ಸುಲಲಿತ ಜೀವನ ಸೂಚ್ಯಂಕ: ಬೆಂಗಳೂರಿಗೆ ಅಗ್ರಸ್ಥಾನ

ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಶಿಮ್ಲಾ ಮೊದಲ ಸ್ಥಾನ ಪಡೆದಿದೆ. ಭುಬನೇಶ್ವರ್‌, ಸಿಲ್ವಾಸ, ಕಕಿನಾಡ, ಸೇಲಂ, ವೆಲ್ಲೂರ್‌, ಗಾಂಧಿನಗರ್‌ ನಂತರದ ಸ್ಥಾನ ಪಡೆದಿದೆ. ದಾವಣೆಗೆರೆ ಒಂಭತ್ತನೇ ಸ್ಥಾನ ಪಡೆದಿದೆ
ಸುಲಲಿತ ಜೀವನ ಸೂಚ್ಯಂಕ: ಬೆಂಗಳೂರಿಗೆ ಅಗ್ರಸ್ಥಾನ

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್‌ ಸಿಂಗ್‌ ಪುರಿ ಗುರುವಾರ ಅತ್ಯುತ್ತಮವಾಗಿ ಜೀವನ ಸಾಗಿಸುವ ಭಾರತದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಅದರಂತೆ, ಸುಲಲಿತ ಜೀವನ ಸೂಚ್ಯಂಕ’ದ (EoLI- Ease of Living Index) 111 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡದಿದೆ. ಪುಣೆ, ಅಹಮದಾಬಾದ್‌, ಚೆನ್ನೈ, ಸೂರತ್‌, ನವಿ ಮುಂಬೈ, ಕೊಯಂಬತ್ತೂರು ಮತ್ತು ವಡೋದರಾ ನಂತರದ ಸ್ಥಾನಗಳನ್ನು ಪಡೆದಿವೆ. ಇಂದೋರ್‌ ಮತ್ತು ಗ್ರೇಟರ್‌ ಮುಂಬೈ ಕ್ರಮವಾಗಿ 9 ನೇ ಮತ್ತು 10 ನೇ ಸ್ಥಾನ ಪಡೆದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಶಿಮ್ಲಾ ಮೊದಲ ಸ್ಥಾನ ಪಡೆದಿದೆ. ಭುಬನೇಶ್ವರ್‌, ಸಿಲ್ವಾಸ, ಕಕಿನಾಡ, ಸೇಲಂ, ವೆಲ್ಲೂರ್‌, ಗಾಂಧಿನಗರ್‌ ನಂತರದ ಸ್ಥಾನ ಪಡೆದಿದೆ. ದಾವಣೆಗೆರೆ ಒಂಭತ್ತನೇ ಸ್ಥಾನ ಪಡೆದಿದೆ.

10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ವಿಭಾಗದಲ್ಲಿ ‘ಮುನ್ಸಿಪಾಲ್‌ ಕಾರ್ಯಕ್ಷಮತೆ ಸೂಚ್ಯಂಕ’ದಲ್ಲಿ ಇಂದೋರ್‌ ನಗರ ಮೊದಲ ಸ್ಥಾನ ಪಡೆದಿದೆ. ಸೂರತ್‌, ಭೋಪಾಲ್‌ ಅನಂತರ ಸ್ಥಾನ ಪಡೆದಿವೆ.

10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗದಲ್ಲಿ ನವದೆಹಲಿ ಮಹಾನಗರ ಪಾಲಿಕೆಯು ‘ಮಹಾನಗರ ಪಾಲಿಕೆ ಕಾರ್ಯಕ್ಷಮತೆ ಸೂಚ್ಯಂಕ’ದಲ್ಲಿ ಮೊದಲ ಸ್ಥಾನ ಪಡೆದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com