳು ಹೇಳಿದ ನೂರು ದಿನಗಳಾಗಿವೆ. ಇದು ಸರ್ಕಾರದ ಅಹಂಕಾರದ ಮತ್ತು ರೈತರ ಸಂಕಲ್ಪದ ನೂರು ದಿನಗಳಾಗಿವೆ ಎಂದು ಅವರು ಹೇಳಿದ್ದಾರೆ.

ಈ ಐತಿಹಾಸಿಕ ಹೋರಾಟವನ್ನು ಆರಂಭದಲ್ಲಿ ಕೇವಲ ಪಂಜಾಬ್ ರೈತರ ಹೋರಾಟ ಎಂದರು. ನಂತರ ಇದು ಕೇವಲ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟ ಎಂದರು. ಆನಂತರ ಇದು ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಖಂಡ ಮತ್ತು ಉತ್ತರ ಪ್ರದೇಶದ ರೈತರ ಹೋರಾಟ ಎಂದರು. ಶೀಘ್ರದಲ್ಲಿಯೇ ಅವರು ಇದು ಕೇವಲ ಭಾರತದ ರೈತರ ಹೋರಾಟ ಎನ್ನುವ ಕಾಲ ಬರಲಿದೆ. ಈ ರೈತ ಹೋರಾಟ ಇಡೀ ದೇಶಕ್ಕೆ ಹರಡುತ್ತಿದೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ಮೆಕ್ಕೆ ಜೋಳಕ್ಕೆ ಒಂದು ಕ್ವಿಂಟಾಲ್‌ಗೆ ಎಂಎಸ್‌ಪಿ 1850 ರೂ ಇದೆ. ಆದರೆ ಬಳ್ಳಾರಿಯಲ್ಲಿ ಕೇವಲ 1459 ರೂ ನೀಡಲಾಗುತ್ತಿದೆ. ಅಂದರೆ ಪ್ರತಿ ಕ್ವಿಂಟಾಲ್‌ಗೆ ರೈತರಿಂದ 400 ರೂ ಲೂಟಿ ಹೊಡೆಯಲಾಗುತ್ತಿದೆ. ಜೋಳಕ್ಕೆ ಕ್ವಿಂಟಲ್‌ಗೆ 2600 ರೂ ಇದೆ. ಆದರೆ ಬಳ್ಳಾರಿಯಲ್ಲಿ 1728 ರೂ ನೀಡಲಾಗುತ್ತಿದೆ. ಕ್ವಿಂಟಾಲ್‌ಗೆ 900 ರೂ ಕಡಿಮೆ ನೀಡಲಾಗುತ್ತಿದೆ. ಇದು ನಾವು ಕೇವಲ ಕನಿಷ್ಟ ಬೆಂಬಲ ಬೆಲೆಯ ಬಗ್ಗೆ ಮಾತನಾಡುತ್ತಿದ್ದೇವೆ ಹೊರತು ಗರಿಷ್ಟ ಬೆಂಬಲ ಬೆಲೆಯ ಬಗ್ಗೆ ಅಲ್ಲ. ಕಡಲೆಗೆ ಕ್ವಿಂಟಾಲ್‌ಗೆ ಎಂಎಸ್‌ಪಿ 5100ರೂ ಇದೆ. ಆದರೆ ಕೇವಲ 4182 ರೂ ನೀಡುತ್ತಿದ್ದಾರೆ. ತೊಗರಿ ಬೆಳೆಗೆ ಕ್ವಿಂಟಾಲ್‌ಗೆ ಎಂಎಸ್‌ಪಿ 6000 ರೂ ಇದೆ. ಆದರೆ ಕೇವಲ 4943 ರೂ ನೀಡಲಾಗುತ್ತಿದೆ. ಇದು ಕೇವಲ ಒಂದು ಮಾರ್ಕೆಟ್‌ನ ಒಂದು ದಿನದ ಸ್ಯಾಂಪಲ್ ಅಷ್ಟೇ ನಾವು ಹೇಳುತ್ತಿರುವುದು. ಪ್ರಧಾನಿ ಮಂತ್ರಿ ಎಂಎಸ್‌ಪಿ ಇತ್ತು, ಇದೆ, ಇರಲಿದೆ ಎನ್ನುತ್ತಾರೆ. ನಾವು ಹೇಳುತ್ತೇವೆ ಎಂಎಸ್‌ಪಿ ಕಾಗದದಲ್ಲಿ ಇತ್ತು, ಕಾಗದಲ್ಲಿ ಇದೆ ಮತ್ತು ಕಾಗದದಲ್ಲಿಯೇ ಇರಲಿದೆ ಹೊರತು ರೈತರಿಗೆ ಸಿಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

72% ಕರ್ನಾಟಕದ ಬೆಲೆಗಳು ಕರ್ನಾಟಕದಲ್ಲಿ ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಕರ್ನಾಟಕ ಎಲ್ಲಾ ರೈತರಿಗೆ ಪ್ರತಿವರ್ಷ 3190 ಕೋಟಿ ರೂಗಳು ನಷ್ಟವಾಗುತ್ತಿದೆ. ಸ್ವಾಮಿನಾಥನ್‌ರವರ ಎಂಎಸ್‌ಪಿ ಲೆಕ್ಕಾಚಾರಲ್ಲಿ ಪ್ರತಿ ವರ್ಷ 2339 ಕೋಟಿ ರೂಗಳನ್ನು ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ. ಕಿಸಾನ್ ಸಮ್ಮಾನ್ ಮೂಲಕ ಹಣ ಕೊಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇನ್ನೊಂದು ಕೈಯಲ್ಲಿ ಇಷ್ಟು ಹಣವನ್ನು ಕಿತ್ತುಕೊಳ್ಳುತ್ತಿದೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ಅಷ್ಟೊಂದು ಎಂಎಸ್‌ಪಿ ಕೊಡಲಾಗುತ್ತದೆಯೇ ಎಂದು ಹಲವರು ಕೇಳುತ್ತಾರೆ. ಖಂಡಿತವಾಗಿಯೂ ಕೊಡಲು ಸಾಧ್ಯ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಇರಬೇಕು ಅಷ್ಟೇ. ಅದಕ್ಕಾಗಿ ಕರ್ನಾಟಕದಲ್ಲಿ 10,000 ಕೋಟಿ ರೂಗಳು ಸಾಕು. ಎಲ್ಲರಿಗೂ ಎಂಎಸ್‌ಪಿ ನೀಡಬಹುದು ಎಂದು ಅವರು ಹೇಳಿದ್ದಾರೆ.

ಕೃಷಿ ಕಾನೂನಿನ ಅಪಾಯವನ್ನು ಮೊದಲು ಗುರುತಿಸಿದ್ದು ಕರ್ನಾಟಕ: ಯೋಗೇಂದ್ರ ಯಾದವ್
APMC ಕಾಯ್ದೆ ತಿದ್ದುಪಡಿ ಮೂಲಕ ರೈತರ ಸುಲಿಗೆಗೆ ಅವಕಾಶ ಮಾಡಿಕೊಡಲಾಗಿದೆ: ಡಾ. ಪ್ರಕಾಶ್ ಕಮ್ಮರಡಿ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com