ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು

ದೆಹಲಿಯ‌ ಅಥವಾ ಭಾರತದ ಇತರೆಡೆಯ ರಾಜಕೀಯ ಪ್ರೇರಿತ ಗಲಭೆಯ ಸಂತ್ರಸ್ತರಿಗೆ ಅತ್ಯಂತ ತ್ವರಿತವಾಗಿ ನ್ಯಾಯ ಸಿಗಲಿ. ಪ್ರಜಾಪ್ರಭುತ್ವದ ಉನ್ನತ ಆಶಯಗಳು ಅಧಿಕಾರದ ಆಸೆಗಾಗಿ ಮುಸುಕಾಗದಿರಲಿ.
ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು

ಧಾರ್ಮಿಕ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ನಡೆದ ಕಳೆದ ವರ್ಷದ ದೆಹಲಿ ಗಲಭೆಯು ಕನಿಷ್ಠ 53 ಜನರ ಸಾವಿಗೆ ಕಾರಣವಾಗಿ, 400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಖಾಸಗಿ ಆಸ್ತಿ, ಮನೆಗಳು, ಅಂಗಡಿಗಳು ಮತ್ತು ಮಾರುಕಟ್ಟೆಗಳು ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೊಳಗಾಗಿದ್ದವು. ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದ ಹಿಂಸಾಚಾರವು ಇತರ ನಗರಗಳಿಗೆ ಹರಡಿ ಕೋಮು ಉದ್ವಿಗ್ನತೆ ಮತ್ತು ಭಯ ಹರಡಲು ಹೆಚ್ಚಿನ ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. 1984 ರ ಸಿಖ್ ವಿರೋಧಿ ಗಲಭೆಯ ನಂತರ ರಾಷ್ಟ್ರ ರಾಜಧಾನಿಯನ್ನು ಭಾದಿಸಿದ ಅತ್ಯಂತ ಕೆಟ್ಟ ಕೋಮು ಘಟನೆಯಾಗಿದೆ ಇದು.

ಶೋಚನೀಯ ಸಂಗತಿ ಎಂದರೆ ದಂಗೆಕೋರರನ್ನು, ಹಿಂಸಾ ಪ್ರಿಯರನ್ನು, ಶೂಟರ್‌ಗಳನ್ನು ಆಡಳಿತವೇ ಉತ್ತೇಜಿಸುತ್ತಿರುವುದು. 'ಗೋಲಿ ಮಾರೋ' ಗಳಂತಹ ಹೇಳಿಕೆಗಳ ಮೂಲಕ ಸಾಂಸ್ಥಿಕ ನಿರ್ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.

ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು
ದೆಹಲಿ ಗಲಭೆ ತನಿಖೆ: ಪೊಲೀಸರ ವಿರುದ್ಧ ವ್ಯಾಪಕ ಟೀಕೆ, ಫೇಸ್‌ಬುಕ್‌ಗೆ ಛೀಮಾರಿ!

ಭಜನ್‌ಪುರದ ಝಾಕಿರ್ "ನನ್ನೆದುರಲ್ಲೇ ಪೊಲೀಸರೊಬ್ಬರಿಗೆ ಸ್ಥಳೀಯ ರಾಜಕಾರಣಿಯೊಬ್ಬರು ಕರೆ ಮಾಡಿದ್ದರು. ನೀವು ಚಿಂತಿಸಬೇಡಿ, ಸುನ್ನತ್ ಮಾಡಿದ ಒಬ್ಬರೇ ಒಬ್ಬರನ್ನೂ ಇವತ್ತು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದನ್ನು ನಾನು ಕೇಳಿದ್ದೇನೆ. ಹಾಗಿರುವಾಗ ಅವರಿಂದ ಸಹಾಯ ಹೇಗೆ ನಿರೀಕ್ಷಿಸಲು ಸಾಧ್ಯ ಇತ್ತು? " ಎನ್ನುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿರ್ವಸಿತ ಕುಟುಂಬಗಳು ಈಗ ಹೇಗೆ ಪುನರ್ವಸತಿ ಮಾಡಿಕೊಳ್ಳುತ್ತಿದ್ದಾರೆ ಮತ್ತು ಅವರು ‘ಸಾಮಾನ್ಯ’ ಜೀವನವನ್ನು ಮರಳಿ ಪಡೆಯಲು ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದಾಗ, ಹೆಚ್ಚಿನವರು, ಸ್ಥಳೀಯ ಸಂಸ್ಥೆಗಳು, ಎನ್‌ಜಿಒಗಳು ಮತ್ತು ಸಮುದಾಯ ಆಧಾರಿತ ನೆರವು, ಬೆಂಬಲದಿಂದ ದೊರಕಿದ ಯಾವುದೇ ಸಹಾಯಕ್ಕಾಗಿ ಕೃತಜ್ಞರಾಗಿದ್ದರು.

ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು
ದೆಹಲಿ ಗಲಭೆ: ಶಾಹೀದ್ ಮೃತದೇಹ ಬಯಲು ಮಾಡಿತ್ತು ಪೊಲೀಸರ ನಿಜ ಬಣ್ಣ- Part2

ಪ್ರಭುತ್ವ, ಮಾಧ್ಯಮಗಳು, ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಬರದೇ ಇದ್ದಾಗ ಅವರ ಸಹಾಯಕ್ಕೆ ನಿಂತದ್ದು ಸ್ಥಳೀಯರು. ಅದರಲ್ಲೂ ಅಬಲರು, ನಿರ್ಲಕ್ಷಿತರು ಎಂದೇ‌ ಮುಖ್ಯವಾಹಿನಿಯಿಂದ ಪರಿಗಣಿಸಲ್ಪಟ್ಟ ಮಹಿಳೆಯರು.

"ನಾನು ಮುಂಜಾನೆಯಿಂದ ತಡರಾತ್ರಿಯವರೆಗೆ ಆಹಾರ ಬೇಯಿಸಿದ್ದೂ ಇದೆ. ಸಂತ್ರಸ್ತರಿಗೆ ಆಹಾರ ವಿತರಿಸುವ ಜವಾಬ್ದಾರಿಗಿಂತ ಹೆಚ್ಚು ತೃಪ್ತಿಕರವಾಗಿರುವುದು ಮತ್ತೊಂದಿಲ್ಲ" ಎನ್ನುವ 26 ವರ್ಷದ ಜೈಬುನ್ನಿಸಾ "ನನ್ನ ಕೆಲಸವನ್ನು ಬಿಟ್ಟುಬಿಡುವುದು ಅಷ್ಟು ಸುಲಭವಾಗಿರಲಿಲ್ಲ ಏಕೆಂದರೆ ನನ್ನ ಕುಟುಂಬವೂ ಸಹ ತಿನ್ನಬೇಕು. ಆದರೆ ನಾವಲ್ಲದಿದ್ದರೆ ಗಲಭೆ ಪೀಡಿತರಿಗೆ ಯಾರು ಸೇವೆ ಸಲ್ಲಿಸುತ್ತಿದ್ದರು? ” ಎಂದು ಪ್ರಶ್ನಿಸುತ್ತಾರೆ. ಗಲಭೆಕೋರರು ಅವರ ಮನೆಗೆ ದಾಳಿ ಮಾಡಿದ್ದಾಗ " ಒಂದು ಕೈಯಲ್ಲಿ ಆರು ವರ್ಷದ ಮಗುವನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ರೋಲಿಂಗ್‌ ಪಿನ್ ಹಿಡಿದುಕೊಂಡಿದ್ದೆ ಅವತ್ತು" ಎಂದೂ ಅವರು ನೆನಪಿಸಿಕೊಳ್ಳುತ್ತಾರೆ.

ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು
ದೆಹಲಿ ಪೋಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಧೀಶರನ್ನು ವರ್ಗಾಯಿಸಿದ ಮೋದಿ ಸರ್ಕಾರ

ಸಂಜೆ ಹೊತ್ತು ತರಕಾರಿ ಮಾರುವ ಮತ್ತು ದಿನವಿಡೀ‌‌ ಪರಿಹಾರ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವ 38 ವರ್ಷ ವಯಸ್ಸಿನ ಸುಧಾ 500 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸಿದ್ದಾರೆ. "ಮನುಷ್ಯನಾಗಿ ಜನಿಸಿದ ಮೇಲೆ ಒಳ್ಳೆಯ ಕಾರ್ಯಗಳಲ್ಲಿ ತೊಡಗದಿದ್ದರೆ, ಮನುಷ್ಯನಾಗಿ ಹುಟ್ಟಿರುವುದು ನಿಷ್ಪ್ರಯೋಜಕ. ಪರಿಹಾರ ಕಾರ್ಯಕರ್ತಳಾಗಿರುವುದು ನನ್ನ ಬದುಕಿನ ಅತ್ಯಂತ ಒಳ್ಳೆಯ ನಿರ್ಧಾರ ” ಎನ್ನುತ್ತಾರೆ.

ಸೇವಾ ಭಾರತಿಯ ಪರಿಹಾರ ಕಾರ್ಯಕರ್ತೆ ಚಾಂದ್ ಬಿ ಅವರು ಆಕೆಯ ನೆರೆಹೊರೆಯವರ ಮೇಲೆ ನಡೆದ ಭಯಾನಕ ಹಿಂಸಾಚಾರದ ಕುರಿತು “ಅಲ್ಲಿ ಭಗವಾಧ್ವಜಗಳು ಹಾರುತ್ತಿದ್ದವು ಮತ್ತು ಕತ್ತಿಗಳು ಬೀಸಲ್ಪಡುತ್ತಿದವು. ಪೆಟ್ರೋಲ್ ಬಾಂಬುಗಳನ್ನು ಮತ್ತು ಕಲ್ಲುಗಳನ್ನು ಪ್ರತಿಯೊಂದು ದಿಕ್ಕಿನಿಂದಲೂ ಎಸೆಯಲಾಗುತ್ತಿತ್ತು”ಎಂದು ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ. ಹಿಂಸಾಚಾರವು ನಿಯಂತ್ರಣಕ್ಕೆ ಬಂದ ನಂತರ ಚಾಂದ್ ಬಿ ಅವರು ಸಂತ್ರಸ್ತರಿಗೆ ಪಡಿತರ ಮತ್ತು ಕಂಬಳಿಗಳನ್ನು ವಿತರಿಸುವ ಹೊಣೆ ಹೊತ್ತುಕೊಂಡಿದ್ದರು.

ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು
ದೆಹಲಿ ಗಲಭೆ: ಸತ್ಯಶೋಧನಾ ವರದಿಯಲ್ಲಿನ ಸುಳ್ಳುಗಳ ಸರಮಾಲೆ| ಭಾಗ - 1

ಗಲಭೆ ನಡೆದು ಒಂದು ವರ್ಷ ಆಯಿತು. ಅಲ್ಲಲ್ಲಿ ಚದುರಿ ಹೋಗಿರುವ, ಊರು ಬಿಟ್ಟಿರುವ ಗಲಭೆ ಪೀಡಿತರನ್ನು ದೆಹಲಿಗೆ ಮರಳುವ ಬಗ್ಗೆ ಪ್ರಶ್ನಿಸಿದಾಗ ಹೆಚ್ಚಿನವರು "ಬೇರೊಬ್ಬರ ಮನೆಯಲ್ಲಿ, ಅವರು ನಮ್ಮ ಸಂಬಂಧಿಕರಾಗಿದ್ದರೂ ನಾವು ಎಷ್ಟು ದಿನ ವಾಸಿಸಬಹುದು? ನಾವು ಹಿಂತಿರುಗಿ ನಮ್ಮ ಜೀವನವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತೇವೆ" ಎನ್ನುತ್ತಾರೆ. ಹೆಚ್ಚಿನ ಪೀಡಿತ ಕುಟುಂಬಗಳು ಈಗ ಸಾಲ ಮಾಡಿ ಜೀವಿಸುತ್ತಿವೆ ಮತ್ತು ತಮ್ಮ ಮುರಿದ ಮನೆಗಳನ್ನು ಪುನರ್ನಿರ್ಮಿಸಲು ಕತ್ತು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಹಣವನ್ನು ನಗದು ರೂಪದಲ್ಲಿ ಅಥವಾ ಇತರ ಅನೌಪಚಾರಿಕ ರೂಪದಲ್ಲಿ ಸಾಲ ಪಡೆದುಕೊಂಡಿದ್ದಾರೆ.

ಹಣ, ಆಸರೆ, ಉದ್ಯೋಗ ಕಳೆದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಸಾಮರಸ್ಯ, ಬಂಧ ಹಾಳಾಗಿರುವುದರ ಬಗ್ಗೆ ಸಂತ್ರಸ್ತರು ಬೇಸರ ವ್ಯಕ್ತಪಡಿಸುತ್ತಾರೆ. "ಅವರು (ಹಿಂದೂ ನೆರೆಹೊರೆಯವರು) ತಮ್ಮ ಮುಖಗಳನ್ನು ನಮ್ಮಿಂದ ತಿರುಗಿಸುತ್ತಾಋ. ಹಿಂದಿನಂತಿರಲು ಇನ್ನು ಮುಂದೆ ಸಾಧ್ಯವೇ ಆಗುವುದಿಲ್ಲವೇನೋ. ನಾವು ಏನು ಮಾಡಿದ್ದೇವೆ? ದಂಗೆಕೋರರ ಗುಂಪು ನಮ್ಮನ್ನು ದೋಚಿದೆ, ನಮ್ಮವರನ್ನು ಕೊಂದಿದೆ, ನಮ್ಮ ಕಟ್ಟಡಗಳನ್ನು ನಾಶಪಡಿಸಿದೆ. ಆದರೆ ನಮ್ಮ ನೆರೆಹೊರೆಯವರಿಂದ ನಮಗೆ ಯಾವುದೇ ಸಹಾಯ ದೊರೆತಿಲ್ಲ" ಎನ್ನುತ್ತಾರೆ ಶಿವ್ ವಿಹಾರ್ ನಿವಾಸಿ ಹಕೀಂ.

ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು
ದೆಹಲಿ ಗಲಭೆ: ʼಸತ್ಯʼಶೋಧನಾ ವರದಿಯಲ್ಲಿ ಬುಡಮೇಲಾದ ಘಟನಾವಳಿಗಳ ವಿಶ್ಲೇಷಣೆ | ಭಾಗ-2

ಹಲವು ಪೀಡಿತ ಕುಟುಂಬಗಳು ತಮ್ಮ ಜೀವನಕ್ಕಾಗಿ, ನಿರಂತರವಾಗಿ ಭಯಭೀತರಾಗಿ ವಾಸಿಸುವ ಸಂಕಷ್ಟದಿಂದ ಪಾರಾಗುವುದಕ್ಕಾಗಿ ಮತ್ತು ಸಾಮೂಹಿಕ ಅನುಮಾನಾಸ್ಪದವಾಗಿ ಬದುಕುವ ಕಷ್ಟದಿಂದ ಮುಕ್ತಿ ಹೊಂದಲು ಬೇರೆ ರಾಜ್ಯಕ್ಕೆ ವಲಸೆ ಹೋಗುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಗಲಭೆಯಿಂದ ಪೂರ್ಣವಾಗಿ ಕುಸಿದು ಹೋಗಿರುವ ಅವರು ಬೇರೆ ಕಡೆ ಹೋದರೂ ಇದಕ್ಕಿಂತ ಉತ್ತಮ ಪರಿಸ್ಥಿತಿ ಇರಬಹುದು ಎಂದು‌ ನಂಬುವ ಸ್ಥಿತಿಯಲ್ಲಿಲ್ಲ.

ಒಂದು ಸಮುದಾಯವು ಅನುಭವಿಸಿದ ಹಿಂಸಾಚಾರದ ನೆನಪುಗಳಿಂದ ಹೊರಹೊಮ್ಮುವ ಆರ್ಥಿಕ ಹಾನಿ, ಮಾನಸಿಕ ಆಘಾತ, ಭಯ ಮತ್ತು ಆತಂಕಗಳು ದಿನನಿತ್ಯದ ಅಪಹಾಸ್ಯಗಳಿಂದ ಮತ್ತಷ್ಟು ಉಲ್ಬಣಗೊಂಡಿವೆ. ಸ್ಥಳೀಯ ರಾಜ್ಯ-ಆಡಳಿತದ ಬೆಂಬಲದ ಕೊರತೆ, ಪ್ರಜ್ಞಾಪೂರ್ವಕವಾಗಿ ಸಮುದಾಯವೊಂದನ್ನು ಐಸೋಲೇಟ್ ಮಾಡುವುದು ಇವೆಲ್ಲದರಿಂದ ಒಂದಿಡೀ ಸಮುದಾಯವೇ ಮಾನಸಿಕ ಕ್ಷೋಭೆಗೆ ಒಳಗಾದಂತಾಗಿದೆ.

ದೆಹಲಿ ಗಲಭೆಯಲ್ಲಿ ನಿರ್ವಸಿತರಾದವರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ಮಹಿಳೆಯರು
ಪ್ರಭುತ್ವ ಶಾಹಿಗಳ ಕ್ರೊನೋಲಜಿಯೇ ಸರಿ ಎನ್ನುತ್ತಿರುವ ದೆಹಲಿ ಗಲಭೆ ಚಾರ್ಜ್‌ಶೀಟ್

ಯಾವುದೇ ಸಮಾಜದಲ್ಲಿ ಅದರಲ್ಲೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ಸಮಾಜದಲ್ಲಿ ನ್ಯಾಯದ ಪರಿಕಲ್ಪನೆಯು ಅರ್ಥಪೂರ್ಣವಾಗುವುದು ಅದನ್ನು ಬಯಸುವವರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಒದಗಿಸಿದಾಗ ಮಾತ್ರ. ನ್ಯಾಯ ಜಾರಿಯಾಗುವಾಗ ತ್ವರಿತ, ಸಮಯಕ್ಕೆ ಅನುಗುಣವಾಗಿ ಜಾರಿಯಾಗಲು ವಿಫಲವಾದರೆ ಅದು ನ್ಯಾಯ ಅನ್ನಿಸಿಕೊಳ್ಳುವುದಿಲ್ಲ. ದೆಹಲಿಯ‌ ಅಥವಾ ಭಾರತದ ಇತರೆಡೆಯ ಇಂತಹ ರಾಜಕೀಯ ಪ್ರೇರಿತ ಗಲಭೆಯ ಸಂತ್ರಸ್ತರಿಗೆ ಅತ್ಯಂತ ತ್ವರಿತವಾಗಿ ನ್ಯಾಯ ಸಿಗಲಿ. ಪ್ರಜಾಪ್ರಭುತ್ವದ ಉನ್ನತ ಆಶಯಗಳು ಅಧಿಕಾರದ ಆಸೆಗಾಗಿ ಮುಸುಕಾಗದಿರಲಿ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com