ಪೆಟ್ರೋಲ್ ಬೆಲೆ ಏರಿಕೆಯಲ್ಲಿ ರಾಜ್ಯಗಳ ಪಾತ್ರವೂ ಇದೆ: ನಿರ್ಮಲಾ ಸೀತರಾಮನ್

ಗ್ರಾಹಕರ ಮೇಲಿನ ಹೊರೆ ಅರಿವಿಗೆ ಬಂದಿದ್ದರೂ, ಬೆಲೆ ಇಳಿಸುವುದು ಕಷ್ಟದ ಕೆಲಸವೆಂದು ನಿರ್ಮಲಾ ಸೀತರಾಮನ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆಯಲ್ಲಿ ರಾಜ್ಯಗಳ ಪಾತ್ರವೂ ಇದೆ: ನಿರ್ಮಲಾ ಸೀತರಾಮನ್

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್‌ ಬೆಲೆ ಏರಿಕೆಯಲ್ಲಿ ರಾಜ್ಯಗಳ ಪಾತ್ರವೂ ಇದೆ ಎಂದು ಹೇಳಿದ್ದಾರೆ. ಇಂಧನ ಬೆಲೆ ಕಡಿಮೆಗೊಳಿಸುವಲ್ಲಿ ರಾಜ್ಯಗಳೂ ಸಹಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ‌

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆಯಿಂದ ಗ್ರಾಹಕರಿಗೆ ಸಂಕಷ್ಟವಾಗುತ್ತಿರುವುದನ್ನು ನಿರ್ಮಲಾ ಸೀತಾರಾಮನ್ ಶುಕ್ರವಾರ ಒಪ್ಪಿಕೊಂಡಿದ್ದಾರೆ. ಆದರೆ ತೆರಿಗೆಯನ್ನು ಕಡಿತಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ನಿರ್ಧಾರವಾಗಬೇಕು ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎರಡು ವಾರಗಳ ಹಿಂದೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲೂ ನಿರ್ಮಲಾ ಅವರು ಇದೇ ಮಾತನ್ನು ಹೇಳಿದ್ದರು. ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ಬೆಲೆ ಏರಿಕೆಯಿಂದ ಒಂದು ರೀತಿಯ ಧರ್ಮಸಂಕಟದ ಪರಿಸ್ಥಿತಿ ಎದುರಾಗಿದೆ. ಗ್ರಾಹಕರಿಗೆ ಇಂಧನವನ್ನು (ಪೆಟ್ರೋಲ್‌, ಡೀಸೆಲ್, ಅಡುಗೆ ಅನಿಲ) ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚೆ ನಡೆಸಬೇಕಿದೆ ಎಂದು ಸೀತಾರಾಮನ್ ಹೇಳಿದ್ದರು.

ಪೆಟ್ರೋಲ್ ಬೆಲೆ ಏರಿಕೆಯಲ್ಲಿ ರಾಜ್ಯಗಳ ಪಾತ್ರವೂ ಇದೆ: ನಿರ್ಮಲಾ ಸೀತರಾಮನ್
ದೇಶದ ಅಭಿವೃದ್ಧಿಗೆ ಖಾಸಗೀಕರಣ ಅನಿವಾರ್ಯ: ನಿರ್ಮಲಾ ಸೀತಾರಾಮನ್

ಇದೀಗ ಮತ್ತೆ ತಮ್ಮ ಮಾತನ್ನು ಪುನರುಚ್ಛರಿಸಿರುವ ನಿರ್ಮಲಾ, ಗ್ರಾಹಕರಿಗೆ, ಬೆಲೆಗಳು ಕಡಿಮೆಯಾಗಬೇಕು ಎಂದು ಹೇಳಲು ಸಾಕಷ್ಟು ಕಾರಣಗಳಿವೆ, ಬೆಲೆ ಏರಿಕೆ ಒಂದು ಹೊರೆಯಾಗಿದೆ" ಎಂದು ಹೇಳಿದ್ದಾರೆ.

ಗ್ರಾಹಕರ ಮೇಲಿನ ಹೊರೆ ಅರಿವಿಗೆ ಬಂದಿದ್ದರೂ, ಬೆಲೆ ಇಳಿಸುವುದು ಕಷ್ಟದ ಕೆಲಸವೆಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಅವರು ಇದೇ ರೀತಿ ಅಸಹಾಯಕತೆ ವ್ಯಕ್ತಪಡಿಸಿದ್ದರು.

ಪೆಟ್ರೋಲ್ ಬೆಲೆ ಏರಿಕೆಯಲ್ಲಿ ರಾಜ್ಯಗಳ ಪಾತ್ರವೂ ಇದೆ: ನಿರ್ಮಲಾ ಸೀತರಾಮನ್
ಇಂಧನ ಬೆಲೆ ಏರಿಕೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ; ನಿರ್ಮಲಾ ಸೀತಾರಾಮನ್

ಪೆಟ್ರೋಲ್‌, ಡೀಸೆಲ್ ಮೊದಲಾದ ಇಂಧನಗಳ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ, ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ತೈಲ ಕಂಪನಿಗಳು ನಿರ್ಧರಿಸುತ್ತವೆ, ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಹೇಳಿದ್ದರು.

“ಹಾಗಾಗಿಯೇ ಬೆಲೆ ಏರಿಕೆ ಕುರಿತಂತೆ ನಾನು‘ಧರ್ಮಸಂಕಟ’ ಪದವನ್ನು ಬಳಸುತ್ತೇನೆ,” ಎಂದು ಅವರು ಹೇಳಿದ್ದಾರೆ.

"ಇದರ ಕುರಿತು ರಾಜ್ಯಗಳು ಮತ್ತು ಕೇಂದ್ರ ಜಂಟಿಯಾಗಿ ಮಾತನಾಡಲು ನಾನು ಬಯಸುತ್ತೇನೆ, ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಕೇಂದ್ರ ಮಾತ್ರ ಪಡೆಯುತ್ತಿಲ್ಲ, ರಾಜ್ಯಗಳು ಕೂಡಾ ತೆರಿಗೆ ವಿಧಿಸುತ್ತಿವೆ." ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಯಲ್ಲಿ ರಾಜ್ಯಗಳ ಪಾತ್ರವೂ ಇದೆ: ನಿರ್ಮಲಾ ಸೀತರಾಮನ್
ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com