ದೆಹಲಿ ಸ್ಥಳೀಯ ನಗರ ಸಂಸ್ಥೆ ಚುನಾವಣೆ: AAPಗೆ ಭರ್ಜರಿ ಗೆಲುವು, ಬಿಜೆಪಿಗೆ ನಿರಾಸೆ

ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟು ಲಭಿಸಿತ್ತು. ಆದರೆ, ಈ ಬಾರಿ ಅದೂ ಇಲ್ಲದಂತಾಗಿ ಶೂನ್ಯ ಸಾಧನೆ ದಾಖಲಿಸಿದೆ.
ದೆಹಲಿ ಸ್ಥಳೀಯ ನಗರ ಸಂಸ್ಥೆ ಚುನಾವಣೆ: AAPಗೆ ಭರ್ಜರಿ ಗೆಲುವು, ಬಿಜೆಪಿಗೆ ನಿರಾಸೆ

ದೆಹಲಿ ಸ್ಥಳಿಯ ನಗರ ಸಂಸ್ಥೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಭರ್ಜರಿ ಗೆಲುವು ದಾಖಲಿಸಿದೆ. 5 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಆಪ್‌ ತನ್ನದಾಗಿಸಿಕೊಂಡಿದೆ. ಉಳಿದ ಒಂದು ಸ್ಥಾನ ಕಾಂಗ್ರೆಸ್‌ ಗೆದ್ದುಕೊಂಡಿದ್ದು, ಬಿಜೆಪಿಗೆ ಭಾರಿ ನಿರಾಸೆಯಾಗಿದೆ.

ಕಲ್ಯಾಣ್‌ಪುರಿ, ರೋಹಿಣಿ – ಸಿ, ತ್ರಿಲೋಕ್‌ಪುರಿ, ಶಾಲಿಮಾರ್‌ ಬಾಘ್‌ ಕ್ಷೇತ್ರವನ್ನು ಆಮ್‌ ಆದ್ಮಿ ಪಕ್ಷ ಗೆದ್ದುಕೊಂಡರೆ, ಉಳಿದ ಚೌಹಾನ್‌ ಬಾಂಗರ್‌ ಕ್ಷೇತ್ರವು ಕಾಂಗ್ರೆಸ್‌ ಪಾಲಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟು ಲಭಿಸಿತ್ತು. ಆದರೆ, ಈ ಬಾರಿ ಅದೂ ಇಲ್ಲದಂತಾಗಿ ಶೂನ್ಯ ಸಾಧನೆ ದಾಖಲಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭರ್ಜರಿ ಗೆಲುವಿನ ಬಳಿಕ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯ ಫಲ ಇದು ಎಂದು ಹೇಳಿದ್ದಾರೆ.

“ಕಳೆದ 15 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರಗಳು ಈಗ ನಮ್ಮ ಪಾಲಾಗಿವೆ. ದೆಹಲಿಯಲ್ಲಿ ನಡೆದ ಎಲ್ಲಾ ಅಹಿತಕರ ಘಟನೆಗಳಿಗೂ ಬಿಜೆಪಿಯೇ ಮೂಲ ಕಾರಣ,” ಎಂದು ಹೇಳಿದ್ದಾರೆ.

ಈ ಹಿಂದೆ ಇದ್ದಂತಹ ಕೌನ್ಸಿಲರ್‌ಗಳು ವಿಧಾನಸಭಾ ಶಾಸಕರಾಗಿ ಆಯ್ಕೆಯಾದ ಕಾರಣ ಉಪ ಚುನಾವಣೆ ನಡೆದಿತ್ತು.

ಫಲಿತಾಂಶದ ಕುರಿತಾಗಿ ಮಾತನಾಡಿರುವ ದೆಹಲಿ ಬಿಜೆಪಿ ಅಧ್ಯಕ್ಷರಾದ ಆದೇಶ್‌ ಗುಪ್ತ ಅವರು, ಜನರ ತೀರ್ಮಾನವನ್ನು ನಾವು ಗೌರವಿಸುತ್ತೇವೆ. ಶಾಲಿಮಾರ್‌ ಬಾಘ್‌ನಲ್ಲಿ ಸೋಲು ಕಾಣಲು ಇದ್ದಂತಹ ಕಾರಣಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲಾಗುವುದು. 2022ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವತ್ತ ನಾವು ಗಮನ ಹರಿಸಲಿದ್ದೇವೆ, ಎಂದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com