ಮಾಹಿತಿ ತಂತ್ರಜ್ಞಾನದ ಹೊಸ ನಿಯಮ‌ ನಮ್ಮ ಡಿಜಿಟಲ್ ಹಕ್ಕುಗಳನ್ನು ಕಿತ್ತುಕೊಳ್ಳಲಿದೆಯೇ?

Draft intermediary rules 2018 ಈಗ ಮಾಹಿತಿ ತಂತ್ರಜ್ಞಾನ ನಿಯಮಗಳು (intermediary guidelines and digital media ethics ) ನಿಯಮಗಳು 2021 ಆಗಿ ರೂಪಾಂತರಗೊಂಡಿವೆ. 2021ರ ಪ್ರಸ್ತಾವಿತ ನಿಬಂಧನೆಯಲ್ಲಿ ಸುದ್ದಿ ಮತ್ತು ಪ್ರಸಕ್ತ ಮಾಹಿತಿಗಳನ್ನು ಪ್ರಕಟಿಸುವವರಿಗೂ ಮಾರ್ಗಸೂಚಿಗಳಿವೆ.
ಮಾಹಿತಿ ತಂತ್ರಜ್ಞಾನದ ಹೊಸ ನಿಯಮ‌ ನಮ್ಮ ಡಿಜಿಟಲ್ ಹಕ್ಕುಗಳನ್ನು ಕಿತ್ತುಕೊಳ್ಳಲಿದೆಯೇ?


ಡಿಸೆಂಬರ್ 24, 2018ರಂದು 'ಇಂಡಿಯನ್ ಎಕ್ಸ್ಪ್ರೆಸ್' ಸರ್ಕಾರದ ಅಧಿಕಾರಿಗಳು ಮತ್ತು ಸೋಶಿಯಲ್ ಮೀಡಿಯಾ ಕಂಪೆನಿಗಳ ಪ್ರತಿನಿಧಿಗಳು ಗೌಪ್ಯವಾಗಿ ಸಭೆ ಸೇರಿ 'ಮಾಹಿತಿ ತಂತ್ರಜ್ಞಾನ ಕಾಯ್ದೆ 2020'ಕ್ಕೆ ತಿದ್ದುಪಡಿಯ ಪ್ರಸ್ತಾಪನೆ‌ ಸಲ್ಲಿಸಿರುವುದನ್ನು ವರದಿ ಮಾಡಿತ್ತು.

ಆ ಬಳಿಕ 'ಇಂಟರ್ನೆಟ್ ಫ್ರೀಡಂ ಫೌಂಡೇಶನ್' ಎಂಬ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕರಡು ನಿಯಮಗಳನ್ನು‌ ಅಧಿಕಾರಿಗಳಿಂದ ಸಂಪಾದಿಸಿಕೊಂಡಿತ್ತು. ಮೊದಲಿಗೆ‌ ಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಪ್ರಸ್ತಾವಿತ ಬದಲಾವಣೆಗಳ ಮಾಹಿತಿಯನ್ನು ನಿರಾಕರಿಸಿದರೂ ನಂತರ ಅದನ್ನು ಅಂಗೀಕರಿಸಿದರು ಮತ್ತು ಸಾರ್ವಜನಿಕ ಸಮಾಲೋಚನೆಯನ್ನೂ‌ ಪ್ರಾರಂಭಿಸಿದರು. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅಥವಾ ಸೇವಾ ಪೂರೈಕೆದಾರರಿಗೆ ಹೊಣೆಗಾರಿಕೆ ವಿನಾಯಿತಿಗಳಲ್ಲಿ ಬದಲಾವಣೆಗಳನ್ನು ಮಾಡುವ ಪ್ರಸ್ತಾಪಗಳ ಬಗ್ಗೆ ಚರ್ಚೆ ಪ್ರಾರಂಭಿಸಲಾಯಿತು.

ಈ‌ ಪ್ಲ್ಯಾಟ್‌ಫಾರ್ಮ್‌ಗಳು‌ ನಮ್ಮನ್ನು ಇತರರೊಂದಿಗೆ ಸಂಪರ್ಕಿಸುವ, ನಮ್ಮ ಡೇಟಾವನ್ನು ಹೋಸ್ಟ್ ಮಾಡುವ, ನಮ್ಮ‌ ಪೋಸ್ಟ್‌ಗಳನ್ನು‌‌ ಅಪ್ಲೋಡ್ ಮಾಡುವ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ. ಅದರ ಜೊತೆಗೆ ನಮ್ಮ ಗೌಪ್ಯತೆಯ ಮೇಲೂ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿವೆ. ಹಾಗಿರುವಾಗ ಯಾವುದೇ ಸ್ಪಷ್ಟ ನೀತಿನಿಯಮಗಳನ್ನು ನೇರವಾಗಿ ಹೇಳದ MeitYಯ ಪ್ರಸ್ತಾವಿತ ಕಾನೂನು ಸಹಜವಾಗಿಯೇ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇರುವವರನ್ನು ಚಿಂತೆಗೀಡು ಮಾಡಿತು. 'ಇಂಟರ್ನೆಟ್ ಫ್ರೀಡಂ ಫೌಂಡೇಶನ್'ವರು ಪ್ರಸ್ತಾವಿತ ಕಾನೂನಿನ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೂ ಇದೇ ಕಾರಣಕ್ಕೆ.

ಡಿಸೆಂಬರ್ 2018 ರ ಆವೃತ್ತಿಯಲ್ಲಿ ಮೀಟಿವೈ ಪ್ರಸ್ತಾಪಿಸಿದ ವಿವಾದಾತ್ಮಕ ನಿಬಂಧನೆಗಳಲ್ಲಿ ಅಂತರ್ಜಾಲದಲ್ಲಿನ ಮಾಹಿತಿಯ ಮೂಲವನ್ನು ಪತ್ತೆಹಚ್ಚುವಿಕೆ ಮತ್ತು ಸಂದೇಶ ಕಳುಹಿಸುವಿಕೆಯ ಮಾಹಿತಿಯ ಮೂಲವನ್ನು ಪತ್ತೆಹಚ್ಚುವಿಕೆಯೂ‌ ಸೇರಿದೆ. ಇದು ಇತ್ತೀಚಿನ ಆವೃತ್ತಿಯಲ್ಲೂ ಸಹ ಇದೆ. ಈ ಸಂಬಂಧ ಸುಪ್ರೀಂ ಕೋರ್ಟಿನಲ್ಲೂ ದಾವೆ ಹೂಡಲಾಗಿದೆ. ಈ ಪ್ರಕರಣವು‌ ಮೊದಲು ತಮಿಳುನಾಡು ಹೈಕೋರ್ಟ್‌ನಲ್ಲಿ ಪಿಐಎಲ್ ಆಗಿ ಆಧಾರ್ ಅನ್ನು ಸಾಮಾಜಿಕ ಮಾಧ್ಯಮ ಖಾತೆಗಳೊಂದಿಗೆ ಲಿಂಕ್ ಮಾಡಲು ಕೋರಿತು. ಆದರೆ ವಿಚಾರಣೆಯ ಸಮಯದಲ್ಲಿ, ವಾಟ್ಸ್‌ಆ್ಯಪ್‌ನಂತಹ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾದ ಪ್ಲ್ಯಾಟ್‌ಫಾರ್ಮ್‌ಗಳ ಮಾಹಿತಿಯ ಮೂಲವನ್ನು ಪತ್ತೆಹಚ್ಚುವತ್ತ ಗಮನ ಹರಿಸಲಾಯಿತು ಮತ್ತು ನಂತರ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲಾಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್ ಮುಂತಾದ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವ ಸಂಭಾವ್ಯ ಶಾಸನಗಳ ಬಗ್ಗೆ ಮಾಧ್ಯಮ ವರದಿ ಮಾಡಿವೆ. ವಿಶೇಷವಾಗಿ ವೆಬ್ ಸರಣಿ ತಾಂಡವ್ ಬಗ್ಗೆ ಇತ್ತೀಚಿನ ವಿವಾದದ ನಂತರ ಮಾಹಿತಿ ಮತ್ತು ಪ್ರಸಾರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮಾರ್ಗಸೂಚಿಗಳನ್ನು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.

Draft intermediary rules 2018 ಈಗ ಮಾಹಿತಿ ತಂತ್ರಜ್ಞಾನ ನಿಯಮಗಳು (intermediary guidelines and digital media ethics ) ನಿಯಮಗಳು 2021 ಆಗಿ ರೂಪಾಂತರಗೊಂಡಿವೆ. 2021ರ ಪ್ರಸ್ತಾವಿತ ನಿಬಂಧನೆಯಲ್ಲಿ ಸುದ್ದಿ ಮತ್ತು ಪ್ರಸಕ್ತ ಮಾಹಿತಿಗಳನ್ನು ಪ್ರಕಟಿಸುವವರಿಗೂ ಮಾರ್ಗಸೂಚಿಗಳಿವೆ.

ನಿಯಮ 8 ರ ಉಪ-ನಿಯಮ (3) ರ ಅಡಿಯಲ್ಲಿ, ನಿಯಮಗಳು ಸಂಹಿತೆಯನ್ನು ಪಾಲಿಸಲು ಮತ್ತು ಅನುಸರಿಸಲು ಮೂರು ಹಂತಗಳಲ್ಲಿ ನಿರ್ದೇಶನ ನೀಡುತ್ತದೆ,
ಹಂತ 1 - ಸ್ವಯಂ ನಿಯಂತ್ರಣ ಹಂತ 2- ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ”ಹಂತ 3 - ಕೇಂದ್ರ ಸರ್ಕಾರದ ಮೇಲ್ವಿಚಾರಣೆ. ಇದರ ಅರ್ಥ ಸರ್ಕಾರದ ಮೇಲ್ವಿಚಾರಣೆ ಮತ್ತು ಸೆನ್ಸಾರ್‌ಶಿಪ್ ಹೆಚ್ಚಲಿದೆ.

ಭಾರತದಲ್ಲಿ ಒಟಿಟಿ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಂಭಾವ್ಯ ಶಾಸನವು ವೈಯಕ್ತಿಕ ಹಕ್ಕುಗಳಿಗೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಅಪಾರ ಹಾನಿ ಉಂಟುಮಾಡಬಹುದು. ಇಂದು ಗ್ರಾಹಕವಾಗಿ ಉಳಿದಿಲ್ಲ ಬದಲಾಗಿ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಪ್ರೇಕ್ಷಕರಿಗೆ ಉದ್ಯೋಗ ಮತ್ತು ಮನರಂಜನೆಯನ್ನು ಒದಗಿಸುವ ಉತ್ತಮ ಗುಣಮಟ್ಟದ ನಿರ್ಮಾಕವೂ ಹೌದು. ಇತರ ದೇಶಗಳೊಂದಿಗೆ ಸಕ್ರಿಯವಾಗಿ ಗುಣಮಟ್ಟದಲ್ಲಿ ಸ್ಪರ್ಧಿಸುತ್ತದೆ. ಸಾಂಪ್ರದಾಯಿಕ ಸಿನೆಮಾ ಅಥವಾ ಟೆಲಿವಿಷನ್ ಆಧಾರಿತ ನಿಯಂತ್ರಣವು ಈ ವಲಯವನ್ನು ಸರಿಪಡಿಸಲಾಗದಂತೆ ಹಾನಿಗೊಳಿಸಬಹುದು. ಅಂತಹ ಯಾವುದೇ ನಿಯಂತ್ರಣವು ನಾಗರಿಕರ ಡಿಜಿಟಲ್ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ, ಆರ್ಥಿಕ ಹಾನಿಗೆ ಕಾರಣವಾಗುತ್ತದೆ ಮತ್ತು ಆಧುನಿಕ ಮತ್ತು ಸಮಕಾಲೀನ ವೀಡಿಯೊ ಸ್ವರೂಪಗಳ ಮನರಂಜನೆಯ ಉತ್ಪಾದನೆಯ ಮೂಲಕ ಭಾರತದ ಬೆಳೆಯುತ್ತಿರುವ ಹೊಸ ಸಾಂಸ್ಕೃತಿಕ ಪ್ರಭಾವವನ್ನು ಋಣಾತ್ಮಕವಾಗಿ ಬಿಂಬಿಸಬಹುದು.

ಫೆಬ್ರವರಿ 12, 2021ರಂದು mint ಭಾರತದ 17 ಒಟಿಟಿ ಫ್ಲ್ಯಾಟ್ ಫಾರ್ಮ್‌ಗಳು ಸ್ವಯಂ ನಿಯಂತ್ರಣ ಟೂಲ್‌ಕಿಟ್ ಬಿಡುಗಡೆ ಮಾಡಿದೆ ಎಂದು ವರದಿ ಪ್ರಕಟಿಸಿದೆ.
ಇದಲ್ಲದೆ, ನಿಯಮ 5 ರ ಉಪ-ನಿಯಮ (4) ರ ಅಡಿಯಲ್ಲಿ, ಐಟಿ ನಿಯಮಗಳ ಡ್ರಾಫ್ಟ್ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಸಿಗ್ನಲ್, ಟ್ವಿಟರ್, ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ ಇತ್ಯಾದಿಗಳಿಗೆ ಕಡ್ಡಾಯಗೊಳಿಸಿದೆ.

ಮಾಹಿತಿ ತಂತ್ರಜ್ಞಾನ ನಿಯಮಗಳು 2021, ಭಾರತದಾದ್ಯಂತ ಕೋಟ್ಯಾಂತರ ಬಳಕೆದಾರರು ಅಂತರ್ಜಾಲವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಮೂಲಭೂತವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತಾಪಿಸಲಾದ ಹಲವು ಬದಲಾವಣೆಗಳು ಆತಂಕಕಾರಿಯಾಗಿದೆ. 2018ಕ್ಕೂ ಮೊದಲು "ಚೀನೀ ಮಾದರಿ ಆನ್‌ಲೈನ್ ಕಣ್ಗಾವಲು ಮತ್ತು ಸೆನ್ಸಾರ್‌ಶಿಪ್" ಎಂದು ಇದನ್ನು ಕರೆಯಲಾಗುತ್ತಿತ್ತು. ಪ್ರಸ್ತಾವಿತ ಕಾನೂನಿನಲ್ಲಿ ಆನ್ಲೈನ್ ನ್ಯೂಸ್ ಮೀಡಿಯಾ ಮತ್ತು ವಿಡಿಯೋ ಸ್ಟ್ರೀಮಿಂಗ್ ಪ್ಲ್ಯಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವ ನಿಯಮಗಳಿದ್ದು ಅವು ಕಾನೂನು ಬಾಹಿರ ಮತ್ತು ಅಸಾಂವಿಧಾನಿಕವಾಗಿದೆ. ಬಳಕೆದಾರರ ಧ್ವನಿಯನ್ನು ಅಡಗಿಸುತ್ತದೆ ಮತ್ತು ಖಾಸಗಿತನವನ್ನು ಕಿತ್ತುಕೊಳ್ಳುತ್ತದೆ ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಅಭಿಪ್ರಾಯ ಪಡುತ್ತದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com