ಅಸ್ಸಾಂ ಚುನಾವಣೆ: 126 ಕ್ಷೇತ್ರಗಳಲ್ಲಿ BJP 92, AGP 26, UPPL‌ 8 ಸ್ಥಾನಗಳಲ್ಲಿ ಸ್ಪರ್ಧೆ

BPF ಮುಖ್ಯಸ್ಥ ಹಗ್ರಾಮ ಮೊಹಿಲರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಲು ಮುಂದಾದ ಬಿಜೆಪಿ ಗೆ ಸವಾಲು‌ ಹಾಕಿದ್ದಾರೆ. ಚುನಾವಣೆಯಲ್ಲಿ ಅಸ್ಸಾಂ ನಿಂದ ಬಿಜೆಪಿ ನಿರ್ಗಮಿಸುವುದನ್ನು ನಾವು ನೋಡುತ್ತೇವೆ ಎಂದಿದ್ದಾರೆ.
ಅಸ್ಸಾಂ ಚುನಾವಣೆ: 126 ಕ್ಷೇತ್ರಗಳಲ್ಲಿ BJP 92, AGP 26, UPPL‌ 8 ಸ್ಥಾನಗಳಲ್ಲಿ ಸ್ಪರ್ಧೆ

ಅಸ್ಸಾಂ ನಲ್ಲಿ ಮಾರ್ಚ್‌ ರಿಂದ 27 ರಂದು ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿದ್ದು, ಎಜಿಪಿ ಸೀಟು ಹಂಚಿಕೆಯ ಬಗ್ಗೆ ಮಾರ್ಚ್‌ 4 ರಂದು ಚರ್ಚೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಲ್ಲಿ ಒಟ್ಟು 126 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ 92 ಸ್ಥಾನಗಳಲ್ಲಿ, 26 ಸ್ಥಾನಗಳಲ್ಲಿ ಅಸ್ಸಾಂ ಗಾನ ಪರಿಷದ್‌ (AGP), 8 ಸ್ಥಾನಗಳಲ್ಲಿ, ಯುನೆಟೈಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌(UPPL‌) ಸ್ಪರ್ದಿಸುತ್ತಿದೆ.

ಅಸ್ಸಾಂ ನ ಸ್ಥಳೀಯ ಪಕ್ಷ ಒಂದು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದು, ಈ ಪಕ್ಷದ ಒಂದು ಅಥವಾ ಎರಡು ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸಲಿದ್ದಾರೆಂಬ ಸುದ್ದಿಯೂ ಹಬ್ಬಿದೆ.

ಬಿಜೆಪಿಯ 84 ಅಭ್ಯರ್ಥಿಗಳ ಆರಂಭಿಕ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಅಭ್ಯರ್ಥಿಗಳ ಹೆಸರು ಸೇರಿದಂತೆ ಹೆಚ್ಚಿನ ವಿವರಗಳನ್ನು ಮಾರ್ಚ್‌ 5 ರಂದು ಪ್ರಕಟಿಸುವ ಸಾಧ್ಯತೆಯಿದೆ.

ಅಸ್ಸಾಂ ನ ಎಜಿಪಿ ಪಕ್ಷದ ಸ್ಥಾಪಕ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿ, ಆರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ ಪ್ರಫುಲ್ಲಾ ಕುಮಾರ್‌ ಮಹಂತ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ ಸಿಗದಿರಬಹುದು ಎಂದು (AGP) ಯ ಮೂಲಗಳು ತಿಳಿಸಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಸ್ತುತ ಮಹಾಂತ ಅವರು ಅನಾರೋಗ್ಯಕ್ಕೀಡಾಗಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಾದಾತ್ಮಕ ಪೌರತ್ವ ಕಾನೂನು ವಿಷಯ ಹಿನ್ನಲೆ ಎಜಿಪಿ ನಾಯಕತ್ವದಿಂದ ಹೊರಗುಳಿದಿದ್ದಾರೆ.

ಅಸ್ಸಾಂ ನಲ್ಲಿ , 2011 ರ ಚುನಾವಣೆಯಲ್ಲಿ 55 ಸ್ಥಾನಗಳನ್ನು ಪಡೆದುಕೊಂಡ BJPಯೂ 2016 ರ ಚುನಾವಣೆಯಲ್ಲಿ 84 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡಿತ್ತು. AGP 24 ಸ್ಥಾನಗಳಲ್ಲಿ 14 ಸ್ಥಾನಗಳಲ್ಲಿ ಗೆದ್ದರೆ, UPPL‌ ಸ್ಪರ್ಧಿಸಿದ 4 ಸ್ಥಾನಗಳಲ್ಲಿ ಒಂದನ್ನೂ ಗೆದ್ದುಗೊಂಡಿರಲಿಲ್ಲ.

ಚುನಾವಣೆಗೂ ಮುನ್ನ ಕಾಂಗ್ರೆಸ್‌, ಬಿಜೆಪಿ ನೇತೃತ್ವದ ಮೈತ್ರಿಕೂಟದಿಂದ ಹೊರಗುಳಿದ ಬೊಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌(ಬಿಪಿಎಫ್‌) 16 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ನಂತರದ ದಿನ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. 2021 ರ ಚುನಾವಣೆ ಕುರಿತು ಪ್ರತಿಕ್ರಿಯಿಸಿದ BPF‌ ಮುಖ್ಯಸ್ಥ ಹಗ್ರಾಮ ಮೊಹಿಲರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಲು ಮುಂದಾದ ಬಿಜೆಪಿ ಗೆ ಸವಾಲು‌ ಹಾಕಿದ್ದಾರೆ. ಚುನಾವಣೆಯಲ್ಲಿ ಅಸ್ಸಾಂ ನಿಂದ ಬಿಜೆಪಿ ನಿರ್ಗಮಿಸುವುದನ್ನು ನಾವು ನೋಡುತ್ತೇವೆ ಎಂದಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣೆಯ ಮೊದಲ ಎರಡು ಹಂತಗಳ ಅಭ್ಯರ್ಥಿಗಳ ಪಟ್ಟಿಯನ್ನು ನಿಗದಿ ಮಾಡಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಮ್ಯಾರಥಾನ್‌ ಸಭೆ ನಡೆಸಲಾಗಿದೆ. ಈ ಮೂಲಕ ಅಸ್ಸಾಂ ನಲ್ಲಿನ ಸ್ಥಾನ ಹಂಚಿಕೆಯ ಮಾಹಿತಿ ಹೊರಬಿದ್ದಿದೆ.

ಈ ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ , ಅಸ್ಸಾಂ ನ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ, ಕ್ಯಾಬಿನೇಟ್‌ ಸಚಿವ ಹಿಮಂತ ಬಿಸ್ವಾ ಸರ್ಮಾ ಸಭೆಯಲ್ಲಿ ಈಶಾನ್ಯ ರಾಜ್ಯಗಳ ಪರವಾಗಿ ಭಾಗವಹಿಸಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com