ಮೋದಿvsದೀದಿ: ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೇ ಚುನಾವಣಾ ಸಮರಕ್ಕಿಳಿದ ಬಿಜೆಪಿ

ಬಿಜೆಪಿ ಗೆ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಿಂತಲೂ ಬ್ಯಾನರ್ಜಿ ಸಾಮ್ರಾಜ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದೇ ಮುಖ್ಯ ಗುರಿಯಾಗಿದೆ. ಬಿಜೆಪಿಯು ಆಡಳಿತ ರೂಢ ಪಕ್ಷ ಟಿಎಂಸಿಯನ್ನು ಹಿಂದಿಕ್ಕಿ ಹೆಚ್ಚಿನ ಸಂಖ್ಯೆಯಲ್ಲಿ ಕಮಲವನ್ನು ಅರಳಿಸುವ ಉದ್ದೇಶಹೊಂದಿದ್ದರೂ ಮುಂದೆ ಪಕ್ಷದ ನಾಯಕರುಗಳಲ್ಲಿಯೇ ಆಂತರಿಕ ಬಿಕ್ಕಟ್ಟಿನ ಸೃಷ್ಟಿಗೂ ಕಾರಣವಾಗಬಹುದು.
ಮೋದಿvsದೀದಿ: ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೇ ಚುನಾವಣಾ ಸಮರಕ್ಕಿಳಿದ ಬಿಜೆಪಿ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಆಡಳಿತ ಪಕ್ಷ ಟಿಎಂಸಿ ಗೆ ಬಿಜೆಪಿ ಪ್ರಮುಖ ಸ್ಪರ್ಧಿಯಾಗಿದೆ. ಟಿಎಂಸಿ ಪಕ್ಷ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸತತ ಎರಡು ಬಾರಿ ಆಡಳಿತ ನಡೆಸಿದ್ದು, 2021 ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ವಿರುದ್ದ ನೇರಾನೇರಾ ವಾಗ್ಧಾಳಿ ನಡೆಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಲು ದೀದಿ ಹರಸಾಹಸ ಪಡುತ್ತಿದ್ದಾರೆ.

ಬಿಜೆಪಿ ಮಾತ್ರ ಮುಖ್ಯಮಂತ್ರಿ ಸ್ಥಾನ್ಕಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹಿಂದೇಟು ಹಾಕಿದ್ದು, ಪ್ರಾದೇಶಿಕ ಪಕ್ಷ ಟಿಎಂಸಿಯನ್ನು ಮಣಿಸಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದು ಪಶ್ಚಿಮ ಬಂಗಾಳದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಲು ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರ ಚಿತ್ತ ಪಶ್ಚಿಮ ಬಂಗಾಳದತ್ತ ವಾಲಿದೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಪ್ರಧಾನಿ ಮೋದಿ ಸೇರಿದಂತೆ ಇತರೆ ನಾಯಕರು ಬ್ಯಾನರ್ಜಿಯವರ ವಿರುದ್ಧ ಮಾತಿನ ಸಮರದಲ್ಲಿ ತೊಡಗಿದ್ದಾರೆ.

ಇಲ್ಲಿ ಬಿಜೆಪಿ ಗೆ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಿಂತಲೂ ಬ್ಯಾನರ್ಜಿ ಸಾಮ್ರಾಜ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದೇ ಮುಖ್ಯ ಗುರಿಯಾಗಿದೆ. ಬಿಜೆಪಿಯು ಆಡಳಿತ ರೂಢ ಪಕ್ಷ ಟಿಎಂಸಿಯನ್ನು ಹಿಂದಿಕ್ಕಿ ಹೆಚ್ಚಿನ ಸಂಖ್ಯೆಯಲ್ಲಿ ಕಮಲವನ್ನು ಅರಳಿಸುವ ಉದ್ದೇಶಹೊಂದಿದ್ದರೂ ಮುಂದೆ ಪಕ್ಷದ ನಾಯಕರುಗಳಲ್ಲಿಯೇ ಆಂತರಿಕ ಬಿಕ್ಕಟ್ಟು ಸೃಷ್ಟಿಗೂ ಕಾರಣವಾಗಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಹಲವು ನಾಯಕರು

ಬ್ಯಾನರ್ಜಿ ಸಾಮ್ರಾಜ್ಯದಲ್ಲಿ ತನ್ನ ಪಕ್ಷವನ್ನು ಉತ್ತಮವಾಗಿ ಮುನ್ನಡೆಸಲು ಹೊರಟ ಬಿಜೆಪಿ ನಾಯಕರ ಆಯ್ಕೆ ವಿಚಾರದಲ್ಲಿ ಮೌನವಾಗಿ ಉಳಿದಿದೆ. ಟಿಎಂಸಿಯಿಂದ ವಲಸೆ ಬಂದ ಪ್ರಮುಖ ನಾಯಕ ಸುವೆಂದೂ ಸೇರಿದಂತೆ ಇತರೆ ವಲಸಿಗರ ಹಿಂದಿನ ಉದ್ದೇಶ ಅಧಿಕಾರ ಪಡೆಯುವ ಆಸೆಯಿರಬಹುದು. ಟಿಎಂಸಿ ತೊರೆದ ನಾಯಕರು ಬಿಜೆಪಿ ಸೇರಿದಾಗ ಮೂಲ ಬಿಜೆಪಿಗರು ಅಸಮಾಧಾನ ತಾಳಿದ ಉದಾಹರಣೆಗಳೂ ಇವೆ. ಹಿಂದಿನಿಂದಲೂ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡಿದ ನಾಯಕರ ಸಂಖ್ಯೆಯೂ ಹೆಚ್ಚಿದ್ದು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯಲ್ಲಿ ಹಲವರಿದ್ದಾರೆ.

ರಾಜ್ಯದ ಬಜೆಪಿ ಮುಖ್ಯಸ್ಥರಾದ ದಿಲೀಪ್‌ ಘೋಷ್‌ ಪಕ್ಷಕ್ಕಾಗಿ ದುಡಿದ ಪ್ರಮುಖ ನಾಯಕ. ಹಿಂದೆ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಮತ್ತು ಹಳ್ಳಿಗಾಡಿನ ಹೋರಾಟದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಪಕ್ಷದೊಳಗಿನ ನಾಯಕರುಗಳ ನಡುವೆ ಅಸಮಧಾನವಾಗಿ ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಕೆಲವೊಂದು ವಿಚಾರದಲ್ಲಿ ಸಾರ್ವಜನಿಕವಾಗಿ ಟೀಕೆಗೂ ಗುರಿಯಾಗಿದ್ದರೂ, ಜನರನ್ನು ಸಳೆಯಲು ಕಾರ್ಯ ಮುಂದುವರೆಸಿದ್ದರು.

ಮೋದಿvsದೀದಿ: ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೇ ಚುನಾವಣಾ ಸಮರಕ್ಕಿಳಿದ ಬಿಜೆಪಿ
ಪಶ್ಚಿಮ ಬಂಗಾಳ ಚುನಾವಣೆ; ಸಿಎಂ ರೇಸ್‌ನಲ್ಲಿರುವ ಬಿಜೆಪಿ ಅಭ್ಯರ್ಥಿಗಳು ಯಾರು?

ಕೋಲ್ಕತ್ತಾದ ರಾಜಕೀಯ ರಂಗದಲ್ಲಿ ಹೆಚ್ಚು ಸದ್ದು ಮಾಡಿದ ಮೇಘಾಲಯದ ಮಾಜಿ ಗೌರ್ನರ್‌‌ ಹಾಗು ಜನ ಸಂಘ ವಿಚಾರವಾದಿ ಶ್ಯಾಮಾ ಪ್ರಸಾದ್‌ ಮುಖರ್ಜಿಯವರ ಜೀವನ ಚರಿತ್ರೆಕಾರ ತಥಾಗತ ರಾಯ್ ಅವರು ಪಕ್ಷವು ಉನ್ನತ ಹುದ್ದೆ ಕೊಡಲು ಸಿದ್ಧವಿದ್ದರೆ ನಾನು ತಗೆದುಕೊಳ್ಳಲು ಸಿದ್ದವೆಂಬ ಮಾತನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ದೆಹಲಿ ಮೂಲದ ಮಾಜಿ ಪರ್ತಕರ್ತ ಮತ್ತು ರಾಜ್ಯಸಭಾ ಸದಸ್ಯ ಸ್ವಪನ ದಾಸ್‌ ಗುಪ್ತಾ ಅವರು ಹೆಚ್ಚು ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲುವ ಸಲುವಾಗಿ ನಿಯಮಿತ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ ಎಂಬ ಊಹಾಪೋಹಗಳ ಮಧ್ಯೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು “ಮೊದಲು ಚುನಾವಣೆಯಲ್ಲಿ ಗೆಲ್ಲೋಣ, ಮುಖ್ಯಮಂತ್ರಿಯ ಸ್ಥಾನ ನಂತರದ ಪ್ರಶ್ನೆ ಎಂದಿದ್ದಾರೆ.

ಇತ್ತ ಆರ್‌ಎಸ್‌ಎಸ್‌ ನ ದಕ್ಷಿಣ ಬಂಗಾಳದ ಉಸ್ತುವಾರಿ ಜಿಶ್ನು ಬಸು ಅವರ ಹೆಸರೂ ಕೂಡ ಮುಂಚೂಣಿಯಲ್ಲಿದೆ. ಮಧ್ಯಮ ವಯಸ್ಸಿನ ಜಿಶ್ನು ಬಸು ಅವರು ರಾಜ್ಯ ಬಿಜೆಪಿಯ ಎನ್‌ಆರ್‌ಸಿ ಮತ್ತು ಸಿಎಎ ನೀತಿಗಳ ಪ್ರಮುಖ ಪ್ರತಿಪಾದಕರೂ ಹೌದು.

ಮೋದಿvsದೀದಿ: ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೇ ಚುನಾವಣಾ ಸಮರಕ್ಕಿಳಿದ ಬಿಜೆಪಿ
ಪಶ್ಚಿಮ ಬಂಗಾಳ: ದೀದಿಗೆ ಎದುರಾಗಿ ಮೋದಿಯೇ ಅಥವಾ ಗಂಗೂಲಿಯೇ? ಬಿಜೆಪಿ ಗೊಂದಲ

ಇನ್ನು, ಮಿಡ್ನಾಪುರದ ಟಿಎಂಸಿ ನಾಯಕ ಸುವೆಂದು ಅಧಿಕಾರಿ ಸೇರಿದಂತೆ ವಲಸೆ ಬಂದ ಇತರರು ಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಅಕಾಂಕ್ಷೆಯಲ್ಲಿದ್ದಾರೆಂಬ ಊಹಾಪೋಹಗಳ ನಡುವೆಯೇ ಬಿಜೆಪಿ ಗೆದ್ದರೆ ಉಪಮುಖ್ಯಮಂತ್ರಿ ಸ್ಥಾನ ಟಿಎಂಸಿಯಿಂದ ಬಂದವರಿಗೆ ನೀಡಲಾಗುತ್ತದೆ ಎಂಬ ಗಾಳಿಸುದ್ದಿಯೂ ಹಬ್ಬಿದೆ.

ಕೇಂದ್ರ ಸಚಿವರು ಮತ್ತು ಬಾಂಬೆ ಚಲನಚಿತ್ರೋದ್ಯಮದ ಜನಪ್ರೀಯ ಹಿನ್ನಲೆ ಗಾಯಕ ಅಸನ್ಸೋಲ್‌ ಬಾಬುಲ್‌ ಸುಪ್ರಿಯೋ ಅವರು ಎರಡು ಬಾರಿ ಸಂಸದರಾಗಿದ್ದರವರು ಜನಪ್ರಿಯ ನಾಯಕರು ಹೌದು ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ಬಿಜೆಪಿಯೊಂದಿಗಿನ ಇವರ ಒಡನಾಟ ಮತ್ತೆ ರಾಜ್ಯದಲ್ಲಿ ಅಧಿಕಾರ ಕೈಗೆಟುಕುತ್ತದೆಯೇ ಎಂಬ ಅನುಮಾನ ಹುಟ್ಟಿಸುತ್ತದೆ

ಕೆಲವು ತಿಂಗಳ ಹಿಂದೆ ಬಿಸಿಸಿಐನ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟ್‌ ಐಕಾನ್‌ ಸೌರವ್‌ ಗಂಗೂಲಿ ರಾಜ್ಯಪಾಲ ಜಗದೀಪ್ ಧಂಕರ್ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಕುತೂಹಲ ಕೆರಳಿಸಿತ್ತು. 'ದಾದಾ' ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಾರಾ…? ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರಾ? ಎಂಬ ಬಗ್ಗೆ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿತ್ತು.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಗಂಗೂಲಿ ಮೌನ ವಹಿಸಿದ್ದರು. ಆದರೆ ಈಗ ಆರೋಗ್ಯದಲ್ಲಿಯೂ ಸುಧಾರಣೆಯಾಗಿದ್ದು, ಪಶ್ಚಿಮ ಬಂಗಾಳ ಚುನಾವಣೆಯೂ ಸಮೀಪಿಸುತ್ತಿದೆ. ಗಂಗೂಲಿಯವರನ್ನು ರಾಜಕೀಯದತ್ತ ಸೆಳೆಯಲು ಬಿಜೆಪಿ ಯಶಸ್ವಿಯಾಗುತ್ತಾ? ಎಂಬ ಪ್ರಶ್ನೆ ಕುತೂಹಲ ಕಾರಿಯಾಗಿಯೇ ಉಳಿದಿದೆ.

ದೀದಿ ವಿರುದ್ಧದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಅಚ್ಚರಿಯಾಗಿ ಉಳಿದರು ಬಿಜೆಪಿ ಮಾತ್ರಾ ಚುನಾವಣೆಯಲ್ಲಿ ಟಿಎಂಸಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣತೊಟ್ಟಿದೆ. ಪ್ರಧಾನಿ ಮೋದಿ ಮತ್ತು ಬ್ಯಾನರ್ಜಿ ನಡುವಿನ ವಾಕ್ ಸಮರ ತೀವ್ರವಾಗಿದ್ದು, ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ, ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತದೆ ಎಂದು ಕೇಂದ್ರ ಬಿಜೆಪಿ ನಾಯಕರ ವಿರುದ್ಧ ದೀದಿ ನೇರಾನೇರಾ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಚುನಾವಣೆ ಒಂದು ರೀತಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಯುದ್ಧ ಸಾರಿದಂತಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com