ಮುಂಬೈ ಹೋಟೆಲ್‌ನಲ್ಲಿ ಸಂಸದನ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ

ಏಳನೇ ಬಾರಿ ಸಂಸದರಾಗಿದ್ದ ಮೋಹನ್‌ ದೇಲ್ಕರ್‌, ಈ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಡಾದ್ರ ಹಾಗೂ ನಾಗರ್‌ ಹಾವೆಲಿಯ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಅವರು 2019 ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಿದ್ದರು.
ಮುಂಬೈ ಹೋಟೆಲ್‌ನಲ್ಲಿ ಸಂಸದನ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ

ಮುಂಬೈನ ಮರೈನ್‌ ಡ್ರೈವ್‌ನ ಹೊಟೆಲ್‌ ಒಂದರಲ್ಲಿ ನಾಗರ್‌ ಹಾವೆಲಿ ಹಾಗೂ ಡಾದ್ರದ ಪಕ್ಷೇತರ ಸಂಸದ ಮೋಹನ್‌ ದೇಲ್ಕರ್‌ ಅವರ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಎಂದು ತಿಳಿದುಬಂದಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ʼಸ್ಥಳದಲ್ಲಿ ಆತ್ಮಹತ್ಯಾ ಪತ್ರ ದೊರೆತಿದೆ. ತನಿಖೆ ಪ್ರಗತಿಯಲ್ಲಿದೆ, ಪೋಸ್ಟ್‌ ಮಾರ್ಟಮ್‌ ಬಳಿಕ ಸಾವಿನ ನಿಜವಾದ ಕಾರಣ ತಿಳಿಯುತ್ತದೆʼ ಎಂದು ಮುಂಬೈ ಪೊಲೀಸ್‌ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಏಳನೇ ಬಾರಿ ಸಂಸದರಾಗಿದ್ದ ಮೋಹನ್‌ ದೇಲ್ಕರ್‌, ಈ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಡಾದ್ರ ಹಾಗೂ ನಾಗರ್‌ ಹಾವೆಲಿಯ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಅವರು 2019 ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಿದ್ದರು. ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ 2019 ರ ಚುನಾವಣೆಯನ್ನು ಎದುರಿಸಿ ಗೆದ್ದಿದ್ದರು.

ಅವರು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com