ಮುಟ್ಟಿನ ನಿರ್ವಹಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿರುವ ಭಾರತ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಿಮಾಚಲ ಪ್ರದೇಶ, ಗೋವಾ, ತೆಲಂಗಾಣ, ಕೇರಳ, ಮಿಜೋರಾಂ, ಪಶ್ಚಿಮ ಬಂಗಾಳ, ದಾದ್ರಾ ಮತ್ತು ನಾಗ್ರಾ ಹವೇಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹನ್ನೊಂದು ರಾಜ್ಯಗಳ ನಗರ ಪ್ರದೇಶಗಳಲ್ಲಿ 90% ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ಮುಟ್ಟಿನ ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ.
ಮುಟ್ಟಿನ ನಿರ್ವಹಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿರುವ ಭಾರತ

ಮಹಿಳಾ ಸಬಲೀಕರಣಕ್ಕಾಗಿ ಅನೇಕ ಸೂಚನೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (ಎನ್‌ಎಫ್‌ ಹೆಚ್‌ಎಸ್ -5) ರ ವರದಿಯ ಆಧಾರದ ಮೇಲೆ 17 ರಾಜ್ಯಗಳ ಮತ್ತು 5 ಯುಟಿಗಳ ಫ್ಯಾಕ್ಟ್‌ಶೀಟ್ ಅನ್ನು ಭಾರತ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದರಲ್ಲಿ '15-24 ವರ್ಷ ವಯಸ್ಸಿನ ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಆರೋಗ್ಯಕರ ರಕ್ಷಣೆಯ ವಿಧಾನಗಳನ್ನು ಬಳಸುತ್ತಾರೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ರಕ್ತದ ಹರಿವನ್ನು ನಿಯಂತ್ರಿಸಲು ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಸ್ಥಳೀಯ ಅಥವಾ ಕಮರ್ಷಿಯಲ್ ಸ್ಯಾನಿಟರಿ ಪ್ಯಾಡ್, ಮುಟ್ಟಿನ ಕಪ್, ಟ್ಯಾಂಪೂನ್‌ಗಳನ್ನು ಬಳಸುತ್ತಾರೆ. ಈ ವಸ್ತುಗಳನ್ನು ಮುಟ್ಟಿನ ನೈರ್ಮಲ್ಯ ವಸ್ತುಗಳು ಎಂದು ಕರೆಯಲಾಗುತ್ತದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಕಳೆದ ಬಾರಿ ಮಾಡಿದ ಸಮೀಕ್ಷೆಗಿಂತ ಹೆಚ್ಚಳವನ್ನು ತೋರಿಸುತ್ತವೆ. ಎನ್‌ಎಫ್‌ಹೆಚ್‌ಎಸ್ -4 ಮತ್ತು ಎನ್‌ಎಫ್‌ಹೆಚ್ಎಸ್ -5 ಸಮೀಕ್ಷೆಗಳಲ್ಲಿನ ವ್ಯತ್ಯಾಸವನ್ನು ಈ ಚಿತ್ರ ತೋರಿಸುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎನ್ಎಫ್‌ಹೆಚ್ಎಸ್-5ರ ಪ್ರಕಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಗೋವಾ, ದಾದ್ರಾ ಮತ್ತು ನಾಗ್ರಾ ಹವೇಲಿ, ಮಿಜೋರಾಂ, ಕೇರಳ, ತೆಲಂಗಾಣ, ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಎಂಟು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 90% ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ತ್ರಿಪುರ, ಅಸ್ಸಾಂ, ಗುಜರಾತ್, ಮೇಘಾಲಯ ಮತ್ತು ಬಿಹಾರದಲ್ಲಿ 70% ಕ್ಕಿಂತ ಕಡಿಮೆ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ. ತ್ರಿಪುರಾದಲ್ಲಿ 58%, ಪಶ್ಚಿಮ ಬಂಗಾಳದಲ್ಲಿ 51% ಮತ್ತು ಅಸ್ಸಾಂನಲ್ಲೊ 48% ಮಹಿಳೆಯರು ಮಾತ್ರ ಮುಟ್ಟಿನ ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ.

ಎಲ್ಲಾ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಹಾರವು ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಅತಿ ಕಡಿಮೆ ಅಂಕಗಳನ್ನು ಗಳಿಸಿದೆ. ಆದರೆ ಆ ರಾಜ್ಯವು ಎನ್‌ಎಫ್ಎಚ್ಎಸ್4 ಕ್ಕೆ ಹೋಲಿಸಿದರೆ ಎನ್‌ಎಫ್ಎಚ್ಎಸ್- 5 ರಲ್ಲಿ ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಅತಿ ಹೆಚ್ಚು ಶೇಕಡಾವಾರು ಹೆಚ್ಚಳವನ್ನು (ಸುಮಾರು ಎರಡು ಪಟ್ಟು) ತೋರಿಸಿದೆ. ಅಂತೆಯೇ ಅಸ್ಸಾಂ ಮತ್ತು ತ್ರಿಪುರಗಳೂ ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಹೆಚ್ಚಿನ ಶೇಕಡಾವಾರು ಹೆಚ್ಚಳವನ್ನು ತೋರಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಿಮಾಚಲ ಪ್ರದೇಶ, ಗೋವಾ, ತೆಲಂಗಾಣ, ಕೇರಳ, ಮಿಜೋರಾಂ, ಪಶ್ಚಿಮ ಬಂಗಾಳ, ದಾದ್ರಾ ಮತ್ತು ನಾಗ್ರಾ ಹವೇಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹನ್ನೊಂದು ರಾಜ್ಯಗಳ ನಗರ ಪ್ರದೇಶಗಳಲ್ಲಿ 90% ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ಮುಟ್ಟಿನ ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ 75% ಅಥವಾ ಹೆಚ್ಚಿನ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಿಮಾಚಲ ಪ್ರದೇಶ, ಗೋವಾ, ತೆಲಂಗಾಣ, ಕೇರಳ, ಮಿಜೋರಾಂ, ಮತ್ತು ದಾದ್ರಾ ಮತ್ತು ನಾಗ್ರಾ ಹವೇಲಿ ಸೇರಿದಂತೆ ಏಳು ರಾಜ್ಯಗಳ ಮತ್ತು ಯುಟಿ (ಕೇಂದ್ರಾಡಳಿತ ಪ್ರದೇಶಗಳು) ಗಳ ಗ್ರಾಮೀಣ ಪ್ರದೇಶಗಳಲ್ಲಿ‌ ಮಾತ್ರ 90% ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಅಸ್ಸಾಂ, ಮೇಘಾಲಯ, ಗುಜರಾತ್, ಮತ್ತು ಬಿಹಾರದಲ್ಲಿ 70% ಅಥವಾ ಅದಕ್ಕಿಂತ ಕಡಿಮೆ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಿದ್ದಾರೆ. ಲಕ್ಷದ್ವೀಪದ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುವುದರೊಂದಿಗೆ ಮುಟ್ಟಿನ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಪಾಲಿಸುತ್ತಾರೆ.

ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿನ ಎರಡು ಗಮನಾರ್ಹ ಸಮಸ್ಯೆಗಳೆಂದರೆ ಅರಿವು ಮತ್ತು ಲಭ್ಯತೆಯಲ್ಲಿನ ಕೊರತೆ. ಭಾರತದಲ್ಲಿ‌ ಕೈಗೊಂಡ 138 ಅಧ್ಯಯನಗಳು ಮತ್ತು 97,070 ಹದಿಹರೆಯದ ಬಾಲಕಿಯರ ಡಾಟಾವನ್ನು ಬಳಸಿಕೊಂಡು ಮೆಟಾ-ಅನಾಲಿಸಿಸ್ ಅಧ್ಯಯನವನ್ನು ನಡೆಸಲಾಗಿತ್ತು, ಮತ್ತು ಅದರ ವರದಿಯಂತೆ, ಪ್ರತಿ ಇಬ್ಬರು ಹುಡುಗಿಯರಲ್ಲಿ ಒಬ್ಬರಿಗೆ ತಾವು ಸ್ವತಃ ಋತುಮತಿ ಆಗುವವರೆಗೆ ಮುಟ್ಟಿನ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿ ಅವರು ಮುಟ್ಟಿನ ಜೈವಿಕ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ ಮತ್ತು ಹಳೆಯ ಬಟ್ಟೆ, ಚಿಂದಿ ಇತ್ಯಾದಿಗಳನ್ನು ಒಳಗೊಂಡಂತೆ ಆರೋಗ್ಯಕರವಲ್ಲದ ಪರ್ಯಾಯಗಳನ್ನು ಆರಿಸಿಕೊಳ್ಳುತ್ತಾರೆ. ಮುಟ್ಟನ್ನು ಮೈಲಿಗೆ ಎಂದು ಪರಿಗಣಿಸಲಾಗಿರುವುದರಿಂದ, ಹೆಚ್ಚಿನ ಮಹಿಳೆಯರು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ವಸ್ತುಗಳನ್ನು ಖರೀದಿಸಲು ವೈದ್ಯಕೀಯ ಔಷಧಾಲಯಗಳಿಗೆ ಹೋಗಲೇ ನಾಚಿಕೆಪಡುತ್ತಾರೆ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ವಸ್ತುಗಳ ಬಳಕೆಯನ್ನು ಸುಧಾರಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಪ್ರಾರಂಭಿಸಿತು. ಬೇಟಿ ಬಚಾವೊ ಬೇಟಿ ಪಡಾವೊ, ಸ್ವಚ್ ಭಾರತ್ ಸ್ವಚ್ಛ್ ವಿದ್ಯಾಲಯ, ಎನ್‌ಎಚ್‌ಎಂ ಅಡಿಯಲ್ಲಿ ಎಂಎಚ್‌ಎಂ ಯೋಜನೆ ಮುಂತಾದ ಯೋಜನೆಗಳನ್ನು ಸರ್ಕಾರ ರೂಪಿಸಿತು. ನೈರ್ಮಲ್ಯ ವಸ್ತುವಿನ ಬಳಕೆಯನ್ನು ಸುಧಾರಿಸಲು ಈ ಯೋಜನೆಗಳು ಸಹಾಯ ಮಾಡಿವೆ.

ಈ ಮುಂಚೆ ಮುಟ್ಟಿನ ದಿನಗಳಲ್ಲಿ ಹುಡುಗಿಯರು ತಮ್ಮ ಶಾಲಾ ದಿನಗಳ ಸುಮಾರು 20 ಪ್ರತಿಶತವನ್ನು ಕಳೆದುಕೊಳ್ಳುತ್ತಿದ್ದರು. ಈ ಸಂಖ್ಯೆಯನ್ನು ಸುಧಾರಿಸಲು, ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಗಳು ಮಧ್ಯಮ ಮತ್ತು ಹೆಚ್ಚಿನ ಆದಾಯದ ಶಾಲೆಗಳಲ್ಲಿ ಸ್ವ-ಸಹಾಯ ಗುಂಪುಗಳ ಬೆಂಬಲದೊಂದಿಗೆ ನೈರ್ಮಲ್ಯ ವಸ್ತುಗಳನ್ನು ವಿತರಿಸಲು ಪ್ರಾರಂಭಿಸಿದವು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಉಪಕ್ರಮಗಳು ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಭಾರಿ ಸುಧಾರಣೆಯನ್ನು ತೋರಿಸಿವೆ. ಬಿಹಾರದಂತಹ ರಾಜ್ಯಗಳ ಶಾಲೆಗಳಲ್ಲಿ ಮಕ್ಕಳ ಹಾಜಾರಾತಿಯು ಹೆಚ್ಚಿದೆ ಮತ್ತು ಮುಟ್ಟಿನ ಅವಧಿಯಲ್ಲಿ ಪಾಲಿಸಬೇಕಾದ ನೈರ್ಮಲ್ಯದ ಬಗ್ಗೆ ಅರಿವೂ ಮೂಡಿದೆ.

ಮಹಿಳಾ ಸಬಲೀಕರಣಕ್ಕಾಗಿ ಅನೇಕ ಸೂಚನೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (ಎನ್‌ಎಫ್‌ಎಚ್‌ಎಸ್ -5) ರ ವರದಿಯ ಆಧಾರದ ಮೇಲೆ 17 ರಾಜ್ಯಗಳ ಮತ್ತು 5 ಯುಟಿಗಳ ಫ್ಯಾಕ್ಟ್‌ಶೀಟ್ ಅನ್ನು ಭಾರತ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದರಲ್ಲಿ '15-24 ವರ್ಷ ವಯಸ್ಸಿನ ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಆರೋಗ್ಯಕರ ರಕ್ಷಣೆಯ ವಿಧಾನಗಳನ್ನು ಬಳಸುತ್ತಾರೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ರಕ್ತದ ಹರಿವನ್ನು ನಿಯಂತ್ರಿಸಲು ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಸ್ಥಳೀಯ ಅಥವಾ ಕಮರ್ಷಿಯಲ್ ಸ್ಯಾನಿಟರಿ ಪ್ಯಾಡ್, ಮುಟ್ಟಿನ ಕಪ್, ಟ್ಯಾಂಪೂನ್‌ಗಳನ್ನು ಬಳಸುತ್ತಾರೆ. ಈ ವಸ್ತುಗಳನ್ನು ಮುಟ್ಟಿನ ನೈರ್ಮಲ್ಯ ವಸ್ತುಗಳು ಎಂದು ಕರೆಯಲಾಗುತ್ತದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಕಳೆದ ಬಾರಿ ಮಾಡಿದ ಸಮೀಕ್ಷೆಗಿಂತ ಹೆಚ್ಚಳವನ್ನು ತೋರಿಸುತ್ತವೆ. ಎನ್‌ಎಫ್‌ಹೆಚ್‌ಎಸ್ -4 ಮತ್ತು ಎನ್‌ಎಫ್‌ಹೆಚ್ಎಸ್ -5 ಸಮೀಕ್ಷೆಗಳಲ್ಲಿನ ವ್ಯತ್ಯಾಸವನ್ನು ಈ ಚಿತ್ರ ತೋರಿಸುತ್ತದೆ.

ಎನ್ಎಫ್‌ಹೆಚ್ಎಸ್-5ರ ಪ್ರಕಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಗೋವಾ, ದಾದ್ರಾ ಮತ್ತು ನಾಗ್ರಾ ಹವೇಲಿ, ಮಿಜೋರಾಂ, ಕೇರಳ, ತೆಲಂಗಾಣ, ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಎಂಟು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 90% ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ತ್ರಿಪುರ, ಅಸ್ಸಾಂ, ಗುಜರಾತ್, ಮೇಘಾಲಯ ಮತ್ತು ಬಿಹಾರದಲ್ಲಿ 70% ಕ್ಕಿಂತ ಕಡಿಮೆ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ. ತ್ರಿಪುರಾದಲ್ಲಿ 58%, ಪಶ್ಚಿಮ ಬಂಗಾಳದಲ್ಲಿ 51% ಮತ್ತು ಅಸ್ಸಾಂನಲ್ಲೊ 48% ಮಹಿಳೆಯರು ಮಾತ್ರ ಮುಟ್ಟಿನ ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ.

ಎಲ್ಲಾ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಹಾರವು ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಅತಿ ಕಡಿಮೆ ಅಂಕಗಳನ್ನು ಗಳಿಸಿದೆ. ಆದರೆ ಆ ರಾಜ್ಯವು ಎನ್‌ಎಫ್ಎಚ್ಎಸ್4 ಕ್ಕೆ ಹೋಲಿಸಿದರೆ ಎನ್‌ಎಫ್ಎಚ್ಎಸ್- 5 ರಲ್ಲಿ ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಅತಿ ಹೆಚ್ಚು ಶೇಕಡಾವಾರು ಹೆಚ್ಚಳವನ್ನು (ಸುಮಾರು ಎರಡು ಪಟ್ಟು) ತೋರಿಸಿದೆ. ಅಂತೆಯೇ ಅಸ್ಸಾಂ ಮತ್ತು ತ್ರಿಪುರಗಳೂ ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಹೆಚ್ಚಿನ ಶೇಕಡಾವಾರು ಹೆಚ್ಚಳವನ್ನು ತೋರಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಿಮಾಚಲ ಪ್ರದೇಶ, ಗೋವಾ, ತೆಲಂಗಾಣ, ಕೇರಳ, ಮಿಜೋರಾಂ, ಪಶ್ಚಿಮ ಬಂಗಾಳ, ದಾದ್ರಾ ಮತ್ತು ನಾಗ್ರಾ ಹವೇಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹನ್ನೊಂದು ರಾಜ್ಯಗಳ ನಗರ ಪ್ರದೇಶಗಳಲ್ಲಿ 90% ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ಮುಟ್ಟಿನ ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ 75% ಅಥವಾ ಹೆಚ್ಚಿನ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಿಮಾಚಲ ಪ್ರದೇಶ, ಗೋವಾ, ತೆಲಂಗಾಣ, ಕೇರಳ, ಮಿಜೋರಾಂ, ಮತ್ತು ದಾದ್ರಾ ಮತ್ತು ನಾಗ್ರಾ ಹವೇಲಿ ಸೇರಿದಂತೆ ಏಳು ರಾಜ್ಯಗಳ ಮತ್ತು ಯುಟಿ (ಕೇಂದ್ರಾಡಳಿತ ಪ್ರದೇಶಗಳು) ಗಳ ಗ್ರಾಮೀಣ ಪ್ರದೇಶಗಳಲ್ಲಿ‌ ಮಾತ್ರ 90% ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಅಸ್ಸಾಂ, ಮೇಘಾಲಯ, ಗುಜರಾತ್, ಮತ್ತು ಬಿಹಾರದಲ್ಲಿ 70% ಅಥವಾ ಅದಕ್ಕಿಂತ ಕಡಿಮೆ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುತ್ತಿದ್ದಾರೆ. ಲಕ್ಷದ್ವೀಪದ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಮಹಿಳೆಯರು ನೈರ್ಮಲ್ಯ ವಸ್ತುಗಳನ್ನು ಬಳಸುವುದರೊಂದಿಗೆ ಮುಟ್ಟಿನ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಪಾಲಿಸುತ್ತಾರೆ.

ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿನ ಎರಡು ಗಮನಾರ್ಹ ಸಮಸ್ಯೆಗಳೆಂದರೆ ಅರಿವು ಮತ್ತು ಲಭ್ಯತೆಯಲ್ಲಿನ ಕೊರತೆ. ಭಾರತದಲ್ಲಿ‌ ಕೈಗೊಂಡ 138 ಅಧ್ಯಯನಗಳು ಮತ್ತು 97,070 ಹದಿಹರೆಯದ ಬಾಲಕಿಯರ ಡಾಟಾವನ್ನು ಬಳಸಿಕೊಂಡು ಮೆಟಾ-ಅನಾಲಿಸಿಸ್ ಅಧ್ಯಯನವನ್ನು ನಡೆಸಲಾಗಿತ್ತು, ಮತ್ತು ಅದರ ವರದಿಯಂತೆ, ಪ್ರತಿ ಇಬ್ಬರು ಹುಡುಗಿಯರಲ್ಲಿ ಒಬ್ಬರಿಗೆ ತಾವು ಸ್ವತಃ ಋತುಮತಿ ಆಗುವವರೆಗೆ ಮುಟ್ಟಿನ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿ ಅವರು ಮುಟ್ಟಿನ ಜೈವಿಕ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ ಮತ್ತು ಹಳೆಯ ಬಟ್ಟೆ, ಚಿಂದಿ ಇತ್ಯಾದಿಗಳನ್ನು ಒಳಗೊಂಡಂತೆ ಆರೋಗ್ಯಕರವಲ್ಲದ ಪರ್ಯಾಯಗಳನ್ನು ಆರಿಸಿಕೊಳ್ಳುತ್ತಾರೆ. ಮುಟ್ಟನ್ನು ಮೈಲಿಗೆ ಎಂದು ಪರಿಗಣಿಸಲಾಗಿರುವುದರಿಂದ, ಹೆಚ್ಚಿನ ಮಹಿಳೆಯರು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ವಸ್ತುಗಳನ್ನು ಖರೀದಿಸಲು ವೈದ್ಯಕೀಯ ಔಷಧಾಲಯಗಳಿಗೆ ಹೋಗಲೇ ನಾಚಿಕೆಪಡುತ್ತಾರೆ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ವಸ್ತುಗಳ ಬಳಕೆಯನ್ನು ಸುಧಾರಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಪ್ರಾರಂಭಿಸಿತು. ಬೇಟಿ ಬಚಾವೊ ಬೇಟಿ ಪಡಾವೊ, ಸ್ವಚ್ ಭಾರತ್ ಸ್ವಚ್ಛ್ ವಿದ್ಯಾಲಯ, ಎನ್‌ಎಚ್‌ಎಂ ಅಡಿಯಲ್ಲಿ ಎಂಎಚ್‌ಎಂ ಯೋಜನೆ ಮುಂತಾದ ಯೋಜನೆಗಳನ್ನು ಸರ್ಕಾರ ರೂಪಿಸಿತು. ನೈರ್ಮಲ್ಯ ವಸ್ತುವಿನ ಬಳಕೆಯನ್ನು ಸುಧಾರಿಸಲು ಈ ಯೋಜನೆಗಳು ಸಹಾಯ ಮಾಡಿವೆ.

ಈ ಮುಂಚೆ ಮುಟ್ಟಿನ ದಿನಗಳಲ್ಲಿ ಹುಡುಗಿಯರು ತಮ್ಮ ಶಾಲಾ ದಿನಗಳ ಸುಮಾರು 20 ಪ್ರತಿಶತವನ್ನು ಕಳೆದುಕೊಳ್ಳುತ್ತಿದ್ದರು. ಈ ಸಂಖ್ಯೆಯನ್ನು ಸುಧಾರಿಸಲು, ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಗಳು ಮಧ್ಯಮ ಮತ್ತು ಹೆಚ್ಚಿನ ಆದಾಯದ ಶಾಲೆಗಳಲ್ಲಿ ಸ್ವ-ಸಹಾಯ ಗುಂಪುಗಳ ಬೆಂಬಲದೊಂದಿಗೆ ನೈರ್ಮಲ್ಯ ವಸ್ತುಗಳನ್ನು ವಿತರಿಸಲು ಪ್ರಾರಂಭಿಸಿದವು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಉಪಕ್ರಮಗಳು ನೈರ್ಮಲ್ಯ ವಸ್ತುಗಳ ಬಳಕೆಯಲ್ಲಿ ಭಾರಿ ಸುಧಾರಣೆಯನ್ನು ತೋರಿಸಿವೆ. ಬಿಹಾರದಂತಹ ರಾಜ್ಯಗಳ ಶಾಲೆಗಳಲ್ಲಿ ಮಕ್ಕಳ ಹಾಜಾರಾತಿಯು ಹೆಚ್ಚಿದೆ ಮತ್ತು ಮುಟ್ಟಿನ ಅವಧಿಯಲ್ಲಿ ಪಾಲಿಸಬೇಕಾದ ನೈರ್ಮಲ್ಯದ ಬಗ್ಗೆ ಅರಿವೂ ಮೂಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com