ಕರೋನಾ ತಡೆಗಟ್ಟುವಿಕೆಯಲ್ಲಿ ಮಧ್ಯಂತರ ಯಶಸ್ಸು ಕಂಡ ಕೊವಾಕ್ಸಿನ್ -ಭಾರತ್‌ ಬಯೋಟೆಕ್

ದೇಶದ ಪ್ರಮುಖ ಔಷಧ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಲಿಮಿಟೆಡ್‌ನ ಕೋವಾಕ್ಸಿನ್ ಲಸಿಕೆಯು ಕೋವಿಡ್‌ 19 ಸಾಂಕ್ರಮಿಕವನ್ನು ತಡೆಗಟ್ಟುವಲ್ಲಿ ಶೇಕಡಾ 81 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಬುಧವಾರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
ಕರೋನಾ ತಡೆಗಟ್ಟುವಿಕೆಯಲ್ಲಿ ಮಧ್ಯಂತರ ಯಶಸ್ಸು ಕಂಡ ಕೊವಾಕ್ಸಿನ್ -ಭಾರತ್‌ ಬಯೋಟೆಕ್

ಇಡೀ ಜಗತ್ತನ್ನೆ ತಲ್ಲಣಗೊಳಿಸಿ ಲಕ್ಷಾಂತರ ಜೀವಗಳನ್ನು ಬಲಿಪಡೆದ ಕೋವಿಡ್‌19 ಎಂಬ ಸಾಂಕ್ರಮಿಕ ಖಾಯಿಲೆಯು ಈಗಲೂ ಕೂಡ ಜನರಿಗೆ ತೊಂದರೆ ಕೊಡುತ್ತಿದೆ. ಇಂದಿಗೂ ದೇಶದಲ್ಲಿ ನಿತ್ಯ 12 ಸಾವಿರಕ್ಕೂ ಅಧಿಕ ಹೊಸ ಕೋವಿಡ್‌ ಪ್ರಕರಣಗಳು ವರದಿ ಆಗುತ್ತಿವೆ. ಅನೇಕ ತಿಂಗಳುಗಳ ಪ್ರಯತ್ನದ ನಂತರ ನಮ್ಮ ದೇಶದಲ್ಲಿ ಕೋವಿಡ್‌ ನಿರೋಧಕ ಲಸಿಕೆಯನ್ನೂ ಕಂಡು ಹಿಡಿಯಲಾಗಿದೆ. ಆದರೆ ಇದೀಗ ಈ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆಯೇ ಅನುಮಾನ ಎದ್ದಿದೆ. ಈ ಅನುಮಾನ ಬರಲು ಮುಖ್ಯ ಕಾರಣವೆಂದರೆ ದೇಶಾದ್ಯಂತ ಕರೋನಾ ನಿರೋಧಕ ಲಸಿಕೆ ಪಡೆದ ಕೆಲವು ರೋಗಿಗಳು ನಂತರ ಸಾವನ್ನಪ್ಪಿದ್ದರು. ಇದೀಗ ನಿನ್ನೆ ಮಹಾರಾಷ್ಟ್ರದ ಭಿವಂಢಿಯ ಆಸ್ಪತ್ರೆಯೊಂದರಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಎರಡನೇ ಡೋಸ್‌ ಲಸಿಕೆ ಪಡೆದ ನಂತರ ಸಾವನ್ನಪ್ಪಿದ್ದಾರೆ. ಈ ಸಾವಿಗೆ ಕಾರಣ ಇನ್ನೂ ನಿಗೂಢವಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ದೇಶದ ಪ್ರಮುಖ ಔಷಧ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಲಿಮಿಟೆಡ್‌ನ ಕೋವಾಕ್ಸಿನ್ ಲಸಿಕೆಯು ಕೋವಿಡ್‌ 19 ಸಾಂಕ್ರಮಿಕವನ್ನು ತಡೆಗಟ್ಟುವಲ್ಲಿ ಶೇಕಡಾ 81 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಬುಧವಾರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿ ಕೋವಾಕ್ಸಿನ್‌ ಲಸಿಕೆ ಬಳಕೆಗೆ ಅನುಮೋದನೆ ಪಡೆದ ಎರಡು ತಿಂಗಳ ನಂತರ ಈ ಪ್ರಕಟಣೆ ನೀಡಿದೆ. ಕೋವಾಕ್ಸಿನ್ ಎರಡನೇ ಡೋಸ್ ನೀಡಿದ ನಂತರ ಮೊದಲಿನ ಸೋಂಕು ಇಲ್ಲದವರಲ್ಲಿ ಪರಿಣಾಮಕಾರಿತ್ವ ಕಂಡುಬಂದಿದೆ. ಚುಚ್ಚುಮದ್ದನ್ನು ಪಡೆದ ನಂತರ ಒಬ್ಬ ವ್ಯಕ್ತಿಯು ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಎಷ್ಟು ಎಂಬುದರ ಅಂದಾಜು ಪರಿಣಾಮಕಾರಿತ್ವವಾಗಿದೆ.

ಭಾರತ್ ಬಯೋಟೆಕ್ ನೀಡಿರುವ ಹೇಳಿಕೆಯಲ್ಲಿ, ಒಟ್ಟು ಲಸಿಕೆ ಪಡೆದ 25,800 ಜನರು 1: 1 ಅನುಪಾತದಲ್ಲಿ ಲಸಿಕೆ ಅಥವಾ ಪ್ಲಸೀಬೊವನ್ನು ಪಡೆದುಕೊಂಡಿದ್ದಾರೆ. ಲಸಿಕೆ ಪಡೆದವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ತೋರಿಸಿದೆ. ಎರಡನೇ ಡೋಸ್ ನಂತರ ಮೊದಲಿನ ಸೋಂಕು ಇಲ್ಲದವರಲ್ಲಿ COVID-19 ಅನ್ನು ತಡೆಗಟ್ಟುವಲ್ಲಿ 81% ಮಧ್ಯಂತರ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ. ಹೆಚ್ಚಿನ ಅಂಕಿ ಅಂಶವನ್ನು ಸಂಗ್ರಹಿಸಲು ಮತ್ತು ಹೆಚ್ಚುವರಿ ದ್ವಿತೀಯ ಅಧ್ಯಯನದ ಅಂತಿಮ ಪರೀಕ್ಷೆಗಳಲ್ಲಿ ಕೋವಾಕ್ಸಿನ್ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು 130 ದೃಢೀಕರಿಸಿದ ಪ್ರಕರಣಗಳಲ್ಲಿ ಅಂತಿಮ ವಿಶ್ಲೇಷಣೆಗೆ ಕ್ಲಿನಿಕಲ್ ಪ್ರಯೋಗ ಮುಂದುವರೆಸಲಾಗುತ್ತಿದೆ ಎಂದೂ ಕಂಪೆನಿ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೋವಾಕ್ಸಿನ್ ಅನ್ನು ಸ್ಥಳೀಯವಾಗಿ ಉತ್ಪಾದಿಸಲಾಗಿದ್ದು ದೇಹವನ್ನು ವೈರಸ್‌ ಪರೀಕ್ಷೆಗೊಳಪಡಿಸಲು ನಿಷ್ಕ್ರಿಯಗೊಂಡಿರುವ ವೈರಸ್‌ನಿಂದ ಪ್ರತಿರೋಧಕ ತಯಾರು ಮಾಡಲ್ಪಟ್ಟಿದೆ ಆದರೆ ಅದರ ವೈರಲೆನ್ಸ್ ಅಲ್ಲ. ಇದು ವೈರಸ್ ಆಧಾರಿತ ಲಸಿಕೆ ಎಂದು ತಜ್ಞರು ಭಾವಿಸಿದ್ದರಿಂದ ಅದು ರೂಪಾಂತರಿತ ತಳಿಗಳ ವಿರುದ್ಧ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಅದರ ಆರಂಭಿಕ ಅನುಮೋದನೆಗೆ ಇದು ಕಾರಣವಾಗಿದೆ. ಆಧರೆ ಲಸಿಕೆ ಬಗ್ಗೆ ದೇಶದ ಕೆಲವು ಭಾಗಗಳಲ್ಲಿ ಇನ್ನೂ ಸಂಶಯ ಹಾಗೆ ಉಳಿದಿದೆ. ಛತ್ತೀಸ್‌ಘಡ ರಾಜ್ಯ ಇದನ್ನು ಬಳಸಲು ನಿರಾಕರಿಸಿದೆ. ಇದೀಗ ಕಂಪೆನಿ ಬಿಡುಗಡೆ ಮಾಡಿರುವ ಪರಿಣಾಮಕಾರಿತ್ವದ ಅಂಕಿ ಅಂಶ ಪರಿಶೀಲಿಸಿದ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದು.

ಮೂರನೇ ಹಂತದ ಅಧ್ಯಯನಕ್ಕಾಗಿ 18-98 ವರ್ಷದೊಳಗಿನ 25,800 ಜನರನ್ನು ಗುರುತಿಸಲಾಗಿದೆ. ಇವರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 2,433 ಮತ್ತು ಕೊಮೊರ್ಬಿಡಿಟಿಗಳೊಂದಿಗೆ ಇರುವ 4,500 ಮಂದಿ ಸೇರಿದ್ದಾರೆ. ಮೊದಲ ಮಧ್ಯಂತರ ವಿಶ್ಲೇಷಣೆಯು 43 ಕೋವಿಡ್ -19 ಪ್ರಕರಣಗಳನ್ನು ಆಧರಿಸಿದ್ದು ಅವುಗಳಲ್ಲಿ 36 ಪ್ಲೇಸ್‌ಬೊ ಪ್ರಕರಣಗಳು ಮತ್ತು ಏಳು ಪ್ರಕರಣಗಳು ಲಸಿಕೆ ಗುಂಪಿನಲ್ಲಿ ಕಂಡುಬರುವ ಗುಣ ಲಕ್ಷಣಗಳನ್ನು ಆಧರಿಸಿದೆ. ಇದರ ಅಧ್ಯಯನ ಆಧರಿಸಿ ಲಸಿಕೆ ಪರಿಣಾಮಕಾರಿತ್ವವು ಶೇಕಡಾ 80.6 ರಷ್ಟು ಎಂದು ಅಂದಾಜು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಇಂದು ಲಸಿಕೆ ಆವಿಷ್ಕಾರದಲ್ಲಿ ಒಂದು ಪ್ರಮುಖ ಮೈಲಿಗಲ್ಲು, ಆಗಿದ್ದು ಕರೋನವೈರಸ್ ವಿರುದ್ಧದ ನಮ್ಮ ಹೋರಾಟ ಯಶಸ್ವಿ ಆಗುತ್ತಿದೆ. ನಮ್ಮ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಇಂದಿನ ಫಲಿತಾಂಶಗಳೊಂದಿಗೆ, ನಾವು ಈಗ 27,000 ಜನರನ್ನು ಒಳಗೊಂಡ ಹಂತ 1, 2, ಮತ್ತು 3 ಪ್ರಯೋಗಗಳಿಂದ ನಮ್ಮ COVID-19 ಲಸಿಕೆಯ ಅಂಕಿ ಅಂಶಗಳನ್ನು ವರದಿ ಮಾಡಿದ್ದೇವೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ಹೇಳಿದರು. COVAXIN® ಲಸಿಕೆಯು ಕೋವಿಡ್‌19 ಸಾಂಕ್ರಮಿಕದ ವಿರುದ್ಧ ಹೆಚ್ಚಿನ ಕ್ಲಿನಿಕಲ್ ಪರಿಣಾಮಕಾರಿತ್ವವನ್ನು ತೋರಿಸುತ್ತಿದೆ. ಆದರ ವೇಗವಾಗಿ ಹೊರಹೊಮ್ಮುತ್ತಿರುವ ರೂಪಾಂತರಗಳ ವಿರುದ್ಧ ಗಮನಾರ್ಹವಾದ ಇಮ್ಯುನೊಜೆನೆಸಿಟಿಯನ್ನು ಸಹ ತೋರಿಸುತ್ತದೆ ಎಂದು ಎಲಾ ಹೇಳಿದರು.ಮಧ್ಯಂತರ ವಿಶ್ಲೇಷಣೆಯು ಸುರಕ್ಷತಾ ದತ್ತಸಂಚಯದ ಪ್ರಾಥಮಿಕ ಪರೀಕ್ಷೆಯನ್ನು ಒಳಗೊಂಡಿತ್ತು, ಇದು ತೀವ್ರ, ಗಂಭೀರ ಮತ್ತು ವೈದ್ಯಕೀಯವಾಗಿ ಪ್ರತಿಕೂಲ ಪರಿಣಾಮಗಳು ಕಡಿಮೆ ಮಟ್ಟದಲ್ಲಿ ಸಂಭವಿಸಿವೆ ಮತ್ತು ಲಸಿಕೆ ಮತ್ತು ಪ್ಲಸೀಬೊ ಗುಂಪುಗಳ ನಡುವೆ ಸಮತೋಲನಗೊಂಡಿವೆ ಎಂದು ತೋರಿಸಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಶ್ಲೇಷಣೆಯು ಲಸಿಕೆ ಪ್ರೇರಿತ ಪ್ರತಿಕಾಯಗಳು ಯುಕೆ ರೂಪಾಂತರದ ತಳಿಗಳು ಮತ್ತು ಇತರ ತಳಿಗಳನ್ನು ತಟಸ್ಥಗೊಳಿಸಬಹುದು ಎಂದು ಹೇಳೀದೆ. ಇದನ್ನು ಬಯೋಆರ್‌ಕ್ಸಿವ್‌ನಲ್ಲಿ ಪ್ರಕಟಿಸಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com