ಮುಂಬೈ: ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥನೇ ಅಕ್ರಮ ವಲಸಿಗ!

ಬಿಜೆಪಿ ಸಂಸದ ಗೋಪಾಲ್‌ ಶೆಟ್ಟಿ ಜೊತೆ ಇರುವ ಶೇಖ್‌ನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದರೊಂದಿಗೆ ಆತ ಉತ್ತರ ಮುಂಬೈಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಸೆಲ್‌ ನ ಮುಖ್ಯಸ್ಥ ಅನ್ನುವ ಮಾಹಿತಿ ಬಹಿರಂಗಗೊಂಡಿದೆ.
ಮುಂಬೈ: ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥನೇ ಅಕ್ರಮ ವಲಸಿಗ!

ಸಂಸ್ಕೃತಿ, ಪರಂಪರೆ ರಕ್ಷಣೆ ಎಂದು ರಾಜಕೀಯ ಮಾಡುತ್ತಿರುವ ಬಿಜೆಪಿಗೆ ತನ್ನದೇ ನಾಯಕಿಯೊಬ್ಬಳು ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿ ಮುಜುಗರ ತಂದ ಪ್ರಕರಣದ ಕಾವು ಆರುವ ಮುನ್ನವೇ, ಇನ್ನೊಂದು ಪೇಚಿಗೆ ಸಿಲುಕಿದೆ.

ಮುಂಬೈ: ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥನೇ ಅಕ್ರಮ ವಲಸಿಗ!
ಡ್ರಗ್ಸ್‌ ಪ್ರಕರಣ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಂಧನ

ಬಾಂಗ್ಲಾದೇಶದ ಅಕ್ರಮ ವಲಸಿಗರ ಕುರಿತು ರಾಜಕೀಯ ವಿರೋಧವನ್ನು, ಪ್ರತಿಪಕ್ಷಗಳು ವೋಟ್‌ ಬ್ಯಾಂಕ್‌ಗೋಸ್ಕರ ಅಕ್ರಮ ವಲಸಿಗರನ್ನು ಪೋಷಿಸುತ್ತಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಅಂತಹದ್ದೇ ಒಬ್ಬ ಅಕ್ರಮ ವಲಸಿಗ(?)ನಿಗೆ ಪಕ್ಷದ ಜವಾಬ್ದಾರಿ ಕೊಟ್ಟು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಂಬೈನಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾದ ರುಬೇಲ್‌ ಶೇಖ್‌ ವ್ಯಕ್ತಿ ನಕಲಿ ದಾಖಲೆ ಸೃಷ್ಟಿಸಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಮೂಲತಃ ಬಾಂಗ್ಲಾದೇಶೀಯನೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಕುತೂಹಲಕಾರಿ ಅಂಶವೇನೆಂದರೆ, ಯಾವ ಪಕ್ಷ ಅಕ್ರಮ ವಲಸಿಗರನ್ನು ಹೊರಕ್ಕೆ ಕಳಿಸಬೇಕೆಂದು ರಾಜಕೀಯ ಮಾಡುತ್ತಿದೆಯೋ ಆತ ಅದೇ ಪಕ್ಷದ ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದಾನೆ.

ಬಿಜೆಪಿ ಸಂಸದ ಗೋಪಾಲ್‌ ಶೆಟ್ಟಿ ಜೊತೆ ಇರುವ ಶೇಖ್‌ನ ಚಿತ್ರವೊಂದು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದರೊಂದಿಗೆ ಆತ ಉತ್ತರ ಮುಂಬೈಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಸೆಲ್‌ ನ ಮುಖ್ಯಸ್ಥ ಅನ್ನುವ ಮಾಹಿತಿ ಬಹಿರಂಗಗೊಂಡಿದೆ.

ಈ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆಯೇ, ಕಾಂಗ್ರೆಸ್‌ ಪಕ್ಷ ಬಿಜೆಪಿಯ ಮೇಲೆ ಹರಿಹಾಯ್ದಿದೆ. ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್‌ ಈ ಕುರಿತಂತೆ ಟ್ವಿಟರಿನಲ್ಲಿ ಪ್ರತಿಕ್ರಿಯಿಸಿದ್ದು, ಅಮಿತ್‌ ಶಾ ಅವರು ಸಿಎಎಯಲ್ಲಿ ಬಿಜೆಪಿಯವರಿಗೆ ಯಾವುದಾದರೂ ವಿಶೇಷ ಸವಲತ್ತು ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

“ಉತ್ತರ ಮುಂಬೈ ಬಿಜೆಪಿ ಅಲ್ಪಸಂಖ್ಯಾತ ಸೆಲ್‌ನ ಮುಖ್ಯಸ್ಥ ಬಾಂಗ್ಲಾದೇಶಿ ಎಂದು ತಿಳಿದುಬಂದಿದೆ. ಇದು ಸಂಘ ಜಿಹಾದ್ ಆಗಿದೆಯೇ ಎಂದು ನಾವು ಬಿಜೆಪಿಯನ್ನು ಕೇಳಲು ಬಯಸುತ್ತೇವೆ, ಬಿಜೆಪಿಗೆ ಸಿಎಎ ಅಡಿಯಲ್ಲಿ ವಿಶೇಷ ನಿಬಂಧನೆಗಳಿವೆಯೇ? ದೇಶಕ್ಕೆ ಒಂದು ಕಾನೂನು, ಬಿಜೆಪಿಗೆ ಇನ್ನೊಂದು ಕಾನೂನು" ಎಂದು ಸಚಿನ್‌ ಸಾವಂತ್‌ ಟ್ವೀಟ್‌ ಮಾಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com