ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಪೊಲೀಸರು ಬಿಜೆಪಿ ಮುಖಂಡ ರಾಕೇಶ್ಸಿಂಗ್ಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಕಾರಿನಲ್ಲಿ ಕೋಕೇನ್ ಸಹಿತ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಬಂಗಾಳ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಹಾಗೂ ಅವರ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರು ಸಂಚರಿಸುತ್ತಿದ್ದ ಕಾರಿನಲ್ಲಿ ಲಕ್ಷಾಂತರ ರೂ ಮೌಲ್ಯದ 100 ಗ್ರಾಂ ಕೋಕೇನ್ ನನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಬಂಧಿತ ಆರೋಪಿ ಪಮೇಲಾ ಗೋಸ್ವಾಮಿ ಯವರನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ರಾಕೇಶ್ಸಿಂಗ್ ಅವರ ಪಿತೂರಿಯಿದೆ ಎಂದು ದೂರಿದ್ದರು. ಈ ಸಂಬಂಧ ಪೊಲೀಸರು ಫೆಬ್ರವರಿ 23 ಸಂಜೆ 4 ಗಂಟೆಗೆ ಬಿಜೆಪಿ ಮುಖಂಡ ರಾಕೇಶ್ಸಿಂಗ್ಗೆ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಜನತಾ ಯುವ ಮೋರ್ಚಾ(ಬಿಜೆವೈಎಂ) ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರನ್ನು ಮತ್ತು ಇಬ್ಬರು ಸ್ನೇಹಿತರನ್ನು ದಕ್ಷಿಣ ಕೋಲ್ಕತ್ತಾದ ನ್ಯೂ ಅಲಿಪೋರ್ ಪ್ರದೇಶದಲ್ಲಿ ಫೆಬ್ರವರಿ 19 ಶನಿವಾರದಂದು ಬಂಧಿಸಲಾಗಿತ್ತು. ಕಾರಿನಲ್ಲಿ ಹಾಗು ಆಕೆಯ ಪರ್ಸ್ನಲ್ಲಿದ್ದ 100 ಗ್ರಾಂ ಕೋಕೆನ್ನನ್ನು ವಶಪಡಿಸಿಕೊಳ್ಳಲಾಗಿತ್ತು.