ಸ್ಪ್ಯಾನಿಷ್‌ ಫ್ಲೂ ಮರುಕಳಿಸುವುದೇ? WHO ತಜ್ಞರ ಆತಂಕವೇನು?

ಈಗಾಗಲೇ ನಾವು ಸ್ಪ್ಯಾನಿಷ್‌ ಫ್ಲೂವನ್ನು ನೋಡಿದ್ದೇವೆ. ಮತ್ತೊಮ್ಮೆ ಇದನ್ನು(ಸ್ಪ್ಯಾನಿಷ್‌ ಫ್ಲೂ) ನಾವು ಎದುರಿಸಬೇಕಾದೀತು. ಇದನ್ನು ಎದುರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಬೇಕು -ಡಾ. ಜಾನ್ ಮೆಕಾಲೆ
ಸ್ಪ್ಯಾನಿಷ್‌ ಫ್ಲೂ ಮರುಕಳಿಸುವುದೇ? WHO ತಜ್ಞರ ಆತಂಕವೇನು?
iimb

ಜಾಗತಿಕ ಜನಜೀವನ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದ ಕೋವಿಡ್-19‌ ಸಾಂಕ್ರಾಮಿಕ ಸೋಕು ಕಾಣಿಸಿ ಅದಾಗಲೇ ಒಂದು ವರ್ಷ ಕಳೆದಿದೆ. ಜಗತ್ತಿನ ವಿವಿದೆಡೆಯಲ್ಲಿ ಕಂಡು ಬರುತ್ತಿರುವ ರೂಪಾಂತರಗೊಂಡ ಹೊಸ ಹೊಸ ಮಾದರಿಯ ಕರೋನಾ ಸೋಂಕುಗಳು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸವಾಲು ಒಡ್ಡುತ್ತಿವೆ. ಸೋಂಕಿನ ರೂಪಾಂತರಗಳ ನಂತರ ಪ್ರಸ್ತುತ ಲಸಿಕೆಗಳು ಅನಗತ್ಯವಾಗಿರಬಹುದು ಮತ್ತು ಈ ಸಾಂಕ್ರಾಮಿಕ ರೋಗ ಹೇಗೆ ಇದರ ಅಂತ್ಯ ಕಾಣಬಲ್ಲದು ಎಂಬುದರ ಬಗ್ಗೆ ಸಂಶೋಧಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಟೈಮ್‌ಸ್‌ ನೌ ವರದಿ ಪ್ರಕಾರ, ಜಗತ್ತಿನ ಹಲವು ಭಾಗಗಳಲ್ಲಿ ಪ್ರತಿ ವರ್ಷಗಳಲ್ಲಿ ಒಮ್ಮೆ ಕರೋನಾ ಸೋಂಕು ಮರುಕಳಿಸುವ ಸಾಧ್ಯತೆ ಇದೆ. ವೈರಸಿನ ಸ್ವರೂಪವು ಭವಿಷ್ಯದ ಸಂಭಾವ್ಯ ಸಾಂಕ್ರಾಮಿಕ ರೋಗಕಾರಕಗಳನ್ನು ನೋಡುವಂತೆ ವಿಜ್ಞಾನಿಗಳಿಗೆ ಪ್ರೇರೇಪಿಸಿದೆ. ಮುಖ್ಯವಾಗಿ, 1918 ರಲ್ಲಿ ಸುಮಾರು 5 ಕೋಟಿ ಜನರ ಬಲಿಗೆ ಕಾರಣವಾದ ಭೀಕರ ಸ್ಪ್ಯಾನಿಷ್ ಫ್ಲೂ ವೈರಸ್ ಪುನರಾಗಮನ ಮತ್ತು ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು ಎಂದು ಡಬ್ಲ್ಯುಎಚ್‌ಒ ತಜ್ಞರು ಎಚ್ಚರಿಸಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗಾಗಲೇ ನಾವು ಸ್ಪ್ಯಾನಿಷ್‌ ಫ್ಲೂವನ್ನು ನೋಡಿದ್ದೇವೆ. ಮತ್ತೊಮ್ಮೆ ಇದನ್ನು(ಸ್ಪ್ಯಾನಿಷ್‌ ಫ್ಲೂ) ನಾವು ಎದುರಿಸಬೇಕಾದೀತು. ಇದನ್ನು ಎದುರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಬೇಕು. ಮುಂದಿನ ಸಾಂಕ್ರಾಮಿಕ ರೋಗವು ಜ್ವರವಾಗಿರಬಹುದು ಅಥವಾ ಮತ್ತೊಂದು ಕರೋನಾ ವೈರಸ್‌ ಆಗಿರಬಹುದು ಎಂದು WHO ತಜ್ಞ ಡಾ. ಜಾನ್ ಮೆಕಾಲೆ ಹೇಳಿರುವುದಾಗಿ ದಿ ಸನ್‌ ತಿಳಿಸಿದೆ.

ಅದಾಗ್ಯೂ, WHO ನ ತುರ್ತು ಕಾರ್ಯಕ್ರಮದ ನಿರ್ದೇಶಕ ಡಾ. ಮೈಕೆಲ್ ರಯಾನ್, ಸದ್ಯ ವಿಶ್ವದ ಏಕೈಕ ಗಮನವು ಕೋವಿಡ್ -19 ರ ಪ್ರಸರಣವನ್ನು ಒಳಗೊಂಡಿರಬೇಕು ಎಂದು ಹೇಳಿದ್ದಾರೆ.

ಈ ನಡುವೆ, ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ ವರದಿ ಪ್ರಕಾರ ಕರೋನಾ ಹಾಗೂ ಜ್ವರದಿಂದ ಬಾಧಿತರಾಗಿರುವವರು ಕೇವಲ ಕರೋನಾ ಬಾಧಿತರಿಗಿಂತ ಸಾವನ್ನಪ್ಪುವ ಸಾಧ್ಯತೆ ದುಪ್ಪಟ್ಟಿದೆ. ಜನರಲ್ಲಿ ರೋಗ ನಿರೋಧಕ ಶಕ್ತಿಗಳು ಕುಂಠಿತಗೊಳ್ಳುತ್ತಿರುವುದು ಕೂಡಾ ಸಾಂಕ್ರಮಿಕ ರೋಗಕ್ಕೆ ಕಾರಣವಾಗಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಬಹುತೇಕ ರಾಷ್ಟ್ರಗಳು ಕರೋನಾ ಲಸಿಕೆ ನೀಡುವುದನ್ನು ಪ್ರಾರಂಭಿಸಿದರೂ, ಈ ವರ್ಷಾಂತ್ಯಕ್ಕೆ ಕರೋನಾ ಅಂತ್ಯವಾಗುವ ಸಾಧ್ಯತೆಗಳನ್ನು ತಜ್ಞರು ನಿರಾಕರಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಹಿರಿಯ ಅಧಿಕಾರಿಯೊಬ್ಬರು ಸಾಂಕ್ರಾಮಿಕ ರೋಗವನ್ನು ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಮುಕ್ತಗೊಳಿಸಬಹುದೆಂದು ಭಾವಿಸುವುದು "ಅವಾಸ್ತವಿಕ" ಎಂದು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com