ತಮಿಳು, ಕನ್ನಡ ಬದುಕಬೇಕಾದರೆ ಹಿಂದುತ್ವ ಗೆಲ್ಲಲೇಬೇಕು –ತೇಜಸ್ವಿ ಸೂರ್ಯ

ತಮಿಳು ಬದುಕಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು. ಬಿಜೆಪಿ ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ ಎಂದು ತೇಜಸ್ವಿ ಹೇಳಿದ್ದಾರೆ
ತಮಿಳು, ಕನ್ನಡ ಬದುಕಬೇಕಾದರೆ ಹಿಂದುತ್ವ ಗೆಲ್ಲಲೇಬೇಕು –ತೇಜಸ್ವಿ ಸೂರ್ಯ

ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ)ಯನ್ನು ಹಿಂದೂ ವಿರೋಧಿ ಎಂದು ಕರೆದಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಡಿಎಂಕೆಯನ್ನು ಸೋಲಿಸುವಂತೆ ಕರೆ ನೀಡಿದ್ದಾರೆ.

ಬಿಜೆಪಿ ಭಾರತದ ಎಲ್ಲಾ ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಗೌರವ ಹಾಗೂ ಪ್ರೋತ್ಸಾಹ ಕೊಡುತ್ತದೆ ಎಂದು ಸೂರ್ಯ ತಮಿಳುನಾಡಿನಲ್ಲಿ ಹೇಳಿದ್ದಾರೆ.

ತಮಿಳುನಾಡಿನ ಸೇಲಂ ಅಲ್ಲಿ ನಡೆದ ಭಾರತೀಯ ಯುವ ಮೋರ್ಚಾ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ತೇಜಸ್ವಿ, “ಹಿಂದೂ ವಿರೋಧಿಯಾದ ವಿಷಪೂರಿತ, ಕೆಟ್ಟ ಸಿದ್ಧಾಂತವನ್ನು ಡಿಎಂಕೆ ಪ್ರತಿನಿಧಿಸುತ್ತದೆ. ಪ್ರತಿಯೊಬ್ಬ ತಮಿಳನೂ ಹೆಮ್ಮೆಯ ಹಿಂದೂ. ಇದು (ತಮಿಳುನಾಡು) ಅತ್ಯಂತ ಹೆಚ್ಚು ದೇವಸ್ಥಾನಗಳಿರುವ ಪುಣ್ಯ ಭೂಮಿ. ತಮಿಳುನಾಡಿನ ಪ್ರತಿ ಇಂಚೂ ಪವಿತ್ರ, ಆದರೆ, ಡಿಎಂಕೆ ಹಿಂದೂ ವಿರೋಧಿ. ಹಾಗಾಗಿ ನಾವದನ್ನು ಸೋಲಿಸಲೇಬೇಕು.” ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತಮಿಳು ಚಿಂತಕರು, ಸನ್ಯಾಸಿಗಳು, ತತ್ವ ಜ್ಞಾನಿಗಳು, ಕವಿಗಳು ಹಿಂದೂ ಧರ್ಮಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಇಂದು ಡಿಎಂಕೆ ಹಿಂದೂ ದೇವಸ್ಥಾನಗಳ ಜಾಗ ಕಬಳಿಸಿದ್ದಾರೆ. ಡಿಎಂಕೆ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಧರ್ಮದ ಭಾವನೆಗಳಿಗೆ ಪದೇ ಪದೇ ದಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಡಿಎಂಕೆಯ ವಿರುದ್ಧ ಸತತ ದಾಳಿ ನಡೆಸಿದ ತೇಜಸ್ವಿ, ಡಿಎಂಕೆಯು ಕುಟುಂಬ ಪಕ್ಷ, ಬಿಜೆಪಿಗೆ ಪಕ್ಷವೇ ಕುಟುಂಬ ಎಂದು ಹೇಳಿದ್ದಾರೆ.

ತಮ್ಮ ಪಕ್ಷವು ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದ್ದಾರೆ.

“ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಮತ್ತು ಉತ್ತೇಜಿಸುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ. ತಮಿಳು ಬದುಕಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು. ಬಿಜೆಪಿ ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ” ಎಂದು ತೇಜಸ್ವಿ ಹೇಳಿದ್ದಾರೆ.

ಸಮಾವೇಶದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕೂಡಾ ಭಾಗವಹಿಸಿದ್ದರು.

Source: NDTV

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com