BJP ಸವಾಲು ಸ್ವೀಕರಿಸಿದ ಮಮತಾ ಬ್ಯಾನರ್ಜಿ: ನಂದಿಗ್ರಾಮದಿಂದ ಸ್ಪರ್ಧೆಗೆ ಸಿದ್ಧತೆ

ಕಳೆದ 14 ವರ್ಷಗಳಿಂದ ಟಿಎಂಸಿಯ ಭದ್ರಕೋಟೆಯಾಗಿರುವ ನಂದಿಗ್ರಾಮವನ್ನು ಉಳಿಸಿಕೊಳ್ಳುವಂತೆ ಬಿಜೆಪಿ ಸವಾಲು ಹೂಡಿತ್ತು. ಈ ಸವಾಲು ಸ್ವೀಕರಿಸಿದ ಮಮತಾ, ನಂದಿಗ್ರಾಮದಿಂದಲೇ ಸ್ಪರ್ಧೆಗೆ ಇಳಿಯುವುದಾಗಿ ಘೋಷಿಸಿದ್ದಾರೆ
BJP ಸವಾಲು ಸ್ವೀಕರಿಸಿದ ಮಮತಾ ಬ್ಯಾನರ್ಜಿ: ನಂದಿಗ್ರಾಮದಿಂದ ಸ್ಪರ್ಧೆಗೆ ಸಿದ್ಧತೆ

ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಹುಟ್ಟಿಸಿದೆ. ಸದ್ಯದ ಚುನಾವಣೆ ತ್ರಿಕೋನ ಸ್ಪರ್ಧೆಯಂತೆ ಕಂಡು ಬರುತ್ತಿರುವ ನಡುವೆಯೂ ಮಮತಾ ಹಾಗೂ ಬಿಜೆಪಿಯ ನಡುವೆ ನೇರಾ ಹಣಾಹಣಿಯೆಂದು ಬಣ್ಣಿಸಲಾಗುತ್ತಿದೆ.

ಬಿಜೆಪಿಯು ಮಮತಾರಿಗೆ ನೇರ ಸವಾಲು ಹಾಕಿದ್ದು, ಕಳೆದ 14 ವರ್ಷಗಳಿಂದ ಟಿಎಂಸಿಯ ಭದ್ರಕೋಟೆಯಾಗಿರುವ ನಂದಿಗ್ರಾಮವನ್ನು ಉಳಿಸಿಕೊಳ್ಳುವಂತೆ ಬಿಜೆಪಿ ಸವಾಲು ಹೂಡಿತ್ತು. ಈ ಸವಾಲು ಸ್ವೀಕರಿಸಿದ ಮಮತಾ, ನಂದಿಗ್ರಾಮದಿಂದಲೇ ಸ್ಪರ್ಧೆಗೆ ಇಳಿಯುವುದಾಗಿ ಘೋಷಿಸಿದ್ದಾರೆ. ಕಳೆದ ಬಾರಿ ಭಬನಿಪುರ್‌ ಕ್ಷೇತ್ರದಿಂದ ಮಮತಾ ಸ್ಪರ್ಧಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಾರ್ಚ್ 9ರಂದು ನಂದಿಗ್ರಾಮಕ್ಕೆ ಮಮತಾ ಬ್ಯಾನರ್ಜಿ ತೆರಳಲಿದ್ದು, ಮಾರ್ಚ್ 10ರಂದು ಹಲ್ದಿಯಾದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.

ಈ ಬಾರೀ ಹೇಗಾದರೂ ಪಶ್ಚಿಮ ಬಂಗಾಳವನ್ನು ವಶಪಡಿಸಿಕೊಳ್ಳಬೇಕೆಂಬ ಹಪಾಹಪಿಯಲ್ಲಿರುವ ಬಿಜೆಪಿ ತೃಣಮೂಲ ಕಾಂಗ್ರೆಸಿನ ಹಲವು ನಾಯಕರನ್ನು ತನ್ನೆಡೆಗೆ ಸೆಳೆದುಕೊಂಡಿತ್ತು. ಅದರಲ್ಲಿ ಒಬ್ಬರು ಟಿಎಂಸಿಯ ಸುವೇಂದು ಅಧಿಕಾರಿ.

BJP ಸವಾಲು ಸ್ವೀಕರಿಸಿದ ಮಮತಾ ಬ್ಯಾನರ್ಜಿ: ನಂದಿಗ್ರಾಮದಿಂದ ಸ್ಪರ್ಧೆಗೆ ಸಿದ್ಧತೆ
ಪಶ್ಚಿಮ ಬಂಗಾಳ; 200 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು

ಪ್ರಸ್ತುತ, ಮಮತಾ ಸ್ಪರ್ಧಿಸುವುದಾಗಿ ಘೋಷಿಸಿರುವ ನಂದಿಗ್ರಾಮದಲ್ಲಿ ಈಗಾಗಲೇ ಪಕ್ಷ ತೊರೆದಿರುವ ಸುವೇಂದು ಅಧಿಕಾರಿ ಸಾಕಷ್ಟು ಪ್ರಭಾವಿಯಾಗಿದ್ದಾರೆ. ನಂದಿಗ್ರಾಮ ಕ್ಷೇತ್ರದ ಜನ ಪಕ್ಷಕ್ಕೆ ನಿಷ್ಟರಾಗಿದ್ದಾರೋ ಅಥವಾ ಸುವೆಂದು ಗೆ ನಿಷ್ಟರಾಗಿದ್ದಾರೋ ಎಂಬುದು ತಿಳಿದು ಈ ಬಾರಿ ಬರಲಿದೆ. ಯಾಕೆಂದರೆ, ನಂದಿಗ್ರಾಮದಲ್ಲಿ ಮಮತಾರ ವಿರುದ್ಧ ಸುವೆಂದು ಬಿಜೆಪಿ ಮುಖಾಂತರ ಸ್ಪರ್ಧಿಸಲಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆದ ಚುನಾವಣಾ ಸಮಿತಿ ಸಭೆ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಟಿಎಂಸಿ ಪಕ್ಷದಿಂದ 291 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪಕ್ಷದ ವರಿಷ್ಠೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಒಟ್ಟು 294 ಕ್ಷೇತ್ರಗಳ ಪೈಕಿ, ಉತ್ತರ ಬಂಗಾಳದ 3 ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ತಾನು ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಮಮತಾ, 50 ಮಹಿಳೆಯರು, 42 ಮುಸ್ಲಿಂ ಅಭ್ಯರ್ಥಿಗಳು ಸೇರಿ 291 ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

294 ವಿಧಾನಸಭಾ ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ಮತದಾನ ನಡೆಯಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com